ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಿ ಬಸ್ ಸಂಚಾರ ಆರಂಭಕಾಞಂಗಾಡು -ಮೂನಾಂಕಡವ್ – ಸುಳ್ಯ ರೂಟ್
ಕಾಸರಗೋಡು : ಬಂದಡ್ಕ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಕಾಞಂಗಾಡು -ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಸಿ ಯ ಲಿಮಿಟೆಡ್ ಸ್ಟಾಪ್ ಆ. 14ರಂದು ಸಂಚಾರ ಆರಂಭಿಸಿತು. ಕಾಞಂಗಾಡು, ಪೆರಿಯ, ಮೂನಾಂಕಡವ್, ಕುಂಡಾಂಗುಳಿ, ಬಂದಡ್ಕ ದಾರಿಯಾಗಿ ಸುಳ್ಯಕ್ಕೆ ಸರ್ವೀಸ್ ನಡೆಸುವ ಬಸ್ ಸಂಚಾರವನ್ನು ಶಾಸಕ ಸಿ. ಎಚ್. ಕುಂಞಂಬು ಇಂದು ಬೆಳಿಗ್ಗೆ ಕುತ್ತಿಕ್ಕೋಲ್ ನಲ್ಲಿ ಸಂಚಾರ ಉದ್ಘಾಟಿಸಿದರು.ಮಲೆನಾಡು ಪ್ರದೇಶವಾದ ಕುತ್ತಿಕೋಲ್, ಬೇಡಗಂ ಪಂಚಿಯತಿನ ಜನತೆಗೆ ಈ ಬಸ್ ಸಂಚಾರದ ಮೂಲಕ ಅತಿ ಸುಲಭದಲ್ಲಿ ಸುಳ್ಯವನ್ನು ಸಂಪರ್ಕಿಸಬಹುದಾಗಿದೆ. ಚಿಕಿತ್ಸೆ, ಉನ್ನತಶಿಕ್ಷಣ,…
