ಅತ್ತಾವರ ಶ್ರೀ ಶಿವರಾಮರಾಯರ ಮನೆಯ ಹಿರಿಯ ಸದಸ್ಯೆ ಸುಶೀಲಾ ವಿಶ್ವನಾಥ್ ರಾವ್ ರೀಗೆ ಕನ್ನಡ ಭವನದಿಂದ ಗೌರವಾರ್ಪಣೆ.
ಕಾಸರಗೋಡು : ಅವಿಬಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಮರಾಜ ಕ್ಷತ್ರಿಯ ಜನಾಂಗದ ಪ್ರಥಮ ಪರಿಷತ್ತು (1932 ಡಿಸೆಂಬರ್ 31,ಶನಿವಾರ )ಮಂಗಳೂರಿನಲ್ಲಿ ಅತ್ತಾವರ ಶಿವರಾಮರಾಯರ ಕಾರ್ಯದರ್ಶಿತ್ವದಲ್ಲಿ ಇವರದೇ ಮನೆ ವಠಾರದಲ್ಲಿ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮಿಜಿಗಳವರ ಘನ ಅದ್ಯಕ್ಷತೆಯಲ್ಲಿ ನಡೆದಿತ್ತು. ಸಮಾಜದ ಸುಮಾರು 200ಮಂದಿ ದುರೀಣರು ಅಂದು ಪ್ರಥಮ ಪರಿಷತ್ತಿನಲ್ಲಿ ಭಾಗವಹಿಸಿದ್ದರು. ಹರಿದು ಹಂಚಿ ಹೋಗಿದ್ದ ಸಮಾಜ ಬಂಧುಗಳನ್ನು ಒಂದಾಗಿಸಿ, ಮೊಕ್ತೇಸರಿಕೆಯ ಕಟು ಜಾತಿ ಕಟ್ಟುಪಾಡುಗಳ, ಜಾತಿ ವ್ಯವಸ್ಥೆಯ ಹಿಡಿತದಿಂದ, ಕಾಲಮಾನದ ಸಾಮಾಜಿಕ ಬದಲಾವಣೆಗಳಿಗನುಸಾರವಾಗಿ, ಅಂದಿನ…
