ಸೇವೆ, ಕರ್ತವ್ಯ ಮತ್ತು ಸಮರ್ಪಣೆಯೇ ಜೀವನದ ನಿಜವಾದ ಮಾರ್ಗ: ರಾಜ್ಯಪಾಲರು

ದಕ್ಷಿಣ ಕನ್ನಡ ಜಿಲ್ಲೆ: “ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಕಲ್ಯಾಣ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ಪ್ರಪಂಚದಾದ್ಯಂತದ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದತ್ತ ನೋಡುತ್ತಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಕೋದಂಡರಾಮ, ಪಂಚಮುಖಿ ಆಂಜನೇಯ ಕ್ಷೇತ್ರ, ಹನುಮಾನಗಿರಿ ದೇವಸ್ಥಾನದ ಗೋಪುರ ಮತ್ತು ಮಂಟಪದ ಉದ್ಘಾಟನೆ ಮತ್ತು ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು….

Read More

“90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ತಯಾರಾದ “90 ಎಮ್ ಎಲ್” ತುಳು ಚಲನ ಚಿತ್ರ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾ ಉದ್ಘಾಟನೆ ನೆರವೇರಿಸಿ ಮಾತಾಡಿದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು “ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಇಂದು ಬಿಡುಗಡೆಯಾಗುತ್ತಿರುವ 90 ಎಂಎಲ್ ಸಿನಿಮಾ ತುಳು ಪ್ರೇಕ್ಷಕರ ಮನೆ ಮನ ಮುಟ್ಟುವ ಕೆಲಸ…

Read More

ಡ್ರೋನ್ ತರಬೇತಿ ಅಕಾಡೆಮಿ ಉದ್ಘಾಟನೆ – ಭವಿಷ್ಯದ ವಿಮಾನಯಾನ ತಜ್ಞರ ತಯಾರಿ : ಕ್ಯಾ.ಸುಧೀರ್ ಅಮೀನ್

ಮಂಗಳೂರು: ಮೂಡಬಿದ್ರೆಯ ಅಳ್ವಾಸ್ ಕಾಲೇಜು ಮೂಡಬಿದ್ರೆ ಆವರಣದಲ್ಲಿ, ವಿಮಾನಯಾನ ಹಾಗೂ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಪ್ರಥಮ ಏರೋಡೈನಾಮಿಕ್ಸ್ ಡ್ರೋನ್ ತರಬೇತಿ ಅಕಾಡೆಮಿಯು ಏಪ್ರಿಲ್ 14ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಕ್ಯಾ.ಸುಧೀರ್ ಅಮೀನ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಅಕಾಡೆಮಿಯು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ (DGCA) ಮಾನ್ಯತೆ ಪಡೆದ ಅತ್ಯಾಧುನಿಕ ರಿಮೋಟ್ ಪೈಲಟ್ ತರಬೇತಿ ಸಂಸ್ಥೆಯಾಗಿದ್ದು, ಡ್ರೋನ್ ಕಾರ್ಯಾಚರಣೆ,…

Read More

ಆರ್‌ಎಸ್‌ಎಸ್ ವಿರುದ್ಧ ಖರ್ಗೆ ಹೇಳಿಕೆಗೆ ಕಿಡಿ – ಹಿಂದೂ ಸಮಾಜಕ್ಕೆ ಅವಮಾನ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಹಿಂದೂ ಸಮಾಜಕ್ಕೆ ನ್ಯಾಯ ಕೇಳುವ ಸಂಘಟನೆ ಆರ್‌ಎಸ್‌ಎಸ್. ಈ ಸಂಘಟನೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು. ಉಡುಪಿಯಲ್ಲಿ‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖರ್ಗೆಯವರ ಹಿರಿತನವನ್ನು ನಾವು ಗೌರವಿಸುತ್ತೇವೆ. ನಿನ್ನೆ ಅವರು ಆಡಿರುವ ಮಾತು ಸರಿಯಲ್ಲ. ಆರ್‌ಎಸ್‌ಎಸ್ ಬಗ್ಗೆ ಅತ್ಯಂತ ಕೀಳುಮಟ್ಟದ ಮಾತನಾಡಿದ್ದಾರೆ. ಆರ್‌ಎಸ್‌ಎಸ್ ಅನ್ನು ಕೊಲ್ಲಬೇಕು ಎಂದಿದ್ದಾರೆ. ಇಡೀ ಭಾರತದಲ್ಲಿ ಹಿಂದೂಗಳ ಪರ ಧ್ವನಿ ಎತ್ತಬಲ್ಲ ಸಂಘಟನೆ ಆರ್‌ಎಸ್‌ಎಸ್. ಸಮಾಜದ ಎಲ್ಲರನ್ನೂ…

Read More

ಕಾರ್ಕಳ ಪುರಸಭೆಯಲ್ಲಿ ಆರ್‌ಟಿಐ ಗೊಂದಲ – ಮಾಹಿತಿ ಸಿಗದೆ ಕಛೇರಿಯಲ್ಲೇ ಪ್ರತಿಭಟನೆ

ಉಡುಪಿ: ಕಾರ್ಕಳ ಪುರಸಭೆಯಲ್ಲಿ ಮಾಹಿತಿ ಹಕ್ಕು ಅಧಿಕಾರಿ ತಾನು ಕೇಳಿದ ದಾಖಲೆಗಳನ್ನು ನೀಡದೆ ಸತಾಯಿಸುತ್ತಿದ್ದಾರೆ ಮಾಹಿತಿ ಕೇಳಿದರೆ ಪೂರ್ಣ ಮಾಹಿತಿ ನೀಡದೆ ತಾವೇ ಮೇಲ್ಮಮನವಿ ಸಲ್ಲಿಸಿ ಉಡಾಪೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಮಾಜಿ ಸದಸ್ಯ ಸುನೀಲ್ ಕೋಟ್ಯಾನ್ ಪುರಸಭೆ ಕಛೇರಿಯೊಳಗೆ ಮಾಹಿತಿ ಹಕ್ಕು ಅಧಿಕಾರಿ ಟೇಬಲ್ ಮುಂಭಾಗದಲ್ಲಿ ಪ್ರತಿಭಟನೆ ಕುಳಿತ ಘಟನೆ ನಡೆದಿದೆ. ಕಾರ್ಕಳ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಅಂಬಾಭವಾನಿ ದೇವಸ್ಥಾನ ರಸ್ತೆಗೆ ಪುರಸಭಾ ವತಿಯಿಂದ 2011 – 2012…

Read More

ಶ್ರೀರಾಮ–ಹನುಮ ಜ್ಯೋತಿ ಗ್ರಾಮದರ್ಶನ ಪೂರ್ಣ – ಹನುಮಗಿರಿಗೆ ಅದ್ಧೂರಿ ರಥಯಾತ್ರೆ

ಪುತ್ತೂರು: ಅಯೋಧ್ಯೆ ಮತ್ತು ಅಂಜನಾದ್ರಿ ಬೆಟ್ಟದಿಂದ ತರಲಾದ ಶ್ರೀರಾಮ–ಹನುಮ ಜ್ಯೋತಿ ಪುತ್ತೂರು ತಾಲೂಕಿನ ವಿವಿಧ ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳು ಹಾಗೂ 60 ಗ್ರಾಮಗಳ ‘ಗ್ರಾಮದರ್ಶನ’ ನೆರವೇರಿಸಿಕೊಂಡು ಈಶ್ವರಮಂಗಲದ ಪಂಚಲಿಂಗೇಶ್ವರ ದೇವಳಕ್ಕೆ ಆಗಮಿಸಿತು. ಜ್ಯೋತಿಗೆ ಭಕ್ತರು ಅದ್ಧೂರಿ ಸ್ವಾಗತ ಕೋರಿದರು. ಪಂಚಲಿಂಗೇಶ್ವರ ದೇವಳದ ಬಳಿಯಿಂದ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಗೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ದೇವಳದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಅವರು ತೆಂಗಿನಕಾಯಿ ಒಡೆಯುವ ಮೂಲಕ ರಥಯಾತ್ರೆ ಆರಂಭಿಸಿದರು.ಈಶ್ವರಮಂಗಲದ ಉನ್ನಿಕೃಷ್ಣನ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ…

Read More

ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ಎ.12ರಂದು

ಮಂಗಳೂರು: ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕಕಲ್ಯಾಣಾರ್ಥವಾಗಿ 6ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆಯನ್ನು ಏಪ್ರಿಲ್ 12ರಂದು, ಆದಿತ್ಯವಾರ ಬೆಳಗ್ಗೆ 6 ಗಂಟೆಗೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ತಿಳಿಸಿದೆ. ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರ್ ಕೊರಗಜ್ಜನ ಆದಿಕ್ಷೇತ್ರದವರೆಗೆ ಈ ಪಾದಯಾತ್ರೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪಾದಯಾತ್ರೆಯ ಮೂಲಕ ಜನರಲ್ಲಿ ಆಸ್ತಿಕತೆಯನ್ನು ಬೆಳೆಸುವ ಹಾಗೂ ಧಾರ್ಮಿಕ ಚಿಂತನೆಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸಾಮೂಹಿಕ ಪ್ರಾರ್ಥನೆ ಮತ್ತು…

Read More

ಡೀಸೆಲ್ ಕೊರತೆ: ಮೀನುಗಾರರಿಂದ ಆಕ್ರೋಶ

ಮೀನುಗಾರಿಕಾ ಧಕ್ಕೆಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಪ್ರಾಥಮಿಕ ಮೀನುಗಾರರ ಸಂಘದ ಪೆಟ್ರೋಲ್ ಪಂಪ್‌ನಲ್ಲಿ ಮೀನುಗಾರಿಕಾ ದೋಣಿಗಳಿಗೆ ಸಮರ್ಪಕವಾಗಿ ಡೀಸೆಲ್ ಪೂರೈಕೆಯಾಗದೆ ತೊಂದರೆ ಉಂಟಾಗಿರುವ ಬಗ್ಗೆ ಬೋಟ್ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಕನ್ ವ್ಯವಸ್ಥೆಯಡಿ ನಿಯಮಿತವಾಗಿ ಡೀಸೆಲ್ ಪೂರೈಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಾಲ್ ಬೋಟ್ ಮಾಲಕರ ಸಂಘದ ಕೋಶಾಧಿಕಾರಿ ಅಬೂಬಕರ್ ಅಶ್ರಫ್, ಸಂಘದಡಿ ಸುಮಾರು 500 ಮೀನುಗಾರಿಕಾ ದೋಣಿಗಳು ಕಾರ್ಯನಿರ್ವಹಿಸುತ್ತಿವೆ. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ತೈಲ…

Read More

ಅಹ್ಲೆ ಹದೀಸ್ ಸಮ್ಮೇಳನ ಎ.18–19ರಂದು ಮಂಗಳೂರಿನಲ್ಲಿ

ಜಮೀಯತೇ ಅಹ್ಲೆ ಹದೀಸ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಎ. 18 ಮತ್ತು 19ರಂದು ಅಹ್ಲೆ ಹದೀಸ್ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಕಾಟಿಪಳ್ಳ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಎ.18ರಂದು ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಉದ್ಘಾಟನೆ ನಡೆಯಲಿದೆ ಎಂದರು. ಅಖಿಲ ಭಾರತ ಜಮೀಯತೇ ಅಹ್ಲೆ ಹದೀಸ್ ಅಧ್ಯಕ್ಷ ಅಸ್ಗರ್ ಅಲಿ ಇನಾಮ್ ಮೆಹ್ಡಿ ಮಾರ್ಗದರ್ಶನದಲ್ಲಿ, ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್‌ ವಹಾಬ್…

Read More

ಮಂಗಳೂರಿನಲ್ಲಿ ‘ಚಾಕೊಲೇಟ್ ಸ್ಟ್ರೀಟ್’ 7ನೇ ಆವೃತ್ತಿ ಎ.11–12ರಂದು

ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯು (ನಿಕೋ) ವತಿಯಿಂದ ಕ್ಯಾಂಪ್ಕೋ ಸಹಯೋಗದಲ್ಲಿ ಮಂಗಳೂರಿನ ಅತಿದೊಡ್ಡ ಚಾಕೊಲೇಟ್ ಹಬ್ಬ ‘ಚಾಕೊಲೇಟ್ ಸ್ಟ್ರೀಟ್’ನ 7ನೇ ಆವೃತ್ತಿ ಎ.11 ಮತ್ತು 12 ರಂದು ನಗರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆಯೋಜಿಸಲಿದೆ ಎಂದು ನಿಟ್ಟೆ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಮುಖ್ಯಸ್ಥೆ ಡಾ. ಮೌಲ್ಯ ಬಾಲಾಡಿ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸೊಲ್ಮೆಲು ಚಾಕೊಲೇಟ್ ಸಂಸ್ಥೆಯ ಸ್ಥಾಪಕ ಮಯೂರ್…

Read More
error: Content is protected !!