ತಲಪಾಡಿಯಲ್ಲಿ ಬಸ್‌ಗೆ ಕಲ್ಲೆಸೆದ ಪ್ರಕರಣ: ಕೇಸು ದಾಖಲಾದ ಬಳಿಕ ಪ್ರಯಾಣಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ ಮನೋವ್ಯಥೆಯಿಂದ ಬಸ್‌ಗೆ ಕಲ್ಲೆಸೆದು ಪೊಲೀಸರು ಕೇಸು ದಾಖಲಿಸಿದ ಬಳಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಯಾಣಿಕನಾದ ಉಪ್ಪಳದಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ ಎಂಬಾತನು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆ ಮಾರ್ಗವಾಗಿ ಬಂದ ನಾಲ್ಕು ಸಾರಿಗೆ ಬಸ್ಸುಗಳು ನಿಲುಗಡೆ ನೀಡದೆ ತೆರಳಿದ ಕಾರಣ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಬಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೂ ನಿಲುಗಡೆ ನೀಡದ ಹಿನ್ನೆಲೆಯಲ್ಲಿ ಅಬ್ದುಲ್ ಹಮೀದ್ ಕಲ್ಲೆಸೆದಿದ್ದು,…

Read More

ಕೇರಳ ರಾಜ್ಯ ವಿಧಾನ ಸಭಾ ಚುನಾವಣೆಗೆ ಪೂರ್ವ ಸಿದ್ಧತೆ ,ಕೇಂದ್ರ ಚುನಾವಣಾ ಆಯೋಗ ತಂಡ ರಾಜ್ಯಕ್ಕೆ

ಕಾಸರಗೋಡು : ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೇವಲ ಕೆಲವು ವಾರಗಳು ಬಾಕಿ ಇದ್ದು, ಅದರ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಜನವರಿಯಲ್ಲಿ ರಾಜ್ಯಕ್ಕೆ ಭೇಟಿಕೊಡುವುದಾಗಿ ಘೋಷಿಸಲಾಗಿದೆ. 2021ನೇ ವರ್ಷದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮಾದರಿಯನ್ನು ಅನುಸರಿಸಿ, ಈ ಬಾರಿಯೂ ಏಕ ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ಪರಿಗಣನೆ ಮಾಡುತ್ತಿದೆ. 2021 ಏಪ್ರಿಲ್ 4ರಂದು ಕೇರಳದಲ್ಲಿ ಒಟ್ಟು 140 ಕ್ಷೇತ್ರಗಳಿಗಾಗಿಯೂ ಏಕ ಹಂತದಲ್ಲಿ ಚುನಾವಣೆಯು ನಡೆಯಿತು…

Read More

ಪ್ರಾಧ್ಯಾಪಕರು , ಕವಿ, ಸಾಹಿತಿಗಳು, ಲೇಖಕರು, ರಾಜ್ಯ -ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತರಾದ ಪ್ರೋ. ಪ್ರವೀಣ ವಿ. ಕುಲಕರ್ಣಿ ಗೆ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026 ಪ್ರಧಾನ .. !

ಕಾಸರಗೋಡು:ರಾಜ್ಯ -ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತರಾದ ಪ್ರೋ. ಪ್ರವೀಣ ವಿ. ಕುಲಕರ್ಣಿ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಸಾಹಿತಿ, ಗಝಲ್ ಕವಿ ಶ್ರೇಷ್ಠ, ಜನಪ್ರಿಯ ವೈದ್ಯ ಡಾ. ಸುರೇಶ್ ನೆಗಳಗುಳಿ ರೀಗೆ ಕನ್ನಡ ಭವನದ ಶ್ರೇಷ್ಠ ಪ್ರಶಸ್ತಿಯಾದ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ … !

ಕಾಸರಗೋಡು:ಜನಪ್ರಿಯ ವೈದ್ಯ, ಗಝಲ್ ಕವಿ ಶ್ರೇಷ್ಠ, ಸಾಹಿತಿ, ಸಂಘಟಕ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ಡಾ ಸುರೇಶ್ ನೆಗಳಗುಳಿ ಇವರಿಗೆಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18.01.2026 ರಂದು ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ, ಡಾ. ನೆಗಳಗುಳಿ ಯವರೀಗೆ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ…

Read More

ಕನ್ನಡ ಭವನದ “ರಜತ ಸಂಭ್ರಮ”ಸಿದ್ದತಾ ಸಭೆ ಸಂಪನ್ನ

ಕಾಸರಗೋಡು: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ 25 ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಸುವರೇ ತೀರ್ಮಾನಿಸಿದ ಪ್ರಯುಕ್ತ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಜನವರಿ 18.2026.ಭಾನುವಾರ ಬೆಳಿಗ್ಗೆ 7.30 ರಿಂದ ತಡ ರಾತ್ರಿವರೆ ವಿವಿಧ ಕನ್ನಡ ಕಾರ್ಯಕ್ರಮಗಳೊಂದಿಗೆ ನಡೆಸುವರೇ ತೀರ್ಮಾನಿಸಲಾಯಿತು. ಈ ಪ್ರಯುಕ್ತ ನಡೆದ ಸಿದ್ದತಾ ಸಭೆಯು 5.01.2026 ಸಂಜೆ ಕನ್ನಡ ಭವನ ಪದಾಧಿಕಾರಿಗಳ ಸಭೆ ಕನ್ನಡ ಭವನದಲ್ಲಿ ನಿರ್ದೇಶಕರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳರ…

Read More

ನೆಲಮಂಗಲದ ಶಿಕ್ಷಕಿ, ಕವಯತ್ರಿ, ಬಹುಮುಖ ಕಲಾ ಪ್ರತಿಭೆ ವೈಶಾಲಿ ಯಾದವ್ (ವಿಶಾಲಾಕ್ಷಿ ) ರೀಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026ಕ್ಕೆ ಆಯ್ಕೆ.

ನೆಲಮಂಗಲದ ಶಿಕ್ಷಕಿ, ಕವಯತ್ರಿ, ಬಹುಮುಖ ಕಲಾ ಪ್ರತಿಭೆ ವೈಶಾಲಿ ಯಾದವ್ (ವಿಶಾಲಾಕ್ಷಿ )ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.”ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಅಂಗಡಿಗೆ ಹಾನಿಗೈದು ವ್ಯಾಪಾರಿ, ಸಹೋದರನಿಗೆ ಹಲ್ಲೆ -4 ಮಂದಿ ಬಂಧನ

ಮಂಜೇಶ್ವರ: ಕೇಳಿದ್ದ ಸಾಮಾನು ನೀಡಲಿಲ್ಲ ಎಂಬ ಅಸಮಾಧಾನದಿಂದ ಅಂಗಡಿಗೆ ದಾಳಿ ನಡೆಸಿದ ಆರೋಪದ ಮೇಲೆ ತಂದೆ ಮತ್ತು ಇಬ್ಬರು ಮಕ್ಕಳ ಸೇರಿದಂತೆ ನಾಲ್ವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪೇರಾಲ್ ನಿವಾಸಿಗಳಾದ ಸದಾಶಿವ (48), ಅವರ ಪುತ್ರರಾದ ಶ್ರವಣ್‌ರಾಜ್ (21) ಮತ್ತು ಸುದರ್ಶನ್ (25), ಜೊತೆಗೆ ಸಂಬಂಧಿಕ ಶರತ್ ಕುಮಾರ್ (26) ಬಂಧಿತರು. ಕುಂಬಳೆ ಠಾಣೆಯ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಘಟನೆ ಕಳೆದ ಶನಿವಾರ ಸಂಜೆ ಸುಮಾರು 7.30ರ ವೇಳೆಗೆ ಮೊಗ್ರಾಲ್…

Read More

ಉದ್ಯಾವರ ಸಾವಿರ ಜಮಾಅತ್ ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ ದರ್ಗಾದಲ್ಲಿಉದಯಾಸ್ತಮನ ಉರೂಸ್ ಮಹೋತ್ಸವವು ಬಾನುವಾರದಂದು ಅನ್ನದಾನದೊಂದಿಗೆ ಸಮಾಪ್ತಿ

ಮಂಜೇಶ್ವರ: ಸಾಮರಸ್ಯ, ಶಾಂತಿ ಮತ್ತು ಧಾರ್ಮಿಕ ಸಹಬಾಳ್ವೆಯ ಪ್ರತೀಕವಾಗಿ ಹೆಸರುವಾಸಿಯಾದ ಮಂಜೇಶ್ವರದ ಉದ್ಯಾವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಉದ್ಯಾವರ ಸಾವಿರ ಜಮಾಅತ್ ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ ದರ್ಗಾದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮನ ಉರೂಸ್ ಮಹೋತ್ಸವವು ಬಾನುವಾರದಂದು ಅನ್ನದಾನದೊಂದಿಗೆ ಸಮಾಪ್ತಿಯಾಯಿತು. ಕಳೆದ ಹತ್ತು ದಿನಗಳ ಕಾಲ ಭಕ್ತಿಭಾವದಿಂದ ನಡೆದ ಈ ಉರೂಸ್ ಆಚರಣೆಗಳು ಧರ್ಮೀಯ ಏಕತೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದವು. ಸಮಾರೋಪ ಸಮಾರಂಭದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಠನಾರ್ ಕ್ಷೇತ್ರದ ಪದಾಧಿಕಾರಿಗಳು ಹೊರೆ ಕಾಣಿಕೆಯೊಂದಿಗೆ ಆಗಮಿಸಿ ಭಾಗವಹಿಸಿದ್ದು,…

Read More

ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಉದ್ಯಮಿ ಮಹಾಬಲೇಶ್ವರ ಭಟ್ ಭೇಟಿ

ಮಂಜೇಶ್ವರ : ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಏಪ್ರಿಲ್ ತಿಂಗಳಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ತಯಾರಿಗಳು ನಡೆಯುತ್ತಿದೆ. ಸುತ್ತು ಗೋಪುರ , ದೈವಸ್ಥಾನಗಳು ನವೀಕರಣ ಗೊಳ್ಳುತ್ತಿದ್ದು ಸಮುದಾಯ ಮತ್ತು ಊರವರ ಸಹಕಾರದಿಂದ ನವೀಕರಣ ಮುಂದುವರಿಯುತ್ತಿದೆ. ಈ ಪ್ರಸಿದ್ಧ ಕ್ಷೇತ್ರಕ್ಕೆ ಖ್ಯಾತ ರಷ್ಯಾ ಉದ್ಯಮಿ ಹಾಗೂ ಕೊಡುಗೈ ದಾನಿ ಎಡಕಾನ ಶ್ರೀ ಮಹಾಬಲೇಶ್ವರ ಭಟ್ ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟರು. ಕ್ಷೇತ್ರದ ಸಮಿತಿ ಜೀರ್ಣೋದ್ದಾರ ಸಮಿತಿ , ಮಹಿಳಾ…

Read More

ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವಾಗ ಸ್ಟೌವ್‌ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಅಡುಗೆ ನೌಕರೆ, ಉದ್ಯಾವರ ಮಾಡ ನಿವಾಸಿ ಜಯ (56) ಮೃತ್ಯು

ಮಂಜೇಶ್ವರ: ಬಂಗ್ರ ಮಂಜೇಶ್ವರ ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿ ಮಾಡುವ ವೇಳೆ ಸ್ಟವ್ ನಿಂದ ಬೆಂಕಿ ತಗುಲಿ ಗಂಭೀರ ಸುಟ್ಟು ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಡುಗೆಯಾಳು ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.ಬಂಗ್ರ ಮಂಜೇಶ್ವರ ಸರಕಾರಿ ಹೈಸ್ಕೂಲಿನ ಅಡುಗೆ ನೌಕರೆ, ಉದ್ಯಾವರ ಮಾಡ ನಿವಾಸಿ ಜಯ (56) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ನಿನ್ನೆ ರಾತ್ರಿ ನಿಧನರಾದರು. ಕಳೆದ ಡಿಸೆಂಬರ್ 16 ರಂದು ಇವರು ಬೆಂಕಿ…

Read More
error: Content is protected !!