ಯುಡಿಎಫ್ ಸರ್ಕಾರ ಸ್ಥಳೀಯಡಳಿತ ಸಂಸ್ಥೆಗಳ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ಎಲ್‌ಡಿಎಫ್‌ನಿಂದ ಪೈವಳಿಕೆ ಗ್ರಾಮ ಪಂಚಾಯತ್‌ಗೆ ಪ್ರತಿಭಟನಾ ಮೆರವಣಿಗೆ
ಪೈವಳಿಕೆ : ಯುಡಿಎಫ್ ಸರ್ಕಾರ ಸ್ಥಸ್ಥಳೀಯಡಳಿತ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ಎಲ್‌ಡಿಎಫ್ ನೇತೃತ್ವದಲ್ಲಿ ಪೈವಳಿಗೆ ಗ್ರಾಮ ಪಂಚಾಯತ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪೈವಳಿಗೆ ಗ್ರಾಮ ಕಚೇರಿ (ವಿಲೇಜ್ ಆಫೀಸ್) ಆವರಣದಿಂದ ಆರಂಭವಾದ ಮೆರವಣಿಗೆ ಪಂಚಾಯತ್ ಕಚೇರಿ ಆವರಣದಲ್ಲಿ ಸಮಾಪ್ತಿಯಾಯಿತು. ಕಾರ್ಯಕ್ರಮವನ್ನು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಸಿ.ಎ. ಸುಬೈರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚಾಯತ್‌ಗಳ ಅನುದಾನವನ್ನು ಕಡಿತಗೊಳಿಸುವ ಮೂಲಕ ಎಲ್‌ಡಿಎಫ್ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳನ್ನು ಹಾಳುಮಾಡಲು ಯುಡಿಎಫ್…
