ಮಂಜೇಶ್ವರ: ಬೈಕ್ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದು ಗಾಯಗೊಳಿಸಿದ ಪ್ರಕರಣ . ಇಬ್ಬರು ಆರೋಪಿಗಳ ಬಂಧನ
ಮಂಜೇಶ್ವರ: ಬೈಕ್ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕರ್ನಾಟಕದ ತೌಡುಗೋಳಿ ನಿವಾಸಿ ಅಬ್ದುಲ್ ಖಾದರ್ ತನ್ನೀಫ್ (26) ಹಾಗೂ ಕಡಂಬಾರ್‌ನ ಅಬ್ದುಲ್ ರಜಾಕ್ (40) ಬಂಧಿತ ಆರೋಪಿಗಳು.ಇವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಸ್ಪೆಷಲ್ ಸ್ಕ್ಯಾಡ್ ಕರ್ನಾಟಕದ ತೌಡುಗೋಳಿಯಿಂದ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ. ಕಾರನ್ನು ಪೊಲೀಸರು ಪರಿಶೀಲಿಸಿದಾಗ ಅದರೊಳಗೆ ಮಾರಕಾಯುಧಗಳು ಪತ್ತೆಯಾಗಿದೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಕೋಡಿಬೈಲ್ ನಿವಾಸಿ ಝಕರಿಯ (61) ಎಂಬವರಿಗೆ ಇರಿದ ಪ್ರಕರಣಕ್ಕೆ ಸಂಬಂಧಿಸಿ…
