ಚಿತ್ರರಂಗದಲ್ಲಿ ಹೊಸ ಸಂಚಲನದೊಂದಿಗೆ “ನೆತ್ತೆರೆಕೆರೆ” ತುಳು ಸಿನಿಮಾ ಆಗೋಸ್ಟ್ 29 ರಂದು ತೆರೆಗೆ.

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ “ನೆತ್ತೆರೆಕೆರೆ” ತುಳು ಸಿನಿಮಾ ಆಗೋಸ್ಟ್ 29 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ನಿರ್ಮಾಪಕ ಲಂಚುಲಾಲ್ ಮಾಹಿತಿ ನೀಡಿದರು. ನೆತ್ತೆರೆಕೆರೆ ಸಿನಿಮಾ ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲಿದೆ. ನೆತ್ತರೆಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದೆ. ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರ, ಕುತೂಹಲ ಹೆಚ್ಚಿದೆ. ಸಿನಿಮಾಕ್ಕೆ ಚೇಳಾರ್, ಮುಲ್ಕಿ,ಕಿನ್ನಿಗೋಳಿಯಲ್ಲಿ ಚಿತ್ರೀಕರಣಗೊಂಡಿದೆ.ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ ,…

Read More

ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ 8 ರ ಹರೆಯದ ರುಷಬ್ ರಾವ್ ಕರಾವಳಿಗೆ ಹೆಮ್ಮೆ.

ಮಂಗಳೂರು: ಆಗಸ್ಟ್ 13 ರಿಂದ 17 ರ ವರೆಗೆ ವಿಯೆಟ್ನಾಂ ನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿಭಾರತವನ್ನು ಪ್ರತಿನಿಧಿಸಿ Prince Category ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ “ಸೂಪರ್ ಟ್ಯಾಲೆಂಟ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ 8 ರ ಹರೆಯದ ರುಷಬ್ ರಾವ್ ಕರಾವಳಿಗೆ ಹೆಮ್ಮೆ ತಂದಿದ್ದಾನೆ ಎಂದು ವಿಜೇತನ ಆಪ್ತರಾದ ರಾಹುಲ್ ಅಮೀನ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿ, ರುಶಬ್ ಪ್ರತಿಭೆಯನ್ನು ಅತೀ ಹತ್ತಿರದಲ್ಲಿ ಕಂಡವನು ನಾನು,…

Read More

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ರಾಜ್ಯ ಸರಕಾರಿ ನೌಕರರ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.ದಕ್ಷಿಣ ಕನ್ನಡ ಜಿಲ್ಲೆಯ 133 ಎಸೆಸೆಲ್ಸಿ, 102 ಪಿಯುಸಿ ವಿದ್ಯಾರ್ಥಿಗಳಿಗೆ, ಉಡುಪಿ ಜಿಲ್ಲೆಯ 115 ಮಂದಿ ಎಸೆಸೆಲ್ಸಿ ಮತ್ತು 88 ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸದ…

Read More

ವಸಂತ್ ಗಿಳಿಯಾರ್ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್ ಖಂಡನೆ.

ಪವಿತ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕರು ಆಧಾರ ರಹಿತ ಆರೋಪ ಮಾಡುತ್ತಿರುವುದು ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸುದ್ದಿಯಾಗಿದೆ. ಬುರುಡೆ ಪ್ರಕರಣವನ್ನು ಸರ್ಕಾರ ಎಸ್ಐಟಿ ತನಿಖೆಗೆ ಒಳಪಡಿಸಿದೆ. ಧರ್ಮಾಧಿಕಾರಿಗಳು, ಕ್ಷೇತ್ರದ ಸಿಬ್ಬಂದಿ ರಾಜ್ಯಾದ್ಯಂತ ಎಲ್ಲರೂ ಸ್ವಾಗತಿಸಿದ್ದಾರೆ. ನಿಷ್ಪಕ್ಷಪಾತ ತನಿಖೆಯೂ ನಡೆಯುತ್ತಿದೆ. ಅನಾಮಿಕ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಅಗೆದು ತಪಾಸಣೆ ನಡೆಸಲಾಗಿದೆ. ಈ ಕುರಿತಾಗಿ ಯೂಟುಬರ್ ಗಳು, ಸೋಶಿಯಲ್ ಮೀಡಿಯಾ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮದೇ ತೀರ್ಪುಗಳನ್ನು ನೀಡುತ್ತಿದ್ದಾರೆ. ತನಿಖೆ ಆದೇಶಿಸಿ 2 ವಾರಗಳ…

Read More

ಎಸ್ಯಾಸಾಫ್ಟ್ ಯುವಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿದೆ. -ಶಾಸಕ ಉಮಾನಾಥ್ ಕೋಟ್ಯಾನ್

ಮಂಗಳೂರು: ಎಸ್ಯಾಸಾಫ್ಟ್ ಅತ್ಯಾಧುನಿಕ ಕಲಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಕೇಂದ್ರ ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಲಿದ್ದು ಇದು ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದು ಮೂಡಬಿದರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಹೇಳಿದರು ಬಜ್ಪೆಯ ಎಸ್ಯಾಸಾಫ್ಟ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತೀ ಹಳ್ಳಿಯೂ ಬೆಳೆದಾಗ ದೇಶ ಬೆಳೆಯುತ್ತದೆ. ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ನೀಡುವುದರಿಂದ ನಿರುದ್ಯೋಗ ನಿವಾರಣೆಯ ಜೊತೆಗೆ ಅವರ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ. ಇಂಜಿನಿಯರಿನ್, ಸಿ ಎ, ಮೆಡಿಕಲ್ ಕ್ಷೇತ್ರದತ್ತ…

Read More

ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 5ನೇ ಕಾರ್ಯಕ್ರಮ,ಭಾಷೆಯಿಂದ ಸಾಹಿತ್ಯ, ಸಾಹಿತ್ಯದಿಂದ ಸಂಸ್ಕಾರ – ವಿ.ಬಿ ಕುಳಮರ್ವ

ಕಾಸರಗೋಡು :’ ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವ ಕಾರಣ ಅನೇಕ ಸಂಸ್ಕೃತಿಯ ಪರಿಚಯವಾಗುತ್ತದೆ. ಭಾಷೆಯುಂದ ಸಾಹಿತ್ಯ ಬೆಳಗುತ್ತದೆ. ಸಾಹಿತ್ಯದಿಂದ ಸಂಸ್ಕಾರ ದೊರೆಯುತ್ತದೆ. ಕನ್ನಡ ಸಾಹಿತ್ಯ ಸರಸ್ವತಿಯ ಸೇವೆ ನಿರಂತರವಾಗಬೇಕು ‘ ಎಂದು ನಿವೃತ್ತ ಶಿಕ್ಷಕ ವಿ. ಬಿ. ಕುಳಮರ್ವ ಹೇಳಿದರು. ಅವರು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ ‘ಕನ್ನಡದ ನಡಿಗೆ…

Read More

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸೆ.30 ರಂದು ನಡೆಯಲಿರುವ ‘ಕುಡ್ಲದ ಪಿಲಿ ಪರ್ಬ-ಸೀಸನ್ 4’ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇದೇ ಸೆ.30 ರಂದು ನಡೆಯಲಿರುವ ‘ಕುಡ್ಲದ ಪಿಲಿ ಪರ್ಬ-ಸೀಸನ್ 4’ ಇದರ ಆಮಂತ್ರಣ ಪತ್ರಿಕೆಯನ್ನು ನಗರದ ಅಟಲ್ ಸೇವಾ ಕೇಂದ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಗಿರಿಧ‌ರ್ ಶೆಟ್ಟಿ ಯವರು, ಕಳೆದ ನಾಲ್ಕು ವರ್ಷಗಳಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷದಂತೆ ನಗರದ ಕೇಂದ್ರ ಮೈದಾನದಲ್ಲಿ ಈ ಬಾರಿಯ…

Read More

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಪುಟಾಣಿ ಮಕ್ಕಳಿಗೆ ಮಣ್ಣಿನ ಗಣಪತಿ ಸ್ಪರ್ಧೆ 2025 . ಆಗಸ್ಟ್ 27 ರಂದು ಮಧ್ಯಾಹ್ನ .

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಪುಟಾಣಿ ಮಕ್ಕಳಿಗೆ ಮಣ್ಣಿನ ಗಣಪತಿ ಸ್ಪರ್ಧೆ 27 ರಂದು ಮಧ್ಯಾಹ್ನ 2 ರಿಂದ 3:30 ಕ್ಕೆ ಲಾಲ್ ಭಾಗ್ ಸ್ಕೌಟ್ ಆಂಡ್ ಗೈಡ್ ಭವನದಲ್ಲಿ ನಡೆಯಲಿದೆ.ಈ ಸ್ಪರ್ಧೆಯಲ್ಲಿ 5 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು . .ಸ್ಪರ್ಧೆಗಳು ನಿಯಮ ಸೂಚಿ ಮತ್ತು ಮಾನದಂಡದ ಆಧಾರದಲ್ಲಿ ನಡೆಯಲಿದೆ.ಸ್ಪರ್ಧೆಯ ನೋಂದಣಿ ಆಗಸ್ಟ್ 25 ಕ್ಕೆ ಕೊನೆಯ ದಿನ .ಸ್ಪರ್ದಿಗಳು ಮಣ್ಣನ್ನು ತರಲು ಅವಕಾಶವಿದೆ.ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ…

Read More

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ ಮುಸುಕುಧಾರಿಯ ಬಂಧನ..!

ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಎಸ್‌ಐಟಿ ಅಧಿಕಾರಿಗಳು ದೂರುದಾರ ‘ಮಾಸ್ಕ್‌ಮ್ಯಾನ್’ ಅವರನ್ನು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಆಗಸ್ಟ್ 23 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಮೂಲಗಳ ಪ್ರಕಾರ, ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಆಗಸ್ಟ್ 22 ರಂದು ಬೆಳಿಗ್ಗೆ 10 ರಿಂದ ಆಗಸ್ಟ್ 23 ರಂದು ಬೆಳಿಗ್ಗೆ 5 ಗಂಟೆಯವರೆಗೆ ದೂರುದಾರರನ್ನು…

Read More

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಕೃಷ್ಣಮಯ ಮಕ್ಕಳ ಫೋಟೋ ಸ್ಪರ್ಧೆ 2025 .ಫೋಟೋ ಸಲ್ಲಿಕೆಗೆ ಕೊನೆಯ ದಿನಾಂಕ 25 ಆಗಸ್ಟ್ 2025.

ಅಸ್ತ್ರ ಗ್ರೂಪ್ ಮತ್ತು ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಕೃಷ್ಣಮಯ ಮಕ್ಕಳ ಫೋಟೋ ಸ್ಪರ್ಧೆ 2025 ಆಯೋಜಿಸಲಾಗಿದೆ.ಭಾಗವಹಿಸುವವರು 1 – 10 ವರ್ಷ ದೊಳಗಿನ ಮಕ್ಕಳಾಗಿರಬೇಕು.ಛಾಯಾಚಿತ್ರ ಸ್ಪಷ್ಟವಾಗಿರಬೇಕು ಹಾಗೂ ಇತ್ತೀಚೆಗಿನದ್ದಾಗಿರಬೇಕು .ಛಾಯಾಚಿತ್ರದ ಹಿಂಭಾಗದಲ್ಲಿ ಮಗುವಿನ ಹೆಸರು ಮತ್ತು ಪೋಷಕರ ಸಂಪರ್ಕ ಸಂಖ್ಯೆ ಇರಬೇಕು .ಭಾಗವಹಿಸಲು ನಿಮ್ಮ ಮಗುವಿನ ಅತ್ಯುತ್ತಮ 1 ಚಿತ್ರವನ್ನು ಕಳುಹಿಸಿ ಒಂದು ಮುದ್ರಿತ ಹಾರ್ಡ್‌ ಕಾಪಿ ಛಾಯಾಚಿತ್ರವನ್ನು (ಗಾತ್ರ: 12X8 ಅಥವಾ 6X9 ಇಂಚು) ಸಲ್ಲಿಸಬೇಕು. ಎಲ್ಲಾ ಫೋಟೋಗಳನ್ನು ಸೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪ್ರದರ್ಶಿಸಲಾಗುತ್ತದೆ….

Read More
error: Content is protected !!