ಮಂಗಳೂರು: ‘ಸರಯೂ ಸಪ್ತಾಹ–2026’ ಮೇ 25ರಿಂದ ಕದ್ರಿ ದೇವಳದಲ್ಲಿ ಆರಂಭ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳ ‘ಸರಯೂ ಬಾಲ ಯಕ್ಷ ವೃಂದ’ ಕೋಡಿಕಲ್ ತಂಡದ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಬಹುನಿರೀಕ್ಷಿತ ‘ಸರಯೂ ಸಪ್ತಾಹ–2026’ ಕಾರ್ಯಕ್ರಮವು ಮೇ 25ರಿಂದ ಜೂನ್ 1ರವರೆಗೆ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ಪ್ರತಿದಿನ ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಪೂರ್ತಿ…
