ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನ: 10 ಪವನ್ ಚಿನ್ನ ದೋಚಿದ ಕಳ್ಳರು

​ಮಂಜೇಶ್ವರ: ಕುಟುಂಬದವರು ಮಸೀದಿಗೆ ತೆರಳಿದ್ದ ಒಂದು ಗಂಟೆಯ ಅಂತರದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು 10 ಪವನ್ ಚಿನ್ನಾಭರಣಗಳನ್ನು ದೋಚಿರುವ ಘಟನೆ ಪೈವಳಿಕೆ ಪಂಚಾಯತ್‌ನ ಕೈಯಾರಿನಲ್ಲಿ ನಡೆದಿದೆ.​ಪಾಲಕ್ಕಾಡ್ ಮೂಲದ ಹೋಟೆಲ್ ಉದ್ಯಮಿ ಯೂಸುಫ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಭಾನುವಾರ ರಾತ್ರಿ ಯೂಸುಫ್ ಅವರ ಪತ್ನಿ ಮೈಮೂನಾ ಮತ್ತು ಮಕ್ಕಳು ಸ್ಥಳೀಯ ಕೈಯಾರ್ ಮಸೀದಿಯಲ್ಲಿ ನಡೆಯುತ್ತಿದ್ದ ‘ಸ್ವಲಾತ್’ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ಎಂಟೂವರೆ ಗಂಟೆ ಸುಮಾರಿಗೆ ಮನೆಗೆ ವಾಪಸಾದಾಗ, ಮನೆಯ ಒಳಭಾಗದಲ್ಲಿ ಅಸ್ತವ್ಯಸ್ತವಾಗಿರುವುದನ್ನು ಕಂಡು…

Read More

ಕಾಸರಗೋಡು ಕಡಲತೀರದಲ್ಲಿ ತಲೆಯಿಲ್ಲದ ಪುರುಷನ ಶವ ಪತ್ತೆ: ಸಾವಿನ ಸುತ್ತ ನಿಗೂಢತೆ

ಕಾಸರಗೋಡು: ಜಿಲ್ಲೆಯ ಕಡಲತೀರದಲ್ಲಿ ತಲೆಯಿಲ್ಲದ ಸ್ಥಿತಿಯಲ್ಲಿ ಪುರುಷನೊಬ್ಬನ ಮೃತದೇಹ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತದೇಹವು ಸಂಪೂರ್ಣ ವಿರೂಪಗೊಂಡಿದ್ದು, ಮಾಂಸ ಕಳಚಿ ಮೂಳೆಗಳು ಕಾಣಿಸುವಷ್ಟು ಹದಗೆಟ್ಟಿರುವುದರಿಂದ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. ಶನಿವಾರ ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಟೌನ್ ಪೊಲೀಸರು ಮಹಜರು ನಡೆಸಿ, ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ, ಮೃತದೇಹಕ್ಕೆ ಸುಮಾರು ಒಂದೂವರೆ ತಿಂಗಳಷ್ಟು ಹಳೆಯದಾಗಿರಬಹುದು. ಮೂರು ದಿನಗಳೊಳಗೆ ಮೃತನ…

Read More

ಟ್ಯೂಷನ್‌ಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ತಳ್ಳಿ ಗಾಯ: ಕೈ ಮೂಳೆ ಮುರಿದು, ಮಹಿಳೆ ವಿರುದ್ಧ ಜಾಮೀನು ರಹಿತ ಪ್ರಕರಣ

ಮಂಜೇಶ್ವರ: ಕುಂಬಳೆಯಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಟ್ಯೂಷನ್‌ಗೆ ತೆರಳುತ್ತಿದ್ದ ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಮಹಿಳೆಯೊಬ್ಬರು ತಳ್ಳಿದ ಪರಿಣಾಮ ಬಾಲಕಿಯ ಬಲಗೈ ಮೂಳೆ ಮುರಿದಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಕುಂಬಳೆ ಪೊಲೀಸರು ಆರೋಪಿತ ಮಹಿಳೆ ವಿರುದ್ಧ ಜಾಮೀನು ರಹಿತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ. ಶುಕ್ರವಾರ ಸಂಜೆ ಶಾಲೆ ಮುಗಿಸಿ ಕಣಿಪುರ ದೇವಸ್ಥಾನದ ಸಮೀಪವಿರುವ ಶಿಕ್ಷಕಿಯ ಮನೆಗೆ ಟ್ಯೂಷನ್‌ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದಾರಿಯಲ್ಲಿ ಬಾಲಕಿಯನ್ನು ತಡೆದ ಮಹಿಳೆ, “ನೀವು…

Read More

ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಕ್ಕು ಸಂರಕ್ಷಣೆಗೆ ಆಗ್ರಹಿಸಿ ಕೇರಳ ಶಿಕ್ಷಣ ಸಚಿವರಿಗೆ ಮನವಿ

ಕಾಸರಗೋಡು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಶೈಕ್ಷಣಿಕ ಹಿತಾಸಕ್ತಿಯನ್ನು ರಕ್ಷಿಸುವಂತೆ ಆಗ್ರಹಿಸಿ ರಾಜ್ಯ ಶಿಕ್ಷಣ ಸಚಿವರು ಹಾಗೂ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿಯವರನ್ನು ಭೇಟಿ ಮಾಡಿತು. ​ನಿಯೋಗವು ‘ಮಲಯಾಳಂ ಭಾಷಾ ಅಧಿನಿಯಮ 2025’ರ ಕಲಂ 6(1)ಕ್ಕೆ ತಿದ್ದುಪಡಿ ತರುವಂತೆ ಬಲವಾಗಿ ಪ್ರತಿಪಾದಿಸಿತು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯವಾಗಿದ್ದರೂ, ಭಾಷಾ ಅಲ್ಪಸಂಖ್ಯಾತರಿಗೆ ಈ ನಿಬಂಧನೆಯಿಂದ ವಿನಾಯಿತಿ ನೀಡುವ ಸ್ಪಷ್ಟ ತಿದ್ದುಪಡಿಯ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟಿತು….

Read More

ವೆನ್‌ಲಾಕ್‌ಗೆ ರೋಗಿ ಕಳುಹಿಸುವ ಮುನ್ನ ಐಸಿಯು ಬೆಡ್ ಲಭ್ಯತೆ ಖಚಿತಪಡಿಸಿಕೊಳ್ಳಿ : ಡಾ. ಶಿವಪ್ರಕಾಶ್

ಮಂಗಳೂರು:ವೆನ್‌ಲಾಕ್ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಶಿಫಾರಸು ಮಾಡುವ ಮೊದಲು ಐಸಿಯು ಬೆಡ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಪ್ರಕಾಶ್ ಮನವಿ ಮಾಡಿದರು. ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ವೆಬ್‌ಸೈಟ್‌ನಲ್ಲೂ ಬೆಡ್‌ಗಳ ಲಭ್ಯತೆ ಮಾಹಿತಿ ಪ್ರಕಟಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್‌ಲಾಕ್ ಆಸ್ಪತ್ರೆಗೆ ಕೇರಳ ಸೇರಿದಂತೆ 31 ಜಿಲ್ಲೆಗಳಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ…

Read More

ನಿವೃತ್ತ ಶಿಕ್ಷಕ ಗೋಪಾಲ ಮಾಸ್ಟರ್ ನಿಧನ; ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ

ಬಂಟ್ವಾಳ: ಉಳ್ಳಾಲ ತಾಲೂಕು ಇರಾ ಕುಂಡಾವು ನಿವಾಸಿ ನಿವೃತ್ತ ಶಿಕ್ಷಕ ಗೋಪಾಲ ಮಾಸ್ಟರ್ (77) ಅವರು ಜು.10 ರಂದು ನಿಧನ ಹೊಂದಿದರು.ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. 1968 ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಸುಳ್ಯ, ನರಿಂಗಾನ, ಇರಾ, ಸುರಿಬೈಲ್, ಮುದುಂಗಾರುಕಟ್ಟೆ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಶಾಲಾ ಮುಖ್ಯೋಪಧ್ಯಾಯರಾಗಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿಗಾಗಿ ಅವರು ವಿಶೇಷವಾಗಿ ಶ್ರಮಿಸಿದ್ದರು. ಶಿಸ್ತು ಹಾಗೂ…

Read More

ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ ! ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ

ಉಡುಪಿ: ರಾಜ್ಯ ಸರ್ಕಾರ ರಚಿಸಿರುವ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಕುರಿತು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.ಉಡುಪಿಯಲ್ಲಿ ಮಾತನಾಡಿದ ಅವರು, “ಎಸ್‌ಎಎಫ್ ವಿಶೇಷ ಕಾರ್ಯಪಡೆ ಯಾಕೆ? ಈ ವಿಶೇಷ ಪೊಲೀಸ್ ಕಾರ್ಯಪಡೆಗೆ ಕಾನೂನಿನಲ್ಲಿ ಯಾವ ಮಾನ್ಯತೆ ಇದೆ?” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಕಳೆದ ವರ್ಷದ ಜೂನ್ ತಿಂಗಳಲ್ಲಿ ಸರ್ಕಾರ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಅನ್ನು ರಚಿಸಿತ್ತು. ನಕ್ಸಲ್ ನಿಗ್ರಹಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಎಎನ್‌ಎಫ್ (Anti Naxal Force) ಅಗತ್ಯವಿಲ್ಲ…

Read More

ಡಾ. ಶಾಂತಾ ಪುತ್ತೂರು ಇವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026

ಕಾಸರಗೋಡು :ಪುತ್ತೂರಿನ ಬಹುಮುಖ ಪ್ರತಿಭೆ, ಶಿಕ್ಷಕಿ, ಸಾಹಿತಿ, ಸಂಘಟಕಿ ಡಾ. ಶಾಂತಾ ಪುತ್ತೂರು ಅವರಿಗೆ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ನೀಡುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 ಪ್ರದಾನ ಮಾಡಲಾಗುವುದು. ಇದೇ ಜು.26ರಂದು ಕಾಸರಗೋಡಿನ ಕನ್ನಡ ಭವನದ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ ಐ ಎ ಎಸ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದಲ್ಲಿ ಈ ಗೌರವ…

Read More

ಮಧೂರು ಕ್ಷೇತ್ರಕ್ಕೆ ಅಪಾರ ನಷ್ಟ: ಪಾರಂಪರ್ಯ ಅರ್ಚಕ ವೇಣುಗೋಪಾಲ ಕಲ್ಲೂರಾಯ ನಿಧನ

ಮಧೂರು ಮೇಲಿನ ಮನೆ ನಿವಾಸಿಯಾಗಿದ್ದ ವೇಣುಗೋಪಾಲ ಕಲ್ಲೂರಾಯ ಅವರು ಗುರುವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಇಂದು ಬೆಳಿಗ್ಗೆ ಅವರ ಅಂತ್ಯಸಂಸ್ಕಾರ ನೆರವೇರಿತು. ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪಾರಂಪರ್ಯ ಅರ್ಚಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಭಕ್ತರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಅವರು ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿ ಸಮುದಾಯ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದರು. ನಿವೃತ್ತ…

Read More

ಲ್ಯಾಟರೈಟ್ ಹೆಸರಿನಲ್ಲಿ ಬಾಕ್ಸೈಟ್ ಅಕ್ರಮ ಗಣಿಗಾರಿಕೆ: ಬೆನೆಡಿಕ್ಟ್ ಫೆರ್ನಾಂಡಿಸ್ ಆರೋಪ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಲ್ಯಾಟರೈಟ್ ಗಣಿಗಾರಿಕೆ ಗುತ್ತಿಗೆಯ ಹೆಸರಿನಲ್ಲಿ ಬಾಕ್ಸೈಟ್ (ಅಲ್ಯೂಮಿನಸ್ ಲ್ಯಾಟರೈಟ್) ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಪರಿಸರ ಹೋರಾಟಗಾರ ಬೆನೆಡಿಕ್ಟ್ ಫೆರ್ನಾಂಡಿಸ್ ಆರೋಪಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.30ಕ್ಕಿಂತ ಹೆಚ್ಚು ಅಲ್ಯೂಮಿನಾ ಅಂಶ ಹೊಂದಿರುವ ಖನಿಜವನ್ನು ಲ್ಯಾಟರೈಟ್ ಎಂದು ತೋರಿಸಿ ಗಣಿಗಾರಿಕೆ ನಡೆಸುವುದು ಪ್ರಮುಖ ಖನಿಜಗಳಿಗೆ ಸಂಬಂಧಿಸಿದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು. ಕರ್ನಾಟಕ ಹೈಕೋರ್ಟ್‌ನ WP No.14076/2026 ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಅವರು,…

Read More
error: Content is protected !!