ಮಧುಮೇಹ ತಪಾಸಣಾ ಮೆಡಿಕಲ್ ಕಿಟ್ ನೀಡಿ ಸಹಾಯ
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ ಕೂಡ್ಲು ನಿವಾಸಿ ಬಡಕುಟುಂಬದ ಕಮಲ ಎಂಬವರಿಗೆ ಮಧುಮೇಹ ತಪಾಸಣಾ ಕಿಟ್ ನ್ನು ಮಧೂರು ಪಂಚಾಯತ್ ಕೂಡ್ಲು 17 ನೇ ವಾರ್ಡ್ ಕೌನ್ಸಿಲರೂ ಮಧೂರು ಪಂಚಾಯತ್ ಉಪಾಧ್ಯಕ್ಷರೂ ಆದ ಶ್ರೀ ಭಾನುಪ್ರಕಾಶ್ ಅವರು ನೀಡಿದರು. ಬಳಿಕ ಮಾತನಾಡಿದ ಅವರು ಎಕೆಪಿಎ ಸಂಘಟನೆಯಿಂದ ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದನ್ನು ಪ್ರಶಂಸನೆಗೈದರು. ಈ ವಾರ್ಡಿನಿಂದ ಆಯ್ಕೆಯಾದ ತಾನು ತನ್ನ 5 ವರ್ಷದ ಸಂಬಳವನ್ನು ವಾರ್ಡಿನ ಜನರ…
