ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸ್ಥಾನ; ಅಡ್ಡ ಮತದಾನ ಭಾರೀ ಚರ್ಚೆಗೆ ಗ್ರಾಸ

ಬೆಂಗಳೂರು, ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಬಿಜೆಪಿ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಸೋಲನುಭವಿಸಿದ್ದಾರೆ. ಅಡ್ಡ ಮತದಾನ ಆರೋಪಗಳ ನಡುವೆಯೇ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾಬಲಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.ಅಧಿಕೃತ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ಗೆ 135 ಶಾಸಕರ ಬೆಂಬಲವಿದ್ದರೂ, ಪಕ್ಷದ ಅಭ್ಯರ್ಥಿಗಳಿಗೆ ಒಟ್ಟು 151 ಮತಗಳು…

Read More

ಕನ್ನಡ ಭವನದಿಂದ ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಪ್ರತಿಭಾ ಪುರಸ್ಕಾರಕ್ಕೆ ಅಹ್ವಾನ.

ಕಾಸರಗೋಡು : ಕಾಸರಗೋಡು ಜಿಲ್ಲೆ ಹಾಗೂ ಕೇರಳ ರಾಜ್ಯದ ರಾಮಕ್ಷತ್ರಿಯ ಸಮಾಜದ ಕಳೆದ ವಾರ್ಷಿಕ ಎಸ್. ಎಸ್. ಎಲ್. ಸಿ. ಹಾಗೂ ಪಿ. ಯು. ಸಿ. ಪರೀಕ್ಷೆಗಳಲ್ಲಿ 90.ಯಾ ಅಧಿಕ ಅಂಕ ಗಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಬಾನ್ವಿತ ವಿದ್ಯಾರ್ಥಿಗಳಿಗೆ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಸಾರತ್ಯದ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಪಾಂಗೋಡು…

Read More

ತಮಿಳುನಾಡು ರಾಜ್ಯಸಭಾ ಸದಸ್ಯ ಪ್ರವೀಣ್ ಚಕ್ರವರ್ತಿ ಅವರನ್ನು ಭೇಟಿ ಮಾಡಿದ ಮಂಜುನಾಥ ಭಂಡಾರಿ

ಬೆಂಗಳೂರು: ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಶಾಸಕರಾದ ಮಂಜುನಾಥ ಭಂಡಾರಿ ಅವರು ತಮಿಳುನಾಡಿನ ರಾಜ್ಯಸಭಾ ಸದಸ್ಯರಾದ ಪ್ರವೀಣ್ ಚಕ್ರವರ್ತಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.ಪ್ರವೀಣ್ ಚಕ್ರವರ್ತಿ ಅವರು ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಜಯಭೇರಿ ಬಾರಿಸುವಲ್ಲಿ ಹಾಗೂ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಂಡಾರಿ ಅವರ ಜೊತೆ ತಮಿಳುನಾಡು ಮತ್ತು ಕರ್ನಾಟಕದ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.

Read More

ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳ, ಕಾಸರಗೋಡಿನಿಂದ ಸೋಲಾಪುರಕ್ಕೆ ಕನ್ನಡ ಯಾತ್ರೆ

ಕೇರಳ ರಾಜ್ಯದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ರಾಜ್ಯ ಅಂತರ ರಾಜ್ಯದಾದ್ಯಂತ ದೇಶ ವಿದೇಶಗಳಲ್ಲಿ ಪ್ರಚಾರ ಪಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ 1990 ರಲ್ಲಿ ಸ್ಥಾಪನೆಗೊಂಡಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.), ಕಾಸರಗೋಡು ಇದರ ಆಶ್ರಯದಲ್ಲಿ ಸಾಂಸ್ಕೃತಿಕ ವಿನಿಮಯಕ್ಕಾಗಿ ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ -ಕರ್ನಾಟಕ ಉತ್ಸವ, ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವವನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 7 ಮತ್ತು 8ರಂದು ಹಮ್ಮಿಕೊಳ್ಳಲಾಗಿದೆ.ಈ…

Read More

ಆರೋಗ್ಯಕರ ಬೆಳವಣಿಗೆಗೆ ನೈತಿಕ ಹಾಗೂ ಸುರಕ್ಷಿತ ಶಿಕ್ಷಣ ಅಗತ್ಯ: ರಾಯಿ ರಾಜ ಕುಮಾರ

ಕೊಡಂಗಲ್ಲು, ಜೂನ್ 18: ಧರ್ಮಸ್ಥಳ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಆಸಕ್ತರಿಗಾಗಿ ಮಾಹಿತಿ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಂಗಲ್ಲು ಇಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸ್ಪಾರ್ಕ್ ಅಕಾಡೆಮಿಯ ತರಬೇತುದಾರ ಹಾಗೂ ಹಿರಿಯ ಪತ್ರಕರ್ತ ರಾಯಿ ರಾಜ ಕುಮಾರ ಭಾಗವಹಿಸಿ ಮಾತನಾಡಿದರು. ಶಿಕ್ಷಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸುರಕ್ಷಿತ ಹಾಗೂ ನೈತಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ಮನೆ ಹಾಗೂ…

Read More

ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ : 28 ಕ್ಕೆ ಮುಂಬಯಿಯಲ್ಲಿ ಪ್ರದಾನ

ಕಾಸರಗೋಡು : ನಿರೂಪಕ, ಸಂಘಟಕ, ಲೇಖಕ ರವಿ ನಾಯ್ಕಾಪು ಅವರಿಗೆ ‘ನಿರೂಪಣಾ ಕೌಸ್ತುಭ’ ಪ್ರಶಸ್ತಿಯ ಗರಿ. ನಿರೂಪಣಾ ಕ್ಷೇತ್ರದ ಅವರ ಬಹುಮುಖ ಸಾಧನೆ, ಸಾಮರ್ಥ್ಯವನ್ನು ಪರಿಗಣಿಸಿ ಮುಂಬಯಿಯ ಅಂಧೇರಿ ಕರ್ನಾಟಕ ಸಂಘವು ಈ ಪ್ರಶಸ್ತಿ ಘೋಷಿಸಿದೆ. ಈ ತಿಂಗಳ 28 ರಂದು ಅಂಧೇರಿ ಕರ್ನಾಟಕ ಸಂಘದ ಆಶ್ರಯದಲ್ಲಿ ಮುಂಬಯಿಯ ಕುರ್ಲಾ ಬಂಟರ ಭವನದಲ್ಲಿ ಜರಗಲಿರುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ 2026 ಕಾರ್ಯಕ್ರಮದಲ್ಲಿ ಈ ಪ್ರತಿಷ್ಟಿತ ಪ್ರಶಸ್ತಿ ಪ್ರದಾನ ಮಾಡುವುದಾಗಿ ಸಂಘದ ಸಂಸ್ಥಾಪಕರಾಗಿರುವ ಕೃಷ್ಣ.ಬಿ. ಶೆಟ್ಟಿ ಅವರು…

Read More

ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.

ಕರ್ನಾಟಕ ನಾಯರ್‌ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆಯು ಮಂಗಳೂರಿನ ಕೆ.ಪಿ.ಟಿ ಬಳಿಯಿರುವ ಎಸ್‌. ಕ್ಯೂಬ್‌ ಸೆಂಟರ್‌ ಸಭಾಂಗಣದಲ್ಲಿ ಜರುಗಿತು, ಸಾಮಾನ್ಯ ಸಭೆಯ ನಂತರ ಜರುಗಿದ ಮುಂದಿನ 2026-28 ನೇ ಅವಧಿಗೆ ಅಧ್ಯಕ್ಷರಾಗಿ ಶ್ರೀ ಮುರಳಿ ಹೊಸಮಜಲು, ಕಾರ್ಯದರ್ಶಿಯಾಗಿ ವಿ.ಎಮ್.ಸತೀಶನ್‌ ಪುನರಾಯ್ಕೆಗೊಂಡರು. ಖಜಾಂಚಿಯಾಗಿ ಶ್ರೀ ಅಜಯಕುಮಾರ್‌ , ಉಪಾಧ್ಯಕ್ಷರಾಗಿ ಶ್ರೀಮತಿ ವಾಸಂತಿ ನಾಯರ್‌, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಂಜು ಅಜಿತ್, ಜತೆ ಖಜಾಂಚಿಯಾಗಿ ರವೀಂದ್ರನಾಥ್‌, ಬೋರ್ಡ್ ಮೆಂಬರುಗಳಾಗಿ ಶ್ರೀ ವಿಜಯಕುಮಾರ್‌, ಎಮ್.ವಿ. ರಾಜನ್‌, ಎ.ಎಸ್.ಮೋಹನ್‌ ರವರು, ಸಮಿತಿಯ…

Read More

ಎಂ.ಆರ್.ಜಿ. ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್, ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

ಮಂಗಳೂರು: ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಗೋವಾ, ತನ್ನ ಸೂರ್ಯಕಿರಣಗಳಿಂದ ಕಂಗೊಳಿಸುವ ಕಡಲತೀರಗಳು, ಸಮೃದ್ಧ ಸಾಂಸ್ಕೃತಿಕ ಪರಂಪರೆ, ಆಹ್ಲಾದಕರ ಹವಾಮಾನ ಹಾಗೂ ಅಪರೂಪದ ನೈಸರ್ಗಿಕ ಸೌಂದರ್ಯದಿಂದ ದೇಶ-ವಿದೇಶಗಳ ಪ್ರವಾಸಿಗರನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ಗೋವಾದ ರಾಜಧಾನಿಯಾದ ಪಣಜಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ‘ಗೋಲ್ಡ್ ಫಿಂಚ್ ಪಣಜಿ ಗೋವಾ’ ಅತ್ಯಾಧುನಿಕ ಆತಿಥ್ಯ ಸೇವೆಗಳನ್ನು ಗೋವಾದ ವಿಶಿಷ್ಟ ಸೊಬಗಿನೊಂದಿಗೆ ಸಂಯೋಜಿಸಿ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡುತ್ತಿದೆ.ಸುಂದರ ಮಂಡೋವಿ ನದಿಯ ನೋಟವನ್ನು ಹೊಂದಿರುವ ಈ ಹೋಟೆಲ್, ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ದೇಶಾದ್ಯಂತ…

Read More

ದೇವಸ್ಥಾನದ ಭೂಮಿಯ ತೆರಿಗೆ ಪಾವತಿಗೆ ಲಂಚ ಪಡೆಯುತ್ತಿದ್ದ ಗ್ರಾಮ ಕಚೇರಿ ಸಿಬ್ಬಂದಿ ವಿಜಿಲೆನ್ಸ್ ಬಲೆಗೆ

​ ಮಂಜೇಶ್ವರ :: ದೇವಸ್ಥಾನಕ್ಕೆ ಭಕ್ತರೊಬ್ಬರು ದಾನವಾಗಿ ನೀಡಿದ ಭೂಮಿಯನ್ನು ಸಮಿತಿಯ ಹೆಸರಿಗೆ ವರ್ಗಾಯಿಸಿ, ತೆರಿಗೆ ಪಾವತಿಸಲು ಸಹಾಯ ಮಾಡುವುದಾಗಿ ನಂಬಿಸಿ ಲಂಚ ಪಡೆಯುತ್ತಿದ್ದ ಉಪ್ಪಳ ಗ್ರೂಪ್ ಗ್ರಾಮ ಕಚೇರಿಯ ಕ್ಯಾಶುಯಲ್ ಸ್ವೀಪರ್ ಓರ್ವನನ್ನು ಕಾಸರಗೋಡು ವಿಜಿಲೆನ್ಸ್ ತಂಡವು ಕೈಯಾರೆ ಬಂಧಿಸಿದೆ. ಕೊಡಿಬೈಲ್ ನಿವಾಸಿ ಶಿವಪ್ರಸಾದ್ ಕೆ. ಬಂಧಿತ ಆರೋಪಿ. ​ಮಂಗಲ್ಪಾಡಿ ಯ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರು ಭೂಮಿಯ ವರ್ಗಾವಣೆ ಮತ್ತು ತೆರಿಗೆ ಪಾವತಿಗಾಗಿ ಒಂದು ತಿಂಗಳ ಹಿಂದೆ ಉಪ್ಪಳ ಗ್ರಾಮ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತೆರಿಗೆ…

Read More

ವಿಟ್ಲದಲ್ಲಿ ದಾರುಣ ಘಟನೆ: ಲಾರಿ ದುರಸ್ತಿ ಮಾಡುವಾಗ ಚಕ್ರದ ಅಡಿಗೆ ಸಿಲುಕಿ ಚಾಲಕ ಸಾವು

​ ಮಂಜೇಶ್ವರ : ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಟಿಪ್ಪರ್ ಲಾರಿ ಚಾಲಕನೊಬ್ಬ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಮೃತರನ್ನು ಧರ್ಮಸ್ಥಳ ಪರಿಸರದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ. ಅಕ್ರಮ ಬಾಕ್ಸೈಟ್ ಸಾಗಣೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಲಾರಿಯನ್ನು ಸರಿಪಡಿಸಲು ಮಹೇಶ್ ಅವರು ವಾಹನದ ಕೆಳಗೆ ಹೋಗಿ ಕೆಲಸ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಲಾರಿ ಮುಂದಕ್ಕೆ ಚಲಿಸಿದೆ. ಪರಿಣಾಮ ಚಾಲಕ…

Read More
error: Content is protected !!