ತಲಪಾಡಿ : ಸಂಚಾರಕ್ಕೆ ಯೋಗ್ಯವಲ್ಲದ KSRTC BUS .ಆರು ಮಂದಿಯ ಸಾವಿಗೆ ಕಾರಣ.

ಗುರುವಾರ ಚಾಲಕನ ಅಜಾಗರೂಕತೆ ಹಾಗೂ ಬಸ್‌ನ ಸವೆದ ಚಕ್ರದಿಂದ ತಲಪಾಡಿಯಲ್ಲಿ ಉಂಟಾದ ಭೀಕರ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾದ ಘಟನೆ ರಾಜ್ಯಾದ್ಯಂತ ಶೋಕ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಊರವರು ಇಂದು ಬೆಳಿಗ್ಗೆ ಗಡಿ ಪ್ರದೇಶದಲ್ಲಿರುವ ಮುಖ್ಯ ರಸ್ತೆಯಲ್ಲಿ ಸಾರಿಗೆ ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮುಖ್ಯವಾಗಿ ಸವೆದ ಚಕ್ರಗಳುಳ್ಳ ಹಾಗೂ ಸಾರಿ ಹೋಗಿರುವ ಬಸ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ಹಾಗೂ ಮೋಟಾರು…

Read More

ತುಳುಭಾಷೆಯ 150ನೇ ಚಿತ್ರ “ನೆತ್ತೆರೆಕೆರೆ” ಬೆಳ್ಳಿ ತೆರೆಗೆ

ಮಂಗಳೂರು: “ವಿಭಿನ್ನ ಪರಿಕಲ್ಪನೆಯ * ತುಳುವಲ್ಲಿ ಬರುತ್ತಿದೆ. ನಿರ್ದೇಶಕ ಸ್ವರಾಜ್ ಶೆಟ್ಟಿಯ ಹಲವು ದಿನಗಳ ಕನಸು ‘ನೆತ್ತರೆಕೆರೆ’ ಮೂಲಕ ತುಳುಭಾಷೆಯ 150ನೇ ಚಿತ್ರ ಯಶಸ್ವಿಯಾಗಲಿ“ ಎಂದು ಹಿರಿಯ ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.ಅವರು ಮಂಗಳೂರಿನ ಬಿಗ್ ಸಿನಿಮಾಸ್ ‌ನಲ್ಲಿ ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಲಂಚುಲಾಲ್ ಕೆ.ಎಸ್. ನಿರ್ಮಾಣದ ಸ್ವರಾಜ್ ಶೆಟ್ಟಿ ನಿರ್ದೇಶನದ “ನೆತ್ತರಕೆರೆ”ತುಳು ಚಿತ್ರವನ್ನು ದೀಪ ಬೆಳಗಿಸುವ ಮೂಲಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, “ಇದುವರೆಗೆ ತುಳುವಲ್ಲಿ…

Read More

“ಬಂಟರ ಸಂಘದ ಗಣೇಶೋತ್ಸವ ಲೋಕಕ್ಕೆ ಮಾದರಿ“ -ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.-ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ, ಧಾರ್ಮಿಕ ಸಭೆ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಎರಡನೇ ದಿನದ ಧಾರ್ಮಿಕ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ನಾನು ಮೊದಲ ಬಾರಿ ಇಲ್ಲಿಗೆ ಆಗಮಿಸಿದ್ದೇನೆ. ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತಿದ್ದೀರಿ. ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಇಡೀ ಲೋಕಕ್ಕೆ ಒಳೆಯದಾಗಲಿ….

Read More

ನಗರದ ಹೃದಯ ಭಾಗದಲ್ಲಿ ಮತ್ತೆ ಕಲಶ ಸ್ಥಾಪನೆ

ಮಂಗಳೂರು: ಮಹಾವೀರ ವೃತ್ತದಲ್ಲಿ ಮೇಲ್ಸ್ತುವೆ ಕಾಮಗಾರಿ ಹಿನ್ನಲೆ ತೆರವುಗೊಳಿಸಿದ್ದ ಭಾರಿ ಗಾತ್ರದ ‘ಕಲಶ’ದ ಆಕೃತಿಯನ್ನು ಮರುಸ್ಥಾಪಿಸಲಾಗುತ್ತಿದ್ದು, ಸೋಮವಾರ ರಾತ್ರಿ ಪೀಠದ ಮೇಲೆ ತಂದಿರಿಸಲಾಗಿದೆ. ಪಂಪ್‌ವೆಲ್ ಗೆ 2003ರಲ್ಲಿ ಬೃಹತ್ ಕಲಶವಿಟ್ಟು ಮಹಾವೀರ ಸರ್ಕಲ್ ನಾಮಕರಣ ಮಾಡಲಾಗಿತ್ತು. ಮಂಗಳೂರು ಜೈನ್‌ ಸೊಸೈಟಿ ಇದರ ಉಸ್ತುವಾರಿ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮೇತುವೆಯು ಈ ವೃತ್ತದ ಮೇಲೆಯೇ ಹಾದು ಹೋಗಿದ್ದು, ಅದರ ಕಾಮಗಾರಿ ಸಲುವಾಗಿ 2016ರ ಮಾರ್ಚ್‌ನಲ್ಲಿ ಕಲಶವನ್ನು ತೆರವುಗೊಳಿಸಲಾಗಿತ್ತು. ಈಗ ಮೇಲ್ವೇತುವೆ ಪಕ್ಕದಲ್ಲಿ ಕಲಶಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ವೃತ್ತಾಕಾರದ…

Read More

ಪುಣೆಯಲ್ಲಿ ಕಾರ್ಕಳ ಮೂಲದ ಹೋಟೆಲ್ ಮಾಲೀಕನ ಬರ್ಬರ್ ಹತ್ಯೆ

ಮಂಗಳವಾರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಕಾರ್ಕಳದ ಹೋಟೆಲ್ ಮಾಲೀಕನೊಬ್ಬನ ಕೊಲೆ ನಡೆದ ಘಟನೆಯೊಂದು ನಡೆದಿದೆ . ಮೃತ ವ್ಯಕ್ತಿಯನ್ನು ಕಾರ್ಕಳ ಮೂಲದ ಕುಮೇರುಮನೆಯ ಎಣ್ಣೆಹೊಳೆ ನಿವಾಸಿ ಸಂತೋಷ್ ಶೆಟ್ಟಿ (46) ಎಂದು ಗುರುತಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕರ್ತವ್ಯದಲ್ಲಿರುವಾಗ ಕುಡಿದ ಅಮಲಿನಲ್ಲಿದ್ದ ಉತ್ತರ ಪ್ರದೇಶದ ಸಿಬ್ಬಂದಿಯೊಬ್ಬರಿಗೆ ಸಂತೋಷ್ ಶೆಟ್ಟಿ ಎಚ್ಚರಿಕೆ ನೀಡಿದ್ದರು. ಗದರಿಸುವಿಕೆಯಿಂದ ಕೋಪಗೊಂಡ ಸಿಬ್ಬಂದಿ ಅಡುಗೆ ಮನೆಯಿಂದ ಚಾಕುವನ್ನು ತಂದು ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ…

Read More

ಸಂಚಾರಕ್ಕೆ ತೊಡಕಾಗಿರುವ ಡ್ರೈನೇಜ್ ನ ಗುಂಡಿ – ಮಳೆ‌ನೀರು ನಿಂತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ

ಮಂಗಳೂರು: ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣ ಸಮೀಪದ ಮುತ್ತಪ್ಪ ದೇವಾಲಯದ ಮುಂದಿರುವ ಮಾರ್ಗದ ಡ್ರೈನೇಜ್ ನ ಸ್ಪಚ್ಚತೆಗಾಗಿ ತೋಡಲಾದ ಗುಂಡಿಯೊಂದನ್ನು ಮುಚ್ಚದೆ ಬಿಡಲಾಗಿದೆ. ಮಳೆ‌ನೀರು ನಿಂತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಎರಡು ದಿನಗಳಿಂದ ಕಾಮಗಾರಿ ನಡೆಯುತ್ತಿಲ್ಲ . ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ , ಪಾದಚಾರಿಗಳಿಗೆ , ದೇವಾಲಯಕ್ಕೆ ಬರುವ ಭಕ್ತರಿಗೆ ಈ ಗುಂಡಿ ತೊಂದರೆಯನ್ನುಂಟು ಮಾಡುತ್ತಿದೆ.

Read More

ಗಣೇಶೋತ್ಸವ ಧಾರ್ಮಿಕ ಸಭೆಗಳಿಗೆ ಮಾತ್ರ ಸೀಮಿತವಾಗದಿರಲಿ, ನಗರವನ್ನು ಸ್ವಚ್ಛ ಸುಂದರವನ್ನಾಗಿಸಲು ಪಣ ತೊಡೋಣ -ಕ್ಯಾಪ್ಟನ್ ಬ್ರಿಜೇಶ್ ಚೌಟ.

ಮಂಗಳೂರು: ಗಣೇಶ ಚತುರ್ಥಿಗೆ ಐತಿಹಾಸಿಕ ಹಿನ್ನಲೆ ಇದೆ. ಪರಕೀಯರನ್ನು ದೂರ ಮಾಡಿದ ಶಕ್ತಿ ಗಣೇಶನಿಗೆ ಇದೆ. ಹೀಗಾಗಿ ಗಣೇಶೋತ್ಸವ ಸಮಾರಂಭದಲ್ಲಿ ಶಿಸ್ತು ಶ್ರದ್ದೆ ಮುಖ್ಯ. ಗಣೇಶೋತ್ಸವ ಕೇವಲ ಧಾರ್ಮಿಕ ಸಭೆ ಸಮಾರಂಭಗಳಿಗೆ ಸೀಮಿತವಾಗದಿರಲಿ. ಗಣೇಶೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ನಗರವನ್ನು ಸ್ವಚ್ಛ ಸುಂದರವನ್ನಾಗಿಸಲು ಪಣ ತೊಡೋಣ. ನಮಗೆ ಪರಿಸರ ಕಾಳಜಿಯೂ ಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ…

Read More

ಬಂಟ್ಸ್ ಹಾಸ್ಟೇಲ್ : ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹ ಓಂಕಾರ ನಗರಕ್ಕೆ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್ ಹಾಸ್ಟೇಲ್ ಮಂಗಳೂರು ಇಲ್ಲಿ ನಡೆಯುತ್ತಿರುವ 19 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಶರವು ದೇವಸ್ಥಾನದ ಬಳಿ ಇರುವ ಶ್ರೀ ರಾಧಾಕೃಷ್ಣ ದೇವಸ್ಥಾನದಲ್ಲಿ ಶ್ರೀ ರಾಮದಾಸ ಆಚಾರ್ ರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ…

Read More

ಹಬ್ಬಗಳ ನಡುವೆಯೂ ಮಂದವಾಗಿರುವ ಮಾರುಕಟ್ಟೆ.

ಮಂಗಳೂರು: ವಿನಾಯಕ ಚತುರ್ಥಿ ಹಬ್ಬದ ಸಂಭ್ರಮ ಇನ್ನೇನೂ ಶುರುವಾಗುವಷ್ಟರಲ್ಲಿಯೇ ಮಳೆರಾಯ ಅಬ್ಬರಿಸಿ ಬೊಬ್ಬೇರಿದ್ದಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಕಾರಣ ಕರಾವಳಿಯಾದದಂತ್ಯ ಉತ್ತಮ ಮಳೆಯಾಗುತ್ತಾ ಇದೆ. ಈ ಮಳೆಯು ಬೀದಿ ಬದಿಗಳಲ್ಲಿ ಹೂ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಕಿರಿ ಕಿರಿಯನ್ನೇ ಉಂಟು ಮಾಡಿದೆ. ವಿಪರೀತವಾಗಿ ಸುರಿಯುವ ವರ್ಷಧಾರೆಯಿಂದ ಗ್ರಾಹಕರು ಮಾರುಕಟ್ಟೆಯ ಕಡೆಗೆ ಬರಲು ಹಿಂದೇಟು ಹಾಕ್ತಾ ಇದ್ರೆ, ಇತ್ತ ವ್ಯಾಪಾರಿಗಳು ತಾವು ತಂದ ಹೂವು ಮಾರಾಟ ವಾಗ್ತಾ ಇಲ್ಲವೆಂದು ದುಃಖವನ್ನು ವ್ಯಕ್ತ ಪಡಿಸ್ತಾ ಇದ್ದಾರೆ. ಹಬ್ಬದ…

Read More

ಯೂಟ್ಯೂಬರ್ ಶಮೀರ್ ಎಂ ಡಿ ಬಂಧನದ ವಿಳಂಭಕ್ಕೆ ಕಾರಣ ಸರಕಾರ -ಸತೀಶ್ ಕುಂಪಲ

ಮಂಗಳೂರು:ಯೂಟ್ಯೂಬರ್ ಶಮೀರ್ ಎಂ ಡಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ್ರಚಾರ ಮಾಡಿದ ದಿನವೇ ಆತನನ್ನು ಬಂಧಿಸಬೇಕಿತ್ತು. ಆದರೆ ಸರಕಾರ ಅನುಸರಿಸಿದ ಮೆದು ನೀತಿಯು ಆತನನ್ನು ಬಂಧಿಸಲಿಲ್ಲ . ಸರಕಾರ ಈ ಕೂಡಲೇ ಆತನನ್ನು ಬಂಧಿಸಬೇಕೆಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದರು. ಅವರು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮಾತನಾಡಿ, ಧರ್ಮಸ್ಥಳದ ಬಗ್ಗೆ ಇಂದು ಅಪ್ರಾಚಾರಗಳು ಹರಿದಾಡುತ್ತಿದೆ . ಈ ಎಲ್ಲಾ ಷಡ್ಯಂತರವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ತರುವಂಥದ್ದು. ಈ ಮೊದಲು ಶಬರಿಮಲೆ ದೇವಾಲಯದ ಪಾವಿತ್ರತೆಗೆ…

Read More
error: Content is protected !!