ಕುಂಬಳೆಯಲ್ಲಿ ಉಸ್ತಾದ್‌ ನಾಪತ್ತೆ . ತನಿಖೆ ತೀವ್ರ

ಮಂಜೇಶ್ವರ : ಕುಂಬಳೆಯಲ್ಲಿ ಉಸ್ತಾದ್‌ ಮುಹಮ್ಮದ್ ಶಫೀಕ್ (32) ನಾಪತ್ತೆಯಾಗಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಬಂಬ್ರಾಣದ ಟುಂಬಿಯೋಡು ಹೌಸ್‌ನ ಅಬ್ದುಲ್ ರಶೀದ್ ಅವರ ಪುತ್ರ ಮುಹಮ್ಮದ್ ಶಫೀಕ್, ಡಿಸೆಂಬರ್ 21ರಂದು ರಾತ್ರಿ 8 ಗಂಟೆಗೆ ಬಂಬ್ರಾಣದ ಮಸೀದಿಗೆ ಹೋಗಲು ಮನೆಯಿಂದ ಹೊರಟಿದ್ದರು. ಆದರೆ ಅವರು ಮನೆಯ ಕಡೆಗೆ ಹಿಂತಿರುಗಿ ಬಾರದ ಬಗ್ಗೆ ಅವರ ಪತ್ನಿ ನಜ್ಜುನ್ನೀಸಾ ದೂರನ್ನು ಕೊಟ್ಟಿದ್ದಾರೆ. ಪತ್ನಿಯ ದೂರಿನ ಮೇರೆಗೆ, ಕುಂಬಳೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದಕ್ಕೂ…

Read More

ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದಲ್ಲಿ ವಾರ್ಷಿಕ ಶ್ರೀ ಮಲರಾಯ ಮತ್ತು ಗುಳಿಗ ನೇಮೋತ್ಸವ

ಪಾವೂರು:: ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದಲ್ಲಿ ವಾರ್ಷಿಕ ಶ್ರೀ ಮಲರಾಯ ಮತ್ತು ಗುಳಿಗ ನೇಮೋತ್ಸವವು ತಾರೀಕು 26 /12 /25 ರಂದು ಶುಕ್ರವಾರ ನಡೆಯಲಿದೆ .ಅಂದು ಬೆಳಿಗ್ಗೆ ಗಣ ಹೋಮ, ಶುದ್ಧ ಕಲಶ, ಮಹಾಪೂಜೆ ,ಅನ್ನ ಸಂತರ್ಪಣೆ ನಡೆದು ಮಧ್ಯಾಹ್ನ 2 ಗಂಟೆಗೆ ಶ್ರೀ ಮಲರಾಯ ನೇಮೋತ್ಸವವು ನಡೆಯಲಿದೆ. ನಂತರ ಸಂಜೆ ಐದು ಗಂಟೆಗೆ ಗುಳಿಗ ನೇಮೋತ್ಸವ ಆದನಂತರ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಸ್ಥಳೀಯ ಮಕ್ಕಳಿಂದ ನೃತ್ಯಾವಳಿ, ನಂತರ ಶ್ರೀ ಅಂಬಿಕಾ…

Read More

ಪತ್ನಿ ಮತ್ತು ಪುತ್ರಿಯ ಮೇಲೆ ಹಲ್ಲೆ – ಪತಿ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾಯತ್ನ ಪ್ರಕರಣ

ಮಂಜೇಶ್ವರ : ಪತ್ನಿ ಮತ್ತು ಪುತ್ರಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪರಿಸರದ ಎಡನಾಡು ಪೆರ್ಣೆ ಸೌಪರ್ಣಿಕಾ ನಿಲಯದ ಆಶಾ ಕುಮಾರಿ ಕೆ.ಎಸ್ (39), ಮಗಳು ನಕ್ಷಿತಾ (8) ಎಂಬಿವರನ್ನು ಹಲ್ಲೆಗೈದು ಗಾಯಗೊಳಿಸಿದ ದೂರಿನಂತೆ ಆಶಾ ಕುಮಾರಿಯ ಪತಿ ಕಣ್ಣೂರು ಚೆರುತ್ತಾಳಂ ಕಡನ್ನಪ್ಪಳ್ಳಿ ವಲಿಯಾಂಕೋಡ್ ಕುಲಾಪುರಂ ಕೂಲಿಯಾಡನ್ ವೀಟಿಲ್ ಸುರೇಶ್ (44) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಾಗಿದೆ. ಈ ತಿಂಗಳ 12ರಂದು…

Read More

ಪಯ್ಯನ್ನೂರು ತಾಲ್ಲೂಕಿನ ರಾಮಂತಳಿ ಗ್ರಾಮದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಪಯ್ಯನ್ನೂರು ತಾಲ್ಲೂಕಿನ ರಾಮಂತಳಿ ಗ್ರಾಮದಲ್ಲಿ ನಾಲ್ಕು ಮಂದಿಯನ್ನು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.ಕಲಾಧರನ್ (38) ಅವನ ತಾಯಿ ಉಷಾ (60), ಹಾಗೂ ಅವನ ಮಕ್ಕಳು ಹಿಮ (5) ಮತ್ತು ಕಣ್ಣನ್ (2) ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಯಾವುದೇ ಚಲನೆ ಕಾಣದಿದ್ದರಿಂದ, ಕಲಾಧರನ್ ಅವರ ತಂದೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರದ ಪರಿಶೀಲನೆಯಲ್ಲಿ ನಾಲ್ಕು ಮಂದಿಯ ಶವ ಪತ್ತೆಯಾಗಿವೆ. ಪೊಲೀಸರು, ಕಲಾಧರನ್ ಹಾಗೂ ಉಷಾ ನೇಣು ಬಿಗಿದು ಸಾವನ್ನಪ್ಪಿದ್ದು, ಮಕ್ಕಳಿಗೆ ವಿಷ ಕೊಟ್ಟ ನಂತರ…

Read More

ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ

ಮಂಜೇಶ್ವರ :–ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ ಹೊಸಂಗಡಿ ವ್ಯಪಾರಿ ಭವನದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆಯನ್ನು K. S. T. A. ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ. S. ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ವ್ಯಾಪಾರಿ ಯಾಕೋಪನ ಸಮಿತಿ ಅಧ್ಯಕ್ಷ ಬಶೀರ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ ವಿಶ್ವನಾಥ್ ಶೆಟ್ಟಿ ಕುತ್ತಾನಾಡಿ ಮಾತಾಡಿದರು. ಜೊತೆ…

Read More

ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆಯುರ್ವೇದ ಶಿಬಿರ

ಮಂಜೇಶ್ವರ: ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ, ಆದಿಕ್ಷೇತ್ರ ಶ್ರೀ ರಕೇಶ್ವರೀ ದೇವಸ್ಥಾನ ಹೊಸಂಗಡಿ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ) ಕೊಂಡೆವೂರು ಮತ್ತು ಒನ್‌ಸೈಟ್ ಎಸ್ಪಿಲೋರ್ ಲಕೋಟಿಕಾ ಫೌಂಡೇಶನ್ ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು ಡಾ. ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ)ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ, ಮಂಗಳೂರು ಇದರ ಸಹಯೋಗದಲ್ಲಿ…

Read More

ಮಂಜೇಶ್ವರ ಗ್ರಾಮ ಪಂಚಾಯತಿನ ನೂತನ ಆಡಳಿತ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಮಂಜೇಶ್ವರ ಗ್ರಾಮ ಪಂಚಾಯತಿನ ನೂತನ ಆಡಳಿತ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಭಾನುವಾರದಂದು ಮಂಜೇಶ್ವರದ ಗೋವಿಂದ ಪೈ ಗಿಳಿವಿಂಡುವಿನಲ್ಲಿ ಜರುಗಿತು. ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಪದವಿ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಆಡಳಿತದ ಜವಾಬ್ದಾರಿ ವಹಿಸಿಕೊಂಡರು. ಅದೇ ರೀತಿ ಮಂಗಲ್ಪಾಡಿ ಪಂಚಾಯತಿನಲ್ಲಿ ಅವಿರೋಧವಾಗಿ ಗೆದ್ದು ಬಂದ  ಯು ಡಿ  ಎಫ್ ಅಭ್ಯರ್ಥಿ ಶಮೀನಾ ಟೀಚರ್ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷತೆಯಾಗಿತ್ತು. ಅದೇ ರೀತಿ ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಮೂವರು ಮಹಿಳಾ ಸದಸ್ಯರುಗಳು ಆಂಗ್ಲ…

Read More

ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ “ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ವ್ಯಕ್ತಿ ಚಿತ್ರಣ ಕೃತಿ ಲೋಕಾರ್ಪಣೆ.

ಕಾಸರಗೋಡು : ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ವಾಮನ್ ರಾವ್ ಬೇಕಲ್ “ಎಂಬ ಕೃತಿ ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಎಚ್ ಆರ್ ಶಶಿಧರ್ ನಾಯ್ಕ್ ರೀಗೆ ವಿ. ರಾ. ಮಹಾಸಂಘ ಉಪಾಧ್ಯಕ್ಷರೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರೂ ಆದ ಡಾ. ವಾಮನ್ ರಾವ್ ಬೇಕಲ್ ನೀಡಿ ಶಶಿಧರ್ ನಾಯ್ಕ್ ಲೋಕಾರ್ಪಣೆ ಮಾಡಿದರು. ಈ ಕೃತಿಯನ್ನು ಡಾ. ಮೊಗಸಾಲೆಯವರ ಕಾಂತಾವರ ಕನ್ನಡ ಸಂಘವು “ನಾಡಿಗೆ ನಮಸ್ಕಾರ “ಎಂಬ ಪುಸ್ತಕ ಮಾಲೆಯಲ್ಲಿ ಸಾಹಿತಿ ವಿರಾಜ್…

Read More

ಶ್ರೀ ವಾಸುಕೀ ನಾಗರಾಜ ರಕ್ತೇಶ್ವರೀ ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತ್ಯುತ್ಸವ

ಪಾವೂರು: ಶ್ರೀ ವಾಸುಕೀ ನಾಗರಾಜ ರಕ್ತೇಶ್ವರೀ ಪರಿವಾರ ದೈವಗಳ ಸನ್ನಿದಿ ಪಾವೂರು ತಚ್ಛಿರೆಪದವಿನಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವವು ಇದೇ ಬರುವ ತಾರೀಕು 25 . 12 . 2025 ನೇ ಗುರುವಾರದಂದು ಬ್ರಹ್ಮ ಶ್ರೀ ವರ್ಕಾಡಿ ಹೊಸ ಮನೆ ರಾಜೇಶ ತಾಳಿತ್ತಾಯರ ನೇತೃತ್ವದಲ್ಲಿ ವಿವಿಧ ವೈಧಿಕ , ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು. ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಮಹಾ ಗಣಪತಿ ಹೋಮ , ಕಲಶ ಪೂಜೆ , ಪ್ರಧಾನ ಹೋಮ ,ಪಂಚಾಮೃತ ಅಭಿಷೇಕ…

Read More

ಸಿನಿಮಾ–ಟೂರಿಸಂ ಯೋಜನೆಗಳು ಕೇರಳದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಲ ತುಂಬುತ್ತವೆ: ಸಚಿವ ಪಿ.ಎ. ಮೊಹಮ್ಮದ್ ರಿಯಾಸ್

ಕೇರಳದಲ್ಲಿ ಸಿನಿಮಾ–ಟೂರಿಸಂ ಯೋಜನೆಗಳನ್ನು ಜಾರಿಗೊಳಿಸುವುದರಿಂದ ರಾಜ್ಯದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಕೇರಳದ ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಹೇಳಿದರು. 1995ರಲ್ಲಿ ಬಿಡುಗಡೆಯಾದ ಖ್ಯಾತ ಚಿತ್ರ ‘ಬಾಂಬೆ’ಯ ನಿರ್ದೇಶಕ ಮಣಿರತ್ನಂ, ನಾಯಕಿ ಮನೀಷಾ ಕೊಯ್ರಾಲಾ ಹಾಗೂ ಛಾಯಾಗ್ರಾಹಕ ರಾಜೀವ್ ಮೆನನ್ ಅವರೊಂದಿಗೆ ಬೇಕಲ್ ಕೋಟೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಸಚಿವರು ಈ ಮಾತುಗಳನ್ನು ಹೇಳಿದರು. ಸಿನಿಮಾ–ಟೂರಿಸಂ ಯೋಜನೆಯ ಮೂಲಕ ಹಳೆಯ ಚಿತ್ರಗಳ ಲೊಕೇಶನ್‌ಗಳನ್ನು ಸಾರ್ವಜನಿಕರಿಗೆ ಪರಿಚಯಿಸಿ, ಅದರಿಂದ ಪ್ರವಾಸೋದ್ಯಮದ…

Read More
error: Content is protected !!