“ವಿದೇಶ ಪ್ರವಾಸ ಮಾಡಬೇಡಿ ಎನ್ನುವುದು ಬಾಲಿಶತನ”: ಮೋದಿ ವಿರುದ್ಧ ಮಂಜುನಾಥ ಭಂಡಾರಿ ವಾಗ್ದಾಳಿ
ಮಂಗಳೂರು: ದೇಶದ ಪ್ರಧಾನಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ನರೇಂದ್ರ ಮೋದಿಯವರು ವಿದೇಶಕ್ಕೆ ಪ್ರವಾಸ ಹೋಗಬೇಡಿ, ಚಿನ್ನ ಖರೀದಿಸಬೇಡಿ, ವಾಹನಗಳಲ್ಲಿ ನಿಯಮಿತವಾಗಿ ಓಡಾಡಿ ಎಂದು ಹೇಳಿಕೆ ನೀಡಿರುವುದು ಬಾಲಿಶತನದ್ದು. ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.ದೇಶದಲ್ಲಿ ವಾಣಿಜ್ಯ ಗ್ಯಾಸ್ ಬೆಲೆ ಭಾರೀ ಏರಿಕೆಯಾಗಿದೆ. ಉದ್ಯಮ ವಲಯವೂ ದರ ಏರಿಕೆಯಿಂದ ಕಂಗಾಲಾಗಿದೆ. ರಸಗೊಬ್ಬರ ಕೊರತೆಯ ಮುನ್ಸೂಚನೆ ಸಿಕ್ಕಿದೆ. ಇಂತಹ ಸಂದರ್ಭ ಪ್ರಧಾನಿಯವರು ಈ ರೀತಿ ಹೇಳಿಕೆ…
