ಕಾಪು ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ಐತಿಹಾಸಿಕ ಪಿಲಿಕೋಲ ವೈಭವ
ಉಡುಪಿ: ಕಾಪುವಿನ ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದೈವಾರ್ಷಿಕವಾಗಿ ನಡೆಯುವ ಐತಿಹಾಸಿಕ ಪಿಲಿಕೋಲ ಶನಿವಾರ ಸಂಜೆ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು. ಸಂಪ್ರದಾಯದಂತೆ ಹುಲಿ ವೇಷ ಧರಿಸುವ ದೈವ ನರ್ತಕನಿಗೆ ಪೂರ್ವ ವಿಧಿವಿಧಾನಗಳೊಂದಿಗೆ ಸ್ನಾನ ಮಾಡಿಸಿ, ತೆಂಗಿನ ಗರಿಯಿಂದ ನಿರ್ಮಿಸಿದ ವಿಶೇಷ ಪಂಜರದೊಳಗೆ ಬಣ್ಣಗಾರಿಕೆಗಾಗಿ ಕಳುಹಿಸಲಾಯಿತು. ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡ ಬಳಿಕ ಪಟೇಲರ ಅನುಮತಿ ಪಡೆದು, ಪಿಲಿಚಂಡಿ ಮನೆಯವರು ತೀರ್ಥ ಚಿಮುಕಿಸಿದ ನಂತರ ನರ್ತಕನು ಪಂಜರದಿಂದ ಹೊರಬಂದು ಪಿಲಿಕೋಲಕ್ಕೆ ಚಾಲನೆ ನೀಡಿದರು. ಪಿಲಿ ದೈವವು ಬ್ರಹ್ಮರಗುಂಡಕ್ಕೆ…
