ಮಂಜೇಶ್ವರ: ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂಧಿಸಿದೆ ಸಾವನ್ನಪ್ಪಿದ್ದಾನೆ.ಕುಂಜತ್ತೂರು ಉದ್ಯಾವರ ನಿವಾಸಿ ಉಮ್ಮರ್ ಫಾರೂಕ್ (26) ಸಾವನ್ನಪ್ಪಿದ ದುರ್ದೈವಿ. ಇವರಿಗೆ ಕಳೆದ ಶನಿವಾರದಿಂದ ಜ್ವರ ಬಾಧಿಸಿತ್ತೆನ್ನಲಾಗಿದೆ.ಸ್ಥಳೀಯ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದರೂ ಜ್ವರ ವಾಸಿಯಾಗದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಉಮ್ಮರ್ ಫಾರೂಕ್ ಹೊಸಂಗಡಿಯ ಮಟನ್ ಸ್ಟಾಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.