ಬೈಕ್‌ನಲ್ಲಿ ಸಾಗಿಸಲಾಗುತ್ತಿದ್ದ ಮಾದಕ ದ್ರವ್ಯ ಎಂಡಿಎಂಎ ಯೊಂದಿಗೆ ಯುವಕನೊಬ್ಬನ ಸೆರೆ

ಮಂಜೇಶ್ವರ: ಬೈಕ್‌ನಲ್ಲಿ ಸಾಗಿಸಲಾಗುತ್ತಿದ್ದ 26.81 ಗ್ರಾಂ ಮಾದಕ ದ್ರವ್ಯ ಎಂಡಿಎಂಎ ಯೊಂದಿಗೆ ಯುವಕನೊಬ್ಬನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಸೋಮವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಬಂಗ್ರಮಂಜೇಶ್ವರ ನಿವಾಸಿ ಅಬೂಬಕರ್ ಆಬೀದ್ (25) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸುತಿದ್ದ ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ ಓವ‌ರ್ ಬ್ರಿಡ್ಜ್ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ ವಾಹನ ತಪಾಸಣೆಯಲ್ಲಿ ಮಾದಕ ದ್ರವ್ಯ ಪತ್ತೆಹಚ್ಚಲಾಗಿದೆ.ಬಂಧಿತನ ಪ್ಯಾಂಟ್ ಜೇಬಿನಲ್ಲಿ ಎಂಡಿಎಂಎ ಪತ್ತೆಯಾಗಿರುವುದಾಗಿಯೂ ಬಂಧಿತ ಇತರ ಹಲವು…

Read More

ನಟೋರಿಯಸ್ ರೌಡಿಶೀಟರ್ ಟೋಪಿ ನೌಫಾಲ್ ಕೊಲೆ ಪ್ರಕರಣಕ್ಕೆ ಇನ್ನಷ್ಟು ಟ್ವಿಸ್ಟ್ …. !

ಮಂಗಳೂರು ನಗರ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಟೋಪಿ ನೌಫಾಲ್(42) ಕೊಲೆಯಾಗಿದ್ದಲ್ಲ. ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾಗಿ ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದ ಕಾಸರಗೋಡಿನ ವೈದ್ಯರು ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಗ್ಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿಯಲ್ಲಿ ನೌಫಾಲ್ ಮೃತದೇಹ ಲಭಿಸಿತ್ತು. ನೌಫಾಲ್ ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದುದರಿಂದ ಯಾರೋ ಮಾತುಕತೆಗೆ ಕರೆದು ಕೊಲೆ ಮಾಡಿದ್ದಾರೆಂದು ಮಾಹಿತಿ ಲಭಿಸಿತ್ತು. ಕುತ್ತಿಗೆ, ತಲೆಯಲ್ಲಿ ರಕ್ತ ಜಿನುಗಿದ್ದು ಹೊಡೆದು ಹಾಕಿದ ರೀತಿಯ ಕಲೆಗಳಿದ್ದುದರಿಂದ ಯಾರೋ…

Read More

ರೌಡಿಶೀಟರ್ ಟೊಪ್ಪಿ ನೌಫಲ್ ಹತ್ಯೆ ಪ್ರಕರಣದ ಸುತ್ತ ನೂರಾರು ಅನುಮಾನದ ಹುತ್ತ

ಮಂಗಳೂರು: ಉಪ್ಪಳ ರೈಲ್ವೆ ಗೇಟ್ ಬಳಿ ನಿಗೂಢವಾಗಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ರೌಡಿಶೀಟರ್ ಬಜಾಲ್ ನಿವಾಸಿ ಟೊಪ್ಪಿ ನೌಫಲ್ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆತನ ಶವವನ್ನು ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಣೋತ್ತರ (ಪೋಸ್ಟ್ ಮಾರ್ಟಂ) ಪರೀಕ್ಷೆ ನಡೆಸಿ ಶವವನ್ನು ಮೃತನ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮೂಲಗಳ ಪ್ರಕಾರ ಟೊಪ್ಪಿಯ ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳು ಕಂಡು ಬಂದಿರುವುದರಿಂದ ಇದೊಂದು ವ್ಯವಸ್ಥಿತ ಕೊಲೆಯಾಗಿರುವ ಬಗ್ಗೆ, ಪೊಲೀಸರು ಅನುಮಾನಿಸಿದ್ದಾರೆ. ಶವದ ಪ್ಯಾಂಟ್…

Read More

ಕಾಸರಗೋಡಿನ ಕನ್ನಡಿಗರ ಮೇಲಿನ ಮಲತಾಯಿ ಧೋರಣೆಗೆ ಕೊನೆ ಯಾವಾಗ …. ?!

ಕಾಸರಗೋಡು ಒಂದು ಕಾಲದಲ್ಲಿ ಕರ್ನಾಟಕದ ನಾಡಿ ಮಿಡಿತವೇ ಆಗಿತ್ತು ಆದರೆ ಭಾಷಾವಾರು ಪ್ರಾಂತ್ಯದ ರಚನೆಯ ಸಂದರ್ಭದಲ್ಲಿ ತಾಯಿಯ ಮಡಿಲಿನಿಂದ ಮಗುವನ್ನು ಬೇರ್ಪಡಿಸಿದಂತೆ ಕಾಸರಗೋಡನ್ನು ಕನ್ನಡನಾಡಿನಿಂದ ಬೇರ್ಪಡಿಸಿದರು. ಆ ದಿನ ಬೇರ್ಪಡಿಸಿದ್ದು ಬರೀ ನೆಲವಾಗದೇ ಕನ್ನಡಮ್ಮನ ಆಸರೆಯಲ್ಲಿದ್ದ ಕನ್ನಡಿಗರ ಮೇಲೆ ಮಾಡಿದ ಅನ್ಯಾಯವೇ ಆಗಿತ್ತು. 1956 ನವೆಂಬರ್ 1 ರಂದು ಕಾಸರಗೋಡು ಜಿಲ್ಲೆಯು ತಿರಸ್ಕಾರದ ಭಾವದಿಂದ ಕೇರಳ ರಾಜ್ಯಕ್ಕೆ ಸೇರಿತ್ತು. ಕೇರಳ ರಾಜ್ಯಕ್ಕೆ ಸೇರಿದ ಮೇಲೆ ಶುರುವಾಯಿತು ಕನ್ನಡಿಗರಿಗೆ ವ್ಯಥೆ. ಅಂದು ಶುರುವಾದ ವ್ಯಥೆ ಇಂದಿಗೂ ಅನುಭವಿಸಿಕೊಂಡು ಬರುವುದು…

Read More

ಕಡು ಬಡತನ ಮುಕ್ತ ಕೇರಳ.”ಜನ ಸದಸ್ಸು

ಚಿಗುರುಪಾದೆ: ದೇಶದಲ್ಲೇ ಪ್ರಥಮ ಬಾರಿಗೆ ಕೇರಳ ರಾಜ್ಯವು ಕಡುಬಡತನ ಮುಕ್ತ ರಾಜ್ಯವಾಗಿ ಕೇರಳ ರಾಜ್ಯ ಸರಕಾರ ಘೋಷಿಸಿದ ಸಂಭ್ರಮಾಚರಣೆಯ ಭಾಗವಾಗಿ ಮೀಂಜ ಚಿಗುರು ಪಾದೆ ವಾರ್ಡ್ ಮಟ್ಟದ ಕಾರ್ಯಕ್ರಮವನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಶ್ರೀ ಕೆ. ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಶ್ರೀ ಡಿ.ಕಮಲಾಕ್ಷ, “ಮೀಂಜ_ಮಂಗಲ್ಪಾಡಿ” ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ, ಶ್ರೀ ರಾಮಚಂದ್ರ ಟಿ.ಉಪಸ್ಥಿತರಿದ್ದರು. ಶ್ರೀ ಉದಯ ಸಿ.ಹೆಚ್.ಸ್ವಾಗತಿಸಿದರು.

Read More

ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ ಹಕ್ಕುಗಳಿಗಾಗಿ ಹೋರಾಡುವುದು ನಮ್ಮ ಹಕ್ಕು: ಮುರಳೀಧರ ಬಳ್ಳಕುರಾಯ

ಕಾಸರಗೋಡು : ನಮ್ಮ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಸವಲತ್ತುಗಳು ನಿರಾಕರಿಸಲ್ಪಟ್ಟಾಗ ಅವುಗಳನ್ನು ಮರಳಿ ಪಡೆಯಲು ಹೋರಾಡುವುದು ನಮ್ಮ ಹಕ್ಕು. ಕೇರಳ ಸರಕಾರ ಈ ಬಗ್ಗೆ ತಿಳಿದುಕೊಂಡು ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಕರ್ನಾಟಕ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳಕುರಾಯ ಹೇಳಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ನಡೆದ ಕಾಸರಗೋಡು ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವದಾಖಲೆ ಸೃಷ್ಟಿಸಿದ ಶಾಸ್ತ್ರೀಯ ನೃತ್ಯ ಕಲಾವಿದೆ ಮಂಗಳೂರಿನ ರೆಮೊನಾ ಇವೆಟ್…

Read More

ಮಂಗಳೂರಿನ ನಟೋರಿಯಸ್ ರೌಡಿಶೀಟರ್ ನೌಫಲ್ ಅಲಿಯಾಸ್ ನೌಫ ಮರ್ಡರ್…!ಉಪ್ಪಳದ ರೈಲ್ವೇ ಹಳಿಯಲ್ಲಿ ಶವ ಪತ್ತೆ

ಮಂಗಳೂರಿನ ನಟ್ಟೋರಿಯಸ್ ರೌಡಿ ಶಿಟರ್ ನೌಫಲ್ ಅಲಿಯಾಸ್ ನೌಫನ ಶವ ಉಪ್ಪಳದ ರೈಲ್ವೇ ಹಳಿಯಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಉಪ್ಪಳದ ರೈಲ್ವೆ ಟ್ರಾಕ್ ನಲ್ಲಿ ಶವ ಬಿದಿದ್ದು ಕೊಲೆಯಾಗಿರಬಹುದು ಎಂದು ಶಂಕೆಯಿದೆ. ಸ್ಥಳಕ್ಕೆ ಕೇರಳ ಪೋಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.ಕೊಲೆಯಾದ ನೌಫಲ್ ನ ವಿರುದ್ಧ ಮಂಗಳೂರು ಮತ್ತು ದ.ಕ ಜಿಲ್ಲೆಯಲ್ಲಿ ಅನೇಕ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಿವೆ.ಈತ ಮಂಗಳೂರಿನ ಫೈಸಲ್ ನಗರದ ನಿವಾಸಿ ಯಾಗಿರುತ್ತಾನೆ.

Read More

ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್ ರವರಿಗೆ ಉಪ್ಪಳ ವ್ಯಾಪಾರ ಭವನದಲ್ಲಿ ಬೀಳ್ಳೊಡುಗೆ ಸಮಾರಂಭ

ಮಂಜೇಶ್ವರ : ಸುದೀರ್ಘ ಕಾಲ ಸೇವೆಯನ್ನು ನೀಡಿ ನಿವೃತರಾದ ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್ ರವರಿಗೆ ಉಪ್ಪಳ ವ್ಯಾಪಾರ ಭವಣದಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಳೊಡುಗೆ ನೀಡಲಾಯಿತು.ಕಳೆದ 29 ವರ್ಷಗಳಲ್ಲಿ ಇವರು ಕಾಸರಗೋಡು ನೆಲಿಕುನ್ನು, ಪೈವಳಿಕೆ, ಉಪ್ಪಳ ಸೇರಿದಂತೆ ವಿವಿಧ ಸೆಕ್ಷನ್ ಗಳಲ್ಲಿ ಸೇವೆಯನ್ನು ಜನರ ಪ್ರೀತಿಗೆ ಪಾತ್ರರಾಗಿದ್ದರು. ಉಪ್ಪಳ ಸಬ್ ಅಸಿಸ್ಟಂಟ್ ಇಂಜಿನಿಯರ್ ಜಯನ್ ರವರ ಅಧ್ಯಕ್ಷತೆಯಲ್ಲಿ ನಡೆದ ವಿದಾಯ ಕೂಟ ಸಮಾರಂಭವನ್ನು ನಕಾಸರಗೋಡು ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಜ ಭಟ್ ಉದ್ಘಾಟಿಸಿದರು. ಈ ಸಂದರ್ಭ…

Read More

ಪಾವೂರು ಅಂಗನವಾಡಿಯಲ್ಲಿ ಪ್ರವೇಶ ಉತ್ಸವ

ಮಂಜೇಶ್ವರ: ಪಾವೂರು ಅಂಗನವಾಡಿ ಇಂದು ನಡೆದ ಪ್ರವೇಶ ಉತ್ಸವದಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ಕಮರುಂನ್ನಿಸ ಮುಸ್ತಾಫಾ ಅವರನ್ನು ಪಾವೂರು ಅಂಗನವಾಡಿ ವೆಲ್ಫೇರ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಪ್ರವೇಶ ಉತ್ಸವ ಮಕ್ಕಳಿಗೆ ಹೊಸ ಹುರುಪು ಹಾಗೂ ಸಂತೋಷ ತಂದಿದೆ ಇದೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳಿಗೆ 1ಸಾವಿರ ಅನುದಾನ ಹೆಚ್ಚಿಸಿರುದರಿಂದ ಅವರಿಗೂ ಸಂತೋಷ ಆಗಿದೆ ಏಂದು ಗಣೇಶ್ ಪಾವೂರು ಹೇಳಿದರು ಈ…

Read More

ಮೀಂಜ : 41ನೇ ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆ

ಮೀಯಪದವು : ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ 41ನೇ ಪುಣ್ಯತಿಥಿ ಕಾರ್ಯಕ್ರಮ ಮೀಯಪದವಿನಲ್ಲಿ ಜರುಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಪುಷ್ಪಾರ್ಚನೆಗೈದರು.ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಪಿ. ಸೋಮಪ್ಪ ಮುಖ್ಯ ಪ್ರಭಾಷಣಗೈದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮುಖಂಡರುಗಳಾದ ಮೊಹಮ್ಮದ್ ಜೆ, ಜೋಕಿಂ, ಮೊಂತೇರೋ, ಹಮೀದ್ ಮೀಯಪದವು, ಫಿಲೋಮಿನಾ…

Read More
error: Content is protected !!