ಪೆರ್ಲದಲ್ಲಿ ವಾಚನಾ ದಿನ ಉದ್ಘಾಟನೆ

ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಹಾಗೂ ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯ ಜಂಟಿ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ವಾಚನಾ ಪಕ್ಷಾಚರಣೆ ಉದ್ಘಾಟನೆ ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ ಜರುಗಿತ್ತು. ಎಣ್ಮಕಜೆ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ‘ವಾಚನಾ ಹವ್ಯಾಸ ನಮ್ಮನ್ನು ಕ್ರೀಯಾಶೀಲರನ್ನಾಗಿಸುತ್ತದೆ. ಪ್ರತೀ ಮನೆಯಿಂದಲೇ ಇಂತಹ ಮೌಲ್ಯಯುತ ಪುಸ್ತಕ ಪ್ರೀತಿ ಬೆಳೆಯಬೇಕು. ಕನ್ನಡ ಸಾಹಿತ್ಯ ಪರಂಪರೆಗೆ ದುಡಿದ ಹಿರಿಯ ಸಾಹಿತಿಗಳ ಶ್ರಮವನ್ನು ಗೌರವಿಸಿ ಪುಸ್ತಕ ಓದುವಿಕೆ ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯವಾಗಿದೆ. ವಾಚನಾ ಪಕ್ಷಾಚರಣೆಯನ್ನು ಆಯೋಜಿಸಿದ ಲೈಬ್ರೇರಿ ಕೌನ್ಸಿಲ್ ಕಾರ್ಯಕ್ರಮ…

Read More

ಕುತ್ಯಾಳ ಶ್ರೀ ನವಜೀವನ ಸಮಿತಿ ಕೂಡ್ಲು ವತಿಯಿಂದ ಸನ್ಮಾನ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಾಸರಗೋಡು , ಕಾಸರಗೋಡು ಜಿಲ್ಲಾ ನವಜೀವನ ಸಮಿತಿಯಲ್ಲಿ ಒಂದಾದ ಕುತ್ಯಾಳ ಶ್ರೀ ನವಜೀವನ ಸಮಿತಿ ಕೂಡ್ಲು ವತಿಯಿಂದ ಕುತ್ಯಾಳ ಶ್ರೀ ನವಜೀವನ ಸಮಿತಿಯ ಸದಸ್ಯರ ಮಕ್ಕಳಿಗೆ 2025 – 2026 ನೇ ಸಾಲಿನ SSLC ಹಾಗೂ +2 ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕೂಡ್ಲು ಶಾಲೆಯಲ್ಲಿ ನಡೆಯಿತು . ಮಧೂರು ಗ್ರಾಮಪಂಚಾತಿನ ಉಪಾಧ್ಯಕ್ಷರಾದ ಶ್ರೀ ಭಾನುಪ್ರಕಾಶ್ ದೀಪ ಬೆಳಗಿಸಿ ಉದ್ಘಾಟಿಸಿದರು . ಕುತ್ಯಾಳ ಶ್ರೀ ನವಜೀವನ…

Read More

ಶ್ರೀ ಶಾರದಾ ಎ.ಯು.ಪಿ. ಶಾಲೆ ಚೇವಾರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಚೇವಾರ್, ಜೂನ್ 22: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಶಾರದಾ ಎ.ಯು.ಪಿ. ಶಾಲೆ, ಚೇವಾರ್‌ನಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ ಟೀಚರ್ ಉದ್ಘಾಟಿಸಿದರು. ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಶಾಂತಿ ಹಾಗೂ ಏಕಾಗ್ರತೆಯನ್ನು ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು. ಪ್ರಸಾದ್ ಸರ್ ಹಾಗೂ ಸಾತ್ವಿಕ್ ಸರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಯೋಗದ ಮಹತ್ವವನ್ನು ಅರಿತುಕೊಂಡರು. ಕಾರ್ಯಕ್ರಮದ…

Read More

ಕನ್ನಡ ನೆಲ-ನುಡಿಗಾಗಿ ಜೀವಮಾನವಿಡೀ ಹೋರಾಡಿದ ಕಯ್ಯಾರರು: ಪ್ರೊ. ಎಸ್.ಜಿ. ಸಿದ್ದರಾಮಯ್ಯ

ಉಪ್ಪಳ, :ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರು ಕನ್ನಡ ಭಾಷೆ, ನೆಲ ಹಾಗೂ ಅಸ್ಮಿತೆಗಾಗಿ ಜೀವನದ ಕೊನೆಯವರೆಗೂ ಹೋರಾಟ ನಡೆಸಿದ ಅಪರೂಪದ ವ್ಯಕ್ತಿತ್ವವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಕ್ರಾಂತಿ ಮತ್ತು ಕಲೆಯ ವಿಶಿಷ್ಟ ಛಾಪು ಮೂಡಿಸಿದ ಮಹಾನ್ ಕವಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಭಾನುವಾರ ಕಯ್ಯಾರು…

Read More

ದಮಯಂತಿ ತಿಮ್ಮಯ್ಯ ಅವರಿಗೆ ‘ಕನ್ನಡ ಪಯಸ್ವಿನಿ ಶಿಕ್ಷಣ ರತ್ನ ಪ್ರಶಸ್ತಿ’

ಕಾಸರಗೋಡು: ಕೊಡಗು ಜಿಲ್ಲೆಯ ಶಿಕ್ಷಣ ಕ್ಷೇತ್ರದ ಗಣನೀಯ ಸೇವೆಗಾಗಿ ಶ್ರೀಮತಿ ಕಾಳೆಂಗಡ ದಮಯಂತಿ ತಿಮ್ಮಯ್ಯ ಅವರಿಗೆ ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತಾರಾಜ್ಯ ಮಟ್ಟದ ‘ಕನ್ನಡ ಪಯಸ್ವಿನಿ ಶಿಕ್ಷಣ ರತ್ನ ಪ್ರಶಸ್ತಿ’ (Teachers Achievement Award) ನೀಡಿ ಗೌರವಿಸಲಾಗುತ್ತಿದೆ. ಜುಲೈ 26ರಂದು ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಸಮಾರಂಭದ ಅಂಗವಾಗಿ ನಡೆಯಲಿರುವ **‘ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ’ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಮ್ಮೇಳನವು ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ…

Read More

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಅನ್ನದಾನ

ಮಂಜೇಶ್ವರ : ಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಶ್ರೀ ಸಂಜೀವ ಶೆಟ್ಟಿ ಹಾಗೂ ಶ್ರೀಮತಿ ಅಮಿತಾ ಸಂಜೀವ ಶೆಟ್ಟಿ ಮಾಡ ದಂಪತಿಗಳ 47ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಜಿ.ಎಲ್.ಪಿ. ಶಾಲೆ, ಮಾಡ ಇದರ ವಿದ್ಯಾರ್ಥಿಗಳಿಗೆ ಅನ್ನದಾನ ನೆರವೇರಿಸಲಾಯಿತು. ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ, ವಿದ್ಯಾರ್ಥಿಗಳೊಂದಿಗೆ ಸಂತಸ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ದಂಪತಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿದರು.

Read More

ಯೋಗದಿಂದ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಸಾಧ್ಯ: ಎಂ.ಎಲ್. ಅಶ್ವಿನಿ

ಕಾಸರಗೋಡು, ಜೂನ್ 22: ಜೀವನಶೈಲಿ ಕಾಯಿಲೆಗಳು ಹಾಗೂ ಮಾನಸಿಕ ಒತ್ತಡಕ್ಕೆ ಯೋಗದ ಮೂಲಕ ಪರಿಣಾಮಕಾರಿ ಪರಿಹಾರ ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಆಯೋಜಿಸಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಯೋಗದ ಸಮನ್ವಯದಿಂದ ಆರೋಗ್ಯ ಕ್ಷೇತ್ರದ ಹಲವು ಸವಾಲುಗಳನ್ನು ಎದುರಿಸಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಹಲವು ಯೋಗ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕ ವಿಜೇತೆ…

Read More

ಪೊಯ್ಯೆ ಶ್ರೀ ಚಾಮುಂಡಿ ದೈವಸ್ಥಾನ ಬಜಾಲ್, ಪಾವೂರು ಇದರ ಆಡಳಿತ ಮಂಡಳಿಯ 25-26ರ ವಾರ್ಷಿಕ ಮಹಾಸಭೆ

ಲೆಕ್ಕಪತ್ರ ಮಂಡನೆ, ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಕ್ಷೇತ್ರದ ವಠಾರದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಮನೋಹರ ಶೆಟ್ಟಿ ಕೆದುಂಬಾಡಿ ಇವರ ಅಧ್ಯಕ್ಷತೆಯಲ್ಲಿ ಮಹಾಸಭೆಯು ನಡೆಯಿತು. ಸಭೆಯಲ್ಲಿ ನಾರಾಯಣಶೆಟ್ಟಿ ಕಿನ್ಯಗುತ್ತು, ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಚಂದ್ರಹಾಸ ಪೂಜಾರಿ ಮುಡಿಮಾರು, ವಸಂತ ರೆಂಜಪಡುಪು, ನಾರಾಯಣಶೆಟ್ಟಿ ಬಜಾಲ್, ಭುಜಂಗ ಸಿಂತಾಜೆ, ಶಿವರಾಮ ಶೆಟ್ಟಿ ಮುಗೇರು ಗುತ್ತು, ತ್ಯಾಂಪಣ್ಣರೈ ಪಾವೂರು ,ಭೋಜ ಮಾಸ್ಟರ್, ಮಾಧವ ಪೂಜಾರಿ ಕುದುಕೋರಿ, ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ್ ತಚ್ಚಿರೆ ವರದಿ ವಾಚಿಸಿ, ಭೋಜ ಮಾಸ್ಟರ್ ಲೆಕ್ಕಪತ್ರ…

Read More

ಪ್ರಕೃತಿ ಸಂರಕ್ಷಣೆ ಅಲ್ಲ ಪ್ರಕೃತಿ ಆರಾಧನೆ ಭಾರತದ ಮಾದರಿ : ಎಂ.ಎಲ್. ಅಶ್ವಿನಿ

ನೀಲೇಶ್ವರ : ಪ್ರಕೃತಿಯ ವಿದ್ಯಮಾನಗಳ ಮುಂದೆ ಮಾನವನು ಅತ್ಯಲ್ಪನಾಗಿದ್ದಾನೆ ಮತ್ತು ಪ್ರಕೃತಿಯನ್ನು ಸಂರಕ್ಷಿಸುವುದಲ್ಲ, ಪ್ರಕೃತಿಯನ್ನು ಆರಾಧಿಸುವುದೇ ಭಾರತವು ಜಗತ್ತಿಗೆ ತೋರಿಸಿಕೊಟ್ಟ ಮಾದರಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಕಡಿಞ್ಞಿಮೂಲೆಯಲ್ಲಿ ಮ್ಯಾಂಗ್ರೋವ್ ನರ್ಸರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮ್ಯಾಂಗ್ರೋವ್ ವನಗಳ ಪ್ರಸ್ತುತತೆಯ ಬಗ್ಗೆ ಕಳೆದ ಕೆಲವು ದಶಕಗಳಿಂದ ಕೇರಳವು ಚರ್ಚಿಸುತ್ತಿದೆ. ಜೈವಿಕ ವೈವಿಧ್ಯತೆಯ ಉಗ್ರಾಣವಾಗಿರುವ ಮ್ಯಾಂಗ್ರೋವ್ ವನಗಳು ಕರಾವಳಿ ಸಂರಕ್ಷಣೆಗೂ ಸಹಕಾರಿಯಾಗಲಿವೆ ಎಂಬುದು ಸಾಬೀತಾಗಿದೆ. ಲಕ್ಷಾಂತರ ಮ್ಯಾಂಗ್ರೋವ್ ಸಸಿಗಳನ್ನು ನೆಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕಡಿಞ್ಞಿಮೂಲೆಯ ಪಿ.ವಿ….

Read More

ಮಲಪ್ಪುರಂ ನಲ್ಲಿ ಬೈಕ್ ಅಪಘಾತ : ಗಂಭೀರ ಗಾಯಗೊಂಡಿದ್ದ ಮಂಜೇಶ್ವರ ವರ್ಕಾಡಿ ಯುವಕನ ದಾರುಣ ಅಂತ್ಯ

ಮಂಜೇಶ್ವರ/ಮಲಪ್ಪುರಂ : ಮಲಪ್ಪುರಂ ಜಿಲ್ಲೆಯ ವಳಾಚೇರಿ ಕಂಜೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮಂಜೇಶ್ವರ ವರ್ಕಾಡಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಬದರುಲ್ ಅಫೀಸ್ (23) ಸಾವನ್ನಪ್ಪಿದ ದುರ್ದೈವಿ. ​ಕುಟ್ಟಿಪುರಂನಿಂದ ಕೋಯಿಕ್ಕೋಡ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ವಳಾಚೇರಿ ಸಿಐ ಕಚೇರಿಯ ಸಮೀಪದಲ್ಲಿ ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಯ ಪಕ್ಕದ ಭಿತ್ತಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ​ತಲೆಗೆ ತೀವ್ರ…

Read More
error: Content is protected !!