ಐಟೆಕ್ ಕುಂಬ್ಳೆಯಲ್ಲಿ ಸ್ವಾತಂತ್ರ್ಯೋತ್ಸವ.

ಕುಂಬಳೆ:: 79ನೇ ಸ್ವಾತಂತ್ರ್ಯೋತ್ಸವವನ್ನು ಐಟೆಕ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಕುಂಬಳೆಯಲ್ಲಿ ಆಚರಿಸಲಾಯಿತು. ಕುಂಬಳೆ ಗ್ರಾಮ ಪಂಚಾಯತ್ ಸದಸ್ಯೆಯಾದ ಶ್ರೀಮತಿ ವಿದ್ಯಾಪೈ ಧ್ವಜರೋಹಣಗೈದು ಶುಭ ಹಾರೈಕೆ ಮಾಡಿದರು. ಮಹಮ್ಮಾಯ ಟ್ರೇಡರ್ಸ್ ಮಾಲಕರಾದ ಸಂದೇಶ ಭಟ್, ವೈದ್ಯರಾದ ಗಣೇಶ್, ಕುಂಬಳೆ ಮಾಸ್ಟರ್ ಬುಕ್ ಹೌಸಿನ ಮಾಲಕೀಯರಾದ ಶ್ರೀಮತಿ ರಾಜೇಶ್ವರಿ, ವ್ಯಾಪಾರಸ್ಥರಾದ ಗೋಕುಲ್ ದಾಸ್ ರವರು ಉಪಸ್ಥಿತರಿದ್ದರು. ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾದ ರವಿ ಮುಡಿಮಾರು ಸ್ವಾಗತಿಸಿ ವಂದಿಸಿದರು.

Read More

ಹಬ್ಬ ಹರಿದಿನಗಳ ಆಚರಣೆ ಮುಂದಿನ ಪೀಳಿಗೆಗೆ ಆದರ್ಶ – ಹರಿನಾಥ ಭಂಡಾರಿ.

ಉಪ್ಪಳ : ಇಲ್ಲಿಗೆ ಸಮೀಪದ ಮುಳಿಂಜ ಮದ್ದಪವಳ್ಳಚ್ಚಲ್ ಮಹಾನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವವು ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.ಮುಳಿಂಜ ಗುತ್ತು ಶ್ರೀ ನಂದರಾಜ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶ್ರೀ ಹರಿನಾಥ ಭಂಡಾರಿ ತೆಂಗಿನಕಾಯಿ ಒಡೆಯುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಬಳಿಕ ಮಕ್ಕಳಿಗೆ, ಯುವಕ-ಯುವತಿಯರಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯನ್ನು ನಡೆಸಲಾಯಿತು. ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಯುವಶಕ್ತಿ…

Read More

ಮಂಜೇಶ್ವರ ಅಬಕಾರಿ ಪೊಲೀಸರ ಮುಂದುವರಿದ ಕಾರ್ಯಾಚರಣೆ : ಮತ್ತೆ ದಾಖಲೆಗಳಿಲ್ಲದೆ ಸಾಗಾಟ ಮಾಡುತಿದ್ದ 96 ಪವನ್ ಚಿನ್ನಾಭರಣ ವಶಕ್ಕೆ : ಒಬ್ಬ ವಶಕ್ಕೆ

ಮಂಜೇಶ್ವರ: ಮಂಜೇಶ್ವರ ವಾಮಂಜೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಧಿಕಾರಿಗಳು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಬಾನುವಾರ ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕರ್ಣಾಟಕ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಜೇಶ್ವರ ಅಬಕಾರಿ ಇಲಾಖೆ ನಡೆಸಿದ ತಪಾಸಣೆಯಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 96 ಪವನ್ (762 ಗ್ರಾಂ) ಚಿನ್ನಾಭರಣಗಳೊಂದಿಗೆ ಒಬ್ಬನನ್ನು ಸೆರೆ ಹಿಡಿಯಲಾಗಿದೆ.ಬಾನುವಾರ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ಮುಂಬೈ ನಿವಾಸಿ ಮುಜಾಸಿರ್ ಹುಸೈನ್ ಎಂಬಾತವನ್ನು ಸೆರೆ ಹಿಡಿಯಲಾಗಿದೆ. ಶನಿವಾರ ಕೂಡಾ ಇದೇ ಶೈಲಿಯಲ್ಲಿ ದಾಖಲೆಗಳಿಲ್ಲದೆ…

Read More

ಯುವಶಕ್ತಿ ಫ್ರೆಂಡ್ಷ್ ಸರ್ಕಲ್ ಮತ್ತು ಲೈಬ್ರೆರಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವ ದ ಅಂಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ

ಯುವಶಕ್ತಿ ಫ್ರೆಂಡ್ಷ್ ಸರ್ಕಲ್ ಮತ್ತು ಲೈಬ್ರೆರಿ (ರಿ) K.G.D 6412ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಮಾಡಿ ಮಾತನಾಡಿದರು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಶಕ್ತಿಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ಮನೋಜ್ ಕುಮಾರ್ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ. ಯುವಶಕ್ತಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ,ಯುವಶಕ್ತಿ ಲೈಬ್ರೆರಿ ಕಾರ್ಯದರ್ಶಿ…

Read More

ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ( ರಿ) ಗುವೇದಪಡ್ಪು ನಲ್ಲಿ ಸ್ವಾತಂತ್ರ್ಯ ದಿನಾಚರಣೆ.

ಗುವೇದಪಡ್ಪು: ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ( ರಿ) ಗುವೇದಪಡ್ಪು ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರವೀಂದ್ರ ಬಗಂಬಿಲ ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಚಿದಾನಂದ ಶೆಟ್ಟಿ ಗುವೇದಪಡ್ಪು ,ಚಂದ್ರಹಾಸ ಕತ್ತೆರಿಕೋಡಿ ಶುಭ ಹಾರೈಸಿದರು.ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

ಬೇಟೆಗಾರರ ತಂಡದವರನ್ನು ಬೆದರಿಸಿ ರೈಫಲ್, ಸ್ಕೂಟರ್, ಫೋನ್ ಗಳನ್ನು ದೋಚಿ ಗಂಭೀರ ಹಲ್ಲೆ : ನಾಲ್ಕು ಮಂದಿ ಬಂಧನ

ಮಂಜೇಶ್ವರ : ಕುತ್ತಿಕೋಲ್ ನಿಂದ ಮಂಜೇಶ್ವರಕ್ಕೆ ಪ್ರಾಣಿಗಳ ಬೇಟೆಗಾಗಿ ಬಂದಿಳಿದ ಯುವಕರನ್ನು ಬೆದರಿಸಿ ಅವರಿಂದ ರೈಫಲ್, ಸ್ಕೂಟರ್ ಹಾಗೂ ಮೊಬೈಲ್ ಫೋನ್ ದೋಚಿದ ಪ್ರಕರಣದಲ್ಲಿ, ಕಾಪಾ ಪ್ರಕರಣದ ಆರೋಪಿ ಸೇರಿದಂತೆ ನಾಲ್ಕು ಮಂದಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ರಾಶಿಕ್ ಎಂಬಾತ ಪರಾರಿಯಾಗಿದ್ದಾನೆ. ಹೊಸಂಗಡಿ ಅಂಗಡಿಪದವಿನ ಸೈಫುದ್ದೀನ್ ಆಲಿಯಾಸ್ ಪೂಚ ಸೈಫು (30), ಹಿದಾಯತ್ ನಗರ ಮುಟ್ಟತೋಡಿಯ ಮೊಯಿದಿನ್ ಆಲಿಯಾಸ್ ಚರಮುರು ಮೊಯ್ದು (29), ನ್ಯಾಷನಲ್ ನಗರ ಉಳಿಯತ್ತಡ್ಕದ ಮೊಹಮ್ಮದ್ ಸುಹೈಲ್ (27), ಬಿಲಾಲ್ ನಗರದ…

Read More

ಪೊಯೈ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ.

ಪಾವೂರು :ಪೊಯೈಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮವು ಕ್ಷೇತ್ರದ ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ಕೆದುಂಬಾಡಿ ಇವರ ನೇತೃತ್ವದಲ್ಲಿ ಉದ್ಘಾಟಿಸಲ್ಪಟ್ಟಿತು. ನಂತರ ವಿವಿಧ ಸ್ಪರ್ಧೆಗಳು ನಡೆದವು. ಅದರಲ್ಲಿ ಮುಖ್ಯವಾಗಿ ಪುಟಾಣಿ ಮಕ್ಕಳಿಂದ ಕೃಷ್ಣನ ವೇಷವು ಕಣ್ಮನ ಸೆಳೆಯಿತು. ಸಂಜೆ ಹೊತ್ತಿನಲ್ಲಿ ನಡೆದ ಸಮರೋಪ ಸಮಾರಂಬದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಶೆಟ್ಟಿ ಮುಟ್ಲ ವಹಿಸಿದ್ದರು. ಸಭೆಯಲ್ಲಿ ಮುಖ್ಯವಾಗಿ ಶ್ರೀಧರ ಶೆಟ್ಟಿ…

Read More

ಮಾದಕ ಮುಕ್ತ ಸಮಾಜಕ್ಕೆ ಕರೆ, ಸರಕಾರಿ ಪ್ರೌಢಶಾಲೆ ಮೂಡಂಬೈಲಿನಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ

ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲ್ ಇಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.ಶಾಲಾ ಮುಖ್ಯೋಪಾಧ್ಯಾಯೀನಿ ಶ್ರೀಮತಿ ದಯಾವತಿ ಸಾಲಿಯನ್ ಧ್ವಜಾರೋಹಣ ನಡೆಸಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು . ಬಳಿಕ ಮುಖ್ಯ ಅತಿಥಿಗಳಾದ ಮಂಜೇಶ್ವರ ಜನ ಮೈತ್ರಿ ಪೊಲೀಸ್ ಅಧಿಕಾರಿಯಾದ ಮಧು ಸರ್ ಅವರು ಮಾತನಾಡಿ ನಮ್ಮ ಸಮಾಜ ಮಾದಕ ವಸ್ತುವಿನ ಪಿಡುಗುವಿನಿಂದಾಗಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ ಇದನ್ನು ಬಗೆಹರಿಸಲು ನಾವೆಲ್ಲರೂ ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ಕೈಜೋಡಿಸಬೇಕಾಗಿ ವಿನಂತಿಸಿದರು. ಬಳಿಕ…

Read More

ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ (ರಿ)ಯುವ ಶಕ್ತಿ ಫ್ರೆಂಡ್ಷ್ ಸರ್ಕಲ್ ಲೈಬ್ರೆರಿ (ರಿ)ಸುಭಾಷ್ ನಗರ ಬೇಕೂರು ಇದರವತಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ (ರಿ)ಯುವ ಶಕ್ತಿ ಫ್ರೆಂಡ್ಷ್ ಸರ್ಕಲ್ ಲೈಬ್ರೆರಿ (ರಿ)K .G .D 6412 ಸುಭಾಷ್ ನಗರ ಬೇಕೂರು ಇದರವತಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನೋಜ್ ಕುಮಾರ್ ವಹಿಸಿದರು. ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ.ಯು.ಶೆಟ್ಟಿ ಧ್ವಜಾರೋಹಣ ಮಾಡಿ ಉದ್ಘಾಟಿಸಿ ಮಾತಾಡಿದರು. ಈ ಸಂದರ್ಭದಲ್ಲಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ಆರ್ ಶೆಟ್ಟಿ ಶುಭಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ, ಲೈಬ್ರೆರಿ ಕಾರ್ಯದರ್ಶಿ…

Read More

ಶ್ರೀ ಶಾರದಾ ಎ.ಯು.ಪಿ ಶಾಲೆ ಚೇವಾರು. ಶಾಲಾ ಮಟ್ಟದ ಸಂಸ್ಕೃತ ದಿನಾಚರಣೆ.

ಶ್ರೀ ಶಾರದಾ ಎ.ಯು.ಪಿ ಶಾಲೆ ಚೇವಾರು ಇಲ್ಲಿ ಶಾಲಾ ಮಟ್ಟದ ಸಂಸ್ಕೃತ ದಿನಾಚರಣೆಯು ನೆರವೇರಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ಯಾಮ ಭಟ್ .ಯು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿನಿಯರಾದ ಶ್ರೀ ರಕ್ಷಾ . ಪಿ ಕಾರ್ಯಕ್ರಮವನ್ನು ನಿರೂಪಿಸಿ, ಸಾಕ್ಷ್ಯಾ .ಎ ಸ್ವಾಗತಿಸಿ, ವಂಶಿತಾ .ಯಂ ವಂದಿಸಿದರು.ಶಾಲಾ ಸಂಸ್ಕೃತ ಅಧ್ಯಾಪಿಕೆ ಶ್ರೀಮತಿ ಪ್ರಮೀಳಾ ಡಿ.ಯನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಭಾಷಾ ಕ್ಲಬ್ ನ ವತಿಯಿಂದ ಈ ಕಾರ್ಯಕ್ರಮವು ನೆರವೇರಿತು

Read More
error: Content is protected !!