ಮೇರ್ಲದ ಸತ್ಯೋಲೆ ಸುಗಿಪು. ಭಕ್ತಿಗೀತೆ ಲೋಕಾರ್ಪಣೆ

ಉಪ್ಪಳ. ಸರ್ವ ಶಕ್ತಿ ಸ್ವರೂಪಿಣಿ ತಾಯಿ ಕಾಳಿ ಚಾಮುಂಡಿ ದೈವದ ಕುರಿತಾದ ಭಕ್ತಿ ಪ್ರಧಾನವಾದ ಭಕ್ತಿ ಗೀತೆ ” ಮೇರ್ಲದ ಸತ್ಯೋಲೆ ಸುಗಿಪು” ಇದರ ಧ್ವನಿಸುರುಳಿಯ ವಿಡಿಯೋ ಲೋಕಾರ್ಪಣೆಗೊಂಡಿತು. ಉಪ್ಪಳ ಮುಳಿಂಜ ಮಹಾನಗರದ ಮುಳಿಂಜ ಫ್ರೆಂಡ್ಸ್ ಕ್ಲಬ್ ನ 17 ನೆ ವಾರ್ಷಿಕೋತ್ಸವ ಹಾಗೂ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿಡಿಯೋ ಲೋಕಾರ್ಪಣೆಯಾಯಿತು. ಶ್ರೀ ಅಭಿಷೇಕ್ ಹೊಸಂಗಡಿ ನಿರ್ಮಾಣಕ್ಕೆ ಶ್ರೀ ಸುರೇಶ್ ಕುಮಾರ್ ಮಂಗಲ್ಪಾಡಿ ಯವರ ಸಾಹಿತ್ಯಕ್ಕೆ ಬಹುಭಾಷಾ ಗಾಯಕರಾದ ಶ್ರೀ ಪವನ್ ಕುಮಾರ್…

Read More

ಬೆಳಕೆ ಗ್ರಾ ಪಂ ಗೆ ಸಾಮಾಜಿಕ ಪರಿಶೋಧನಾ ನಿರ್ದೇಶಕರ ಭೇಟಿ

ಭಟ್ಕಳ: ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಬೆಂಗಳೂರು ವತಿಯಿಂದ ಸಿ.ಕೆ.ಮಲ್ಲಪ್ಪ ಮಾನ್ಯ ಸಾಮಾಜಿಕ ಪರಿಶೋಧನಾ ನಿರ್ದೇಶಕರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಸಾಮಾಜಿಕ ಪರಿಶೋಧನೆಯ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನೆಯ ವಿವಿಧ ಹಂತಗಳು, ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳು ಹಾಗೂ ಪ್ರಗತಿಯ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದು, ಸಾಮಾಜಿಕ ಪರಿಶೋಧನೆ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಅಗತ್ಯ ಮಾರ್ಗದರ್ಶನ ನೀಡಿದರು. ಅಲ್ಲದೆ, ವಿವಿಧ ಇಲಾಖೆಗಳ…

Read More

ಪುತ್ತೂರಿನಲ್ಲಿ ವಂದೇ ಭಾರತ್ ಶಾಶ್ವತ ನಿಲುಗಡೆಗೆ ‘ಗ್ರೀನ್ ಸಿಗ್ನಲ್’.ವೇಳಾಪಟ್ಟಿ ಬದಲಾವಣೆಗೆ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಪುತ್ತೂರು: ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪುತ್ತೂರಿನಲ್ಲಿ ತಾತ್ಕಾಲಿಕ (ಟ್ರಯಲ್ ರನ್) ನಿಲುಗಡೆ ಒದಗಿಸಿರುವುದು ಹರ್ಷದ ವಿಚಾರವಾಗಿದ್ದು, ಈ ನಿಲುಗಡೆಯನ್ನು ಶಾಶ್ವತಗೊಳಿಸುವ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಲಾಗಿದೆ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿಲುಗಡೆಗಾಗಿ…

Read More

ಕೂಳೂರು ಬಸ್ ತಂಗುದಾಣಕ್ಕೆ ‘ಮೀಡಿಯಾ ಮನಸುಗಳು’ ಕಾಯಕಲ್ಪ

ಮಂಗಳೂರು: ಸ್ವಚ್ಛ ಭಾರತ ಹಾಗೂ ಸ್ವಸ್ಥ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಡಿ ನಿರ್ಮಾಣಗೊಂಡ ಯೋಜನೆಯೊಂದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಮಂಗಳೂರು ಹೊರವಲಯದ ಕೂಳೂರು ಸೇತುವೆ ಸಮೀಪವಿರುವ ಕುದ್ರೆಮುಖ ಕಂಪೆನಿಯ ಮುಂಭಾಗದ ಬಸ್ ತಂಗುದಾಣವೇ ಈ ದುಸ್ಥಿತಿಗೆ ಸಾಕ್ಷಿಯಾಗಿತ್ತು. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ಜನನಿಬಿಡ ಸ್ಥಳವು, ನಿರ್ವಹಣೆಯಿಲ್ಲದೆ ತ್ಯಾಜ್ಯದ ತೊಟ್ಟಿಯಾಗಿ ಪರಿಣಮಿಸಿತ್ತು. ದುರ್ನಾತ, ಅಸ್ತವ್ಯಸ್ತವಾಗಿ ಬೆಳೆದಿದ್ದ ಹುಲ್ಲು ಮತ್ತು ಗಿಡಗಂಟಿಗಳಿಂದಾಗಿ ಪ್ರಯಾಣಿಕರು ಬಸ್ ಕಾಯಲು ನಿಲ್ಲುವುದಕ್ಕೂ…

Read More

ಅಕ್ರಮ ಮರಳು ಸಾಗಾಟದ ವೇಳೆ ನದಿಗೆ ಹಾರಿದ್ದ ಇಬ್ರಾಹಿಂ: ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆ

ಮಂಜೇಶ್ವರ : ಪೊಲೀಸ್‌ ದಾಳಿಗೆ ಹೆದರಿ ನದಿಗೆ ಹಾರಿದ್ದ ಯುವಕನ ಶವ ನಾಲ್ಕು ದಿನಗಳ ಸುದೀರ್ಘ ಶೋಧ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದೆ. ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (35) ಸಾವನ್ನಪ್ಪಿದ ದುರ್ದೈವಿ. ​ವ್ಯಾಪಾರ ಉದ್ದೇಶಕ್ಕಾಗಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಹಠಾತ್ತನೆ ದಾಳಿ ನಡೆಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಬ್ರಾಹಿಂ ನದಿಗೆ ಹಾರಿದ್ದರು. ಗುರುವಾರ ಬೆಳಿಗ್ಗೆ ಶಿರಿಯಾ ಅಣೆಕಟ್ಟು/ಸಮುದ್ರ ಮುಖಜ ಭೂಮಿ (ಅಳಿವೆ) ಬಳಿ ಅವರ ಮೃತದೇಹ ಪತ್ತೆಯಾಗಿದೆ. ಅವರು ನಾಪತ್ತೆಯಾಗಿದ್ದ ಸ್ಥಳದ ಸಮೀಪದಲ್ಲೇ ಮೀನುಗಾರರ ಬಲೆಗೆ…

Read More

ಕಬಡ್ಡಿಯಲ್ಲಿ ನಿಟ್ಟೆ ಶಾಲೆಯ ಕ್ರೀಡಾ ಸಾಧನೆ: ಬಾಲಕಿಯರಿಗೆ ಪ್ರಥಮ, ಬಾಲಕರಿಗೆ ದ್ವಿತೀಯ

ಕಾರ್ಕಳ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ನಿಟ್ಟೆಯ ಡಾ. ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ.ಈ ಮೂಲಕ ಬಾಲಕಿಯರ ತಂಡವು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಇದೇ ಪಂದ್ಯಾಟದಲ್ಲಿ ಶಾಲೆಯ ಬಾಲಕರ ತಂಡವು ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.ವಿಜೇತ ತಂಡದ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿಸಿಸಿ) ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್‌ನ ‘ಸಂಘಟನ್ ಸೃಜನ್ ಅಭಿಯಾನ’ದ ಭಾಗವಾಗಿ ಈ ನೇಮಕ ನಡೆದಿದೆ. ಅಭಿಯಾನದಡಿ ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಪಕ್ಷದ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ, ಜಿಲ್ಲೆಯ ಪಕ್ಷದ ಸಂಘಟನೆ ಕುರಿತು ಸಮಗ್ರ ವರದಿಯನ್ನು ಸಲ್ಲಿಸಿದ್ದರು. ಈ ವರದಿ ಹಾಗೂ ಎಐಸಿಸಿ ವೀಕ್ಷಕರು ಮತ್ತು ಹಿರಿಯ ನಾಯಕರೊಂದಿಗೆ ನಡೆದ ಚರ್ಚೆಯ ಆಧಾರದ ಮೇಲೆ…

Read More

ಜೈಲ್ ಜಾಮರ್ ಸಾರ್ವಜನಿಕರಿಗೋ? ಖೈದಿಗಳಿಗೋ? :- ಶಾಸಕ ಕಾಮತ್ ಪ್ರಶ್ನೆ

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಪೊಲೀಸರು ದಾಳಿ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳಿಂದ ಒಟ್ಟು 10 ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡಿರುವುದು, ಜೈಲಿನೊಳಗೆ ಇಂದಿಗೂ ನೆಟ್ವರ್ಕ್ ಸಿಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಜೈಲ್ ಜಾಮರ್ ಹೊರಗಿನ ಜನರಿಗೆ ಮಾತ್ರ ಸಮಸ್ಯೆ ಉಂಟು ಮಾಡಿದ್ದು ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ತೋರಿಸುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಜಾಮರ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸುತ್ತಮುತ್ತಲಿನ ಶಾಲಾ ಕಾಲೇಜು, ಅಂಗಡಿ ಮುಗ್ಗಟ್ಟುಗಳು, ಸರ್ಕಾರಿ ಕಚೇರಿಗಳು, ನ್ಯಾಯಾಲಯ ಸೇರಿದಂತೆ ಸಾರ್ವಜನಿಕರು ತೀವ್ರ…

Read More

‘ಮೀಡಿಯಾ ಮನಸುಗಳು’ ಪ್ರೇರಣೆಗೆ ದೇರೆಬೈಲ್ ಬಸ್‌ ತಂಗುದಾಣ ಭಾಗಶಃ ಸ್ವಚ್ಛ!

ಮಂಗಳೂರು: ಸ್ವಚ್ಛತೆ ಎಂಬುದು ಕೇವಲ ಹೇಳಿಕೆಯಲ್ಲಿ ಉಳಿಯುವ ಕಲ್ಪನೆಯಲ್ಲ. ಮನಸ್ಸಿದ್ದರೆ ಕೈಜೋಡಿಸಿ ಮಾಡಬಹುದಾದ ಸಕ್ರಿಯ ಆಂದೋಲನ ಎಂಬುದಕ್ಕೆ ದೇರೆಬೈಲ್ ಚರ್ಚ್ ಬಳಿಯ ಬಸ್‌ ತಂಗುದಾಣ ಸಾಕ್ಷಿಯಾಗಿದೆ.ಇತ್ತೀಚಿನವರೆಗೂ ಕಸ-ಕಡ್ಡಿಗಳಿಂದ ತುಂಬಿ, ದುರ್ನಾತ ಹಾಗೂ ಅಶುಚಿತ್ವದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಿಲ್ಲಬೇಕಾದ ಸ್ಥಿತಿಯಲ್ಲಿದ್ದ ಈ ತಂಗುದಾಣದಲ್ಲಿ ಇದೀಗ ಬದಲಾವಣೆಯ ಸಣ್ಣ ಹೆಜ್ಜೆಯೊಂದು ಮೂಡಿದೆ. ದಿನನಿತ್ಯ ನೂರಾರು ಮಂದಿ ಬಸ್ ಕಾಯುವ ಈ ನಿಲ್ದಾಣದ ದುಸ್ಥಿತಿಯು ‘ಮೀಡಿಯಾ ಮನಸುಗಳು’ ತಂಡದ ಗಮನ ಸೆಳೆದಿತ್ತು. ಅಲ್ಲಿನ ವಾಸ್ತವ ಸ್ಥಿತಿಯನ್ನು ವಿಡಿಯೋ ಮೂಲಕ ಜನರ…

Read More

ಜನರಲ್ ಆಸ್ಪತ್ರೆ ಕೇವಲ ನಾಮಕಾವಸ್ತೆ ಆಸ್ಪತ್ರೆಯಾಗಿ ಬದಲಾಗಿದೆ: ಎಂ.ಎಲ್. ಅಶ್ವಿನಿ

ಕಾಸರಗೋಡು: ಆಧುನಿಕ ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಕಾಸರಗೋಡು ಜನರಲ್ ಆಸ್ಪತ್ರೆ ಕೇವಲ ನಾಮಕಾವಸ್ತೆ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಆಸ್ಪತ್ರೆಗೆ ‘ಮೆಡಿಕಲ್ ಕಾಲೇಜು ಆಸ್ಪತ್ರೆ’ ಎಂಬ ಬೋರ್ಡ್ ಅಳವಡಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಜನರಲ್ ಆಸ್ಪತ್ರೆಯ ಶೋಚನೀಯ ಸ್ಥಿತಿಯನ್ನು ಸರಿಪಡಿಸುವುದು, ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವುದು, ಹೊಸ ಸ್ಪೆಷಾಲಿಟಿ ವಿಭಾಗಗಳನ್ನು ಪ್ರಾರಂಭಿಸುವುದು, ಸ್ಪೆಷಾಲಿಟಿ ವೈದ್ಯರು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ನೇಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು…

Read More
error: Content is protected !!