ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಏ.29ರಿಂದ ಅಂತರಾಷ್ಟ್ರೀಯ ವಿಜ್ಞಾನ-ತಂತ್ರಜ್ಞಾನ ಸಮ್ಮೇಳನ

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (SUIET) ವತಿಯಿಂದ ಏಪ್ರಿಲ್ 29 ಮತ್ತು 30ರಂದು ‘ಹೊಸತಾಗಿ ಬೆಳೆಯುತ್ತಿರುವ ಸಮನ್ವಯ ವಿಜ್ಞಾನ ಮತ್ತು ತಂತ್ರಜ್ಞಾನ’ (ICESST-2026) ಕುರಿತು ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಡೀನ್ ಡಾ. ರಾಮಕೃಷ್ಣ ಎನ್. ಹೆಗ್ಡೆ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಏಪ್ರಿಲ್ 29ರಂದು ಬೆಳಿಗ್ಗೆ 11 ಗಂಟೆಗೆ ಮುಕ್ಕದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಭಾರತದ…

Read More

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಹಿಳೆಯರಿಗೆ ಶೇ. 33 ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಬಿ.ವಿ.ಎಸ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಭಾರಿ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ, ಮಹಿಳಾ ಹಕ್ಕುಗಳ ಪರವಾಗಿ ಧ್ವನಿ ಎತ್ತಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ…

Read More

ಬದ್ರಿಯಾ ಜುಮಾ ಮಸ್ಜಿದ್ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಹಜ್ ಯಾತ್ರಿಕರಿಗೆ ತರಬೇತಿ ಹಾಗೂ ಬೀಳ್ಕೊಡುಗೆ ಸಮಾರಂಭ

ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ.) ದೇರಳಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ 2026ನೇ ಸಾಲಿನ ಹಜ್ ಯಾತ್ರಿಕರಿಗಾಗಿ ವಿಶೇಷ ತರಬೇತಿ ಶಿಬಿರ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ದೇರಳಕಟ್ಟೆಯ ಬಿ.ಜೆ.ಎಂ ಆಡಿಟೋರಿಯಂನಲ್ಲಿ ನಡೆಯಿತು. ​ಕಾರ್ಯಕ್ರಮವು ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬರಾದ ತಾಜ್ಜುದ್ದೀನ್ ರಹ್ಮಾನಿ ಅವರ ದುವಾ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷರಾದ ಅಬ್ದುಲ್ ಆರ್. ಅಹಮದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.​ ಹಜ್ ಯಾತ್ರೆಯ ಪವಿತ್ರ ವಿಧಿವಿಧಾನಗಳ ಬಗ್ಗೆ ತರಬೇತುದಾರರಾದ…

Read More

ಮಂಗಳೂರಿನಲ್ಲಿ ನೀರಿನ ಸಂಕಷ್ಟ ಗಂಭೀರ: ಪಾಲಿಕೆಯಿಂದ ರೇಷನಿಂಗ್ ಘೋಷಣೆ

ಕಳೆದ ಕೆಲ ವಾರದಿಂದ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯ ಕುಸಿತ ಕಾಣುತ್ತಿದೆ. ನೀರಿನ ಮಟ್ಟ ಕಳೆದ 7 ವರ್ಷಗಳ ಕನಿಷ್ಠ ಮಟ್ಟವಾದ 4.47 ಮೀ.ಗೆ ಇಳಿಕೆಯಾಗಿದೆ. ಈ ನಡುವೆ ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ ಮಾಡಿದ್ದು, ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. 2025ರಲ್ಲಿ…

Read More

ಮಳೆಗಾಲಕ್ಕೆ ಪೂರ್ವಸಿದ್ಧತೆ: ಅವಘಡ ತಡೆಗೆ ಸಮನ್ವಯ ಕ್ರಮ ಕೈಗೊಳ್ಳಲು ಶಾಸಕ ವೇದವ್ಯಾಸ ಕಾಮತ್ ಸೂಚನೆ

ಮುಂಬರಲಿರುವ ಮಳೆಗಾಲದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅವಘಡಕ್ಕೆ ಆಸ್ಪದವಿಲ್ಲದಂತೆ ಸಕಲ ಸಿದ್ದತೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯು ನಡೆಯಿತು. ಕಳೆದ ಮಳೆಗಾಲದಲ್ಲಿ ಮ.ನ.ಪಾ ವ್ಯಾಪ್ತಿಯ ಹಲವೆಡೆ ಅಪಾರ ಪ್ರಮಾಣದ ಹಾನಿಯುಂಟಾಗಿದ್ದನ್ನು ಗಮನದಲ್ಲಿಟ್ಟುಕೊಂಡು ನೆರೆ ಪರಿಸ್ಥಿತಿಗೆ ಕಾರಣ, ಪ್ರವಾಹ ಮರುಕಳಿಸದಂತೆ ತುರ್ತಾಗಿ ನಡೆಯಬೇಕಿರುವ ಕಾರ್ಯ ಇತ್ಯಾದಿ ವಿಷಯಗಳ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು….

Read More

ಕೊಳ್ನಾಡು ಕುಳಾಲು ಆರೋಗ್ಯ ಉಪಕೇಂದ್ರಕ್ಕೆ ₹65 ಲಕ್ಷ ನೂತನ ಕಟ್ಟಡ ಮಂಜೂರು

ಬಂಟ್ವಾಳ: ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಶಿಫಾರಸ್ಸಿನಲ್ಲಿ ಕೊಳ್ನಾಡು ಕುಳಾಲು ಆರೋಗ್ಯ ಉಪಕೇಂದ್ರಕ್ಕೆ(ಆರೋಗ್ಯ ಮತ್ತು ಕ್ಷೇಮಕೇಂದ್ರ) ₹65 ಲಕ್ಷದ ನೂತನ ಕಟ್ಟಡ ಮಂಜೂರು ಶ್ರೀ‌.ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಬೇಡಿಕೆಗೆ ಸ್ಪಂದಿಸಿ ಕೊಳ್ನಾಡು ಗ್ರಾಮಕ್ಕೆ ಆರೋಗ್ಯ ಸೇವೆಗಳ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ನೂತನ ಕಟ್ಟಡಕ್ಕೆ ₹65 ಲಕ್ಷ ಮಂಜೂರಾಗಿದೆ. ವಿಧಾನಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರ ಶಿಪಾರಸ್ಸಿನ ಮೇರೆಗೆ ಈ ಯೋಜನೆಗೆ ವೇಗ ಸಿಕ್ಕಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ನಿರ್ಮಾಣ…

Read More

ರೈಲಿನಲ್ಲೇ ಹೆರಿಗೆ ನೋವಿನಿಂದ ಬಳಲಿದ ಗರ್ಭಿಣಿಗೆ ಮಹಿಳೆಯರ ನೆರವು: ಬಂಟ್ವಾಳ ಸಮೀಪ ತಾಯಿ-ಮಗು ರಕ್ಷಣೆ

ಕಾರವಾರ ಮಂಗಳೂರು ಬೆಂಗಳೂರು ಮಧ್ಯೆ ಚಲಿಸುತ್ತಿದ್ದ ರೈಲಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅದೇ ರೈಲಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ ಘಟನೆ ಮಂಗಳೂರಿನ ಬಂಟ್ವಾಳ ಸಮೀಪದ ಬಿಸಿರೋಡ್ ಬಳಿ ನಡೆದಿದೆ. ಮಂಗಳೂರು ಜಂಕ್ಷನ್‌ನಿಂದ ಹೊರಟ ರೈಲಿನಲ್ಲಿ ಮೈಸೂರು ಮೂಲದ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿತ್ತು. ರೈಲು ಬಿ.ಸಿ.ರೋಡ್ ತಲುಪಿದಾಗ ಗರ್ಭಿಣಿಗೆ ತೀವ್ರ ರಕ್ತಸ್ರಾವವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ಸುಮಾರು 30 ನಿಮಿಷಗಳ ಕಾಲ ವೈದ್ಯರಿಗಾಗಿ ಕಾಯಲಾಯಿತು. ಆದರೆ…

Read More

ಸಹ್ಯಾದ್ರಿ ಕಾಲೇಜು–ಕ್ರೈಸ್ಟ್ ವಿಶ್ವವಿದ್ಯಾಲಯ ನಡುವೆ ಒಪ್ಪಂದ – ಹೊಸ ಕೋರ್ಸ್‌ಗಳ ಆರಂಭ

ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಅದರ ಅಂಗ ಸಂಸ್ಥೆಯಾದ ಕ್ರೈಸ್ಟ್ ಇಂಕ್ಯುಬೇಷನ್ ಅಂಡ್ ಕನ್ಸಲ್ಟೆನ್ಸಿ ಫೌಂಡೇಶನ್ (CICF) ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ನಡುವೆ ಕನ್ಸಲ್ಟೆನ್ಸಿ ಒಪ್ಪಂದ (MoU) ನಗರದ ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಇಂದು ನಡೆಯಿತ್ತು . ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಮಂಜುನಾಥ್ ಭಂಡಾರಿ ಮಾತನಾಡಿ , ಶೈಕ್ಷಣಿಕ ವರ್ಷ 2026-27ನೇ ಸಾಲಿನಿಂದ ಹೊಸ ಕೋರ್ಸ್‌ಗಳಾದ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ (BBA) , ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (BCA) ,ಮಾಸ್ಟರ್…

Read More

ಡಿಪ್ಲೊಮಾ ಸಿವಿಲ್ ಇಂಜಿನಿಯರ್‌ಗಳ ಹೋರಾಟ ಯಶಸ್ವಿ – ಏಪ್ರಿಲ್ 27ರಂದು ಕೃತಜ್ಞತಾ ಸಮಾರಂಭ

ಎಂ.ಸಿ.ಸಿ ರಿಜಿಸ್ಟರ್ ಡಿಪ್ಲೊಮಾ ಸಿವಿಲ್ ಇಂಜಿನಿಯರ್ಸ್ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್‌ ಇಂಜಿನಿಯ‌ರ್ಸ್ (ಇಂ) ಮಂಗಳೂರು ಕೇಂದ್ರ ಇದರ ಸಹಯೋಗದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೋಂದಾಯಿತ ವೃತ್ತಿಪರ ಡಿಪ್ಲೊಮಾ ಸಿವಿಲ್ ಇಂಜಿನಿಯರ್‌ಗಳ ಮೇಲಿನ ನಿರ್ಬಂಧಗಳಿಗೆ ತಿದ್ದುಪಡಿ ತರಲು ನಡೆದ ಹೋರಾಟ ಯಶಸ್ವಿ ಸಿಕ್ಕಿದ್ದು ಇದಕ್ಕೆ ಕಾರಣಕರ್ತರಾದ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಗೆ ಕೃತಜ್ಞತಾ ಸಮರ್ಪಣಾ ಸಮಾರಂಭವು ಎಪ್ರಿಲ್ 27 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ…

Read More

ಭಂಡಾರ ಮೆರವಣಿಗೆಯಲ್ಲಿ ಅವಘಡ – ಎಂಟು ಮಂದಿಗೆ ಗಾಯ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಪ್ರದೇಶದಲ್ಲಿ ದೈವದ ಭಂಡಾರ ಮೆರವಣಿಗೆಯ ವೇಳೆ ಕಾಲು ಸಂಕ ಮುರಿದು ಭಾರೀ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಟ್ಟು ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಕೋಡೆ ಬರ್ಕೆ ಧರ್ಮನೇಮಕ್ಕೆ ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕೊಂಬು ಹಾಗೂ ಬ್ಯಾಂಡ್ ವಾದ್ಯಗಳೊಂದಿಗೆ ಭಂಡಾರದ ಮೆರವಣಿಗೆ ನಡೆಯುತ್ತಿದ್ದು, ಏಕಾಏಕಿ ಕಾಲು ಸಂಕ ಮುರಿದು ಪಲ್ಲಕ್ಕಿ ಉರುಳಿ ಬಿದ್ದಿದೆ. ಪರಿಣಾಮವಾಗಿ…

Read More
error: Content is protected !!