ಮಂಗಳೂರು–ಮಂತ್ರಾಲಯ ಸ್ಲೀಪರ್ ಬಸ್‌ಗೆ ಚಾಲನೆ: ಶಾಸಕ ವೇದವ್ಯಾಸ ಕಾಮತ್ ಸ್ವತಃ ಬಸ್ ಚಾಲನೆ
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಸುಮಾರು ಎರಡು ಕಿಲೋಮೀಟರ್ ದೂರ ಬಸ್ ಚಾಲನೆ ಮಾಡಿ ವಿಶೇಷ ಗಮನ ಸೆಳೆದರು. ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಪ್ರಾರಂಭಿಸಲಾದ ಮಂಗಳೂರು–ಮಂತ್ರಾಲಯ ಪಲ್ಲಕ್ಕಿ ಸ್ಲೀಪರ್ ಬಸ್ ಸೇವೆಗೆ ಅವರು ಸ್ವತಃ ಚಾಲನೆ ನೀಡಿದರು. ಕೆಎಸ್‌ಆರ್‌ಟಿಸಿ ವತಿಯಿಂದ ನಾಲ್ಕು ನಾನ್ ಎಸಿ ಸ್ಲೀಪರ್ ಬಸ್‌ಗಳು ಮಂತ್ರಾಲಯದತ್ತ ಸಂಚಾರ ಆರಂಭಿಸಿದ್ದು, ಈ ಬಸ್ ಸುಮಾರು 12 ಗಂಟೆಗಳಲ್ಲಿ ಗಮ್ಯಸ್ಥಾನ ತಲುಪಲಿದೆ. ಇದರಿಂದ ಮಂತ್ರಾಲಯ ಮಂಗಳೂರಿನ ಪ್ರಯಾಣಿಕರಿಗೆ ಇನ್ನಷ್ಟು ಸುಲಭವಾಗಿ ತಲುಪುವಂತಾಗಿದೆ. ಈ ಬಸ್…
