ಕಾಸರಗೋಡು-ಮಂಗಳೂರು ಕೆ.ಎಸ್ಸಾರ್ಟಿಸಿ ಪ್ರಯಾಣಿಕರಿಗೆ ಟೋಲ್ ಬಿಸಿ ತಟ್ಟತೊಡಗಿದೆ. ಬಸ್ ದರ 7 ರೂ.ಹೆಚ್ಚಳ
ಮಂಗಳೂರು : ಕಾಸರಗೋಡು-ಮಂಗಳೂರು ಕೆ.ಎಸ್ಸಾರ್ಟಿಸಿ ಪ್ರಯಾಣಿಕರಿಗೆ ಟೋಲ್ ಬಿಸಿ ತಟ್ಟತೊಡಗಿದೆ. ಬಸ್ ದರ 7 ರೂ.ಹೆಚ್ಚಾಗಿದೆ .ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ಆರಂಭವಾದ ಹಿನ್ನೆಲೆಯಲ್ಲಿ ಕಾಸರಗೋಡು-ಮಂಗಳೂರು ನಡುವೆ ಸಂಚರಿಸುವ ಕರ್ನಾಟಕ ಸಾರಿಗೆ (KSRTC) ಬಸ್ ದರವನ್ನು ಹೆಚ್ಚಿಸಲಾಗಿದ್ದು, ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅಂತರರಾಜ್ಯ ಹೆದ್ದಾರಿಯ ಟೋಲ್ ಬೂತ್ ಮೂಲಕ ಹಾದುಹೋಗುವ ಪ್ರತಿ ಪ್ರಯಾಣಿಕರು ಈಗ ಮೂಲ ದರಕ್ಕಿಂತ ಹೆಚ್ಚುವರಿಯಾಗಿ 7 ರೂಪಾಯಿ ಪಾವತಿಸಬೇಕಾಗುತ್ತದೆ. ಈವರೆಗೆ ಕಾಸರಗೋಡಿನಿಂದ ಮಂಗಳೂರಿಗೆ 81 ರೂಪಾಯಿ ಇದ್ದ ಟಿಕೆಟ್ ದರವು ಇದೀಗ…