ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಜಾಗತಿಕ ಸಮುದಾಯಕ್ಕೆ ಮನವಿ
ಮಂಗಳೂರು: ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ರಕ್ಷಣೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಟಿಬೆಟಿಯನ್ ಸಂಸ್ಕೃತಿಯ ಉಳಿವಿಗಾಗಿ ವಿಶ್ವಸಂಸ್ಥೆ, ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಟಿಬೆಟಿಯನ್ ಸಮುದಾಯದ ಪ್ರತಿನಿಧಿ ಡೆನ್ಜಿನ್ ದಾತೋನ್ (Denzin Dataon) ಆಗ್ರಹಿಸಿದರು. ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಬೆಟಿಯನ್ ಜನರು ಹಲವು ದಶಕಗಳಿಂದ ದಬ್ಬಾಳಿಕೆಯನ್ನು ಎದುರಿಸುತ್ತಿದ್ದು, ಅವರ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು. ಸ್ವಯಂ-ಆಹುತಿ ನೀಡಿದ ಟಿಬೆಟಿಯನ್ ಹುತಾತ್ಮರ ತ್ಯಾಗವನ್ನು…
