ಉಡುಪಿಯಲ್ಲಿ ಯಶ್‌ಪಾಲ್ ಸುವರ್ಣ ಪ್ರತಿಕೃತಿ ದಹಿಸಿದ ಕಾಂಗ್ರೆಸ್: ರಾವಣನ ಕಟೌಟ್ ಮೂಲಕ ಯಶ್‌ಪಾಲ್ ವಿರುದ್ಧ ಕಾಂಗ್ರೆಸ್ ಆಕ್ರೋಶ

ಉಡುಪಿ, ಜು. 31: ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್‌ಪಾಲ್ ಸುವರ್ಣ ನೀಡಿದ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಶುಕ್ರವಾರ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ವೇಳೆ ಶಾಸಕ ಯಶ್‌ಪಾಲ್ ಸುವರ್ಣರನ್ನು ರಾವಣನ ಮಾದರಿಯಲ್ಲಿ 10 ತಲೆ ಹಾಗೂ ಎಂಟು ಕೈಗಳೊಂದಿಗೆ ಬಿಂಬಿಸಿದ ಕಟೌಟ್ ಗಮನ ಸೆಳೆಯಿತು. ಕಟೌಟ್‌ನಲ್ಲಿ ಚಡ್ಡಿ ಧರಿಸಿರುವಂತೆ ಚಿತ್ರಿಸಲಾಗಿದ್ದು, ವಿವಿಧ ಕೈಗಳಲ್ಲಿ ಮದ್ಯದ ಬಾಟಲಿ, ಐಸ್‌ಕ್ಯಾಂಡಿ, ಮೊಬೈಲ್ ಫೋನ್, ಟವಲ್, ಜೋಕರ್ ಇಸ್ಪೀಟ್, ಮೆಲೋಡಿ ಚಾಕೊಲೇಟ್ ಹಾಗೂ ಚೊಂಬುಗಳನ್ನು ಹಿಡಿದಿರುವಂತೆ ಬಿಂಬಿಸಲಾಗಿತ್ತು. ಬಳಿಕ…

Read More

ಬೀದಿಬದಿ ವ್ಯಾಪಾರಿಗಳ ಸಮಸ್ಯೆಗೆ ಶೀಘ್ರ ಪರಿಹಾರ: ನಿಯಮ ಪರಿಶೀಲಿಸಿ ಸೂಕ್ತ ಕ್ರಮ – ಆಯುಕ್ತ ರಾಹುಲ್ ರತ್ನಂ ಪಾಂಡೆ

ಮಂಗಳೂರು, ಜು.30: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಗುರುವಾರ ನಗರದ ಪುರಭವನದ ಬಳಿಯ ಸಂಡೆ ಬಜಾರ್ ವ್ಯಾಪಾರ ಕೇಂದ್ರ ಹಾಗೂ ಬೀದಿಬದಿ ವ್ಯಾಪಾರ ವಲಯಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಪರಿಶೀಲಿಸಿ, ಮುಂದಿನ ವಾರ ಸಭೆ ನಡೆಸಿ ನಗರದ ಎಲ್ಲಾ ಬೀದಿಬದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇತ್ತೀಚೆಗೆ…

Read More

ಇಲಿ ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವು

ಕಾಸರಗೋಡು, ಜು. 31: ಇಲಿ ವಿಷ ಸೇವಿಸಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ವೆಳ್ಳರಿಕ್ಕುಂಡು ಸಮೀಪದ ನಾಟ್ಟಂಕಲ್ಲಿನಲ್ಲಿ ನಡೆದಿದೆ. ಮೃತರನ್ನು ನಾಟ್ಟಂಕಲ್ಲಿನ ನಿವಾಸಿ ದೀಪಾ (23) ಎಂದು ಗುರುತಿಸಲಾಗಿದೆ. ಐದು ದಿನಗಳ ಹಿಂದೆ ಪತಿಯ ಮನೆಯಲ್ಲಿ ದೀಪಾ ಇಲಿ ವಿಷ ಸೇವಿಸಿದ್ದು, ತಕ್ಷಣ ಅವರನ್ನು ಪರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೊಜ್ಹಿಕ್ಕೋಡ್ ಸರ್ಕಾರಿ…

Read More

ಉಡುಪಿ: ರಾಹುಲ್ ಗಾಂಧಿ ವಿರುದ್ಧದ ದ್ವೇಷ ಭಾಷಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ಶಾಸಕ ಯಶ್ ಪಾಲ್ ವಿರುದ್ಧ ಅಕ್ರೋಶ

ಉಡುಪಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಂಶ ದ್ವಂಸ ಮಾಡುವ ಜೀವ ಬೆದರಿಕೆ ಒಡ್ಡಿ, ನೀಟ್ ವಿದ್ಯಾರ್ಥಿ ಚಳವಳಿಯನ್ನು ಹೀನಾಯವಾಗಿ ನಿಂದಿಸಿ ದ್ವೇಷ ಭಾಷಣ ಮಾಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣರ ಚಾರಿತ್ರ್ಯ ಹೀನ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ನಗರದ ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಸಹ್ರಾಸರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದು ಶಾಸಕ ಯಶ್ ಪಾಸ್ವರ್ಡ್ ವಿರುದ್ಧ ತೀವ್ರ ಆಕ್ರೋಶ ಘೋಷಣೆಗಳನ್ನು…

Read More

ಗುರುಭಕ್ತಿಯೊಂದಿಗೆ ಗುರು ಪೂರ್ಣಿಮಾ ಆಚರಣೆ”ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ವಿಶೇಷ ಕಾರ್ಯಕ್ರಮ

ಬದಿಯಡ್ಕ, ಜುಲೈ 30: ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಗುರು ಪೂರ್ಣಿಮಾ ದಿನವನ್ನು ಭಕ್ತಿಭಾವ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿ ರಶೀಕ್ ಅವರು ಗುರು ಪೂರ್ಣಿಮೆಯ ಮಹತ್ವ ಹಾಗೂ ಜೀವನದಲ್ಲಿ ಗುರುವಿನ ಪಾತ್ರದ ಕುರಿತು ವಿವರಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಟ್ಟಾಗಿ ಗುರು ಸ್ತೋತ್ರ ಮತ್ತು ಭಜನೆಗಳನ್ನು ಭಕ್ತಿಭಾವದಿಂದ ಹಾಡಿದರು. ಗುರುಗಳಿಗೆ ಆರತಿ ಬೆಳಗಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಗುರುವಿನ ಮಹತ್ವ ಮತ್ತು ಸಂದೇಶವನ್ನು ಸಾರುವ ಮನಮೋಹಕ ನೃತ್ಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು….

Read More

ಪತ್ನಿ, 7 ತಿಂಗಳ ಮಗಳ ಬರ್ಬರ ಹತ್ಯೆ; ಪತಿಯಿಂದಲೇ ಕೃತ್ಯ ಎಂಬ ಆರೋಪ

ಬಳ್ಳಾರಿ, ಜು.31: ಕೌಟುಂಬಿಕ ಕಲಹದ ಹಿನ್ನೆಲೆ ಬಳ್ಳಾರಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪತಿಯೇ ಪತ್ನಿ ಹಾಗೂ ಏಳು ತಿಂಗಳ ಹೆಣ್ಣು ಮಗುವನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಅಂದ್ರಾಳ್ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ರಾಜೇಶ್ವರಿ (26) ಹಾಗೂ ಅವರ ಏಳು ತಿಂಗಳ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ರಾಜೇಶ್ವರಿ ಅವರ ಪತಿ ಹೊನ್ನೂರುಸ್ವಾಮಿ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಕೌಟುಂಬಿಕ ಕಲಹವೇ ಈ ದ್ವಿಹತ್ಯೆಗೆ ಕಾರಣವಾಗಿರಬಹುದು ಎಂದು…

Read More

ಜ್ಯೋತಿಷಿ ಅನಿಲ್ ಪಂಡಿತ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಬಂಟ್ವಾಳ ಠಾಣೆಗೆ ದೂರು

ಬಂಟ್ವಾಳ: ಬ್ರಹ್ಮರ ಕೂಡ್ಲು ವಿನ ಪ್ರಖ್ಯಾತ ಜ್ಯೋತಿಷರಾದ ಅನಿಲ್ ಪಂಡಿತ್ ಅವರ ವಿರುದ್ಧ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳು ಹಾಗೂ ಅಸಭ್ಯ ಪದಗಳನ್ನು ಬಳಸಿ ತೇಜೋವಧೆ ನಡೆಸುತ್ತಿರುವುದಾಗಿ ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.ದೂರು ಸಲ್ಲಿಸುವ ಸಂದರ್ಭದಲ್ಲಿ ಹಲವಾರು ಸಂಘಮಿತ್ರರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದು, ಇಂತಹ ಅವಹೇಳನಕಾರಿ ಕೃತ್ಯಗಳನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು…

Read More

ಕುಂದಾಪುರದಲ್ಲಿ ಉದ್ಯಮಿ ಗುಂಡಿಕ್ಕಿ ಹತ್ಯೆ: ಹಣಕಾಸಿನ ವ್ಯವಹಾರವೇ ಕಾರಣ?

ಆರೋಪಿ ಪತ್ತೆಗಾಗಿ ಮೂರು ವಿಶೇಷ ತಂಡ ರಚನೆ ಉಡುಪಿ: ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರು ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರಗಳಲ್ಲಿನ ಮನಸ್ತಾಪವೇ ಪ್ರಮುಖ ಕಾರಣ ಎಂಬುದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಜುಲೈ 30ರಂದು ರಾತ್ರಿ ಸುಮಾರು 11.45ಕ್ಕೆ ಆರೋಪಿ ಡೆರಿಕ್ ಕ್ರಾಸ್ತಾ ಅವರು ಐವನ್ ಅವರಿಗೆ ಕರೆ ಮಾಡಿ ಹಣಕಾಸಿನ ವ್ಯವಹಾರದ ಕುರಿತು ಮಾತುಕತೆ…

Read More

ಕೊಜ್ಹಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹಶೀಶ್ ಎಣ್ಣೆ ಜಪ್ತಿ; ತೆಂಗಿನೆಣ್ಣೆ ಬಾಟಲಿಯಲ್ಲಿ ಅಡಗಿಸಿದ್ದ 56.59 ಗ್ರಾಂ ಮಾದಕ ವಸ್ತು ವಶ

ಕೊಜ್ಹಿಕ್ಕೋಡ್: ಕೊಜ್ಹಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಸೂತಿ ವಾರ್ಡ್‌ನಲ್ಲಿ ರೋಗಿಯೊಂದಿಗೆ ಸಹಾಯಕರಾಗಿ ಬಂದಿದ್ದ ಮಹಿಳೆಯೊಬ್ಬಳಿಂದ ಪೊಲೀಸರು 56.59 ಗ್ರಾಂ ಹಶೀಶ್ ಎಣ್ಣೆ (Hashish Oil) ವಶಪಡಿಸಿಕೊಂಡಿದ್ದಾರೆ. ವಯನಾಡು ಮೂಲದವರಾಗಿದ್ದು, ಪ್ರಸ್ತುತ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಅಶ್ವತಿ (32) ಅವರನ್ನು 2026ರ ಜುಲೈ 30ರ ಗುರುವಾರ ಬೆಳಿಗ್ಗೆ ಮೆಡಿಕಲ್ ಕಾಲೇಜು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಗಳಂತಹ ಭದ್ರತಾ ಪ್ರದೇಶಗಳನ್ನು ಕೇಂದ್ರವಾಗಿಸಿಕೊಂಡು ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ತಪಾಸಣೆ ಕಠಿಣಗೊಳಿಸಲಾಗಿತ್ತು. ಈ ವೇಳೆ ಈ ಪ್ರಕರಣ ಬೆಳಕಿಗೆ…

Read More

ಕೆಎಂಸಿ ಅತ್ತಾವರದಲ್ಲಿ ಆಗಸ್ಟ್ 1ರಿಂದ ಸಮಗ್ರ ಬೊಜ್ಜು ಮತ್ತು ಮೆಟಬಾಲಿಕ್ ಕ್ಲಿನಿಕ್: ಬಹು-ವಿಭಾಗೀಯ ಪರಿಣಿತರ ಸೇವೆ ಒಂದೇ ಸೂರಿನಡಿ; ಬೊಜ್ಜು ಚಿಕಿತ್ಸೆಗೆ ಸಮಗ್ರ ಆರೈಕೆ

ಮಂಗಳೂರು, ಜು. 31: ಕರಾವಳಿ ಭಾಗದಲ್ಲಿ ಬೊಜ್ಜು (ಅತಿಯಾದ ತೂಕ) ಹಾಗೂ ಮೆಟಬಾಲಿಕ್ ಅಸ್ವಸ್ಥತೆಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರಿನ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ‘ಸಮಗ್ರ ಬೊಜ್ಜು ಮತ್ತು ಮೆಟಬಾಲಿಕ್ ಕ್ಲಿನಿಕ್’ ಅನ್ನು ಆಗಸ್ಟ್ 1ರಿಂದ ಆರಂಭಿಸಲಾಗುತ್ತಿದೆ ಎಂದು ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಂಗಳೂರಿನ ಡೀನ್ ಡಾ. ಉನ್ನಿಕೃಷ್ಣನ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ನಿಖರ ರೋಗನಿರ್ಣಯ ಹಾಗೂ ಸಮಗ್ರ…

Read More
error: Content is protected !!