ತಲಪಾಡಿ ಷಟ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟ,ವಾಹನ ಸವಾರರು ಅಪಾಯದ ಭೀತಿಯಲ್ಲಿ

ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ ತಲಪಾಡಿ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುಲಭ ಹಾಗೂ ವೇಗದ ಸಾರಿಗೆಗಾಗಿ ನಿರ್ಮಿತವಾಗಿದ್ದರೂ, ಇತ್ತೀಚಿನ ರಸ್ತೆಯ ಮೇಲೆ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟದಿಂದಾಗಿ ವಾಹನ ಸವಾರರು ಅಪಾಯದ ಭೀತಿಯನ್ನು ಎದುರಿಸುವಂತಾಗಿದೆ. ಪ್ರತಿ ದಿನವೂ ಹಲವು ಸಮೀಪ ಪ್ರದೇಶದಿಂದ ಹತ್ತಾರು ದನಗಳು ರಸ್ತೆಗೆ ಪ್ರವೇಶಿಸುತ್ತಿದ್ದು, ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಈ ಘಟನೆಗಳು ಹೆಚ್ಚಾಗಿ ಕಾಣಿಸುತ್ತಿವೆ. ದನ ಸಾಕುವವರು ಸೂಕ್ತವಾದ ಸ್ಥಳಗಳಲ್ಲಿ ದನಗಳನ್ನು ಮೇಯಲು ಬಿಡದೆ ಬೇಕಾಬಿಟ್ಟಿಯಾಗಿ ಬಿಡುತ್ತಿರುವ ಹಿನ್ನೆಲೆಯಲ್ಲಿಈ ದನಗಳು…

Read More

ತುಳುವೆರೆ ಉಡಲ್ ಜೋಡುಕಲ್ಲು ತಂಡದ ‘ಡೆನ್ನ ಡೆನ್ನಾನ’ ಹೊಚ್ಚ ಹೊಸ ನಾಟಕಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮುಹೂರ್ತ

ತುಳುವೆರೆ ಉಡಲ್ ಜೋಡುಕಲ್ಲು ಇದರ ಕಲಾವಿದರಿಂದ ಗಡಿನಾಡ ಕೇಸರಿ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ಮಾಣ ಮತ್ತು ನಿರ್ವಹಣೆಯ , ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ ನಿರ್ದೇಶಿಸಿದ ಹೊಚ್ಚ ಹೊಸ ನಾಟಕ ಡೆನ್ನ ಡೆನ್ನಾನ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶುಭ ಮುಹೂರ್ತಗೊಂಡಿತು. ವಿವೇಕ್ ಭಂಡಾರಿ ಸಣ್ಣತಡ್ಕ ಸಲಹೆ ಮತ್ತು ಸಹಕಾರ ನೀಡಿದ ಈ ನಾಟಕವು ತುಳು ರಂಗ ಭೂಮಿಯಲ್ಲಿ ವಿಶಿಷ್ಟಕಥೆಯಿಂದ ಎಲ್ಲರ ಮನಸೂರೆಗೊಂಡ ಯಶಸ್ವಿ ತುಳು ನಾಟಕ ಇದೀಗ ಹಲವು ಬದಲಾವಣೆಗಳೊಂದಿಗೆ ಹೊಸ ಶೈಲಿಯಲ್ಲಿ ಮೂಡಿ ಬರಲಿದೆ….

Read More

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ ಕುಂಜತ್ತೂರು – ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲಾ ಸಂಸತ್ ಚುನಾವಣೆ

ಮಂಜೇಶ್ವರ : ಶಾಲಾ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಹಾಗೂ ಶಾಲೆಯ ಪ್ರಜಾಪ್ರಭುತ್ವಾತ್ಮಕ ಪರಂಪರೆಯನ್ನು ಗೌರವಿಸುವ ಉದ್ದೇಶದೊಂದಿಗೆ ಗಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಗಳಲ್ಲಿ ಎರಡು ದಿನಗಳಲ್ಲಾಗಿ ಹಮ್ಮಿ ಕೊಂಡ ಶಾಲಾ ಸಂಸತ್ ಚುನಾವಣೆ 2025-26 ಬಹಳ ಅದ್ದೂರಿಯಾಗಿ ನೆರವೇರಿತು.ವಿದ್ಯಾರ್ಥಿ ದೆಸೆಯಲ್ಲಿಯೇ ಸಾರ್ವತ್ರಿಕ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮಾದರಿಯಲ್ಲಿ ಚುನಾವಣೆ ನಡೆಯಿತು. ಪ್ರಜಾಪ್ರಭುತ್ವವನ್ನು ಅಲಿಂಗಿಸಿ – ನಿಮ್ಮ ಆಯ್ಕೆ, ನಿಮ್ಮ ಹಕ್ಕು, ನಿಮ್ಮ ಧ್ವನಿ…

Read More

ಉದಯೋನ್ಮುಖ ಪುಟಾಣಿ ಗಾಯಕರ ಗಾಯನಕ್ಕೆ ವೇದಿಕೆ ‘ವಾಯ್ಸ್ ಒಫ್ ನಮ್ಮ ಮೀಡಿಯಾ’ 2025 ರ ಆಡಿಷನ್ ಜುಲೈ 6 ರಂದು.

ಮಂಜೇಶ್ವರ: ಕರಾವಳಿಯ ನಾಡಿಮಿಡಿತ ಜನತೆಯ ಧ್ವನಿಯಾಗಿರುವ ನಮ್ಮ ಮೀಡಿಯಾ 24*7 ಸಾರಥ್ಯದಲ್ಲಿ ಉದಯೋನ್ಮುಖ ವಿದ್ಯಾರ್ಥಿ ಗಾನ ಪ್ರತಿಭೆಗಳ ಬಹು ನಿರೀಕ್ಷೆಯ ರಿಯಾಲಿಟಿ ಶೋ ವಾಯ್ಸ್ ಆಫ್ ನಮ್ಮ ಮೀಡಿಯಾ 2025.ಇದರ ಪ್ರಥಮ ಹಂತದ ಆಡಿಷನ್ ಜುಲೈ 6 ರಂದು ಭಾನುವಾರ ನಡೆಯಲಿದೆ. ಉಪ್ಪಳ ಕೊಂಡೆಯೂರ್ ಶ್ರೀ ನಿತ್ಯಾನಂದ ಯೋಗಶ್ರಮದಲ್ಲಿ ನಡೆಯುವ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ಆಯ್ಕೆಯಾದ ಗಾನ ಪ್ರತಿಭೆಗಳಿಗೆ ಮುಂದೆ ಮೆಗಾ ಆಡಿಯೋಶನ್ ನಡೆಯಲಿದೆ

Read More

ಮೊಟಕುಗೊಂಡಿರುವ ಕೇರಳ ಸರಕಾರಿ ಯೋಜನೆಗಳು: ಮರು ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ.

ಮಂಜೇಶ್ವರ : ಕೆ ಸ್ಮಾರ್ಟ್ ಅವ್ಯವಸ್ಥೆ ಸರಿಪಡಿಸಬೇಕು,ಬುಡಮೇಲು ಗೊಂಡಿರುವ ಪಿ ಎಂ ಎ ವೈ ಲೈಫ್ ಭವನ ಯೋಜನೆಯನ್ನು ಕೂಡಲೇ ಸರಿ ಪಡಿಸಬೇಕು,ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು, ಪೆನ್ಸನ್ ಅರ್ಜಿಗಳ ಅವಗಣನೆಯನ್ನು ಕೊನೆಗೊಳಿಸಬೇಕು ಸ್ಥಗಿತಗೊಂಡಿರುವ ಅಭಿವೃದ್ದಿ ಯೋಜನೆಗಳನ್ನು ಕೂಡಲೇ ಸರಿ ಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಎಲ್ ಜಿ ಎಂ ಲ್ ಸ್ಥಳೀಯಾಡಳಿತ ಸಂಸ್ಥೆಗಳ ಮುಸ್ಲಿಂ ಲೀಗ್ ಜನಪ್ರತಿನಿಧಿಗಳ ಸಂಘಟನೆ ಯ ನೇತೃತ್ವದಲ್ಲಿ ವರ್ಕಾಡಿ ಗ್ರಾಮ ಪಂಚಾಯತು ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಕೆ ಮೊಹಮ್ಮದ್ ಪಾವೂರು…

Read More

ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ಇಬ್ಬರಿಗೆ ಮೂರು ತಿಂಗಳ ಸಜೆ -ತೀರ್ಪು ಪ್ರಕಟಿಸಿದ ನ್ಯಾಯಾಲಯ

ಕಾಸರಗೋಡು : ಡೆಪ್ಯೂಟಿ ತಹಶೀಲ್ದಾರ್ ರನ್ನು ತಡೆದು ಆಕ್ರಮಿಸಿ ಹಲ್ಲೆಗೈದ ಕೇಸಿನಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ನಾಲ್ವರ ವಿರುದ್ಧ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷಾ ತೀರ್ಪಿಗೆ ಜಿಲ್ಲಾ ನ್ಯಾಯಾಲಯ ಅನುಮೋದನೆ ನೀಡಿದೆ. ಮೂರು ತಿಂಗಳ ಸಜೆ ಸಹಿತ 20ಸಾವಿರ ರೂ ದಂಡ ವಿಧಿಸಿ ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ತಿಂಗಳು ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ಶಾಸಕ ಎಕೆಎಂ ಅಶ್ರಫ್ ಹೊರತಾಗಿ ಬಶೀರ್ ಅಬ್ದುಲ್ಲ ಕಾಜ, ಕಾಯಿಂಞಿ…

Read More

ಬಾಳಿಯೂರಿನಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿ ಆರಂಭ.

ಮಂಜೇಶ್ವರ : ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಅಯ್ಯಪ್ಪ ಕೃಪ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು ಸಂಸ್ಥೆಯ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ನಡೆಯಿತು. ಇಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸಂಕಬೈಲು ಸತೀಶ್ ಅಡಪ್ಪ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಶ್ರೀ ಶೇಖರ ಶೆಟ್ಟಿ ಬಾಯಾರು, ಶ್ರೀ ರಾಧಾಕೃಷ್ಣ ರೈ ಶ್ರೀಮತಿ ತಾರಾಮಣಿ ವಿ ರೈ, ಯೋಗೇಶ್…

Read More

ಭಾರೀ ಗಾಳಿಗೆ ಭಾರೀ ಗಾತ್ರದ ಮಾವಿನ ಮರ ಧಾರಾಶಾಯಿ

ಐನೂರು ವರ್ಷಗಳ ಇತಿಹಾಸ ಸಾರುವ ಪಾವೂರು ಪೊಯ್ಯ “ಕಟ್ಟೆಜಾತ್ರೆ” (ದೊಂಪದ ಜಾತ್ರೆ) ನಡೆಯುವ ಬೃಹತ್ ‘ಮಾವಿನ ಮರ’ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಧಾರಾಶಾಯಿ, ಮಂಜೇಶ್ವರ: “ಕಟ್ಟೆ ಜಾತ್ರೆ” (ದೊಂಪದ ಜಾತ್ರೆ) ನಡೆಯುವ ಇತಿಹಾಸ ಸಾರುವ ಕಟ್ಟೆಯ ಬೃಹತ್ ಮಾವಿನ ಮರವೊಂದು ಇಂದು ಅಪರಾಹ್ನ 3 ಗಂಟೆಗೆ ಬೀಸಿದ ಭಾರಿ ಗಾಳಿಗೆ ಧಾರಾಶಾಯಿಯಾದ ಘಟನೆ ಮಂಜೇಶ್ವರ ಪಾವೂರಿನಲ್ಲಿ ನಡೆದಿದೆ. ಇಲ್ಲಿನ ಪೊಯ್ಯ ಶ್ರೀ ಚಾಮುಂಡಿ ಬಂಟ ಪರಿವಾರ ದೈವಗಳ ಆದಿಸ್ಥಳದ ಕಟ್ಟೆಯಲ್ಲಿರುವ ಬೃಹತ್ ಮಾವಿನ ಮರವೊಂದು ಮಧ್ಯಭಾಗದಿಂದಲೇ…

Read More

ವರ್ಕಾಡಿಯಲ್ಲಿ ನಡೆದ ಭೀಬತ್ಸ ಘಟನೆ :ಬೆಂಕಿ ಹಚ್ಚಿ ತಾಯಿಯನ್ನು ಕೊಂದ ಮಗ, ನೆರೆಮನೆಯ ಮಹಿಳೆಗೂ ಗಂಭೀರ

ರಾತ್ರಿ ಹೊತ್ತು ಮನೆಯಲ್ಲಿ ಮಲಗಿದೆ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ ನೆರೆಮನೆಯ ಮಹಿಳೆ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರ್ಕಾಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋರವರ ಪತ್ನಿ ಹಿಲ್ಡಾ (60) ಮೃತಪಟ್ಟ ಮಹಿಳೆ. ಪುತ್ರ ಮೇಲ್ವಿನ್ ಈ ಕೃತ್ಯವೆಸಗಿಧ್ಧಾನೆ. ನೆರೆಮನೆಯ ವಿಕ್ಟರ್ ರವರ ಪತ್ನಿ ಲೊಲಿಟಾ (30) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಜೂನ್ 26 ಗುರುವಾರ ಮುಂಜಾನೆ ಈ ಘಟನೆ…

Read More

ಬಾಕುಡ ಸಮಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ತುಳಸೀದಾಸ್ ಮಂಜೇಶ್ವರ, ಪ್ರ .ಕಾರ್ಯದರ್ಶಿಯಾಗಿ ಸುಮಂಗಲ ಪೊಸೋಟು ಆಯ್ಕೆ

ಮಂಜೇಶ್ವರ: ಬಾಕುಡ ಸಮಾಜ ಸೇವಾ ಸಮಿತಿಯ ಮಹಾಸಭೆ ಇತ್ತೀಚಿಗೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಜರಗಿತು. ಸಭೆಯನ್ನು ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಅಧ್ಯಕ್ಷರಾದ ಶಂಕರ ಅಡ್ಕ ಉಧ್ಘಾಟಿಸಿದರು.ಸಭೆಯಲ್ಲಿ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಣೇಶ್ ಮಂಗಳೂರು ,ಅಧ್ಯಕ್ಷೆ ಶ್ರೀಮತಿ ಸುಜಾತ ಮಂಜೇಶ್ವರ , ಗೌರವಾಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ,ಕೋಶಾಧಿಕಾರಿ ಮಂಜುನಾಥ್ ಕಾರ್ಲೆ ,ರಾಮ ಕಿನ್ನಿಗೋಳಿ , ಕಾರ್ಯದರ್ಶಿ ತುಳಸೀದಾಸ್ ಮಂಜೇಶ್ವರ, , ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾದ ನವೀನ…

Read More
error: Content is protected !!