ರೂಪೇಶ್ ಶೆಟ್ಟಿ ಅಭಿನಯದ ಹೊಸ ಕನ್ನಡ ಸಿನಿಮಾ “ಹಲ್ಕಾ ಡಾನ್”
ಕರಾವಳಿಯ ನಗುಮೊಗದ ಹೀರೋ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರು ಬಿಗ್‌ಬಾಸ್ ವಿನ್ನರ್ ಆದ ಬಳಿಕ ಬಹುಬೇಡಿಕೆಯ ನಟ, ನಿರೂಪಕರಾಗಿ ಗುರುತಿಸಿಕೊಂಡಿದ್ದು, ತಾನು ಕೈಯಾಡಿಸಿದ ಪ್ರತಿಯೊಂದರಲ್ಲೂ ಸಕ್ಸಸ್ ಆಗುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿ. ಐಪಿಎಲ್ ಸಂದರ್ಭದಲ್ಲೂ ಟೀವಿ ಚಾನೆಲ್‌ನಲ್ಲಿ ಕಾಮೆಂಟರರ್ ಆಗಿ ಬ್ಯುಸಿಯಾಗಿದ್ದ ರೂಪೇಶ್ ಶೆಟ್ಟಿ, ಈಗ ಸುಲಭದಲ್ಲಿ ಯಾರ ಕೈಗೂ ಸಿಗದಷ್ಟು ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದಾರೆ. ಅವರ ನಟನೆಯ “ಜೈ” ಸಿನಿಮಾವಂತೂ ಸೂಪರ್ ಹಿಟ್ ಆಗಿ, ನೂರು ದಿನಗಳನ್ನು ಪೂರೈಸಿ ನಿರ್ಮಾಪಕರಿಗೆ ಖುಷಿ ಕೊಟ್ಟಿದೆ. ಒಂದು ಹೊಸ…
