ವರ್ಕಾಡಿ ದೇವಂದಪಡ್ದ್ಪು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಮಾಪ್ತಿ

ದೇವಂದಪಡ್ದ್ಪು ಶ್ರೀ ಮಹಾವಿಷ್ಣು ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಇತ್ತೀಚೆಗೆ ನಡೆಯಿತು ಜಾತ್ರೋತ್ಸವದ ಪೂರ್ವಭಾವಿಯಾಗಿ ಸಂಧ್ಯಾ ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಳನೇ ದಿವಸದ ಸಂಧ್ಯಾ ಭಜನೆಯನ್ನು ಮುಂಬಯಿ ಉದ್ಯಮಿ ಬಾಸ್ಕರ ಪೂಜಾರಿ ದೊಡುಗುರಿ, ಕನಿಲ ಭಗವತಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ರಾದ ಗಣೇಶ್ ಪಾವೂರು , ಶ್ರೀಮತಿ ವಿದ್ಯಾ ಹರೀಶ್ ಸುವರ್ಣ ಮುಡಿಮಾರ್, ಆನಂದ ಬಲ್ಲೂರು, ಶ್ರೀಮತಿ ದೀಪ ರಂಜನ್ ತಲಪಾಡಿ,ಕೋರಿಮುಗೇರ್ ನವೀನ್ ಕುಮಾರ್ ದಂಪತಿ ಯರು, ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನಾ ಸಂಕೀರ್ತನೆಯಲ್ಲಿ ನಾಗಮೂಲ ಭಜನಾ…

Read More

ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ 100% ಫಲಿತಾಂಶ

ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಸತತ 20ನೇ ಬಾರಿಗೆ 100% ಫಲಿತಾಂಶವನ್ನು ಸಾಧಿಸುವ ಮೂಲಕ ಮತ್ತೊಮ್ಮೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಸಾಧನೆ ಮೆರೆದಿದೆ. ಒಟ್ಟು 76 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 54 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 97% ಅಂಕಗಳೊಂದಿಗೆ ಕುಮಾರಿ ತನ್ವಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಕನ್ನಡ ಭಾಷೆಯಲ್ಲಿ 7 ವಿದ್ಯಾರ್ಥಿಗಳು ಮತ್ತು ಗಣಿತದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ…

Read More

ಪೊಲೀಸ್ ಗುಪ್ತ ಕಾರ್ಯಾಚರಣೆ ನಕಲಿ ಸರ್ಟಿಫಿಕೇಟ್ ನಿರ್ಮಿಸುವ ಕೇಂದ್ರ ಪತ್ತೆ

ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಹೊಸದುರ್ಗದಲ್ಲಿ ಕಾರ್ಯವೆಸಗುತ್ತಿದ್ದ ನಕಲಿ ಸರ್ಟಿಫಿಕೇಟ್ ಹಾಗೂ ದಾಖಲೆಪತ್ರಗಳನ್ನು ನಿರ್ಮಿಸುವ ಗುಪ್ತ ಕೇಂದ್ರಗಳನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಕಡಪುರದ ಶಿಹಾಬ್ (38), ಮುಳಿಕ್ಕಾಂ ಕ್ಲಾಯಿಕೋಡಿನ ಪಿ. ರವೀಂದ್ರನ್ (51) ಮತ್ತು ಹೊಸದುರ್ಗ ಕೊವ್ವಲ್‌ಪಳ್ಳಿಯ ಸಂತೋಷ್ ಕುಮಾರ್ (45) ಎಂಬವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಟಿ. ಅಖಿಲ್ ನೇತೃತ್ವದ ಪೊಲೀಸರು ನಿನ್ನೆ ಈ ಕಾರ್ಯಾಚರಣೆ ನಡೆಸಿದ್ದಾರೆ. ನೆಟ್ ಫಾರ್ ಯೂ ಕೆಫೆ ಹಾಗೂ ಬಂಧಿತರಾದ ಆರೋಪಿಗಳ ಪೈಕಿ…

Read More

ಪೊದರು ಗಳಿಂದ ಆವೃತ್ತವಾದ ವಿದ್ಯುತ್ ಟ್ರಾನ್ಸ್ಫರ್ಮಾರ್ ಗಳು, ಸಾರ್ವಜನಿಕ ಸಂಚಾರಕ್ಕೆ ಸವಾಲು

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ಅಂಬಿತ್ತಡಿಗಳಲ್ಲಿ ಸ್ಥಾಪಿತವಾಗಿರುವ ಮಂಜೇಶ್ವರ ವಿದ್ಯುತ್ ಸೆಕ್ಷನ್ ಅಧೀನದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳು ಪೊದರುಗಳಿಂದ ಆವರಿಸಲ್ಪಟ್ಟು ಸಾರ್ವಜನಿಕ ಸುರಕ್ಷತೆಗೆ ಭಾರೀ ಅಪಾಯಕಾರಿಯಾಗಿದೆ.ಈ ದಾರಿಯಾಗಿ ಪ್ರತಿ ದಿನ ನೂರಾರು ಮಂದಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಸಂಚರಿಸುತಿದ್ದಾರೆ. ಅಂಬಿತ್ತಡಿ ಹಾಗೂ ರಾಗಂ ಜಂಕ್ಷನ್ ರಸ್ತೆ ಬದಿಯಲ್ಲಿ ಸ್ಥಾಪಿಸಲ್ಪಟ್ಟಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಪೂರ್ಣವಾಗಿ ಕಾಡುಹಿಡಿದ ಪೊದರುಗಳಿಂದ ಆವರಿಸಲ್ಪಟ್ಟಿವೆ. ಈ ಪೊದರುಗಳು ಮಳೆಯ ಸಮಯದಲ್ಲಿ ತೊಳೆದ ನಂತರ ಅಥವಾ ಗಾಳಿಗೆ ಬಿದ್ದು ಟ್ರಾನ್ಸ್‌ಫಾರ್ಮರ್‌ಗೆ ಸ್ಪರ್ಶಿಸಿದರೆ ವಿದ್ಯುತ್…

Read More

ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟಕ್ಕೆ ಅದ್ದೂರಿ ಯ ತೆರೆ

ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿ ವತಿಯಿಂದ ಮೇ 04 ರಿಂದ 11 ವರೆಗೆ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟದ ಸಮಾರೋಪ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ವಿ.ಕೆ ಸನೋಜ್ ಉದ್ಘಾಟಿಸಿದರು. ಸ್ವಾಗತ ಸಮಿತಿ ಚೆಯರ್ಮನ್ ವಿ.ವಿ ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಉದ್ಯಮಿಗಳಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ,ಅಬ್ದುಲ್ ವಹಾಬ್,ಮುಹಮ್ಮದ್ ಇಬ್ರಾಹಿಂ,ಯು.ಕೆ ಯೂಸುಫ್, ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯೂ,ರಾಜ್ಯ ಸಮಿತಿ ಸದಸ್ಯ ಕೆ. ಸಬೀಶ್, ಜಿಲ್ಲಾ ಜತೆ…

Read More

ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ

ಮಂಜೇಶ್ವರ : ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ ನಡೆಯಿತು.ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ನಡೆದ ಮಹಾ ಸಭೆಯನ್ನು ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಅಬ್ದುಲ್ ರಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಆರಿಫ್ ಮಚ್ಚಂಪ್ಪಾಡಿ, ಅಬ್ದುಲ್ ರಹ್ಮಾನ್ ಪಾರಕಟ್ಟ, ಸಾಯಿಭದ್ರ ರೈ, ಸಲಾಂ ವರ್ಕಾಡಿ, ರತನ್ ಹೊಸಂಗಡಿ, ರವಿ ಪ್ರತಾಪ ನಗರ, ದೀಪಕ್ ರಾಜ್ ಉಪ್ಪಳ ಮೊದಲಾದವರು ಮಾತನಾಡಿದರು. ನೂತನ ವರ್ಷದ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸಲಾಂ…

Read More

ಉದ್ಯಾವರ ಶ್ರೀ ಅರಸು ಮಂಜಿಷ್ಲಾರ್ ದೈವಗಳ ವರ್ಷಾವಧಿ ಉತ್ಸವಕ್ಕೆ ಸಂಭ್ರಮದ ಸಮಾಪ್ತಿ.

ಕಳೆದ ನಾಲ್ಕು ದಿನಗಳಲ್ಲಾಗಿ ನಡೆದ ಉತ್ಸವ ಭಾನುವಾರದಂದು ಕಡೆ ಬಂಡಿ ಉತ್ಸವದೊಂದಿಗೆ ಸಮಾಪ್ತಿಗೊಂಡಿತು. ಈ ಸಲ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಭಾರೀ ಜನಸ್ತೋಮವೇ ಕಂಡು ಬಂತು. ಧ್ವಜರೋಹಣದ ಮರುದಿವಸ ನಡೆದ ಯಕ್ಷಗಾನ ತಾಳಮದ್ದಳೆ, ಸಂಗೀತ ರಸಮಂಜರಿ ಬಳಿಕ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ ವೀಕ್ಷಿಸಲು ಉಭಯ ರಾಜ್ಯಗಳ ನಾನಾ ಕಡೆಗಳಿಂದ ಭಕ್ತರ ಸಾಗರವೇ ಹರಿದು ಬಂದಿತ್ತು. ಅದೇ ರೀತಿ ತಮ್ಮ ದೈವದ ನೇಮ, ಮಡಸ್ಥಾನ, ಮುಂಡತ್ತಾಯ ದೈವದ ನೇಮ, ನಡುಬಂಡಿ ಉತ್ಸವ, ಅಣ್ಣ…

Read More

ಸ್ಥಳೀಯಾಡಳಿತ ಚುನಾವಣೆ:ಯುವಕರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಆಲೋಚನೆ.

ಕಾಸರಗೋಡು : ಮುಂಬರುವ ತ್ರಿಸ್ತರ ಪಂಚಾಯತಿ ಚುನಾವಣೆಯಲ್ಲಿ ಯುವ ಸಮೂಹಕ್ಕೆ ಆದ್ಯತೆ ನೀಡಿ ಪಕ್ಷದ ಪುನರ್ ಸಂಘಟನೆ ಮಾಡಿ ಎಲ್ಲಾ ಕಡೆ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಪಕ್ಷ ಪ್ರತ್ಯೇಕ ಕಾರ್ಯಯೋಜನೆಯನ್ನು ಮಾಡಿದೆ. ತಳಮಟ್ಟದಿಂದಲೇ ಪಕ್ಷವನ್ನು ಪುನರ್ ಸಂಘಟಿಸಿ ಚುನಾವಣೆ ಎದುರಿಸಲು ಪ್ರದೇಶ್ ಕಾಂಗ್ರೆಸ್ ಸಮಿತಿಯ ನೂತನ ಸಮಿತಿ ನಿರ್ಧರಿಸಿದೆ. ಇದರ ಅಂಗವಾಗಿ ಕೆಪಿಸಿಸಿಯ ಉಪಾಧ್ಯಕ್ಷರು ಸಹಿತ ವಿವಿಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೂತನ ನೇಮಕಾತಿ ಮಾಡುವ ಬಗ್ಗೆ ಪಕ್ಷ ಚಿಂತಿಸಿದೆ. ಕಾಸರಗೋಡು ಸಹಿತ ಎಂಟು ಜಿಲ್ಲೆಗಳಲ್ಲಿ…

Read More

ಪಾಕ್ ಜತೆ ಸಂಘರ್ಷ : ಕಾಸರಗೋಡಿನಲ್ಲಿ ಕಟ್ಟೆಚ್ಚರ, ಸೀತಾಂಗೋಳಿ ಎಚ್.ಎ.ಎಎಲ್ ಸಹಿತ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಬಿಗಿ ಭದ್ರತೆ, ಕಂಟ್ರೋಲ್ ರೂಂ ಕಾರ್ಯಾರಂಭ

ಜಿಲ್ಲೆಯಲ್ಲಿರುವಸೀತಾಂಗೋಳಿಯ ಎಚ್.ಎ.ಎಲ್. ಕಾರ್ಖಾನೆ, ಪೆರಿಯ ದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಸಿಪಿಸಿಆರ್ ಐ ಗೆ ಕೇಂದ್ರ ನಿರ್ದೇಶನದಂತೆ ಭದ್ರತಾ ಕಾವಲು ಏರ್ಪಡಿಸಲಾಗಿದೆ ಅಲ್ಲದೇ ವಿದೇಶಿಯರು ಸಹಿತ ಪ್ರವಾಸ ಬಂದು ವಾಸಿಸುವ ಟೂರಿಸ್ಟ್ ಹೋಟೆಲ್ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಭದ್ರತೆ ಒದಗಿಸಲಾಗಿದೆ.ಅಲ್ಲದೇ ರೈಲ್ವೇ ನಿಲ್ದಾಣ, ರೈಲ್ವೇಹಳಿ, ಕರಾವಳಿ ತೀರಪ್ರದೇಶದ ಮೇಲೆ ವಿಶೇಷ ಕಣ್ಣಾವಲು ಇರಿಸಲಾಗಿದೆ. ಮುನ್ನೆಚ್ಚರಿಕೆಯಂಗವಾಗಿ ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಗೃಹಖಾತೆ ಕಾರ್ಯದರ್ಶಿಗೆ ಇದರ ಹೊಣೆ ವಹಿಸಲಾಗಿದೆ.

Read More

ಧ್ವಜಾರೋಹಣದೊಂದಿಗೆ ನಾಂದಿಯಾದ ಉದ್ಯಾವರ ಮಾಡ ಜಾತ್ರಾ ಆಯನ.

ಮಂಜೇಶ್ವರ. ಇತಿbಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಟಾ ರ್ ಕ್ಷೇತ್ರದ ವರ್ಷಾವಧಿ ಉತ್ಸವ ಮತ್ತು ಐತಿಹಾಸಿಕ ಬಂಡಿ ಉತ್ಸವದ ಆಯನವು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ನಿನ್ನೆ ರಾತ್ರಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿಗಳು, ಕ್ಷೇತ್ರದ ಆಚಾರ ಕೋಲಪಟ್ಟವರು, ಗಡಿ ಪ್ರಧಾನರು, ಗುರಿಕಾರರು, ಹತ್ತು ಸಮಸ್ತರು, ಆಡಳಿತ ಸಮಿತಿ ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಧಾರ್ಮಿಕತೆಯೊಂದಿಗೆ ಮತಸೌಹಾರ್ದತೆಗೆ ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರದಲ್ಲಿ ಮೇ 14…

Read More
error: Content is protected !!