‘ಮೀಡಿಯಾ ಮನಸುಗಳು’ ಪ್ರೇರಣೆಗೆ ದೇರೆಬೈಲ್ ಬಸ್‌ ತಂಗುದಾಣ ಭಾಗಶಃ ಸ್ವಚ್ಛ!

ಮಂಗಳೂರು: ಸ್ವಚ್ಛತೆ ಎಂಬುದು ಕೇವಲ ಹೇಳಿಕೆಯಲ್ಲಿ ಉಳಿಯುವ ಕಲ್ಪನೆಯಲ್ಲ. ಮನಸ್ಸಿದ್ದರೆ ಕೈಜೋಡಿಸಿ ಮಾಡಬಹುದಾದ ಸಕ್ರಿಯ ಆಂದೋಲನ ಎಂಬುದಕ್ಕೆ ದೇರೆಬೈಲ್ ಚರ್ಚ್ ಬಳಿಯ ಬಸ್‌ ತಂಗುದಾಣ ಸಾಕ್ಷಿಯಾಗಿದೆ.ಇತ್ತೀಚಿನವರೆಗೂ ಕಸ-ಕಡ್ಡಿಗಳಿಂದ ತುಂಬಿ, ದುರ್ನಾತ ಹಾಗೂ ಅಶುಚಿತ್ವದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಿಲ್ಲಬೇಕಾದ ಸ್ಥಿತಿಯಲ್ಲಿದ್ದ ಈ ತಂಗುದಾಣದಲ್ಲಿ ಇದೀಗ ಬದಲಾವಣೆಯ ಸಣ್ಣ ಹೆಜ್ಜೆಯೊಂದು ಮೂಡಿದೆ. ದಿನನಿತ್ಯ ನೂರಾರು ಮಂದಿ ಬಸ್ ಕಾಯುವ ಈ ನಿಲ್ದಾಣದ ದುಸ್ಥಿತಿಯು ‘ಮೀಡಿಯಾ ಮನಸುಗಳು’ ತಂಡದ ಗಮನ ಸೆಳೆದಿತ್ತು. ಅಲ್ಲಿನ ವಾಸ್ತವ ಸ್ಥಿತಿಯನ್ನು ವಿಡಿಯೋ ಮೂಲಕ ಜನರ…

Read More

ಜನರಲ್ ಆಸ್ಪತ್ರೆ ಕೇವಲ ನಾಮಕಾವಸ್ತೆ ಆಸ್ಪತ್ರೆಯಾಗಿ ಬದಲಾಗಿದೆ: ಎಂ.ಎಲ್. ಅಶ್ವಿನಿ

ಕಾಸರಗೋಡು: ಆಧುನಿಕ ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಕಾಸರಗೋಡು ಜನರಲ್ ಆಸ್ಪತ್ರೆ ಕೇವಲ ನಾಮಕಾವಸ್ತೆ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಆಸ್ಪತ್ರೆಗೆ ‘ಮೆಡಿಕಲ್ ಕಾಲೇಜು ಆಸ್ಪತ್ರೆ’ ಎಂಬ ಬೋರ್ಡ್ ಅಳವಡಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಜನರಲ್ ಆಸ್ಪತ್ರೆಯ ಶೋಚನೀಯ ಸ್ಥಿತಿಯನ್ನು ಸರಿಪಡಿಸುವುದು, ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವುದು, ಹೊಸ ಸ್ಪೆಷಾಲಿಟಿ ವಿಭಾಗಗಳನ್ನು ಪ್ರಾರಂಭಿಸುವುದು, ಸ್ಪೆಷಾಲಿಟಿ ವೈದ್ಯರು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ನೇಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು…

Read More

ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2024 ಹಾಗೂ 2025ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರಕಟಿಸಲಾಗಿದೆ.2024ರ ಸಾಲಿನ ಕವಿತೆ ವಿಭಾಗದ ಪುರಸ್ಕಾರಕ್ಕೆ ಯಶೋದ ಮೋಹನ್ ಅವರ “ತಡ್ಯ ಕಡಪುನಗ” ಕೃತಿ ಆಯ್ಕೆಯಾಗಿದೆ. 2024 ನೇ ಸಾಲಿನ ನಾಟಕ ಪುಸ್ತಕ ವಿಭಾಗದ ಪುರಸ್ಕಾರಕ್ಕೆ ಅಕ್ಷತಾ ರಾಜ್ ಪೆರ್ಲ ಅವರ ‘ಮಂದಾರ ಮಲಕ” ಕೃತಿ ಆಯ್ಕೆಯಾಗಿದೆ. 2025ನೇ ಸಾಲಿನ ಕಾದಂಬರಿ ವಿಭಾಗದ ಪುರಸ್ಕಾರಕ್ಕೆ ರೂಪಕಲಾ ಆಳ್ವ ಅವರ “ಪಮ್ಮಕ್ಕೆನ ಪೊರ್ಂಬಾಟ” ಕೃತಿ ಆಯ್ಕೆಯಾಗಿದೆ. 2025ನೇ ಸಾಲಿನ ಕವಿತೆ ವಿಭಾಗದ ಪುರಸ್ಕಾರಕ್ಕೆ…

Read More

ಸೈಬರ್ ಕ್ರಿಮಿನಲ್‌ಗಳಿಗೆ ಬ್ಯಾಂಕ್ ಖಾತೆ ಬಾಡಿಗೆ; ಲಕ್ಷಾಂತರ ರೂ. ಸಂಶಯಾಸ್ಪದ ವ್ಯವಹಾರ ಪತ್ತೆ

​ಕಾಸರಗೋಡು: ಸೈಬರ್ ಕ್ರಿಮಿನಲ್‌ಗಳಿಗೆ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡುವ ಜಾಲವನ್ನು ಭೇದಿಸಿರುವ ಪೊಲೀಸರು, ಲಕ್ಷಾಂತರ ರೂಪಾಯಿ ಸಂಶಯಾಸ್ಪದ ವ್ಯವಹಾರ ಪತ್ತೆಹಚ್ಚಿದ್ದಾರೆ.ಉಪ್ಪಳ ಕೈಕಂಬದ ವ್ಯಕ್ತಿಯೊಬ್ಬರ ಎಸ್‌ಬಿಐ ಖಾತೆಗೆ ಆನ್‌ಲೈನ್ ಟ್ರೇಡಿಂಗ್ ವಂಚನೆಯ 9.10 ಲಕ್ಷ ರೂಪಾಯಿ ಹಣ ಜಮೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ​ಫೆಬ್ರವರಿ 24ರಂದು 6.10 ಲಕ್ಷ ರೂ. ಹಾಗೂ ಮಾರ್ಚ್ 11ರಂದು 3 ಲಕ್ಷ ರೂ. ಈ ಖಾತೆಗೆ ವರ್ಗಾವಣೆಯಾಗಿದ್ದು, ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮೊಬೈಲ್‌ನ ವಾಟ್ಸಾಪ್ ಚಾಟ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳು ವಂಚನೆಯ…

Read More

ಮುಳಿಯಾರಿನಲ್ಲಿ ಮತ್ತೆ ಚಿರತೆ ಆತಂಕ:ಗ್ರಾಮಸ್ಥರಲ್ಲಿ ಭೀತಿ

ಕಾಸರಗೋಡು: ಮುಳಿಯಾರು ಭಾಗದಲ್ಲಿ ಚಿರತೆ ಆತಂಕ ಮತ್ತೆ ತೀವ್ರಗೊಂಡಿದೆ. ಮಂಗಳವಾರ ರಾತ್ರಿ ಸುಮಾರು 7:30ರ ವೇಳೆಗೆ ತೀಯಡ್ಕ-ಕುಟ್ಯಾನಂ ರಸ್ತೆಯಲ್ಲಿ ಆಸ್ಪತ್ರೆಯಿಂದ ಮನೆಗೆ ಸ್ಕೂಟರ್‌ನಲ್ಲಿ ಮರಳುತ್ತಿದ್ದ ಶಿವಪ್ರಿಯ ಎಂಬವರ ಮುಂದೆ ಸಾಕುನಾಯಿಯನ್ನು ಬಾಯಲ್ಲಿ ಕಚ್ಚಿಕೊಂಡಿದ್ದ ಚಿರತೆಯೊಂದು ದಿಢೀರ್ ಜಿಗಿದಿದೆ. ಸಮಯಪ್ರಜ್ಞೆಯಿಂದ ಸ್ಕೂಟರ್ ನಿಲ್ಲಿಸಿದ ಸವಾರ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ಇದಾಗಿ ಕೆಲವೇ ಹೊತ್ತಿನಲ್ಲಿ ಕುಂಞಪ್ಪಾರ ಬಳಿಯೂ ವಾಹನ ಸವಾರರು ಚಿರತೆಯೊಂದು ನಾಯಿಯನ್ನು ಎಳೆದೊಯ್ಯುತ್ತಿರುವುದನ್ನು ಕಂಡಿದ್ದಾರೆ. ಕೆಲವು ತಿಂಗಳ ಅಂತರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ. ವಿಷಯ…

Read More

ಆಳಸಮುದ್ರದಲ್ಲಿ ಮೀನುಗಾರಿಕೆ ವೇಳೆ ದೋಣಿಯಲ್ಲೇ ಕುಸಿದು ಹಿರಿಯ ಕಾರ್ಮಿಕ ಸಾವು

​ಕಾಸರಗೋಡು: ಆಳಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಹಿರಿಯ ಕಾರ್ಮಿಕರೊಬ್ಬರು ದೋಣಿಯಲ್ಲೇ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.ಅಡ್ಕತ್ತಬೈಲು ಶ್ರೀ ಸತ್ಯನಾರಾಯಣ ಮಠದ ಸಮೀಪದ ‘ಕೃಷ್ಣ ನಿಲಯ’ದ ಕೆ. ಬಾಬು (60) ಸಾವನ್ನಪ್ಪಿದ ದುರ್ದೈವಿ. ​ ಮಂಗಳವಾರ ಬೆಳಿಗ್ಗೆ ಎಂಟು ಮಂದಿಯ ಮೀನುಗಾರರ ತಂಡದೊಂದಿಗೆ ಇವರು ಸಮುದ್ರಕ್ಕೆ ತೆರಳಿದ್ದರು. ಕೆಲಸದ ನಡುವೆ ಬಾಬು ಅವರಿಗೆ ದಿಢೀರ್ ತೀವ್ರ ಎದೆನೋವು ಕಾಣಿಸಿಕೊಂಡು ದೋಣಿಯಲ್ಲೇ ಕುಸಿದುಬಿದ್ದರು.ತಕ್ಷಣವೇ ಇತರ ಮೀನುಗಾರರು ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

Read More

ಉದುಮ ಪಡಿಂಞ್ಞಾರ್‌ನಲ್ಲಿ ಯುವತಿ, 6 ವರ್ಷದ ಪುತ್ರಿ ದಿಢೀರ್ ನಾಪತ್ತೆ

​ಕಾಸರಗೋಡು: ಉದುಮ ಪಡಿಂಞ್ಞಾರ್‌ನಲ್ಲಿ ಸಹೋದರಿಯ ನಿವಾಸಕ್ಕೆ ತೆರಳಿದ್ದ ಯುವತಿ ಹಾಗೂ ಆಕೆಯ ಆರು ವರ್ಷದ ಪುತ್ರಿ ದಿಢೀರ್ ನಾಪತ್ತೆಯಾಗಿದ್ದಾರೆ.ಫಾತಿಮತ್ ಬುಶ್ರಾ (26) ಮತ್ತು ಆಕೆಯ ಆರರ ಹರೆಯದ ಪುತ್ರಿ ಕಾಣೆಯಾದ ನಿರ್ಭಾಗ್ಯಕರು.ಆಯಿಷತ್ ಮುಸ್ತಾನ ಎಂಬವರು ನೀಡಿದ ದೂರಿನ ಮೇರೆಗೆ ಬೇಕಲ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಮಂಗಳವಾರ ಮುಂಜಾನೆ 1 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ಸುಮಾರಿನ ನಡುವಿನ ಅವಧಿಯಲ್ಲಿ ಇವರಿಬ್ಬರೂ ಯಾರಿಗೂ ತಿಳಿಸದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರ ಪ್ರಥಮ…

Read More

5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿತೆ ದಸ್ತಗಿರಿ

ಮಂಗಳೂರು: ಮನೆ ಕೆಲಸದವರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಕಾವೂರು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಕಾವೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2019ರ ಕಲಂ 381 ಐಪಿಸಿ ಪ್ರಕರಣದಲ್ಲಿ, ಮಂಗಳೂರಿನ ಮಾನ್ಯ ಹಿರಿಯ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ LPC No. 05/2024ರ ಅಡಿಯಲ್ಲಿ ಲತಾ ಮಾರಿಯಾ (44) ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.ಆರೋಪಿತೆಯ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಕಾವೂರು ಪೊಲೀಸ್ ಠಾಣೆಯ ಅಧಿಕಾರಿ…

Read More

ತಾಜುಲ್ ಉಲಮಾ ಉಳ್ಳಾಲ ತಂಙಳ್ 13ನೇ ಉರೂಸ್ ಸೆ. 11ರಿಂದ 13ರವರೆಗೆ

ಮಂಗಳೂರು: ಸುಮಾರು 65 ವರ್ಷಗಳ ಕಾಲ ಉಳ್ಳಾಲವನ್ನು ಕೇಂದ್ರವಾಗಿರಿಸಿಕೊಂಡು ಕರ್ನಾಟಕ ಹಾಗೂ ಕೇರಳದ ಅಹ್ಲುಸ್ಸುನ್ನತಿ ವಲ್ ಜಮಾಅತ್‌ನ ಪ್ರಮುಖ ನಾಯಕರಾಗಿ, ಸಾವಿರಾರು ಉಲಮಾಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ವಿದ್ವತ್ ಕಿರೀಟ, ಆಧ್ಯಾತ್ಮಿಕ ನೇತಾರ ತಾಜುಲ್ ಉಲಮಾ ಶೈಖುನಾ ಉಳ್ಳಾಲ ತಂಙಳ್ (ಖ.ಸಿ.) ಅವರ 13ನೇ ಉರೂಸ್ ಸಮಾರಂಭವು ಸೆಪ್ಟೆಂಬರ್ 11, 12 ಹಾಗೂ 13ರಂದು ಕೇರಳದ ಎಟ್ಟಿಕುಳಂನಲ್ಲಿ ವಿವಿಧ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಉರೂಸ್ ಮಾಧ್ಯಮ ಸಮಿತಿ ಅಧ್ಯಕ್ಷ ತೌಸೀಫ್…

Read More

ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರಿಂದ ಸುರತ್ಕಲ್–ಚೇಳಾರು ನಿವೇಶನಗಳ ಪರಿಶೀಲನೆ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸನ್ಮಾನ್ಯ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅವರು, ಸುರತ್ಕಲ್–ಚೇಳಾರು ವ್ಯಾಪ್ತಿಯ ಮೂಡ ನಿವೇಶನಗಳ ಪ್ರಸ್ತುತ ಸ್ಥಿತಿಗತಿ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರಿಗೆ ನಿವೇಶನ ಹಂಚಿಕೆ/ಬಳಕೆಗೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ಮೂಡ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ನಿವೇಶನಗಳ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

Read More
error: Content is protected !!