ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್‌ಗೆ ಕೊಂಕಣಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಫಾರಂ ವತಿಯಿಂದ ಅದ್ದೂರಿ ಸನ್ಮಾನ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಹಾಗೂ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎ.ಕೆ.ಎಂ. ಅಶ್ರಫ್ ಅವರನ್ನು ಕಾಸರಗೋಡು ಕೊಂಕಣಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಫಾರಂ ವತಿಯಿಂದ ವರ್ಕಾಡಿಯ ಗಾಂಧಿನಗರದ ಎ.ಎಚ್. ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಸಂಘಟನೆಯ ಅಧ್ಯಕ್ಷ ಯೇಸು ಪ್ರಸಾದ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿ ಶಾಸಕರ ಜನಪರ ಕಾರ್ಯಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿದ ಶಾಸಕ ಎ.ಕೆ.ಎಂ. ಅಶ್ರಫ್ ಮಾತನಾಡಿ, “ಸಮಾಜದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಜೇಶ್ವರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಈ ಸನ್ಮಾನವು ಮುಂದಿನ ದಿನಗಳಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ನನಗೆ ಪ್ರೇರಣೆ ನೀಡಿದೆ” ಎಂದು ಹೇಳಿದರು.

ಕಯ್ಯಾರ್ ಚರ್ಚ್‌ನ ವಂದನೀಯ ಗುರು ವಿಶಾಲ್ ಮೋನಿಸ್ ಮಾತನಾಡಿ, “ಜಾತಿ-ಮತ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಶಾಸಕರ ವ್ಯಕ್ತಿತ್ವ ಮಾದರಿಯಾಗಿದೆ. ಅವರ ಅಭಿವೃದ್ಧಿಪರ ಚಿಂತನೆಗಳು ಕ್ಷೇತ್ರದ ಸಮಗ್ರ ಬೆಳವಣಿಗೆಗೆ ನಾಂದಿ ಹಾಡಲಿ” ಎಂದು ಆಶಿಸಿದರು.

ನ್ಯಾಯವಾದಿ ಎಂ.ಎಸ್. ಥೋಮಸ್ ಮಾತನಾಡಿ, “ಕಾಸರಗೋಡು ಕೊಂಕಣಿ ಕ್ರಿಶ್ಚಿಯನ್ ಡೆವಲಪ್ಮೆಂಟ್ ಫಾರಂ ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜದ ಬಾಂಧವರನ್ನು ಒಗ್ಗೂಡಿಸಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಯ್ಯಾರ್ ಚರ್ಚ್‌ನ ವಂದನೀಯ ಗುರು ವಿಶಾಲ್ ಮೋನಿಸ್, ವರ್ಕಾಡಿ ಚರ್ಚ್‌ನ ವಂದನೀಯ ಗುರು ಫ್ರಾನ್ಸಿಸ್ ಕ್ರಾಸ್ತಾ, ಪೈವಳಿಕೆ ಪಂಚಾಯತ್ ಸದಸ್ಯೆ ಪ್ರಿನ್ಸಿಟ ಕಯ್ಯಾರ್, ವರ್ಕಾಡಿ ಪಂಚಾಯತ್ ಸದಸ್ಯೆ ಲೀನಾ ಟೆಲ್ಲಿಸ್ ಹಾಗೂ ನ್ಯಾಯವಾದಿ ಎಂ.ಎಸ್. ಥೋಮಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಘಟನೆಯ ಕಾರ್ಯದರ್ಶಿ ನವೀನ್ ಮೊಂತೇರೋ, ರೋನಿ ವರ್ಕಾಡಿ, ರಾಜು ಮಣಿಯಂಪಾರೆ, ಫ್ರಾನ್ಸಿಸ್ ತಲಪಾಡಿ, ಅರುಣ್ ಕ್ರಾಸ್ತಾ, ವಿಲ್ಫ್ರೆಡ್ ಮನೋಹರ್, ಡಾಲ್ಫಿ ಕುಂಬ್ಳೆ, ಗಾಡ್ವಿನ್, ವಿಲ್ಲಿಯಂ, ಪ್ರವೀಣ್, ಪ್ರಭು, ರಾಜೇಶ್, ಜೋಯ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಂಘಟನೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯೇಸು ಪ್ರಸಾದ್ ಡಿಸೋಜ ಸ್ವಾಗತಿಸಿ, ನವೀನ್ ಮೊಂತೇರೋ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!