ಲಯನ್ಸ್ ಕ್ಲಬ್ ಸೆಂಟೆನಿಯಲ್ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಸೆಂಟೆನಿಯಲ್‌ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಕದ್ರಿ ಪಾರ್ಕ್ ಸಮೀಪದ ಲಯನ್ಸ್ ಅಶೋಕ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಲಯನ್ ಅಮಲ್ ಮರಿಯಾ ಇಸಬೆಲ್ಲಾ ಕ್ವಾಡ್ರೋಸ್ (PMJF) ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಲಯನ್ ಸ್ವರೂಪ್ ಎನ್. ಶೆಟ್ಟಿ (PMJF) ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣವಚನ ಬೋಧಿಸಿ, ಐವರು ನೂತನ ಸದಸ್ಯರನ್ನು ಲಯನ್ಸ್ ಕುಟುಂಬಕ್ಕೆ ಸೇರ್ಪಡೆಗೊಳಿಸಿದರು. ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮುಂದೆಯೂ…

Read More

ನೀತಿನಗರ ಡ್ರೈನೇಜ್ ಸಮಸ್ಯೆ ಪರಿಹಾರಕ್ಕೆ ಕ್ರಮ; ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ

ಮಂಗಳೂರು : ನಗರದ ಶಕ್ತಿನಗರ ಪ್ರಮುಖ ರಸ್ತೆಯಿಂದ ರಾಜರಾಜೇಶ್ವರಿ ದೇವಸ್ಥಾನ ನೀತಿನಗರ ಬಳಿಯ ಡ್ರೈನೇಜ್ ಸಮಸ್ಯೆ ಕುರಿತು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು ಇಲ್ಲಿನ ಜನರ ಬಹುಕಾಲದ ಬೇಡಿಕೆ ಇದಾಗಿದ್ದು, ಈಗಾಗಲೇ ಇಲ್ಲಿ ನೆಲದಡಿ ಪೈಪ್ ಲೈನ್ ಇದ್ದ ಕಾರಣ ಡ್ರೈನೇಜ್ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಹಿಂದೆ ಈ ಬಗ್ಗೆ ಹಲವು ಸಭೆ ನಡೆಸಲಾಗಿದ್ದು ಸಮಸ್ಯೆಗೆ ಮುಕ್ತಿ ನೀಡಬೇಕೆಂಬುದು ಎಲ್ಲರ ಬೇಡಿಕೆಯಾಗಿದೆ. ಅದರಂತೆ ಸ್ಥಳೀಯರಿಗೆ…

Read More

ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ‘ನಾರದ ಪುರಸ್ಕಾರ’ ಪ್ರಶಸ್ತಿ

ಮಂಗಳೂರು: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ ಮಹರ್ಷಿ ನಾರದರ ಸಂಸ್ಮರಣೆಯಲ್ಲಿ ನೀಡಲಾಗುವ ‘ನಾರದ ಪುರಸ್ಕಾರ’ ಪ್ರಶಸ್ತಿಗೆ ‘ಹೊಸ ದಿಗಂತ ಪತ್ರಿಕೆ’ಯ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ ಅವರು ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಆ.4 ರಂದು ಸಂಜೆ 4 ಗಂಟೆಗೆ ಕಾರಣಗಿರಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಸಭಾ ಭವನದಲ್ಲಿ ನಡೆಯಲಿದೆ. ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ…

Read More

ಮಂಜೇಶ್ವರ ಮಾದಕವಸ್ತು ಬೇಟೆ: ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕರ್ನಾಟಕದಲ್ಲಿ ಬಂಧನ

ಮಂಜೇಶ್ವರ: ಭಾರಿ ಪ್ರಮಾಣದ ಎಂಡಿಎಂಎ ಮತ್ತು ಗಾಂಜಾವನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 9ನೇ ಆರೋಪಿಯನ್ನು ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದಾರೆ. ​ಕಾಸರಗೋಡು ತಳಂಗರೆ ಬಾಂಕೋಟ್‌ನ ಶಬೀಬಬಾಗ್ ಹೌಸ್ ನಿವಾಸಿ ಮೊಹಮ್ಮದ್ ಲಿಸಾನ್ ಅಲಿ (32) ಬಂಧಿತ ಆರೋಪಿ. ಕಾಸರಗೋಡು ಎಎಸ್‌ಪಿ ಅಶೋಕ್ ಅಚ್ಯುತ್ ಅವರ ಮೇಲ್ವಿಚಾರಣೆಯಲ್ಲಿ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೇಶ್ ನೇತೃತ್ವದ ತಂಡವು ಕರ್ನಾಟಕದ ಮಡಿಕೇರಿ ಕುಶಾಲನಗರದಲ್ಲಿರುವ ತಲೆಮರೆಸಿಕೊಂಡಿದ್ದ ಸ್ಥಳದಲ್ಲೇ ಆರೋಪಿಯನ್ನು ಬಂಧಿಸಿದೆ. 2024 ಸೆಪ್ಟೆಂಬರ್ 20ರಂದು ಸಂಜೆ 3.45ಕ್ಕೆ ಈ ಘಟನೆ ನಡೆದಿತ್ತು.

Read More

ಉಪ್ಪಳ ಮುಸೋಡಿ ಕಡಪ್ಪುರದಲ್ಲಿ ಅಜ್ಞಾತ ವ್ಯಕ್ತಿಯ ಶವ ಪತ್ತೆ

ಮಂಜೇಶ್ವರ: ಉಪ್ಪಳ ಸಮೀಪದ ಮುಸೋಡಿ ಕಡಪ್ಪುರ ಪ್ರದೇಶದಲ್ಲಿ ಅಜ್ಞಾತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಸ್ಥಳೀಯರು ಶವವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆ ಹಾಗೂ ಗುರುತಿನ ಪತ್ತೆಗಾಗಿ ಉಪ್ಪಳ ಮಂಗಲ್ಪಾಡಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ಗುರುತು ಹಾಗೂ ಸಾವಿನ ನಿಖರ ಕಾರಣ ತಿಳಿದುಬರಬೇಕಿದ್ದು, ಈ ಕುರಿತು ಪೊಲೀಸರು…

Read More

ಹವಾಮಾನ ವೈಪರೀತ್ಯ ಮತ್ತು ಕೃಷಿ: ಹೊಸಂಗಡಿಯಲ್ಲಿ ವಿಚಾರಗೋಷ್ಠಿ ಹಾಗೂ ಕೃಷಿಕರೊಂದಿಗೆ ಸಂವಾದ

ಮಂಜೇಶ್ವರ: ಕೇರಳ ರೈತಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನದ ಅಂಗವಾಗಿ ಹೊಸಂಗಡಿಯಲ್ಲಿ “ಹವಾಮಾನ ವೈಪರೀತ್ಯ ಮತ್ತು ಕೃಷಿ ವಲಯ” ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಹಾಗೂ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ರೈತಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೃಷಿ ವಿಜ್ಞಾನ ಕೇಂದ್ರದ ಸಂಶೋಧಕ ಡಾ. ವಿಕ್ರಮ್ ನಾಯಕ್ ವಿಷಯ ಮಂಡಿಸಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು. ಏರಿಯಾ ಸಮಿತಿ ಅಧ್ಯಕ್ಷ ಬಿ.ಎಂ. ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯೆ…

Read More

ಗಲ್ಫ್ ಉದ್ಯೋಗಾಕಾಂಕ್ಷಿಗಳಿಗೆ ಮಂಗಳೂರಿನಲ್ಲಿ ವಿಶೇಷ ಸರ್ಟಿಫಿಕೇಟ್ ಕೋರ್ಸ್‌: KSOU ಚಿಂತನೆ

ತುಳು, ಕೊಂಕಣಿ, ಬ್ಯಾರಿ, ಕೊಡವ ಸೇರಿದಂತೆ ಭಾಷಾ ಕೋರ್ಸ್‌ಗಳಿಗೂ ಅವಕಾಶ: ಕುಲಪತಿ ಪ್ರೊ. ಎ.ಪಿ. ಜ್ಞಾನಪ್ರಕಾಶ್ ಮಂಗಳೂರು, ಜು. 31: ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಅಗತ್ಯ ಸರ್ಟಿಫಿಕೇಟ್ ಕೋರ್ಸ್‌ಗಳು ಹಾಗೂ ಗಲ್ಫ್ ಭಾಷೆಗಳ ಕಲಿಕಾ ಕೋರ್ಸ್‌ಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಕುಲಪತಿ ಪ್ರೊ. ಎ.ಪಿ. ಜ್ಞಾನಪ್ರಕಾಶ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಪ್ರಾದೇಶಿಕ ಭಾಷೆಗಳಾದ ತುಳು,…

Read More

ತಿರುವನಂತಪುರಂ ಪಾಲಿಕೆ ಮಹತ್ವದ ಕೌನ್ಸಿಲ್ ಸಭೆ ಆರಂಭ: ಕಾಪಾ ಪ್ರಕರಣದ ಆರೋಪಿ ಸುಗತನ್ ರಜೆ ಅರ್ಜಿ ವಿಚಾರಣೆಗೆ, ಸಭೆಯಲ್ಲಿ ಗದ್ದಲದ ಸಾಧ್ಯತೆ

ತಿರುವನಂತಪುರಂ ನಗರಸಭೆಯ ಮಹತ್ವದ ಕೌನ್ಸಿಲ್ ಸಭೆ ಆರಂಭವಾಗಿದೆ. ಕೇರಳದಲ್ಲಿ ಮೊದಲ ಬಾರಿಗೆ ಜನಗಣತಿ (ಸೆನ್ಸಸ್) ಪೂರ್ಣಗೊಳಿಸಿದ ಕಾರ್ಪೊರೇಷನ್ ಎಂಬ ಹೆಗ್ಗಳಿಕೆಗೆ ತಿರುವನಂತಪುರಂ ಕಾರ್ಪೊರೇಷನ್ ಪಾತ್ರವಾಗಿದೆ. ಅತ್ಯಂತ ವೇಗವಾಗಿ ಸೆನ್ಸಸ್ ಕಾರ್ಯಗಳನ್ನು ಪೂರ್ಣಗೊಳಿಸಿದ ಸಿಬ್ಬಂದಿಯನ್ನು ನಗರಸಭೆ ಗೌರವಿಸಿದೆ. ಕೌನ್ಸಿಲರ್‌ಗಳು ಕುಳಿತುಕೊಳ್ಳುವ ಸಭಾಂಗಣಕ್ಕೆ ಮಾಧ್ಯಮ ಪ್ರತಿನಿಧಿಗಳು ಪ್ರವೇಶಿಸಬಾರದು ಎಂದು ಮೇಯರ್ ಮನವಿ ಮಾಡಿದ್ದಾರೆ. ಇಂದಿನ ಸಭೆ ಗದ್ದಲಕ್ಕೆ ತಿರುಗುವ ಸಾಧ್ಯತೆ ಇದೆ. ಕಾಪಾ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಗತನ್ ಸಲ್ಲಿಸಿರುವ ರಜೆ ಅರ್ಜಿ ಇಂದಿನ ಕೌನ್ಸಿಲ್ ಸಭೆಯ ಅಜೆಂಡಾದಲ್ಲಿದೆ. ಮೇಯರ್ ಸಭೆಯಲ್ಲಿ…

Read More

ಉಡುಪಿ ರಾಜಕೀಯ ಸಂಘರ್ಷ: ಪ್ರತಿಭಟನೆ ಹೆಸರಿನಲ್ಲಿ ವಿಕೃತಿ ಪ್ರದರ್ಶನ ಆರೋಪ

ಯಶ್‌ಪಾಲ್ ಸುವರ್ಣ ಹಾಗೂ ಆರ್‌ಎಸ್‌ಎಸ್‌ ಪ್ರತಿಕೃತಿಗೆ ಬೆಂಕಿ ಹಚ್ಚಿದ ಘಟನೆ ಖಂಡನೀಯ: ರಮಿತಾ ಸೂರ್ಯವಂಶಿ ಉಡುಪಿ, ಜು. 31: ಕರಾವಳಿ ಜಿಲ್ಲೆಯಲ್ಲಿ ರಾಜಕೀಯ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದ್ದು, ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಧರಣಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಆರೋಪಿಸಿದ್ದಾರೆ. ಪ್ರತಿಭಟನೆಯ ನೆಪದಲ್ಲಿ ವಿಪಕ್ಷಗಳು ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಸ್ಥಳೀಯ ಶಾಸಕ ಯಶ್‌ಪಾಲ್ ಸುವರ್ಣ ಅವರ ಛಾಯಾಚಿತ್ರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ…

Read More

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ

ಪೋಕ್ಸೋ, ಬಿಎನ್‌ಎಸ್ ಹಾಗೂ ಐಟಿ ಕಾಯ್ದೆಯಡಿ ಒಟ್ಟು ₹65 ಸಾವಿರ ದಂಡ ಮಂಗಳೂರು, ಜು. 31: ಅಪ್ರಾಪ್ತ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ ನಡೆಸಿ, ಆಕೆಯ ನಗ್ನ ಚಿತ್ರಗಳನ್ನು ಸಂಗ್ರಹಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-2) 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹65 ಸಾವಿರ ದಂಡ ವಿಧಿಸಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 130/2025ರ ಪ್ರಕರಣದ ಆರೋಪಿ ಸೋನು ಮ್ಯಾಕ್ಲಿನ್…

Read More
error: Content is protected !!