ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದಲ್ಲಿ ದೀಪೋತ್ಸವ, ರಥೋತ್ಸವ ಹಾಗೂ ದೈವದ ಕೋಲ

ಮಂಜೇಶ್ವರ: ತಾರೀಕು 22 /01 /2026 ಗುರುವಾರದಂದು ಬ್ರಹ್ಮಶ್ರೀ ಬಡಾಜೆ ಗೋಪಾಲ ಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ಶ್ರೀ ಶನೈಶ್ಚರ ದೇವರ ವರ್ಷಾವಧಿ ಬಲಿ ಉತ್ಸವ .ಕಲ್ಲುರ್ಟಿ ದೈವ ಮತ್ತು ರಾಜ ಗುಳಿಗ ಕೋಲ ವು ವಿಜೃಂಭಣೆಯಿಂದ ಜರುಗಲಿರುವುದು. ಅಂದು ಸಾಯಂಕಾಲ ಬೆಂಗಳೂರಿನ ಸೇವಾಕರ್ತರಾದ ಶ್ರೀ ಎನ್. ಕೆ ರಾಜ ಶಂಕರ್ ರವರಿಂದ ಶ್ರೀ ದೇವರಿಗೆ ಸಹಸ್ರ ದೀಪೋತ್ಸವ ನಡೆಯಲಿರುವುದು . ಶ್ರೀ ಆದಿಶಕ್ತಿ ಕುಣಿತಾ ಭಜನಾ ತಂಡ ಶನೈಶ್ಚರ ಮಂಜೇಶ್ವರ ತಂಡದಿಂದ ಕುಣಿತ ಭಜನೆಯು ನಡೆಯಲಿದೆ….

Read More

ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು 14 ವಾರ್ಡ್ ಇದ್ದು, IIರಲ್ಲಿ ಯುಡಿಎಫ್‌, 3ರಲ್ಲಿ ಬಿಜೆಪಿ, 2ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.

Read More

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಗೆ ,ಜಿಲ್ಲಾ ಕಲೋತ್ಸವದಲ್ಲಿ ಭರ್ಜರಿ ಯಶಸ್ಸು

ಕಾಸರಗೋಡಿನ ಮೊಗ್ರಾಲಿನ ಜಿ.ವಿ.ಎಚ್.ಎಸ್.ಎಸ್‌ನಲ್ಲಿ ನಡೆದ ಕಾಸರಗೋಡು ಜಿಲ್ಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತ ವಿದ್ಯಾರ್ಥಿಗಳ ವಿವರ: ಕುಮಾರಿ ಶ್ರಾವ್ಯ ಬಿ.: ಕೊಲಾಜ್ (Collage) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕುಮಾರಿ ಅನುಶ್ರೀ ಬಿ.: ಕನ್ನಡ ಕಥಾ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಪವನ್ ರಾಮ್ ಎನ್.: ಕನ್ನಡ…

Read More

ಜನಪ್ರಿಯ ವೈದ್ಯ, ಕವಿ, ಕಲಾವಿದ ಗಡಿನಾಡಿನ ಡಾ. ಜನಾರ್ಧನ ನಾಯ್ಕ್ ಸಿ. ಎಚ್ ಕನ್ನಡ ಭವನದ ಗೌರವಾನ್ವಿತ “ಸಮಾಜ ಸೇವಾ ರತ್ನ ಪ್ರಶಸ್ತಿ 2026” ಕ್ಕೆ ಆಯ್ಕೆ

ಕಾಸರಗೋಡು: ಕಾಸರಗೋಡಿನ ಹೆಮ್ಮೆಯ ವೈದ್ಯ ಶಿರೋಮಣಿ, ದೇಶೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೆರಿಸಿಕೊಂಡಿರುವ ಕವಿಹೃದಯಿ ಡಾ. ಜನಾರ್ದನ ನಾಯ್ಕ್ ಸಿ. ಎಚ್ ಇವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18.01.2026,ರಂದು ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮ ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ…

Read More

ಜ್ವರ ಬಾಧಿಸಿ ಯುವಕನೊಬ್ಬ ಚಿಕಿತ್ಸೆಗೆ ಸ್ಪಂಧಿಸಿದೆ ಸಾವು

ಮಂಜೇಶ್ವರ: ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂಧಿಸಿದೆ ಸಾವನ್ನಪ್ಪಿದ್ದಾನೆ.ಕುಂಜತ್ತೂರು ಉದ್ಯಾವರ ನಿವಾಸಿ ಉಮ್ಮರ್ ಫಾರೂಕ್ (26) ಸಾವನ್ನಪ್ಪಿದ ದುರ್ದೈವಿ. ಇವರಿಗೆ ಕಳೆದ ಶನಿವಾರದಿಂದ ಜ್ವರ ಬಾಧಿಸಿತ್ತೆನ್ನಲಾಗಿದೆ.ಸ್ಥಳೀಯ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದರೂ ಜ್ವರ ವಾಸಿಯಾಗದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಉಮ್ಮರ್ ಫಾರೂಕ್ ಹೊಸಂಗಡಿಯ ಮಟನ್‌ ಸ್ಟಾಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.

Read More

ಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು

ಮಂಜೇಶ್ವರ : ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮದ್ರಸಾ ಅಧ್ಯಾಪಕನಿಗೆ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ 14 ವರ್ಷ ಕಠಿಣ ಸಜೆ ಹಾಗೂ 40,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕಿದೂರು ನಿವಾಸಿ ಎ. ಅಬ್ದುಲ್ ಹಮೀದ್ (46) ಶಿಕ್ಷಗೊಳಗಾದ ಆರೋಪಿ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಮೂರು ತಿಂಗಳು ಹೆಚ್ಚು ವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ನಿವಾಸಿಯಾಗಿರುವ 12…

Read More

ಸಾಹಿತಿ, ಪ್ರಕಾಶಕ, ಮಾಧ್ಯಮ ಪ್ರವರ್ತಕ ಬಸವರಾಜ ಎಸ್. ಬಾಗೇವಾಡಿ ಮಠ ರೀಗೆ ಕನ್ನಡ ಭವನದ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ಗೆ “ಆಯ್ಕೆ.

ಕಾಸರಗೋಡು:ಮಾಧ್ಯಮ ಪ್ರವರ್ತಕ ಬಸವರಾಜ ಎಸ್. ಬಾಗೇವಾಡಿ ಮಠರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಕವಯತ್ರಿ, ಸಂಘಟಕಿ ಲಕ್ಷ್ಮಿ ಎಸ್ ಬೆಂಗಳೂರಿಗೆ “ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ 2026” ಘೋಷಣೆ . !

ಕಾಸರಗೋಡು: ಕವಯತ್ರಿ, ಸಂಘಟಕಿ ಲಕ್ಷ್ಮಿ ಎಸ್ ಬೆಂಗಳೂರು ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಜನವರಿ 18ಕ್ಕೆ ಕಾಸರಗೋಡಿನ ಕನ್ನಡ ಭವನ, ನುಳ್ಳಿಪ್ಪಾಡಿಯಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More

ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಜೀವಾಳ, ಯಕ್ಷಗಾನ ಗುರು, ಭಾಗವತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.ಆಯ್ಕೆ

ಕಾಸರಗೋಡು:ಯಕ್ಷಗಾನ ಗುರು, ಭಾಗವತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.”ನ್ನು ಇದೇ ಬರುವ ಜನವರಿ 18ಕ್ಕೆ ಕಾಸರಗೋಡಿನ ಕನ್ನಡ ಭವನ, ನುಳ್ಳಿಪ್ಪಾಡಿಯಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಉದ್ಯಾವರ ಸಾವಿರ ಜಮಾಹತ್ ಅಸಯ್ಯದ್ ಶಹೀದ್ ವಲಿಯುಲ್ಲಾಯಿಯವರ ದರ್ಗಾದಲ್ಲಿ ಪಂಚವಾರ್ಷಿಕ ಉದಯಾಸ್ತಮಾನ ಉರೂಸ್ ಸಂಭ್ರಮ

ಮಂಜೇಶ್ವರ : ಉತ್ತರ ಕೇರಳದ ತುತ್ತ ತುದಿಯಲ್ಲಿ ಸೌಹಾರ್ದತೆ ಹಾಗೂ ಶಾಂತಿಯ ಸಂದೇಶಕ್ಕೆ ಹೆಸರುವಾಸಿಯಾಗಿರುವ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿರುವ ಉದ್ಯಾವರ ಸಾವಿರ ಜಮಾಹತ್ ಅಸಯ್ಯದ್ ಶಹೀದ್ ವಲಿಯುಲ್ಲಾಯಿಯವರ ದರ್ಗಾದಲ್ಲಿ ಪಂಚವಾರ್ಷಿಕ ಉದಯಾಸ್ತಮಾನ ಉರೂಸ್ ಸಂಭ್ರಮಕ್ಕೆ ದಿನ ದಿತ್ಯ ಸಾವಿರಾರು ಭಕ್ತಾಭಿಮಾನಿಗಳ ಪ್ರವಾಹವೇ ಹರಿದು ಬರುತ್ತಿದೆ. ಅಂಕಿಅಂಶಗಳ ಪ್ರಕಾರ ದಕ್ಷಿಣ ಭಾರತದ ಇಸ್ಲಾಮೀಯ ಸಂದೇಶ ಪ್ರಚಾರಕ್ಕೆ ಚಾಲನೆ ದೊರಕಿದ ಕ್ರಿ. ಶ 10 -11 ನೇ ಶತಮಾನಗಳ ಕಾಲಘಟ್ಟದಲ್ಲೇ ಇಂದು ಈಗ ಅಸ್ತಿತ್ವದಲ್ಲಿರುವ ಉದ್ಯಾವರದ ಪುರಾತನ ಜುಮಾ ಮಸೀದಿ…

Read More
error: Content is protected !!