ಮಹಿಳಾ ಮೀಸಲಾತಿ ಮಸೂದೆ ಕುರಿತು ಕಾಂಗ್ರೆಸ್ ಟೀಕೆ

ಮಂಗಳೂರು: ಮಹಿಳೆಯರಿಗೆ 50% ಮೀಸಲಾತಿ ನೀಡುವ ಬದಲು, ಕ್ಷೇತ್ರ ಮರುವಿಂಗಡಣೆಯನ್ನು ಜೋಡಿಸುವ ಮೂಲಕ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ ಆರೋಪಿಸಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಮಸೂದೆ ಮಂಡಿಸಿ, ಅದರೊಂದಿಗೆ ಕ್ಷೇತ್ರ ಮರುವಿಂಗಡಣೆಯನ್ನು ಲಿಂಕ್ ಮಾಡಿರುವುದು ರಾಜಕೀಯ ಸಂಚು ಎಂದರು. ಇದರಿಂದ ಮಸೂದೆ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಕೇಂದ್ರ…

Read More

ಆರ್ಯಭಟ ಪ್ರಶಸ್ತಿಗೆ ಡಾ.ಸಂಜೀವ ದಂಡೆಕೇರಿ ಆಯ್ಕೆ

ಮಂಗಳೂರು: ಬೆಂಗಳೂರಿನ ಆರ್ಯಭಟ ಕಲ್ಬರಲ್ ಆರ್ಗನೈಸೇಷನ್‌ ಸಂಸ್ಥೆಯು ರಾಷ್ಟ್ರ- ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಅಸಾಧಾರಣ ಸಾಧಕರಿಗೆ ನೀಡುವ 51ನೇ ವರ್ಷದ ಅಂತರ್‌ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಕರಾವಳಿ ಕರ್ನಾಟಕದ ಶ್ರೇಷ್ಠ ನಾಟಕಕಾರ, ನಿರ್ದೇಶಕ ತುಳು ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಡಾ.ಸಂಜೀವ ದಂಡೆಕೇರಿ ಆಯ್ಕೆಯಾಗಿದ್ದಾರೆ. ನಾಟಕ ರಂಗದೊಂದಿಗೆ ಡಾ. ಸಂಜೀವ ದಂಡೆಕೇರಿ ಮಾಡಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ. ಆಯುರ್ವೇದ ವೈದ್ಯ ಡಾ.ಸಂಜೀವ ದಂಡೆಕೇರಿ,…

Read More

ಮಹಿಳಾ ಮೀಸಲಾತಿ ಮಸೂದೆ ಸೋಲು: ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಕಿಡಿ

ಮಂಗಳೂರು: ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಉದ್ದೇಶದ ‘ನಾರಿ ಶಕ್ತಿ ವಂದನಾ’ ಕಾಯ್ದೆ ಸೋತಿರುವುದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್ ಆರೋಪಿಸಿದ್ದಾರೆ. ಭಾರತೀಯ ಜನತಾ ಪಕ್ಷ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳೆಯರಿಗೆ ರಾಜಕೀಯ ಅವಕಾಶ ನೀಡಲು ಮಾಡಿದ ಪ್ರಯತ್ನಕ್ಕೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಅಡ್ಡಿಯಾಗಿವೆ ಎಂದು ಕಿಡಿಕಾರಿದರು. ‘ನಾರಿ ಶಕ್ತಿ ವಂದನಾ’…

Read More

ಭಾರತೀಯ ಮಹಿಳೆಯರಿಗೆ ಅವಮಾನ ಮಾಡಿದ ಭಾರತದ ಕೇಂದ್ರ ವಿಪಕ್ಷಗಳು : ಶ್ರೀಮತಿ ರಮಿತಾ ಸೂರ್ಯವಂಶಿ

ಭಾರತದ ಇತಿಹಾಸವನ್ನು ನೋಡುತ ಬಂದಂದಾಗಲು ಮಹಿಳೆಯರ ಸ್ವತಂತ್ರ ಕಿತ್ತು ಕೊಂಡಂದ್ದು ಯಾರು ಎಂದು ಪುನರ್ವರ್ಥಿಸುವ ಸಂದರ್ಭ ಕಣ್ಣೆದುರು ಇದೆ. ಪ್ರತಿ ಯೊಂದು ಮಹಿಳೆಯರಿಗೆ ಗೌರವಿಸುವ ಈ ನೆಲದಲ್ಲಿ ಇನ್ನೇನು 70 ಕೋಟಿ ಮಹಿಳೆಯರ ಶೇ. 33ರಷ್ಟು ಮೀಸಲಾತಿ ಮೂಲಕ ಶಾಸನಸಭೆಗಳನ್ನು ಪ್ರವೇಶಿಸಬೇಕು ಎಂದು ಮಹಿಳೆಯರು ದಶಕಗಳ ಕಾಲ ಕಂಡಿದ್ದ ಕನಸಿಗೆ ಭಾರತೀಯ ಕಾಂಗ್ರೆಸ್ ತಣ್ಣೀರೆರಚಿದೆ. ನಾರಿ ಶಕ್ತಿಯ ಸಬಲೀಕರಣಕ್ಕೆ ಬಿಜೆಪಿಯ ದೃಢ ಸಂಕಲ್ಪ ಒಂದೆಡೆಯಾದರೆ, ಮಹಿಳಾ ಮೀಸಲಾತಿ ಮಸೂದೆಗೆ ತಡೆಯೊಡ್ಡುವ ಭಾರತೀಯ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟದ…

Read More

ಮಂಗಳೂರು ಅಭಿವೃದ್ಧಿಗೆ ₹200 ಕೋಟಿ ಅನುದಾನ: ನಗರ ವಿಕಾಸ ಯೋಜನೆಗೆ ವೇಗ

ಮಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ನಗರಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ₹2,600 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ನಗರದ ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನ ನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 25 ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಹಂತ–2) ಅಡಿಯಲ್ಲಿ ಜಿಎಸ್‌ಟಿ ಸೇರಿ ₹200 ಕೋಟಿ ಅನುದಾನವನ್ನು ಮಂಗಳೂರು ಮಹಾನಗರ ಪಾಲಿಕೆಗೆ ನೀಡಲಾಗಿದೆ…

Read More

5K–10K ಎನ್‌ಎಸ್‌ಎಸ್ ರನ್‌ಗೆ ಭರ್ಜರಿ ಪ್ರತಿಕ್ರಿಯೆ: ನಿಟ್ಟೆ ಆವರಣದಲ್ಲಿ ಮ್ಯಾರಥಾನ್

ದೇರಳಕಟ್ಟೆ: ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಎನ್‌ಎಸ್‌ಎಸ್ ಘಟಕ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯದ ಸಹಯೋಗದಲ್ಲಿ “5K ಮತ್ತು 10K ಎನ್‌ಎಸ್‌ಎಸ್ ಮ್ಯಾರಥಾನ್” ಕಾರ್ಯಕ್ರಮವು ಕೆ.ಎಸ್. ಹೆಗ್ಡೆ ಆಡಿಟೋರಿಯಂ ಮುಂಭಾಗದಲ್ಲಿ ಯಶಸ್ವಿಯಾಗಿ ನಡೆಯಿತು. ಬೆಂಗಳೂರುದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಬಿ. ದಿನೇಶ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದಿನ ಒತ್ತಡದ…

Read More

ಕುಳೂರಿನಲ್ಲಿ ಏ.19ರಂದು ಉಚಿತ ವೈದ್ಯಕೀಯ–ರಕ್ತದಾನ ಶಿಬಿರ: ಸಾರ್ವಜನಿಕರಿಗೆ ಆಹ್ವಾನ

ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ಹಾಗೂ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಏಪ್ರಿಲ್ 19ರಂದು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಕಾರ್ಯಕ್ರಮವನ್ನು ಹೇರಂಭ ಇಂಡಸ್ಟ್ರೀಸ್ ಸಂಸ್ಥಾಪಕಾಧ್ಯಕ್ಷರು ಹಾಗೂ ಸೇವಾ ಬಳಗದ ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ . ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಪಾಧ್ಯಕ್ಷ ನಾರಾಯಣ ನೈಕ್ ನಡುಹಿತ್ಲು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ…

Read More

ಬಿಸಿರೋಡು–ಮೆಲ್ಕಾರ್ ಹೆದ್ದಾರಿಗೆ ಬೆಳಕಿನ ಸ್ಪರ್ಶ: ಮೇ ಮೊದಲ ವಾರದಿಂದ ಬೀದಿ ದೀಪಗಳು ಶಾಶ್ವತವಾಗಿ ಬೆಳಕು

ಬಂಟ್ವಾಳ: ಬಿಸಿರೋಡಿನಿಂದ ಮೆಲ್ಕಾರ್ ವರೆಗೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಳವಡಿಸಲಾದ ನೂತನ ವಿದ್ಯುತ್ ದೀಪಗಳನ್ನು ಏಪ್ರಿಲ್ 16ರ ರಾತ್ರಿ ಪ್ರಾಯೋಗಿಕವಾಗಿ ಉರಿಸಿ ಪರೀಕ್ಷಿಸಲಾಗಿದ್ದು, ಮೇ ಮೊದಲ ವಾರದಿಂದ ಶಾಶ್ವತವಾಗಿ ಬೆಳಕು ನೀಡಲಿವೆ ಎಂದು ರಘನಾಥ ರೆಡ್ಡಿ ತಿಳಿಸಿದ್ದಾರೆ. ಬಿಸಿರೋಡು–ಅಡ್ಡಹೊಳೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನೆಲ್ಯಾಡಿ ಹಾಗೂ ಪೆರ್ನೆ ಭಾಗಗಳಲ್ಲಿ ಮಾತ್ರ ಸ್ವಲ್ಪ ಕೆಲಸ ಬಾಕಿಯಿದೆ. ಬಿಸಿರೋಡು–ಪೆರಿಯಶಾಂತಿ ವರೆಗೆ ವಿದ್ಯುತ್ ಕಂಬಗಳ ಅಳವಡಿಕೆ ಮತ್ತು ಲೈಟ್ ಫಿಟಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಅವರು…

Read More

5 ಬಾರಿ ವಾರಂಟ್ ಜಾರಿಯಾದ ಆರೋಪಿ ಬಂಧನ: ವಿದೇಶದಿಂದ ಬಂದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ

ಮಂಗಳೂರು: ಐದು ಬಾರಿ ವಾರಂಟ್ ಜಾರಿಯಾಗಿದ್ದ ಪ್ರಕರಣದ ಆರೋಪಿ ವಿದೇಶದಿಂದ ಹಿಂತಿರುಗುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಟ್ವಾಳ ತಾಲೂಕಿನ ಪೆರುವಾಯಿ ನಿವಾಸಿ ಅಬ್ಬಾಸ್ ಜಿ ಬಂಧಿತನಾಗಿದ್ದು, ವಿಟ್ಲ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದ 2015ರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದನು. ಅವನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ (143, 147, 148, 504, 506, 323, 324, 326 r/w 149 IPC) ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ವಿದೇಶದಿಂದ ಮರಳಿದ ವೇಳೆ…

Read More

ಮಾಜಿ ಸೈನಿಕನಿಗೆ ತಲವಾರು ಹಿಡಿದು ಕೊಲೆ ಬೆದರಿಕೆ: ಬಂಟ್ವಾಳದಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಮಾಜಿ ಸೈನಿಕನೊಬ್ಬರ ಮನೆಯ ಅಂಗಳಕ್ಕೆ ಅಕ್ರಮವಾಗಿ ನುಗ್ಗಿದ ನಾಲ್ವರು ವ್ಯಕ್ತಿಗಳು ಕೊಲೆ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದಲ್ಲಿ ನಡೆದಿದೆ. ಸಜಂಕಬೆಟ್ಟು ನಿವಾಸಿ ಮಾಜಿ ಸೈನಿಕ ಎಸ್. ಪುಷ್ಪರಾಜ್ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ನಾವೂರ ನಿವಾಸಿಗಳಾದ ವಿಜಯ್, ಸಿರಿಲ್ ಹಾಗೂ ಇಬ್ಬರು ಅಪರಿಚಿತರು ಇನ್ನೋವಾ ಕಾರಿನಲ್ಲಿ ಬಂದು ಮನೆಯ ಅಂಗಳಕ್ಕೆ ನುಗ್ಗಿ, ಅವಾಚ್ಯ ಶಬ್ದಗಳಿಂದ ಬೈದು ತಲವಾರು…

Read More
error: Content is protected !!