​ನಾಯಕತ್ವದ ಹೆಜ್ಜೆಗುರುತುಗಳು: ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಮತ್ತು ಸನ್ಮಾನ ಸಮಾರಂಭ.

ಮಂಜೇಶ್ವರ : ಗಡಿ ಪ್ರದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಕೇಂದ್ರೀಯ ಶಾಲೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ ಹಾಗೂ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭ ಜರುಗಿತು.ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಮತ್ತು ಗುರುಹಿರಿಯರಿಗೆ ಗೌರವ ಸಲ್ಲಿಸುವ ಉದಾತ್ತ ಉದ್ದೇಶವನ್ನು ಹೊಂದಿತ್ತು. ಶಾಲೆಯ ನೂತನ ವಿದ್ಯಾರ್ಥಿ ನಾಯಕ, ನಾಯಕಿಯರು ಮತ್ತು ವಿವಿಧ ವಿಭಾಗಗಳ ಪದಾಧಿಕಾರಿಗಳಿಗೆ ಶಾಲಾ ಆಡಳಿತ ಮಂಡಳಿಯು ಗೌರವಯುತವಾಗಿ ಬಾವುಟ ಮತ್ತು ಪದಕಗಳನ್ನು ನೀಡಿ…

Read More

ಮುಸ್ಲಿಂ ಲೀಗ್ ಅವಕಾಶವಾದಿ ರಾಜಕೀಯ ಮಾಡುತ್ತಿದೆ: ರವೀಶ ತಂತ್ರಿ ಕುಂಟರು

ಪೈವಳಿಕೆಯಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ನಾಯಕ ರವೀಶ ತಂತ್ರಿ ಕುಂಟರು, ಮುಸ್ಲಿಂ ಲೀಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪೈವಳಿಕೆಯ ಸಜಂಕಿಲದಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ನಾಯಕ ರವೀಶ ತಂತ್ರಿ ಕುಂಟರು, ದೇಶದಲ್ಲಿ ಬಿಜೆಪಿ ಅಲೆ ಮುಂದುವರಿದಿದ್ದು, ಕೇರಳದಲ್ಲೂ ಬಿಜೆಪಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಮುಸ್ಲಿಂ ಲೀಗ್ ಅವಕಾಶವಾದಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ…

Read More

ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯಕ್ಕೆ ರಜತ ಮಹೋತ್ಸವ ಸಂಭ್ರಮ; 25 ಸರಣಿ ದತ್ತಿ ಉಪನ್ಯಾಸ ಮಾಲಿಕೆ ಹಾಗೂ ‘ಕಾಸರಗೋಡು ಸಾಹಿತ್ಯೋತ್ಸವ–ಕನ್ನಡೋತ್ಸವ’ ಘೋಷಣೆ

ಕಾಸರಗೋಡು, ಜುಲೈ 1: ಕಾಸರಗೋಡು ಕನ್ನಡ ಗ್ರಾಮದಲ್ಲಿರುವ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯವು ತನ್ನ ರಜತ ಮಹೋತ್ಸವ ವರ್ಷ (2000–2026)ವನ್ನು ಅಂಗವಾಗಿ 25 ಸರಣಿ ದತ್ತಿ ಉಪನ್ಯಾಸ ಮಾಲಿಕೆ ಹಾಗೂ ‘ಕಾಸರಗೋಡು ಸಾಹಿತ್ಯೋತ್ಸವ–ಕನ್ನಡೋತ್ಸವ’ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ನೆಲೆಯಲ್ಲಿ ಅತಿದೊಡ್ಡ ಕನ್ನಡ ಪುಸ್ತಕ ಸಂಗ್ರಹ ಹೊಂದಿರುವ ಈ ಗ್ರಂಥಾಲಯದಲ್ಲಿ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಅಪರೂಪದ ಕೃತಿಗಳ ಸಂಗ್ರಹವಿದ್ದು, ಲೇಖಕರು, ಸಾಹಿತಿಗಳು, ಕವಿಗಳು, ಸಂಶೋಧಕರು, ಶಿಕ್ಷಣ ತಜ್ಞರು,…

Read More

ಮಂಜೇಶ್ವರದಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್: ಮತ್ತೊಬ್ಬ ಮರಳು ಮಾಫಿಯಾ ಬಂಧನ, ಟಿಪ್ಪರ್ ಲಾರಿ ವಶ

ಮಂಜೇಶ್ವರ: ನದಿ ಪಾತ್ರಗಳಲ್ಲಿ ಪರಿಸರ ನಾಶ ಮಾಡುತ್ತಿದ್ದ ಅನಧಿಕೃತ ಮರಳು ಮಾಫಿಯಾದ ಮತ್ತೊಬ್ಬ ಕಿರಾತಕ ಕುಂಬಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೀಂಜ ಜೋಡುಕಲ್ಲು ನಿವಾಸಿ ಗಿರೀಶ್ ಎ. (40) ಎಂಬಾತನನ್ನು ಕೇರಳ ನದಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ, ಸಾಗಾಟಕ್ಕೆ ಬಳಸಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ​ಹೇರೂರು ಗ್ರಾಮದ ಚಿನ್ನಮೊಗರು ಮಾರ್ಗವಾಗಿ ಪಾಚ್ಚಾನಿ ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕುಂಬಳೆ ಪೋಲೀಸರ ತಂಡ ಅಡ್ಡಗಟ್ಟಿ ದಾಳಿ ನಡೆಸಿ ಸೆರೆ ಹಿಡಿದಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಕುಮ್ಮಕ್ಕಿನಿಂದ ಈ…

Read More

ಅಜ್ಮೀರ್ ಯಾತ್ರೆ ಮುಗಿಸಿ ಮರಳುವ ವೇಳೆ ರೈಲಿನಿಂದ ವೃದ್ಧ ನಾಪತ್ತೆ; ಕುಟುಂಬ, ಸ್ಥಳೀಯರಲ್ಲಿ ಆತಂಕ

ಉಪ್ಪಳ: ಅಜ್ಮೀರ್ ಯಾತ್ರೆ ಮುಗಿಸಿ ಕುಟುಂಬದೊಂದಿಗೆ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವೇಳೆ ಪೈವಳಿಕೆ ಪಾಕ್ ನಿವಾಸಿ ಮೂಸಕುಂಜಿ (68) ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಾರವಾರ ನಿಲ್ದಾಣದವರೆಗೆ ಕುಟುಂಬದವರೊಂದಿಗೆ ಇದ್ದ ಅವರು, ಬಳಿಕ ಅನುಮಾನಾಸ್ಪದವಾಗಿ ರೈಲಿನಿಂದ ಕಾಣೆಯಾಗಿದ್ದಾರೆ. ಈ ಸಂಬಂಧ ಅವರ ಪುತ್ರ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ 26ರಂದು ಏಳು ಸದಸ್ಯರ ಕುಟುಂಬ ಅಜ್ಮೀರ್‌ನಿಂದ ಮಂಗಳೂರು ಕಡೆಗೆ ರೈಲಿನಲ್ಲಿ ಪ್ರಯಾಣ ಆರಂಭಿಸಿತ್ತು. ಸ್ವತಃ ರೈಲಿಗೆ ಏರಿಳಿಯಲೂ ದೈಹಿಕ ತೊಂದರೆ ಹೊಂದಿದ್ದ ಮೂಸಕುಂಜಿ ಅವರು…

Read More

​ಮಂಜೇಶ್ವರದಲ್ಲಿ ಮೃಗೀಯ ವರ್ತನೆ: ಮಹಿಳೆಯ ಮನೆಗೆ ನುಗ್ಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್: ಇಬ್ಬರು ಅರೆಸ್ಟ್

ಮಂಜೇಶ್ವರ: ಗೃಹಿಣಿಯೊಬ್ಬಳ ಖಾಸಗಿ ಜೀವನಕ್ಕೆ ಕನ್ನ ಹಾಕಿದ ದುಷ್ಕರ್ಮಿಗಳು, ಆಕೆಯ ಮನೆಗೆ ಬಲವಂತವಾಗಿ ನುಗ್ಗಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ, ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಅಮಾನವೀಯ ಘಟನೆಯೊಂದು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಅನ್ವರ್ (46) ಮತ್ತು ಸ್ಟನೋಹರ್ (28) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ​ಕಳೆದ ಜೂನ್ 23ರ ರಾತ್ರಿ ಈ ಘೋರ ಕೃತ್ಯ ನಡೆದಿದೆ. ಆರೋಪಿಗಳು ಗೃಹಿಣಿಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ, ಆಕೆ ಮತ್ತು ಆಕೆಯ ಗೆಳೆಯನ…

Read More

ಉಪ್ಪಳದಲ್ಲಿ ಬೆಚ್ಚಿಬೀಳಿಸಿದ ದರೋಡೆ: ಮೀನು ಮಾರಾಟಗಾರ್ತಿಯ ಕುತ್ತಿಗೆಯಿಂದ ಸರ, ಕಿವಿಯಿಂದ ಬೆಂಡೋಲೆ ದೋಚಿದ ಕ್ರೂರಿಗಳು

ಮಂಜೇಶ್ವರ: ಹಗಲಹೊತ್ತಲ್ಲೇ ನಡೆದ ಭೀಕರ ದರೋಡೆ ಪ್ರಕರಣವೊಂದು ಉಪ್ಪಳ ಮಣಿಮುಂಡದಲ್ಲಿ ಬೆಳಕಿಗೆ ಬಂದಿದೆ. ಮೀನು ಮಾರಾಟಕ್ಕಾಗಿ ತೆರಳುತ್ತಿದ್ದ 60 ವರ್ಷದ ವೃದ್ಧ ಮಹಿಳೆಯೊಬ್ಬರನ್ನು ದಾರಿ ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಆಭರಣಗಳನ್ನು ದೋಚಿರುವ ಹೇಯ ಕೃತ್ಯ ಇಂದು ಬೆಳಿಗ್ಗೆ ನಡೆದಿದೆ.​ ಉಪ್ಪಳ ಶಾರದಾ ನಗರ ನಿವಾಸಿಯಾದ ವೃದ್ಧ ಮಹಿಳೆ, ಇಂದು ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಮೀನು ಮಾರಾಟಕ್ಕಾಗಿ ಮಣಿಮುಂಡ ರೈಲ್ವೇ ಅಡಿಸೇತುವೆ ಮಾರ್ಗವಾಗಿ ಸಾಗುತ್ತಿದ್ದರು. ಇದನ್ನೇ ಕಾಯುತ್ತಿದ್ದ ದುಷ್ಕರ್ಮಿಗಳು, ಏಕಾಏಕಿ ಮಹಿಳೆಯ ದಾರಿ ತಡೆದು…

Read More

ಹಿರಿಯ ಯಕ್ಷಗಾನ ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ ನಿಧನ

ಕಾಸರಗೋಡು: ಗಡಿನಾಡಿನ ಹಿರಿಯ ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ ಹಾಗೂ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಮಧೂರು ವೆಂಕಟಕೃಷ್ಣ (87) ಸೋಮವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ಮಧೂರಿನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸುಮಿತ್ರಾ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕಾಸರಗೋಡು ಮಾರಾಟ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ಉಳಿಯ ಧನ್ವಂತರಿ ಯಕ್ಷಗಾನ ಸಂಘದ ಮೂಲಕ ಅರ್ಥಧಾರಿ, ವೇಷಧಾರಿ ಹಾಗೂ ಪ್ರಸಂಗಕರ್ತರಾಗಿ ವಿಶಿಷ್ಟ ಹೆಸರು ಗಳಿಸಿದ್ದರು. ತೆಂಕಣ ಯಕ್ಷಗಾನದ…

Read More

ಉಪ್ಪಳದಲ್ಲಿ ವೃದ್ಧ ಮೀನು ಮಾರಾಟಗಾರ್ತಿಗೆ ಕತ್ತಿ ತೋರಿಸಿ ಚಿನ್ನದ ಸರ ದರೋಡೆ

ಉಪ್ಪಳ: ಮೀನು ಮಾರಾಟಗಾರ್ತಿಯಾದ ವೃದ್ಧ ಮಹಿಳೆ ನಡೆದು ಹೋಗುತ್ತಿರುವಾಗ ದಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕತ್ತಿ ತೋರಿಸಿ ಬೆದರಿಸಿ ಕುತ್ತಿಗೆಯಿಂದ ಚಿನ್ನದ ಸರ ಮತ್ತು ಕಿವಿಯಿಂದ ಬೆಂಡೋಲೆ ತೆಗೆದು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಉಪ್ಪಳ ಮಣಿಮುಂಡದಲ್ಲಿ ಸುಮಾರು 10 ಗಂಟೆಯ ವೇಳೆಗೆ ಈ ಘಟನೆ ನಡೆಯಿತು.ಮಣಿಮುಂಡದ ರೖಲ್ವೇ ಅಡಿಸೇತುವೆ ಬಳಿ ಘಟನೆ ನಡೆದಿದೆ. ಉಪ್ಪಳ ಶಾರದಾ ನಗರ ನಿವಾಸಿ 60 ರ ಹರೆಯದ ಮೀನು ಮಾರಾಟ ಮಾಡುವ ಮಹಿಳೆ ಉಪ್ಪಳ ಮೀನು ಮಾರುಕಟ್ಟೆಯತ್ತ ನಡೆದು ಬರುವಾಗ ಹೊಂಚು…

Read More

ಚಕ್ರವರ್ತಿ (ರಿ.) ಹೊಸಂಗಡಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಸುರೇಶ್ ಗಾಣಿಂಜಾಲ್ ಅಧ್ಯಕ್ಷರಾಗಿ ನೇಮಕ

ಚಕ್ರವರ್ತಿ (ರಿ.) ಹೊಸಂಗಡಿ ಸಂಘದ ಮುಂದಿನ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮಹಾಸಭೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಸುರೇಶ್ ಗಾಣಿಂಜಾಲ್, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಪೆಲಪ್ಪಾಡಿ, ಉಪಾಧ್ಯಕ್ಷರಾಗಿ ನರೇಂದ್ರ ಹೆಗಡೆ, ಕೋಶಾಧಿಕಾರಿಯಾಗಿ ಅಶೋಕ್ ಅಂಗಡಿಪದವು ಹಾಗೂ ಜೊತೆ ಕಾರ್ಯದರ್ಶಿಯಾಗಿ ಹರೀಶ್ ಶಕ್ತಿನಗರ್ ಅವರನ್ನು ಆಯ್ಕೆ ಮಾಡಲಾಗಿದೆ. ಗೌರವ ಸಲಹೆಗಾರರಾಗಿ ಅನಿಲ್ ರಾಜ್ ಅಂಗಡಿಪದವು, ಹರೀಶ್ ಅಟ್ಲಾಸ್, ಜಯಂತ ಪೆಲಪ್ಪಾಡಿ, ದಿನೇಶ್ ಜೈನ್, ಹರೀಶ್ ಮಜಾಲ್ ಹಾಗೂ ಜನಾರ್ಧನ ಪೊಯ್ಯಕಂಡ ಅವರನ್ನು ನೇಮಿಸಲಾಗಿದೆ. ಕ್ರೀಡಾ ಕಾರ್ಯದರ್ಶಿಗಳಾಗಿ ಸತೀಶ್ ಶಕ್ತಿನಗರ…

Read More
error: Content is protected !!