ಮಂಗಳೂರು ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ರಕ್ಷಾಬಂಧನ

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ರಕ್ಷಾಬಂಧನದ ಪ್ರಯುಕ್ತ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸೈನಿಕರಿಗೆ ರಕ್ಷೆಯನ್ನು ಕಟ್ಟಿ ಶುಭ ಹಾರೈಸಲಾಯಿತು. ನಿವೃತ್ತ ಸೈನಿಕರಿಗೆ ಆರತಿ ಬೆಳಗಿ, ಸಿಂಧೂರ ತಿಲಕವಿಟ್ಟು ಪೆಹಲ್ಗಮ್ ಉಗ್ರರ ದಾಳಿಯಲ್ಲಿ ಸಿಂಧೂರವನ್ನು ಕಳಕೊಂಡ ತಾಯಂದಿರ ನೋವಿಗೆ ಆಪರೇಷನ್ ಸಿಂಧೂರದ ಮೂಲಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಗೆ ಮಹಿಳಾ ಮೋರ್ಚಾದಿಂದ ಧನ್ಯವಾದ ಸಮರ್ಪಿಸಲಾಯಿತು. ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ,…

Read More

ರಾಷ್ಟ್ರೀಯ ಹೆದ್ದಾರಿ 75 ರ ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿ ಘನಗಾತ್ರದ ಲಾರಿ ,ದ್ವಿಚಕ್ರ ವಾಹನಕ್ಕೆ ಡಿಕ್ಕಿ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿ ಘನಗಾತ್ರದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ದ್ವಿಚಕ್ರವಾಹನ ಸವಾರನಿಗೆ ಗಂಭೀರವಾಗಿ ಗಾಯಗೊಂಡಿದ್ದು,ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.‌ಕಲ್ಲಡ್ಕ ನಿವಾಸಿ ಸುಶಾಂತ್ ಕುಮಾರ್ ಎಂಬಾತನಿಗೆ ಲಾರಿ ಡಿಕ್ಕಿಯಾಗಿದೆ. ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆ.ಎನ್.ಆರ್ .ಸಿ.ಕಂಪೆನಿಗೆ ಸೇರಿದ ಲಾರಿ ಇದಾಗಿದ್ದು, ಚಾಲಕ ಅಬ್ದುಲ್‌ ನೂರ್ ಖಾಜಿ ಎಂಬಾತ ನೆಹರುನಗರದಲ್ಲಿರುವ ಅನಧಿಕೃತ ‌ಕ್ರಾಸ್ ನಲ್ಲಿ ಬಂದಿದ್ದಲ್ಲದೆ ರಾಂಗ್ ಸೈಡ್ ನಲ್ಲಿ ಚಲಾಯಿಸಿಕೊಂಡು…

Read More

ಜೀಪು ಪಲ್ಟಿಯಾಗಿ ಕೃಷಿಕ ಸಾವು

ಕಡಬ: ಜೀಪು ಪಲ್ಟಿಯಾಗಿ ಕೃಷಿಕರೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಬಿಳಿನೆಲೆ ಗ್ರಾಮದ ಬಿಳಿನೆಲೆ ಬೈಲು ನಿವಾಸಿ ಧರ್ಮಪಾಲ (68) ಮೃತರು. ಧರ್ಮಪಾಲ ಅವರು ತನ್ನ ಮಗನೊಂದಿಗೆ ತೋಟಕ್ಕೆ ಔಷಧಿ ಸಿಂಪಡಿಸಿದ ಬಳಿಕ ತಮ್ಮ ಜೀಪಿನಲ್ಲಿ ಮನೆಗೆ ಹಿಂದಿರುಗುವ ವೇಳೆ ಮನೆ ಸಮೀಪ ಮಣ್ಣಿನ ರಸ್ತೆಯಲ್ಲಿ ಜೀಪು ಹತ್ತದೇ ಇದ್ದುದರಿಂದ ಧರ್ಮಪಾಲ ಅವರು ಜೀಪಿನಿಂದ ಇಳಿದು ರಸ್ತೆ ಬದಿ ನಿಂತಿದ್ದ ವೇಳೆ, ಜೀಪು ಚಲಾಯಿಸುತ್ತಿದ್ದ ಧರ್ಮಪಾಲರ ಮಗ ಜೀಪನ್ನು ಹತ್ತಿಸಲು ಪ್ರಯತ್ನಿಸಿದಾಗ…

Read More

ಕುಡ್ತಮುಗೇರು: ಕಾರು ಡಿಕ್ಕಿ ಪ್ರಗತಿ ಸ್ವೀಟ್ಸ್ ನ ಮಾಲಿಕ ಜಗನ್ನಾಥ ಶೆಟ್ಟಿಗಾ‌ರ್ ಗಂಭೀರ

ವಿಟ್ಲ: ಕಾರೊಂದು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಗಂಭೀರ‌ ಗಾಯಗೊಂಡ ಘಟನೆ ಆ.೮ರಂದು ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ. ಕುಡ್ತಮುಗೇರಿನ ಪ್ರಗತಿ ಸ್ವೀಟ್ಸ್ ನ ಮಾಲಿಕ ಜಗನ್ನಾಥ ಶೆಟ್ಟಿಗಾ‌ರ್ ಗಂಭೀರ ಗಾಯಗೊಂಡವರಾಗಿದ್ದಾರೆ. ಜಗನ್ನಾಥ ಶೆಟ್ಟಿಗಾರ್ ರವರು ಕುಡ್ತಮುಗೇರಿನಿಂದ ಪರ್ತಿಪ್ಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅವರ ದ್ವಿಚಕ್ರ‌ವಾಹನದ‌ ಟಯರ್ ಪಂಚರ್ ಆಗಿತ್ತು. ಆದ್ದರಿಂದ ಅವರು ತಮ್ಮ ವಾಹನವನ್ನು‌ ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲೆ ಪಕ್ಕದಲ್ಲಿ ನಿಂತಿದ್ದ ವೇಳೆ ಪುತ್ತೂರು ಭಾಗದಿಂದ ಸಾಲೆತ್ತೂರು…

Read More

ಖ್ಯಾತ ನಟ ಮತ್ತು ರಂಗಭೂಮಿ ಕಲಾವಿದ ಟಿ ಪ್ರಭಾಕ‌ರ್ ಕಲ್ಯಾಣಿ ಇನ್ನಿಲ್ಲ

ಉಡುಪಿ: ಕಾಂತಾರ ಚಿತ್ರದ ಖ್ಯಾತ ನಟ ಮತ್ತು ರಂಗಭೂಮಿ ಕಲಾವಿದ ಟಿ ಪ್ರಭಾಕ‌ರ್ ಕಲ್ಯಾಣಿ ಹೃದಯಾಘಾತದಿಂದ ನಿಧನರಾದರು.ಪೆರ್ಡೂರಿನ ಮೂಲದವರು ಮತ್ತು ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಅಧಿಕಾರಿಯಾಗಿದ್ದ ಪ್ರಭಾಕರ್, ‘ಕಾಂತಾರ’ದಲ್ಲಿ ವಕೀಲರ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ದರಾಗಿದ್ದರು. ಕುಟುಂಬದ ಮೂಲಗಳ ಪ್ರಕಾರ, ಅವರು ಎರಡು ದಿನಗಳ ಹಿಂದೆ ಮನೆಯಲ್ಲಿ ಕುಸಿದುಬಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Read More

ಮುಸುಕುದಾರಿಗೆ ಗನ್ ಮ್ಯಾನ್ ಭದ್ರತೆ ನೀಡುವಂತೆ ಎಸ್ ಐಟಿಗೆ ಮನವಿ

ಧರ್ಮಸ್ಥಳದಲ್ಲಿ ಶವಹೂತಿಟ್ಟಿರುವ ಪ್ರಕರಣದ ದೂರುದಾರ ತನಗೆ ಗನ್ ಮ್ಯಾನ್ ಭದ್ರತೆ ನೀಡುವಂತೆ ಎಸ್ ಐಟಿಗೆ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಧರ್ಮಸ್ಥಳದಲ್ಲಿ ಗಲಾಟೆ ಪ್ರಕರಣದ ಬೆನ್ನಲ್ಲೇ ದೂರುದಾರ ತನ್ನ ಮೇಲೂ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ತನಗೆ ಗನ್ ಮ್ಯಾನ್ ಭದ್ರತೆ ಒದಗಿಸುವಂತೆ ಮನವಿ ಮಾಡಿದದಗಿ ದೂರುದಾರ ಪರ ವಕೀಲರು ಎಸ್ ಐಟಿ ತಂಡಕ್ಕೆ ಲಿಖಿತ ಮನವಿ ಮಾಡಿದ್ದಾರೆ.ಶೋಧಕಾರ್ಯ ಮುಕ್ತಾಯವಾದ ಬಳಿಕವೂ ತನಗೆ ಗನ್ ಮ್ಯಾನ್ ಭದ್ರತೆ ಕಲ್ಪಿಸುವಂತೆ ಎಸ್ ಐಟಿ ಎಸ್‌ ಪಿ ಜಿತೇಂದ್ರ ದಯಾಮ್…

Read More

ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ:- ಶಾಸಕ ಕಾಮತ್

ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಎಸ್ಐಟಿ ಈಗಾಗಲೇ ತನಿಖೆ ಕೈಗೊಂಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಕುಳಿತವರು, ತನಿಖೆ ಹೇಗೆ ನಡೆಯಬೇಕು ಎಂದು ನಿರ್ದೇಶಿಸಿ, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಆಗುವಂತಹ ಹೇಳಿಕೆ ನೀಡಿ ಅಂತಿಮ ತೀರ್ಪು ಸಹ ಕೊಟ್ಟು ಬಿಡುತ್ತಿದ್ದಾರೆ. ಇಂತಹ ಅತಿರೇಕದ ವರ್ತನೆಗಳಿಗೆ ರಾಜ್ಯ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಧರ್ಮಸ್ಥಳವು ರಾಜ್ಯದ ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆ ಅಭಿವೃದ್ಧಿ, ಹಿಂದೂ ರುದ್ರಭೂಮಿಗಳ ನವೀಕರಣ, ಸ್ತ್ರೀ ಸಬಲೀಕರಣ,…

Read More

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ’ಧರ್ಮಸ್ಥಳ’ ಕ್ಷೇತ್ರವನ್ನು ಟಾರ್ಗೆಟ್ ಮಾಡಿರುವ ಆಘಾತಕಾರಿ ಸಂಗತಿ

ಮಂಗಳೂರು ಹೊರ ವಲಯದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣಾ ಮಾಹಿತಿ ಆರೋಪಿಯು, ಧರ್ಮಸ್ಥಳದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದ ಎನ್ನುವುದನ್ನು ಬೆಳಕಿಗೆ ತಂದಿದೆ.ನವೆಂಬರ್ 2022ರಲ್ಲಿ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸುತ್ತಿದೆ. ಮಂಗಳೂರಿನಲ್ಲಿ ಹಿಂದೆ ಆಟೋರಿಕ್ಷಾದಲ್ಲಿ ಕಡಿಮೆ ತೀವ್ರತೆಯ ಸ್ಪೋಟ ಸಂಭವಿಸಿತ್ತು. ಜಾರಿ ನಿರ್ದೇಶನಾಲಯವು, ಪ್ರಮುಖ ಆರೋಪಿ ಸಯ್ಯದ್ ಯಾಸಿನ್ ಬ್ಯಾಂಕ್ ಖಾತೆಯಲ್ಲಿದ್ದ 29 ಸಾವಿರ ರೂಪಾಯಿ ಹಣವನ್ನು, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಮುಟ್ಟುಗೋಲು…

Read More

ನಿಟ್ಟೆ ಗ್ರಾಮದಲ್ಲಿ ಶ್ರೀ ಗಂಧದ ಮರ ಕಳವು ಪ್ರಕರಣ – ಸೊತ್ತು ಸಹಿತ ಮೂವರ ಅಂಧರ್

ಕಾರ್ಕಳ : ಜೂನ್ 16ರಂದು ರಾತ್ರಿ ಸಮಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ತೋಟದಲ್ಲಿದ್ದ ಶ್ರೀಗಂಧದ ಮರವನ್ನು ಕಳವು ಮಾಡಿರುವ ಕೇಸ್ ಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹೇನೊಟ್ಟುವಿನ ದಿನೇಶ್ ಶೆಟ್ಟಿಗಾರ್ ಎಂಬುವವರಿಗೆ ಸೇರಿದ್ದ 4 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರಗಳನ್ನು ಕಳವು ಗೈದಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂ.17ರಂದು ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್. ಮತ್ತು…

Read More

ಸರ್ಕಾರದ ಬೊಕ್ಕಸದಿಂದ ಪಿಂಚಣಿ ಕೊಡಿ. ಜನರ ಜೇಬಿನಿಂದ ಅಲ್ಲ :- ಶಾಸಕ ಕಾಮತ್

ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು, ಮುಚ್ಚಿಕೊಳ್ಳಲು ಪ್ರಯತ್ನಿಸಿ, “ಆ ನಿರ್ಧಾರ ನಮ್ಮದಲ್ಲ, ಹಿಂದಿನ ಸರ್ಕಾರದ್ದು” ಎಂದು ಬಾಲಿಶ ಹೇಳಿಕೆ ನೀಡಿ ಜನತೆಯ ಮುಂದೆ ಇನ್ನಷ್ಟು ಬೆತ್ತಲಾಗುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಅವಧಿಯ ಕರೆಂಟ್ ಬಿಲ್ಲುಗಳಲ್ಲಿ ಪಿಂಚಣಿ ಹಾಗೂ ಗ್ರ್ಯಾಚುಟಿ ಹೆಸರಿನಲ್ಲಿ ಒಂದೇ ಒಂದು…

Read More
error: Content is protected !!