ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ; ಚಾಲಕನ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಅಜಾಗರೂಕತೆಯಿಂದ ಕಾರು ಚಲಾಯಿಸಿ ಇಬ್ಬರು ವಿದ್ಯಾರ್ಥಿಗಳ ಗಂಭೀರ ಗಾಯಕ್ಕೆ ಕಾರಣವಾದ ಘಟನೆಗೆ ಸಂಬಂಧಿಸಿ ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಳ್ಳೇರಿಯ ವಿವೇಕಾನಂದನಗರದ ಶ್ರೀಯಾನ್ (5) ಮತ್ತು ದೀಕ್ಷಾ (17) ಗಾಯಗೊಂಡ ವಿದ್ಯಾರ್ಥಿಗಳು.​ಕಳೆದ ಮಂಗಳವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ಗಜಾನನ ಶಾಲೆ ಸಮೀಪದ ರಸ್ತೆಯಲ್ಲಿ ವಿದ್ಯಾರ್ಥಿಗಳು ಮನೆಗೆ ತೆರಳುತ್ತಿದ್ದಾಗ, ಅತೀ ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ. ದೀಕ್ಷಾ ಮುಳ್ಳೇರಿಯ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದು, ಶ್ರೀಯಾನ್ ಪ್ರೀ…

Read More

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಪರಾರಿಯಾಗಿದ್ದ ಅಧ್ಯಾಪಕ ಬಿಹಾರದಲ್ಲಿ ಸೆರೆ

​ಕಾಸರಗೋಡು: ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪೋಕ್ಸೋ ಪ್ರಕರಣಗಳನ್ನು ಎದುರಿಸುತ್ತಿದ್ದ ಅಧ್ಯಾಪಕ ಎಂ.ಕೆ. ಮೊಹಮ್ಮದ್‌ನನ್ನು ವಳಾಂಜೇರಿ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.ಮಲಪ್ಪುರಂ ಆದವನಾಡ್ ಮೂಲದ ಆರೋಪಿಯು ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದನೆನ್ನಲಾಗಿದೆ. ​ಬೇಕಲದಲ್ಲಿ ಇಬ್ಬರು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಜೊತೆಗೆ, ಮಲಪ್ಪುರಂನ ಮದ್ರಸವೊಂದರ 14 ವಿದ್ಯಾರ್ಥಿಗಳಿಗೂ ಈತ ಕಿರುಕುಳ ನೀಡಿದ್ದಾಗಿ ದೂರು ದಾಖಲಾಗಿತ್ತು. ಆರೋಪಿಯ ಸುಳಿವು ಪಡೆದ ವಳಾಂಜೇರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಿಹಾರದಲ್ಲಿ ಆತನನ್ನು…

Read More

ಲಹರಿಮುಕ್ತ ಸಮಾಜಕ್ಕಾಗಿ ಮಂಜೇಶ್ವರದಲ್ಲಿ ‘ತೂಫಾನ್’: ಭವ್ಯ ಜನಜಾಗೃತಿ ಜಾಥಾ

​ಮಂಜೇಶ್ವರ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ, ಲಹರಿಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಮಂಜೇಶ್ವರ ಪೊಲೀಸ್ ಠಾಣೆ ಮತ್ತು ವ್ಯಾಪಾರಿ ಏಕೋಪನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ತೂಫಾನ್: ದಿ ನಾರ್ಕೋ ಹಂಟ್’ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನಡೆಯಿತು. ​ಉಪ್ಪಳದಿಂದ ತಲಪಾಡಿಯವರೆಗೆ ನಡೆದ ಬೃಹತ್ ಲಹರಿವಿರೋಧಿ ಜಾಗೃತಿ ಜಾಥಾಗೆ ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್ ಐಪಿಎಸ್ ನೇತೃತ್ವ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ​ಮಧ್ಯಾಹ್ನ 3 ಗಂಟೆಗೆ ಆರಂಭವಾದ ಈ ಜಾಥಾದಲ್ಲಿ…

Read More

ಪ್ರಜಾಪ್ರಭುತ್ವವನ್ನು ಕೊಂದವರು ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ: ಟಿ.ಪಿ. ಜಯಚಂದ್ರನ್

​ಕಾಸರಗೋಡು: ಪ್ರಜಾಪ್ರಭುತ್ವವನ್ನು ಕೊಂದ ಕಾಂಗ್ರೆಸ್ ಪಕ್ಷದ ಹೊಸ ಪೀಳಿಗೆಯ ನಾಯಕರು ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ. ತನ್ನ ಪೂರ್ವಜರು ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಲು ಸಿದ್ಧರಿಲ್ಲದ ರಾಹುಲ್ ಗಾಂಧಿ, ಜೇಬಿನಲ್ಲಿ ಸಂವಿಧಾನವನ್ನು ಇಟ್ಟುಕೊಂಡು ತಿರುಗಾಡುತ್ತಾ ಸ್ವತಃ ಹಾಸ್ಯಾಸ್ಪದವಾಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಟಿ.ಪಿ. ಜಯಚಂದ್ರನ್ ಮಾಸ್ಟರ್ ಹೇಳಿದ್ದಾರೆ. ತುರ್ತು ಪರಿಸ್ಥಿತಿ ವಿರೋಧಿ ಹೋರಾಟದ 51ನೇ ವರ್ಷಾಚರಣೆಯ ಅಂಗವಾಗಿ ಬಿಜೆಪಿ ಜಿಲ್ಲಾ ಸಮಿತಿಯು ಆಯೋಜಿಸಿದ್ದ ತುರ್ತು ಪರಿಸ್ಥಿತಿ ವಿರೋಧಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ​ಇಂದಿರಾ…

Read More

ಮಂಜೇಶ್ವರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗದ ಮಹತ್ವ

ಮಂಜೇಶ್ವರ: ಮಂಜೇಶ್ವರ ಸರ್ಕಾರಿ ಹೋಮಿಯೋಪತಿ ಡಿಸ್ಪೆನ್ಸರಿ ಮತ್ತು ಆಯುಷ್ಮಾನ್ ಆರೋಗ್ಯ ಮಂದಿರದ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವದ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಯಿತು. ​ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಫಾತಿಮತ್ ಸೌರಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಕಡಪ್ಪುರಂ ಅಧ್ಯಕ್ಷತೆ ವಹಿಸಿದ್ದರು. ​ಎಫ್‌ಎಚ್‌ಸಿ ವೈದ್ಯಾಧಿಕಾರಿ ಡಾ. ಪ್ರಭಾಕರ ರಾಯ್ ಅವರು ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ವಿಷಯದ ಕುರಿತು ಮಾತನಾಡಿದರು. ಆಯುರ್ವೇದ…

Read More

ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10 ನೇ ಮಹಾ ಮೇಳ – ಹೊರನಾಡ ಕನ್ನಡಿಗರ ಗೋಷ್ಠಿ, ಗಡಿನಾಡು – ಹೊರನಾಡು ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ “ಗಿಳಿವಿಂಡು “ಸಮಗ್ರ ಅಭಿವೃದ್ದಿಗಾಗಿ ಕೇರಳ – ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ. ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ಆಶ್ರಯದಲ್ಲಿ ಮಹಾರಾಷ್ಟ್ರದ ಸೋಲಾಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಸಮೀಪದ ಹುತಾತ್ಮ ಸ್ಮೃತಿ ಮಂದಿರದಲ್ಲಿ 2026 ಜೂನ್ 20 ಮತ್ತು 21 ರಂದು ನಡೆದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10 ನೇ ಮಹಾಮೇಳದಲ್ಲಿ ಹೊರನಾಡ ಕನ್ನಡಿಗರ ಗೋಷ್ಠಿಯಲ್ಲಿ ಕಾಸರಗೋಡಿನ…

Read More

ಮಂಜೇಶ್ವರದಲ್ಲಿ ಸರಗಳ್ಳತನ: ಸ್ಕೂಟರ್‌ನಲ್ಲಿ ಬಂದ ಆರೋಪಿಯ ಬಂಧನ

ಮಂಜೇಶ್ವರ: ಮಂಜೇಶ್ವರದಲ್ಲಿ ಹಗಲಹೊತ್ತಿನಲ್ಲೇ ಸ್ಕೂಟರ್‌ನಲ್ಲಿ ಬಂದು, ಯುವತಿಯೊಬ್ಬಳ ಕತ್ತಿನಲ್ಲಿದ್ದ ಎರಡೂಕಾಲು ಪವನ್ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಬಂಬ್ರಾಣಿ ನಿವಾಸಿ ಎ. ಸಂದೀಪ್ (31) ಬಂಧಿತ ಆರೋಪಿಯಾಗಿದ್ದಾನೆ. ​ಘಟನೆಯ ನಂತರ ಸ್ಕೂಟರ್‌ನಲ್ಲಿ ಪರಾರಿಯಾದ ಆರೋಪಿಗಳಿಗಾಗಿ ಮಂಜೇಶ್ವರ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ಇದೀಗ ಸಂದೀಪ್‌ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಆತನ ಮತ್ತೊಬ್ಬ ಸಹಚರನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ…

Read More

ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ: ಪ್ರಜಾಪ್ರಭುತ್ವದ ಪಾಠಕ್ಕೆ ಮೆಚ್ಚುಗೆ

ಮಂಜೇಶ್ವರ: ​”ಬ್ಯಾಲೆಟ್ ಪೇಪರ್ ಗುಂಡಿಗಿಂತಲೂ ಬಲಿಷ್ಠ; ಮತದಾನವೇ ರಾಜಕೀಯ ಚಟುವಟಿಕೆಯ ಅಡಿಪಾಯ” ಎಂಬ ಮಹಾನ್ ಧ್ಯೇಯವಾಕ್ಯವನ್ನು ಸಾಬೀತುಪಡಿಸುವಂತೆ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಗಡಿಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಸತ್ ಚುನಾವಣೆ ಅತ್ಯಂತ ವ್ಯವಸ್ಥಿತವಾಗಿ ಏಕ ಕಾಲದಲ್ಲಿ ನಡೆಯಿತು. ಶಾಲಾ ಪ್ರಾಂಶುಪಾಲರಾದ ಶ್ರೀಯುತ ಅಬ್ದುಲ್ ಖಾದರ್ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಂದ ನಾಮ ಪತ್ರಗಳನ್ನು ಸ್ಪೀಕರಿಸಿ ಪರಿಶೀಲಿಸಿದರು. ಅದೇ ರೀತಿ ವಿದ್ಯಾರ್ಥಿಗಳು ಪ್ರತಿಯೊಂದು ತರಗತಿಗಳಿಗೆ ತೆರಳಿ…

Read More

ತಲಪಾಡಿಯಲ್ಲಿ ಭೀಕರ ಸರಣಿ ಅಪಘಾತ: ರಿಕ್ಷಾ ಚಾಲಕ ಗಂಭೀರ, ಹಲವರಿಗೆ ಗಾಯ

​ಮಂಜೇಶ್ವರ: ತಲಪಾಡಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆಟೋದಲ್ಲಿದ್ದ ಇಬ್ಬರು ಮತ್ತು ಕಾರುಗಳಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಿನ್ನೆ ಸಂಜೆ 6.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ​ಕಾಸರಗೋಡು ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಂಟೈನರ್ ಲಾರಿ, ಏಕಾಏಕಿ ರಸ್ತೆಗೆ ಬಂದ ಆಟೋ ರಿಕ್ಷಾವನ್ನು ರಕ್ಷಿಸಲು ಪ್ರಯತ್ನಿಸಿದೆ. ಈ ವೇಳೆ ಲಾರಿ ಚಾಲಕ ಕಂಟೈನರನ್ನು ಬಲಭಾಗಕ್ಕೆ ತಿರುಗಿಸಿದಾಗ, ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ…

Read More

ವಾಚನ ವಾರಾಚರಣೆ: ಪುಸ್ತಕಗಳೊಂದಿಗೆ ವಿದ್ಯಾರ್ಥಿಗಳ ಸಂವಾದ

ಕಾಸರಗೋಡು: ಪುಸ್ತಕ ಜ್ಞಾನವು ವ್ಯಕ್ತಿಯ ವಿಕಾಸಕ್ಕೆ ಪೂರಕವಾಗಿದ್ದು, ಯಶಸ್ವಿ ಜೀವನದ ಹಾದಿಯನ್ನು ತೋರಿಸುತ್ತದೆ ಎಂದು ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಹೇಳಿದರು. ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ವಾಚನ ವಾರಾಚರಣೆ ಅಂಗವಾಗಿ ನಗರದ ಭಾಲಭವನ್ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವಿದ್ಯಾರ್ಥಿಗಳಿಗೆ ಪುಸ್ತಕಗಳೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಓದಿನಿಂದ ಮನಸ್ಸಿಗೆ ಸಂತೋಷ, ಸಮಾಧಾನ ಹಾಗೂ ವಿಷಯಗಳ ಅರಿವು ಮೂಡುತ್ತದೆ. ಲೋಕಾನುಭವವನ್ನು ಹೆಚ್ಚಿಸುವ ಓದುವ…

Read More
error: Content is protected !!