ಜೂನ್ 7ರಂದು ಸುಂಕದಕಟ್ಟೆಯಲ್ಲಿ ಬಿಎಂಎಸ್ ವರ್ಕಾಡಿ ಪಂಚಾಯತ್ ಸಮ್ಮೇಳನ

ಉಪ್ಪಳ, ಜೂ. 6:
ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ವರ್ಕಾಡಿ ಪಂಚಾಯತ್ ಸಮಿತಿಯ ವತಿಯಿಂದ ಜೂನ್ 7ರಂದು ಆದಿತ್ಯವಾರ ಸಂಜೆ 3 ಗಂಟೆಗೆ ಸುಂಕದಕಟ್ಟೆಯ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಪಂಚಾಯತ್ ಸಮ್ಮೇಳನ ನಡೆಯಲಿದೆ.

ಈ ಕುರಿತು ಸಂಘದ ಅಧ್ಯಕ್ಷೆ ವನಿತಾ ಜೆ. ನಾಯಕ್ ಹಾಗೂ ಕಾರ್ಯದರ್ಶಿ ರವೀಂದ್ರ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಶ್ರಮವೇ ಆರಾಧನೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮಜ್ದೂರ್ ಸಂಘವು ಕಾರ್ಮಿಕರು ತಮ್ಮ ಕರ್ತವ್ಯವನ್ನು ರಾಷ್ಟ್ರಸೇವೆಯೆಂದು ಭಾವಿಸಿ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸುವ ಉದ್ದೇಶ ಹೊಂದಿದೆ. ಕಾರ್ಮಿಕರು, ಮಾಲಕರು ಹಾಗೂ ಗ್ರಾಹಕರು ಒಳಗೊಂಡ ಕಾರ್ಮಿಕ ಸಮಾಜದಲ್ಲಿ ಎಲ್ಲರೂ ಸಂತೋಷದಿಂದ ಬದುಕುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸಂಘಟನೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದ ಅತಿದೊಡ್ಡ ಕಾರ್ಮಿಕ ಸಂಘಟನೆಗಳಲ್ಲಿ ಒಂದಾದ ಬಿಎಂಎಸ್, ಕಾರ್ಮಿಕರನ್ನು ಸಂಘಟಿಸುವ ಹಾಗೂ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಂಚಾಯತ್ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ವರ್ಕಾಡಿ ಪಂಚಾಯತ್ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು, ಹಿತೈಷಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!