ಈ ವಿಶ್ವ ದಾಖಲೆ ಖಂಡಿತಾ ಆಗಲಿದೆ – ಲಾಂಛನ ಬಿಡುಗಡೆ ಮಾಡಿ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್

ʼʼಕೊಂಕಣಿಗರ ಜನಸಂಖ್ಯೆ ಕಡಿಮೆಯಿದ್ದರೂ, ಅವರ ಉತ್ಸಾಹ ಮತ್ತು ಸೃಜನಶೀಲತೆ ಶ್ಲಾಘನೀಯ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮತ್ತು ಸಮಾಜ ಸೇವೆಯಲ್ಲಿ ಕೊಂಕಣಿ ಸಮುದಾಯ ಮುಂಚೂಣಿಯಲ್ಲಿದೆ. ಸಂಗೀತ ಅವರಿಗೆ ರಕ್ತಗತವಾಗಿದೆ. ಹಲವು ದಾಖಲೆಗಳನ್ನು ಬರೆದ ಮಾಂಡ್ ಸೊಭಾಣ್ ಸಂಸ್ಥೆ ಈಗ ಆರು ಸಾವಿರ ಗಾಯಕರು ಮತ್ತು ಐದು ಸಾವಿರ ಹಾಡುಗಳಿಂದ ಹೊಸ ವಿಶ್ವ ದಾಖಲೆಯನ್ನು ರಚಿಸಲು ಸಜ್ಜಾಗಿದೆ. ಖಂಡಿತಾ ಈ ದಾಖಲೆ ಆಗಲಿದೆ ಎಂಬ ವಿಶ್ವಾಸವಿದೆ. ಸಾಧ್ಯವಾದಲ್ಲಿ ನಾನೂ ಕಾರ್ಯಕ್ರಮಕ್ಕೆ ಬರುವೆʼʼ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

Read More

ಹುಬ್ಬಳ್ಳಿಯಲ್ಲಿ ಮತ್ತೆ ಲವ್ ಜಿಹಾದ್.ಹಿಂದೂ ಸಂಘಟನೆಗಳ ಗಂಭೀರ ಆರೋಪ

ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.ಸಮೀರ್ ಎಂಬಾತನಿಂದ ಹಿಂದೂ ಯುವತಿಗೆ ಲವ್ ಜಿಹಾದ್ ಬಲೆ ಬೀಸಲಾಗಿತ್ತು ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿವೆ.ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅಲ್ಲಿಯೇ ಧರಣಿ ಕುಳಿತರು. ಆರೋಪಿ ಸಮೀರ್ ಗಾಂಜಾ ವ್ಯಸನಿಯಾಗಿದ್ದಾನೆ ಎಂದ‌ ಸಂಘಟನೆ ಕಾರ್ಯಕರ್ತರು ಆತನನ್ನು ಬಂಧಿಸಲು ಆಗ್ರಹಿಸಿದರು.ಸಮೀರ್ ನ ಮೊಬೈಲ್ ವಶಕ್ಕೆ ಪಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆ ಮೊಬೈಲ್ ನಲ್ಲಿ ಗಾಂಜಾ, ಮಾದಕ ವಸ್ತುಗಳ…

Read More

ಕುಂದಾಪುರ: ಸ್ಕೂಟಿಗೆ ಟಿಪ್ಪರ್ ಡಿಕ್ಕಿ – ಮಹಿಳೆ ಸ್ಥಳದಲ್ಲೇ ಸಾವು

ಉಡುಪಿ: ಟಿಪ್ಪರ್ ಲಾರಿಯೊಂದು ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ಬೀಜಾಡಿ ಡಿವೈಡರ್ ಬಳಿ ನಡೆದಿದೆ. ಮೃತರನ್ನು ವಡ್ಡರ್ಸೆ ನೀರುಕೊಡ್ಲು ನಿವಾಸಿ ದಿ. ಮಂಜುನಾಥ್ ಆಚಾರಿ ಅವರ ಪತ್ನಿ ಶಾರದಾ (55) ಎಂದು ಗುರುತಿಸಲಾಗಿದೆ.ಶಾರದಾ ಅವರು ಕೋಟೇಶ್ವರ ಅಂಕದ ಕಟ್ಟೆಯಲ್ಲಿರುವ ತಮ್ಮ ತಂಗಿಯ ಮನೆಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಈ ವೇಳೆ ಸ್ಕೂಟಿಯನ್ನು ಅವರ ಮಗ ಚಾಲನೆ ಮಾಡುತ್ತಿದ್ದು, ಅಪಘಾತದ ತೀವ್ರತೆಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟಿ ಓಡಿಸುತ್ತಿದ್ದ ಮಗ ಅದೃಷ್ಟವಶಾತ್…

Read More

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೋ ನಿಧನ

ಮಂಗಳೂರು: ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೋ ಅವರ ನಿಧನದ ಸುದ್ದಿ ಶಿಕ್ಷಣ ಕ್ಷೇತ್ರಕ್ಕೆ ತುಂಬಾ ದುಃಖಕರವಾಗಿದೆ ಎಂದು ಮಾಜಿ ಸಚಿವ ಬಿ. ರಾಮನಾಥ ರೈ ತಿಳಿಸಿದ್ದಾರೆ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ಸ್ಮರಿಸಿದ ರಾಮನಾಥ ರೈ, ಅವರ ಅಗಲಿಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ. ಫಾ. ಮೆಲ್ವಿನ್ ಪಿಂಟೋ ಅವರ ಆತ್ಮೀಯತೆ, ಸರಳತೆ ಮತ್ತು ವಿದ್ಯಾರ್ಥಿಗಳ ಮೇಲಿನ ಅಪಾರ ಪ್ರೀತಿ ಎಂದಿಗೂ ಮರೆಯಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅನೇಕ…

Read More

ಎ.15ರಿಂದ 18ರವರೆಗೆ ‘ರಂಗೋತ್ಸವ-2026’ ಮಕ್ಕಳ ಬೇಸಿಗೆ ಶಿಬಿರ – ಮರಕಡದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಹಬ್ಬ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗ ಸ್ವರೂಪ ಕುಂಜತ್ತಬೈಲ್,ಮಂಗಳೂರು ಇದರ ಆಶ್ರಯದಲ್ಲಿ ಎ. 15 ರಿಂದ 18 ರ ವರೆಗೆ ‘ರಂಗೋತ್ಸವ-2026’ ಮಕ್ಕಳ ಬೇಸಿಗೆ ಶಿಬಿರವು ಮರಕಡ ದ.ಕ. ಜಿ.ಪಂ. ಮಾ. ಹಿ. ಪ್ರಾ. ಶಾಲೆಯಲ್ಲಿ ನಡೆಯಲಿದೆ.ಪ್ರಶಸ್ತಿ ವಿಜೇತ ಕ್ರಿಯಾಶೀಲ ಶಿಕ್ಷಕ ಚೇತನ್ ಕೊಪ್ಪ ಶಿಬಿರ ಉದ್ಘಾಟಿಸಲಿರುವರು. ಈ ವಿಶಿಷ್ಟ ಶಿಬಿರದಲ್ಲಿ ಮಕ್ಕಳಿಗಾಗಿ ಗೋಡೆ ಪತ್ರಿಕೆ, ಕ್ರಿಯಾತ್ಮಕ ಚಿತ್ರಕಲೆ, ಹಾಡು, ರೇಖಾ ಚಿತ್ರ, ಮುಖವಾಡ ತಯಾರಿ, ನಾಟಕ, ಗೂಡುದೀಪ, ಗಾಳಿಪಟ, ಕ್ರಿಯಾತ್ಮಕ ಬರೆವಣಿಗೆ, ಕೊಲಾಜ್, ಮಿಮಿಕ್ರಿ, ಮೂಕಾಭಿನಯ,…

Read More

ವೇದಿಕೆಯಲ್ಲಿ ಕುಸಿದು ಯುವ ನಿರೂಪಕ ಸಾವು – ಬಂಟ್ವಾಳದಲ್ಲಿ ದುರ್ಘಟನೆ

ಬಂಟ್ವಾಳ: ಯುವ ನಿರೂಪಕನೋರ್ವ ಮದರಂಗಿ‌ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿಥ್ ( 32) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ನಾಯಿಲದ ಸಂಬಂಧಿಕರ ಮನೆಯಲ್ಲಿ ಮದರಂಗಿ ಕಾರ್ಯಕ್ರಮದ ನಿರೂಪಣೆಗಾಗಿ ವೇದಿಕೆ ಹತ್ತಿ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ಹಠಾತ್ ಕುಸಿದು ಬಿದ್ದಿದ್ದಾನೆ.ಕೂಡಲೇ ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದುದ್ದಾಗಿದೆಯಾದರೂ ಅದಾಗಲೇ ಆತ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.ಬಂಟ್ವಾಳ…

Read More

ಪೈಪ್ ಒಡೆದು ನಗರ ಜಲಾವೃತ: ಬಿಸಿರೋಡು ರಸ್ತೆಯಲ್ಲಿ ಸಂಚಾರ ಸಂಕಷ್ಟ

ಬಂಟ್ವಾಳ: ಕಂಪೆನಿಯೊಂದರ ಕಾಮಗಾರಿ ನಡೆಸುವ ವೇಳೆ ಕುಡಿಯುವ ನೀರಿನ ಪೈಪ್ ಗೆ ಹಾನಿಯಾಗಿ ಬಿಸಿರೋಡು ನಗರದ ರಾಷ್ಟ್ರೀಯ ಹೆದ್ದಾರಿ ಸಹಿತ ಅಂಗಡಿ ಬಾಗಿಲುಗಳಲ್ಲಿ ಕೆಸರು ಮಿಶ್ರಿತ ನೀರು ಶೇಖರಣೆಯಾಗಿದೆ. ಶನಿವಾರ ಬೆಳ್ಳಂಬೆಳಗ್ಗೆ ಬಿ.ಸಿ.ರೋಡಿನ ಮೂಲಕ ಸಂಚರಿಸುವವರು ಇಲ್ಲೇನು ಮಳೆ ಬಂದಿದೆಯೇ ಅಂದುಕೊಂಡಿರಬಹುದು. ಬಿಸಿರೋಡು ನಗರ ಸುತ್ತಲೂ ಕೃತಕ ನೆರೆಯಂತಾಗಿದ್ದು, ಪಾದಾಚಾರಿಗಳು ನಡೆದಾಡಲೂ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಬಿ.ಸಿ.ರೋಡಿನ ಫ್ಲೈಓವರ್ ನ ಮುಂಭಾಗ ಧಾರಾಳವಾಗಿ ನೀರು ರಸ್ತೆಯ ಮೇಲೆ ಹರಿದುಹೋಗುತ್ತಿದ್ದು, ವಾಹನ ಸವಾರರ ಚಕ್ರವೆಲ್ಲಾ ತೊಳೆದುಹೋಗುವಂತೆ ನೀರು ರಸ್ತೆಯಲ್ಲಿದೆ….

Read More

ಕದ್ರಿ ದಕ್ಷಿಣ ವಾರ್ಡಿನಲ್ಲಿ 1 ಕೋಟಿ ರೂ. ವೆಚ್ಚದ ರಸ್ತೆ ಕಾಂಕ್ರೀಟೀಕರಣಕ್ಕೆ ಭೂಮಿ ಪೂಜೆ – ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33 ನೇ ಕದ್ರಿ ದಕ್ಷಿಣ ವಾರ್ಡಿನ ಮೈದಾನದಿಂದ ಕದ್ರಿ ಕಂಬಳ ಜಂಕ್ಷನ್ ವರೆಗಿನ ರಸ್ತೆಯು ಸುಮಾರು 1 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟೀಕರಣಗೊಳ್ಳಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು. ನಂತರ ಮಾತನಾಡಿದ ಶಾಸಕರು, ಇದು ಹಲವು ಸಮಯದ ಬೇಡಿಕೆಯಾಗಿದ್ದು ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಇಡೀ ರಸ್ತೆ ಹಾಳಾಗಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಪಾಲಿಕೆಯ ಬಿಜೆಪಿ ಆಡಳಿತದ ಅವಧಿಯಲ್ಲಿ ಈ ಕಾಮಗಾರಿಗೆ ವಿಶೇಷ ಅನುದಾನವನ್ನು…

Read More

ಕೃತಕ ಬುದ್ಧಿಮತ್ತೆ ವೈದ್ಯಕೀಯ ಕ್ಷೇತ್ರಕ್ಕೆ ಸವಾಲು: ಡಾ. ಶರಣ್ ಪ್ರಕಾಶ ಪಾಟೀಲ್

ಮಂಗಳೂರು:ಆಧುನಿಕ ಯುಗದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಸ್ಥಾನ ಪಡೆದಿದ್ದು, ಇದು ವೈದ್ಯಕೀಯ ಕ್ಷೇತ್ರಕ್ಕೆ ಸ್ಪರ್ಧಾತ್ಮಕ ಸವಾಲಾಗಿ ಹೊರಹೊಮ್ಮುತ್ತಿದೆ ಎಂದು ಸಚಿವ Dr. Sharan Prakash Patil ಅಭಿಪ್ರಾಯಪಟ್ಟರು. ನಗರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ವೈದ್ಯಕೀಯ ಸೇವೆಯ ಸ್ವರೂಪವನ್ನೇ ಬದಲಾಯಿಸುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ವೈದ್ಯ ವೃತ್ತಿಯಲ್ಲಿ ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…

Read More

ಕುಂದಾಪುರ: ಕೋಡಿ ಬೀಚ್‌ನಲ್ಲಿ ಸಮುದ್ರಕ್ಕೆ ಬಿದ್ದ ಡ್ರೋನ್- ಡ್ರೋನ್ ಕ್ಯಾಮೆರಾ ಪತ್ತೆಹಚ್ಚಿದ ಮುಳುಗು ತಜ್ಞ ದಿನೇಶ್ ಖಾರ್ವಿ

ಉಡುಪಿ: ಕುಂದಾಪುರ ಕೋಡಿ ಬೀಚ್‌ನಲ್ಲಿ ಡ್ರೋನ್ ಕ್ಯಾಮರಾ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ವೀಡಿಯೊ ಚಿತ್ರೀಕರಣಕ್ಕಾಗಿ ಡ್ರೋನ್ ಹಾರಿಸುತ್ತಿದ್ದ ವೇಳೆ ಅಚಾನಕ್ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದು, ತಕ್ಷಣವೇ ಡ್ರೋನ್ ಮಾಲೀಕರು ಮುಳುಗು ತಜ್ಞ ದಿನೇಶ್ ಖಾರ್ವಿಯನ್ನು ಸಂಪರ್ಕಿಸಿದ್ದಾರೆ ಆ ಸಂದರ್ಭದಲ್ಲಿ ದಿನೇಶ್ ಖಾರ್ವಿ ಅವರು ಮುರುಡೇಶ್ವರದಲ್ಲಿ ಕೆಲಸದ ನಿಮಿತ್ತ ಇದ್ದರೂ, ಘಟನೆಯ ತುರ್ತು ಪರಿಸ್ಥಿತಿಯನ್ನು ಗಮನಿಸಿ ಕೂಡಲೇ ಕುಂದಾಪುರಕ್ಕೆ ಆಗಮಿಸಿ, ಡ್ರೋನ್ ಬಿದ್ದಿರುವ ಸ್ಥಳದ ಮಾಹಿತಿ ಸಂಗ್ರಹಿಸಿ ಸಮುದ್ರಕ್ಕೆ ಇಳಿದು ಶೋಧ ಕಾರ್ಯ…

Read More
error: Content is protected !!