ಮಂಗಳೂರು:ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಲ್ಲಿ ಶಿಕ್ಷೆ ಪ್ರಕಟಗೊಂಡಿದೆ.
ಸುಳ್ಯ ಪೊಲೀಸ್ ಠಾಣಾ 96/2006 ಕಲಂ: 457, 380 ಐ.ಪಿ.ಸಿ ಹಾಗೂ 103/2018 ಕಲಂ:224 ಐ.ಪಿ.ಸಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎ ಎಮ್ ಅಜೀಜ್ ಎಂಬಾತನ ವಿರುದ್ದ ಎಸ್ ಸಿ ಜೆ ಮತ್ತು ಜೆ ಎಮ್ಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾದೀಶರು ಆರೋಪಿ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಅ.ಕ್ರ: 103/2018 ರಲ್ಲಿ ಒಂದು ವರ್ಷಗಳ ಸಾದಾ ಕಾರಗೃಹ ವಾಸ ಹಾಗೂ 5000 ದಂಡವನ್ನು , ದಂಡ ಕಟ್ಟಲು ತಪ್ಪಿದ್ದಲ್ಲಿ 45 ದಿನಗಳ ಕಾಲ ಸಾದಾ ಕಾರಾಗೃಹ ವಾಸದ ಶಿಕ್ಷೆ ಹಾಗೂ ಅ.ಕ್ರ: 96/2006 ರಲ್ಲಿ ಕಲಂ 457 ದರಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ 5000 ದಂಡವನ್ನು ವಿಧಿಸಿದ್ದು, ದಂಡವನ್ನು ಕಟ್ಟಲು ತಪ್ಪಿದ್ದಲ್ಲಿ 45 ದಿನಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ ಕಲಂ 380 ದರಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸವನ್ನು ಹಾಗೂ ಐದು ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.