ಕಡಬ : ಬಾವಿ ತೋಡಲು ಸ್ಪೋಟಕ ಬಳಕೆ, ಸಮೀಪದ ಮನೆಗಳಿಗೆ ಹಾನಿ -ದೂರು

ರಾಮಕುಂಜ : ಬಾವಿ ತೋಡುವ ಸಂದರ್ಭದಲ್ಲಿ ಸ್ಪೋಟಕ ಬಳಕೆ ಮಾಡಿರುವುದರಿಂದ ಸಮೀಪದ ಮನೆಗಳಿಗೆ ಹಾನಿಯಾಗಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮಾ.8 ರಂದು ನಡೆದಿದೆ. ಈ ಮಧ್ಯೆ ಸ್ಪೋಟವಾಗದೆ ಬಾವಿಯೊಳಗೆ ಉಳಿದಿರುವ ಮದ್ದುಗುಂಡುಗಳನ್ನು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ತೆರವುಗೊಳಿಸುವ ಕಾರ್ಯಾಚರಣೆ ಮಾ. 10 ರಂದು ಬೆಳಿಗ್ಗೆ ಆರಂಭಿಸಿದ್ದಾರೆ. ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮೈಸೂರು ನಿವಾಸಿ ಸೋಮಶೇಖರ ಎಂಬವರು ತಮ್ಮ ಸಂಬಂಧಿಕರಿಂದ 23 ಸೆಂಟ್ಸ್ ಜಾಗ ಖರೀದಿಸಿದ್ದು ಅದರಲ್ಲಿ ಅಡಿಕೆ ಮರಗಳಿವೆ. ಈ…

Read More

ಉಳ್ಳಾಲ ನಗರಸಭೆ ಅಧ್ಯಕ್ಷರ ಕಾರು ಚಾಲಕ ಅಶೋಕ್ ಉಳ್ಳಾಲಬೈಲ್ ನಿಧನ

ಉಳ್ಳಾಲ ನಗರಸಭೆಯ ಅಧ್ಯಕ್ಷರ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದ ಅಶೋಕ್ ಉಳ್ಳಾಲಬೈಲ್ (64) ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಶೋಕ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಮಂಗಳೂರು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಸಭಾಧ್ಯಕ್ಷರ ಆಪ್ತ ಸಹಾಯಕ ಮನ್ಸೂರ್ ಮಂಚಿಲ್, ದಿನೇಶ್ ರೈ, ಸುರೇಶ್…

Read More

ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಶವವಾಗಿ ಪತ್ತೆ: ಸೋಮೇಶ್ವರದ ಗದಾತೀರ್ಥ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ

ಉಳ್ಳಾಲ: ಮಾ.11ಕಳೆದ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ನಾಪತ್ತೆಯಾಗಿದ್ದ ಕೊಣಾಜೆಯ ಯುವಕನೊಬ್ಬನ ಶವವು ಇಂದು ಬೆಳಿಗ್ಗೆ ಸೋಮೇಶ್ವರದ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ನಿಯಿಂದ ವಿಚ್ಛೇದನಗೊಂಡಿದ್ದ ಖಿನ್ನತೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿ ನಿವಾಸಿ ದಿನೇಶ್ ಶೆಟ್ಟಿಗಾರ್ ಅವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಮೃತ ಯುವಕನಾಗಿದ್ದಾನೆ. ಮಂಗಳೂರಿನ ಕದ್ರಿಯ ವೇದ ಮೋಟಾರ್ಸ್‌ನಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ…

Read More

ಕುಕ್ಕೆಗೂ ತಟ್ಟಿದ ಗ್ಯಾಸ್ ಪೊರೈಕೆ ವ್ಯತ್ಯಯ ಬಿಸಿ

ಸುಬ್ರಹ್ಮಣ್ಯ: ದೇಶದಲ್ಲಿ ಉಂಟಾಗಿರುವ ಗ್ಯಾಸ್ ವ್ಯತ್ಯಯ ಬಿಸಿ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದ್ದು, ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಬುಧವಾರದಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ.ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿ ದಿನ ಬೆಳಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು, ಇದೀಗ ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಬೇಯಿಸುವ ತಿನಿಸು ಬದಲಾಗಿ, ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ದೇವಸ್ಥಾನದಲ್ಲಿ ಮುಂದಿನ ಮೂರು ದಿನಕ್ಕೆ ಬೇಕಾಗುವಷ್ಟು ಗ್ಯಾಸ್ ಲಭ್ಯವಿದ್ದು, ಬಳಿಕದಲ್ಲೂ ಪೊರೈಕೆ ಆಗದೇ ಇದ್ದಲ್ಲಿ ಸಮಸ್ಯೆ ಆಗಲಿದೆ ಎನ್ನಲಾಗಿದ್ದು,…

Read More

ಮಂಗಳೂರು ಹೊಯ್ಗೆಬಜಾರ್ ವಾರ್ಡಿನಲ್ಲಿ ₹1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 57ನೇ ಹೊಯ್ಗೆಬಜಾರ್ ವಾರ್ಡಿನ ಕೆ.ಎನ್. ಬೋರ್ಡ್ ಯಾರ್ಡ್ ರಸ್ತೆಯ ಸುಮಾರು ಒಂದು ಕೋಟಿ ರೂ. ಅನುದಾನದಲ್ಲಿ ಸಮಗ್ರ ಅಭಿವೃದ್ಧಿಗೊಳ್ಳಲಿದ್ದು, ಶಾಸಕ ವೇದವ್ಯಾಸ ಕಾಮತ್‌ ರವರ ನೇತೃತ್ವದಲ್ಲಿ ಇತ್ತೀಚಿಗೆ ಗುದ್ದಲಿ ಪೂಜೆಯು ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಕಾಮಗಾರಿಗಳಿಗೆ ಕಾಂಗ್ರೆಸ್ ಸರಕಾರ ತಡೆ ನೀಡಿತ್ತು. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತ ಪರಿಣಾಮ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರಲ್ಲಿ ಅನೇಕ…

Read More

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಟ ಅರ್ಜುನ್ ಕಪೂರ್ ಭೇಟಿ

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಟ ಅರ್ಜುನ್ ಕಪೂರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದ ಅವರು ವಿವಿಧ ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಶನಿವಾರ ಕ್ಷೇತ್ರಕ್ಕೆ ಆಗಮಿಸಿದ್ದ ಅರ್ಜುನ್ ಕಪೂರ್, ಭಾನುವಾರ ಅತ್ಯಂತ ಫಲದಾಯಕವೆಂದು ನಂಬಲಾದ ‘ಸರ್ಪ ಸಂಸ್ಕಾರ’ ಸೇವೆಯನ್ನು ನೆರವೇರಿಸಿದರು. ಸೋಮವಾರ ಬೆಳಿಗ್ಗೆ ನಡೆದ ‘ಆಶ್ಲೇಷ ಬಲಿ’ ಪೂಜೆಯಲ್ಲೂ ಅವರು ಭಾಗವಹಿಸಿ…

Read More

ಬೆಳ್ತಂಗಡಿಯಲ್ಲಿ ಅಕ್ರಮ ಡೀಸೆಲ್ ಸಂಗ್ರಹ ಪತ್ತೆ – 4,000ಕ್ಕೂ ಹೆಚ್ಚು ಲೀಟರ್ ವಶ

ಮಂಗಳೂರು : ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಡೀಸಿಲ್‌ನ್ನು ಸಂಗ್ರಹ ಮಾಡಲಾಗಿದ್ದು, ಅದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಡೀಸಿಲ್ ಶೇಖರಿಸಿಟ್ಟುರುವುದಾಗಿ ಮಾಹಿತಿ ಬಂದ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಠಾಣಾಧಿಕಾರಿಗಳನ್ನು ಕರೆಸಿ ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ದಾಳಿ ನಡೆಸಿದ್ದಾರೆ. ನಾಲ್ಕು ಸಾವಿರ ಲೀಟರ್ ಡೀಸೆಲ್ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಮಾರ್ಚ್ 9ರಂದು ರಾತ್ರಿ ಪೊಲೀಸರು ಕಣಿಯೂರು ನಿವಾಸಿಯೊಬ್ಬರ ಮನೆಯ…

Read More

ಅಮೇರಿಕಾದ ಯುದ್ಧಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕ: ಕೆ. ಮಹಾಂತೇಶ್

ಮಂಗಳೂರು: ಅಮೇರಿಕಾ ಹಾಗೂ ಇಸ್ರೇಲ್ ದೇಶಗಳ ಯುದ್ಧಕೋರ ನೀತಿಗಳ ಪರಿಣಾಮವಾಗಿ ಜಗತ್ತಿನಾದ್ಯಂತ ಯುದ್ಧದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇದರಿಂದ ಸಾಮಾನ್ಯ ಜನರು ತೀವ್ರ ಆತಂಕದಲ್ಲಿದ್ದಾರೆ ಎಂದು ಸಿಐಟಿಯು (CITU) ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಅಭಿಪ್ರಾಯಪಟ್ಟರು. ಮಂಗಳೂರಿನಲ್ಲಿ ಏಪ್ರಿಲ್ 4 ಮತ್ತು 5 ರಂದು ನಡೆಯಲಿರುವ ಸಿಐಟಿಯು ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರದ ಯಶಸ್ಸಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ಅಮೇರಿಕನ್ ಸಾಮ್ರಾಜ್ಯಶಾಹಿ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅದನ್ನು ಸಮತೋಲನಗೊಳಿಸಲು…

Read More

ವಿಶ್ವವಿದ್ಯಾನಿಲಯ ಕಾಲೇಜು ಕ್ಯಾಂಪಸ್‌ನಲ್ಲಿ ಎಬಿವಿಪಿ ಪ್ರತಿಭಟನೆ

ಮಂಗಳೂರು: ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಮರುಆರಂಭಿಸುವ ಬಗ್ಗೆ ರಾಜ್ಯ ಬಜೆಟ್‌ನಲ್ಲಿ ಮಾಡಿರುವ ಘೋಷಣೆಯನ್ನು ವಿವಿಧ ವಿದ್ಯಾರ್ಥಿ ಸಂಘಟನೆಗಳು ಸ್ವಾಗತಿಸಿವೆ. ಇದೇ ವೇಳೆ ವಿದ್ಯಾರ್ಥಿಗಳಿಗಾಗಿ “ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್” ಆರಂಭಿಸುವುದಾಗಿ ಸರ್ಕಾರ ಘೋಷಿಸಿರುವುದನ್ನು ಸ್ವಾಗತಿಸಿ ಎನ್‌.ಎಸ್‌.ಯು.ಐ. ವಿದ್ಯಾರ್ಥಿ ಸಂಘಟನೆ ಮಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ಕ್ಯಾಂಪಸ್‌ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಪ್ರತಿಭಟನೆ ನಡೆಯಿತು. ಕಾಲೇಜು ಆವರಣಕ್ಕೆ ನುಗ್ಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ…

Read More

ಗುತ್ತುಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

ಮಂಗಳೂರು: ನವಮಂಗಳೂರು ಬಂದರಿಗೆ ಐಷಾರಾಮಿ ಓಶೇನಿಯಾ ಹಡಗಿನಲ್ಲಿ ಆಗಮಿಸಿದ್ದ ನೂರಾರು ವಿದೇಶಿ ಪ್ರವಾಸಿಗರು ಭಾನುವಾರ ಪಿಲಿಕುಳದಲ್ಲಿರುವ ಗುತ್ತುಮನೆ ಹಾಗೂ ಕುಶಲಕರ್ಮಿ ಗ್ರಾಮಕ್ಕೆ ಭೇಟಿ ನೀಡಿದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿರುವ ಕುಶಲಕರ್ಮಿ ಗ್ರಾಮದಲ್ಲಿ ಪಾರಂಪರಿಕವಾಗಿ ಮುಂದಿನ ತಲೆಮಾರಿಗೆ ಉಳಿಸಿಕೊಂಡು ಬಂದಿರುವ ವಿವಿಧ ಕೌಶಲ್ಯಗಳನ್ನು ಪ್ರವಾಸಿಗರು ಆಸಕ್ತಿಯಿಂದ ವೀಕ್ಷಿಸಿದರು. ಕುಂಬಾರಿಕೆ, ಕುಟ್ಟಣದ ಅವಲಕ್ಕಿ ತಯಾರಿಕೆ, ಎಣ್ಣೆ ಗಾಣ, ಕಮ್ಮಾರಿಕೆ, ಬಡಗಿ ಕೆಲಸಗಳು ಹಾಗೂ ಬೆತ್ತ–ಬಿದಿರು ಕೈಗಾರಿಕೆ ವಿಭಾಗಗಳಲ್ಲಿ ನಡೆಯುತ್ತಿದ್ದ ನೇರ ಪ್ರಾತ್ಯಕ್ಷಿಕೆಗಳು ವಿದೇಶಿ ಪ್ರವಾಸಿಗರ ಗಮನ ಸೆಳೆದವು. ಗ್ರಾಮೀಣ…

Read More
error: Content is protected !!