ಧಾರ್ಮಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ ರಂಗದ ಮುಂದಾಳು ತುಳಸಿದಾಸ್ ಮಂಜೇಶ್ವರ-ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ
ಮಂಜೇಶ್ವರ: ಧಾರ್ಮಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ ರಂಗದ ಮುಂದಾಳು ತುಳಸಿದಾಸ್ ಮಂಜೇಶ್ವರ ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ಸಂಜೆ ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿ ನಡೆದ ಬಾಕುಡ ಸಮಾಜದ ಕೇಂದ್ರ ಸಮಿತಿಯ ಸಭೆಯಲ್ಲಿ ಸಮಾಜದ ಹಿರಿಯರ ಸಮಕ್ಷಮದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡು, ಅಧಿಕಾರವನ್ನ ಪಡಕೊಂಡರು. ತುಳಸಿದಾಸ್ ಮಂಜೇಶ್ವರ್ ರವರು ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ಉದ್ಯೋಗಿಯಾಗಿದ್ದು, ಮಂಜೇಶ್ವರ ಚೌಕಿಯಲ್ಲಿರುವ ಬ್ರೈಟ್ ಆರ್ಟ್ಸ್ & ಸ್ಪೋರ್ಟ್ಸ್ ಸೋಶಿಯಲ್ ವೆಲ್ವೇರ್ ಕ್ಲಬ್ಬಿನ ಮಾಜಿ…
