ನಮಾಜಿಗೆ ತೆರಳುತ್ತಿರುವ ಮಧ್ಯೆ ವಾಹನ ಢಿಕ್ಕಿ ಹೊಡೆದು ಪಂಡಿತ ಸಾವು

ಮಂಜೇಶ್ವರ : ತರವಾಡು ಮನೆಗೆ ಕಾರ್ಯಕ್ರಮಕ್ಕೆಂದು ತೆರಳಿದ ಪಂಡಿತರೊಬ್ಬರು ಮಸೀದಿಯಲ್ಲಿ ನಮಾಜಿಗಾಗಿ ತೆರಳುತ್ತಿರುವ ಮಧ್ಯೆ ವಾಹನ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.ಕಟ್ಟತ್ತಡ್ಕ ಮುಹಿಮ್ಮಾತ್ ನಗರದಲ್ಲಿ ವಾಸಿಸುವ ಅಬ್ದುಲ್ ಖಾದರ್ ಸಖಾಫಿ (54) ಸಾವನ್ನಪ್ಪಿದ ದುರ್ದೈವಿ. ಆತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮಸೀದಿಯಲ್ಲಿ ನಮಾಜಿಗಾಗಿ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಇವರಿಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಶವ ಶರೀರ ಕಟ್ಟತ್ತಡ್ಕದ ಮನೆಗೆ ತಲುಪಿದೆ….

Read More

ಬೇಕಲ ಬೀಚ್ ಫೆಸ್ಟ್‌ನಲ್ಲಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲುಪಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರೈಲು ಢಿಕ್ಕಿ ಹೊಡೆದು ಸಾವು

ಮಂಜೇಶ್ವರ / ಕಾಸರಗೋಡು: ಬೇಕಲ ಬೀಚ್ ಫೆಸ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲುಪಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಪೊಯಿನಾಚಿ ಪರಂಬ್ ಶಿವಮಂ ಹೌಸ್‌ನ ವೇಣುಗೋಪಾಲನ್ ನಾಯರ್ ರ ಪುತ್ರ ಎಂ. ಶಿವನಂದನ್ (19) ಸಾವನ್ನಪ್ಪಿದ ದುರ್ದೈವಿ. ಇವರು ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು.ಸ್ನೇಹಿತನೊಂದಿಗೆ ಶಿವನಂದನ್ ಪಳ್ಳಿಕ್ಕೆರೆ ಬೀಚ್‌ಗೆ ರೈಲ್ವೇ ಹಳಿ ಸಮೀಪದಲ್ಲಾಗಿ ನಡೆದು ಹೋಗುತ್ತಿರುವ ಮಧ್ಯೆ ಕಣ್ಣೂರು ಭಾಗದಿಂದ ಬಂದ ರೈಲು ಶಿವನಂದನ್‌ಗೆ ಢಿಕ್ಕಿ ಹೊಂದಿರುವುದಾಗಿ ಬೇಕಲ ಪೊಲೀಸರು…

Read More

ಮಂಜೇಶ್ವರ: ಬೈಕ್‌ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದು ಗಾಯಗೊಳಿಸಿದ ಪ್ರಕರಣ . ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ಬೈಕ್‌ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕರ್ನಾಟಕದ ತೌಡುಗೋಳಿ ನಿವಾಸಿ ಅಬ್ದುಲ್ ಖಾದರ್ ತನ್ನೀಫ್ (26) ಹಾಗೂ ಕಡಂಬಾರ್‌ನ ಅಬ್ದುಲ್ ರಜಾಕ್ (40) ಬಂಧಿತ ಆರೋಪಿಗಳು.ಇವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ಸ್ಪೆಷಲ್ ಸ್ಕ್ಯಾಡ್ ಕರ್ನಾಟಕದ ತೌಡುಗೋಳಿಯಿಂದ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ. ಕಾರನ್ನು ಪೊಲೀಸರು ಪರಿಶೀಲಿಸಿದಾಗ ಅದರೊಳಗೆ ಮಾರಕಾಯುಧಗಳು ಪತ್ತೆಯಾಗಿದೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಕೋಡಿಬೈಲ್ ನಿವಾಸಿ ಝಕರಿಯ (61) ಎಂಬವರಿಗೆ ಇರಿದ ಪ್ರಕರಣಕ್ಕೆ ಸಂಬಂಧಿಸಿ…

Read More

ವಚನಕಾರ್ತಿ ಸಮಾಜಸೇವಕಿ ಶಿವಶರಣಿ ರೂಪಾ ಬಿ. ನಾಟೀಕಾರ ರೀಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.

ಕಾಸರಗೋಡು: ವಚನಕಾರ್ತಿ ಸಮಾಜಸೇವಕಿ ಶಿವಶರಣಿ ರೂಪಾ ಬಿ. ನಾಟೀಕಾರ ರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಜನವರಿ 18 ರಂದು ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More

ಮಡಿಕೇರಿಯ ದೀಪಕ್ ಪೊನ್ನಪ್ಪ ರೀಗೆ ಕನ್ನಡ ಭವನದ “ಸಮಾಜ ಸೇವಾ ರತ್ನ ಪ್ರಶಸ್ತಿ 2026 “

ಕಾಸರಗೋಡು: ಧಾರ್ಮಿಕ, ಸಮಾಜ ಸೇವೆ, ಸಾಹಿತ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಗೈದು ಜನಮನ್ನಣೆ ಗಳಿಸಿದ ಇವರನ್ನು ಕಾಸರಗೋಡು ಕನ್ನಡ ಭವನದ “ರಜತ ಸಂಭ್ರಮ ಪ್ರಯುಕ್ತ 18.01.2026.ಭಾನುವಾರ ಕನ್ನಡ ಭವನ ನುಳ್ಳಿಪ್ಪಾಡಿ ಕಾಸರಗೋಡಿನ “ಶ್ರೀ ಶ್ರೀಕೃಷ್ಣ ದೇವರಾಯ “ವೇದಿಕೆಯಲ್ಲಿ ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮದಲ್ಲಿ ಕನ್ನಡ ಭವನದ ಶ್ರೇಷ್ಠ ಪ್ರಶಸ್ತಿಯಾದ “ಸಮಾಜ ಸೇವಾ ರತ್ನ ಪ್ರಶಸ್ತಿ “2026.ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ…

Read More

ವೇಡನ್ ಸಂಗೀತ ಕಾರ್ಯಕ್ರಮದಲ್ಲಿ ನೂಕು ನುಗ್ಗಲು , ಕಾರ್ಯಕ್ರಮ ವೀಕ್ಷಿಸಿ ಹೊರಡುವಾಗ ರೈಲು ಡಿಕ್ಕಿ ಹೊಡೆದು 19 ವರ್ಷದ ಯುವಕ ಧಾರುಣ ಸಾವು….. !

ಕಾಸರಗೋಡು:ಬೇಕಲ್ ಬೀಚ್ ಫೆಸ್ಟ್‌ನಲ್ಲಿ ನಡೆದ ಗದ್ದಲದ ನಂತರ ಸ್ಥಗಿತಗೊಂಡಿದ್ದ ರ‍್ಯಾಪರ್ ವೇಡನ್ ನ ಸಂಗೀತ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ 19 ವರ್ಷದ ಯುವಕ ರೈಲಿಗೆ ಡಿಕ್ಕಿ ಹೊಡೆದಿದ್ದಾನೆ. ಮೃತನನ್ನು ಪೊಯಿನಾಚಿಯ ಶಿವಾನಂದನ್ ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಮತ್ತೊಬ್ಬ ಯುವಕ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಕಾಸರಗೋಡಿನ ಬೇಕಲ್ ಬೀಚ್ ಫೆಸ್ಟ್‌ನ ಅಂಗವಾಗಿ ರ‍್ಯಾಪರ್ ವೇಡನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ತಮ್ಮ ನೆಚ್ಚಿನ ಗಾಯಕನನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು . ಆದರೆ ನಿಗದಿಗಿಂತ ಹೆಚ್ಚಿನ…

Read More

ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿರಾಮದ ಬಳಿಕ ಮತ್ತೆ ಕಳ್ಳರ ಹಾವಳಿ ಆರಂಭ

ಮಂಜೇಶ್ವರ : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿರಾಮದ ಬಳಿಕ ಮತ್ತೆ ಕಳ್ಳರ ಹಾವಳಿ ಆರಂಭಗೊಂಡಿದೆ.ಸೋನಾ ಬಜಾರ್ ಜ್ಯುವೆಲ್ಲರಿ ಮಾಲಕ ದಿ. ಮಮ್ಮಿಣ್ಣಿ ಹಾಜಿ ಅವರ ಕುಂಬಳೆ ಪೇಟೆಯಲ್ಲಿರುವ ಮನೆಗೆ ನಿನ್ನೆ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಮನೆಯವರು ಚೆಂಗಳದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಮನೆಗೆ ಬೀಗ ಹಾಕಲಾಗಿತ್ತು. ರಾತ್ರಿ 12ರ ವೇಳೆಗೆ ಮರಳಿದಾಗ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿದೆ. ಕಳ್ಳರು ಎರಡು ಕಪಾಟುಗಳನ್ನು ಮುರಿದು ಬಟ್ಟೆಬರೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದು,…

Read More

ಸಮಾಜ ಸೇವಕ ಸಂಘಟಕ ಡಾ. ದೇವಪ್ಪ ಕೆ. ವಿ ಮಂಗಳೂರು ರಿಗೆ ಡಾ. ಭಿಕ್ಷು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ.

ಕಾಸರಗೋಡು :ಡಾ. ವಾಮನ್ ರಾವ್ ಬೇಕಲ್ -ಸಂದ್ಯಾರಾಣಿ ಸಾರಥ್ಯದ ಕಾಸರಗೋಡು ಕನ್ನಡ ಭವನದ “ರಜತ ಸಂಭ್ರಮ “ಪ್ರಯುಕ್ತ ನಡೆಯುವ “ನಾಡು -ನುಡಿ ಸಂಭ್ರಮ “ಕಾರ್ಯಕ್ರಮದಲ್ಲಿ ಮಂಗಳೂರಿನ ಡಾ. ಕೆ. ವಿ. ದೇವಪ್ಪ ರೀಗೆ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ “ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ ಡಾ ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟುಕುಲವನ್ ಮಹಾ ಮಲರಾಯ ದೈವಸ್ಥಾನದ ತೈಯ್ಯಂಕೆಟ್ ಮಹೋತ್ಸವದ ಭಾಗವಾಗಿ ಭತ್ತದ ಕೃಷಿ ಕೊಯ್ಲು ಉತ್ಸವ

ಉಪ್ಪಳ : ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟುಕುಲವನ್ ಮಹಾ ಮಲರಾಯ ದೈವಸ್ಥಾನದಲ್ಲಿ 2026 ಏಪ್ರಿಲ್ ತಿಂಗಳ 9 ರಿಂದ 12 ರ ತನಕ ನಡೆಯಲಿರುವ ಶ್ರೀ ವಯನಾಟ್ಟು ಕುಲವನ್ ತೈಯ್ಯಂಕೆಟ್ ಮಹೋತ್ಸವದ ಪೂರ್ವಭಾವಿಯಾಗಿ ಕೂವಂ ಅಲಕ್ಕಲ್ ಕಾರ್ಯಕ್ರಮ 2026 ಮಾರ್ಚ್ ತಿಂಗಳ 25 ರಂದು ನಡೆಯಲಿದ್ದು ಅದಕ್ಕೆ ಬೇಕಾಗಿರುವ ಭತ್ತದ ಕೃಷಿಯನ್ನು ಕೆಲವು ತಿಂಗಳ ಹಿಂದೆ ನೆಟ್ಟು ತರವಾಡಿನ ಪಕ್ಕದಲ್ಲಿ ಇರುವ ಗದ್ದೆಯಲ್ಲಿ ಇಂದು ಆ ಕಯ್ಲಾನ್ನು ಕೊಯ್ಯುವ ಭತ್ತದ ಕೃಷಿ ಕೊಯ್ಲು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ…

Read More

ಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ಮಂಜೇಶ್ವರದಲ್ಲಿ ಜನಜೀವನ ಅಸ್ತವ್ಯಸ್ತ

ಮಂಜೇಶ್ವರ: ರಾಗಂ ಜಂಕ್ಷನ್‌ನಿಂದ ಸಿರಾಜುಲ್ ಹುದಾ ತನಕ ನಡೆಯಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿ ತೀವ್ರ ವಿಳಂಬವಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಸಕರ ನಿಧಿಯಿಂದ ಮಂಜೂರಾದ ಸುಮಾರು 97,000 ರೂ. ಅನುದಾನದಡಿ 1300 ಮೀಟರ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದರೂ, ಗುತ್ತಿಗೆ ವಹಿಸಿಕೊಂಡವರು ಕರಾರಿನ ಪ್ರಕಾರ ಅಗತ್ಯ ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ರಸ್ತೆಯನ್ನು ಅಗೆದು ಹಾಕಿ ಎರಡು ತಿಂಗಳುಗಳು ಕಳೆದಿದ್ದರೂ ಮುಂದಿನ ಹಂತದ ಕಾಮಗಾರಿ ಪ್ರಾರಂಭವಾಗದೇ ಇರುವುದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ….

Read More
error: Content is protected !!