ಪಂಚಾಯತ್ ಬಾವಿಗೆ ಹಾರಿ ಮಧ್ಯವಯಸ್ಕ ಆತ್ಮಹತ್ಯೆ

​ಮಂಜೇಶ್ವರ: ಉಪ್ಪಳ ಸಮೀಪದ ಕೋಡಿಬಯಲ್, ಯಶೋನಂದನ ನಗರದ ನಿವಾಸಿ ಮಂಜುನಾಥ (53) ಎಂಬುವರು ಪಂಚಾಯತ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಮೃತರು ದಿವಂಗತ ವಾಸು ಎಂಬುವರ ಪುತ್ರನಾಗಿದ್ದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ದುರಸ್ತಿಗೊಳಿಸಲಾಗಿದ್ದ ಈ ಬಾವಿಯ ನೀರನ್ನು ಹಲವು ಕುಟುಂಬಗಳು ಕುಡಿಯಲು ಬಳಸುತ್ತಿದ್ದವು.​ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪ್ಪಳ ಅಗ್ನಿಶಾಮಕ ದಳ ಮತ್ತು ಮಂಜೇಶ್ವರ ಪೊಲೀಸರು ಮಂಜುನಾಥ ಅವರನ್ನು ಬಾವಿಯಿಂದ ಹೊರತೆಗೆದರಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

Read More

ಶಿರಿಯಾ ಹೊಳೆಯಲ್ಲಿ ಯುವಕ ನಾಪತ್ತೆ: ಕಾರ್ಯಾಚರಣೆ ತೀವ್ರಗೊಳಿಸಲು ಸಚಿವ ಅಬ್ದುಲ್ ಗಫೂರ್ ಸೂಚನೆ

​ಕಾಸರಗೋಡು: ಶಿರಿಯಾ ಹೊಳೆಯಲ್ಲಿ ಪೊಲೀಸರನ್ನು ಕಂಡು ಈಜಲು ಹೋಗಿ ನಾಪತ್ತೆಯಾಗಿರುವ ಆರಿಕ್ಕಾಡಿ ಮೂಲದ ಇಬ್ರಾಹಿಂ (35) ಹುಡುಕಾಟ ಮೂರನೇ ದಿನಕ್ಕೂ ಮುಂದುವರಿದಿದೆ.ಕುಂಬಳೆ ಪೊಲೀಸ್, ಕರಾವಳಿ ಪೊಲೀಸ್, ಮೀನುಗಾರರಲ್ಲದೆ ಫಿಶರೀಸ್‌ನ ಎರಡು ಬೋಟ್‌ಗಳು ಹಾಗೂ ಸ್ಕೂಬಾ ತಂಡ ಸಮುದ್ರ ಭಾಗದಲ್ಲೂ ಶೋಧ ನಡೆಸುತ್ತಿವೆ. ​ಸೋಮವಾರ ರಾತ್ರಿ ಅಕ್ರಮ ಮರಳು ಸಾಗಾಣಿಕೆ ತಡೆಯಲು ಬಂದ ಪೊಲೀಸರನ್ನು ಕಂಡು ದೋಣಿಯಿಂದ ಹೊಳೆಗೆ ಹಾರಿದ ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದು, ಇಬ್ರಾಹಿಂ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದರು. ​ಈ ನಡುವೆ, ಮೀನುಗಾರಿಕೆ…

Read More

ತಾಯಿಯ ಮೇಲಿನ ಪ್ರೀತಿ, ಗೌರವದ ಬಗ್ಗೆ 10 ವರ್ಷದ ಬಾಲಕನ ಅದ್ಭುತ ಭಾಷಣ

​ಮಂಜೇಶ್ವರ: ತಾಯಿಯ ಮೇಲಿನ ಪ್ರೀತಿ, ಗೌರವ ಮತ್ತು ಆಕೆಗೆ ನೀಡಬೇಕಾದ ಸ್ಥಾನಮಾನದ ಕುರಿತು ಅತ್ಯಂತ ಪ್ರಬುದ್ಧವಾಗಿ ಹಾಗೂ ವಾಕ್ಚಾತುರ್ಯದಿಂದ ಮಾತನಾಡಿದ 10 ವರ್ಷದ ಬಾಲಕನೊಬ್ಬನ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ​ಇಲ್ಲಿಗೆ ಸಮೀಪದ ಬಾಯಿಕಟ್ಟೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಮಿಲಾದುನ್ನಬಿ’ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂದಿದೆ. ಬಾಯಿಕಟ್ಟೆಯ ‘ಬದುರುಲ್ ಉಲೂಮ್ ಮದ್ರಸ’ದ 5ನೇ ತರಗತಿ ವಿದ್ಯಾರ್ಥಿ, ಸ್ಥಳೀಯ ನಿವಾಸಿ ಕರೀಂ ಎಂಬವರ ಪುತ್ರ ಮೊಹಮ್ಮದ್ ಅಬ್ದುಲ್ಲಾ ಈ ಅದ್ಭುತ ವಾಕ್ಚಾತುರ್ಯದ ಮೂಲಕ ಎಲ್ಲರ…

Read More

ಬೆದ್ರಡ್ಕ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿ ಅಮ್ಮು ಪೂಜಾರಿ ನಿರಾಳ ನಿಧನ

ಸಿರಿಬಾಗಿಲು: ಬೆದ್ರಡ್ಕ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿಗಳಾದ ಅಮ್ಮು ಪೂಜಾರಿ ನಿರಾಳ (73) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಸೆಪ್ಟೆಂಬರ್ 8, 2026ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡು ಕೇರ್‌ವೆಲ್ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮಕ್ಕಳಾದ ಆಶಾ ಚಂದ್ರಹಾಸ, ಉಷಾ ವಿಶ್ವನಾಥ, ಲೋಹಿತ್ ಕುಮಾರ್, ವಿದ್ಯಾ ಹಾಗೂ ಅಭಿತ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.ಅವರ ನಿಧನದ ಸುದ್ದಿ ತಿಳಿದು ನಾಡಿನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಭಕ್ತವೃಂದದವರಿಗೆ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ

Read More

ಮಕ್ಕಳಿಗಾಗಿ ಆವೆ ಮಣ್ಣಿನ ಗಣಪತಿ ವಿಶೇಷ ರಚನಾ ಸ್ಪರ್ಧೆ …. !

ಮಂಗಳೂರು: ಶರಧಿ ಪ್ರತಿಷ್ಠಾನ (ರಿ.) ಹಾಗೂ ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಆವೆ ಮಣ್ಣಿನ ಗಣಪತಿ ಮೂರ್ತಿ ರಚನಾ ಸ್ಪರ್ಧೆ ಸೆ.13ರಂದು ಲಾಲ್‌ಬಾಗ್‌ನ ಸೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿದೆ ಎಂದು ಕರಾವಳಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಯಾಜಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಸೃಜನಶೀಲತೆ, ಕಲಾ ಆಸಕ್ತಿ ಹಾಗೂ ಪರಿಸರ ಕಾಳಜಿ ಬೆಳೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆಯನ್ನು…

Read More

ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳಿಗೆ ಅಧಿಕ ದರ: ಮಾಲೀಕರಿಗೆ 15 ದಿನಗಳ ಗಡುವು

ತಿರುವನಂತಪುರಂ: ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳಿಗೆ ಅಧಿಕ ದರ ವಿಧಿಸುತ್ತಿರುವ ಕುರಿತು ತಿರುವನಂತಪುರಂ ಮೇಯರ್ ಹಾಗೂ ಚಿತ್ರಮಂದಿರ ಮಾಲೀಕರ ನಡುವೆ ಚರ್ಚೆ ನಡೆಯಿತು. ಉತ್ಪನ್ನಗಳ ಬೆಲೆಯನ್ನು ನಿಯಂತ್ರಿಸುವ ಅಧಿಕಾರ ಮಹಾನಗರ ಪಾಲಿಕೆಗೆ ಇಲ್ಲ. ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ನೀಡುವಂತೆ ಸೂಚಿಸಲಾಗಿದೆ. ಮಕ್ಕಳ ಆಹಾರವನ್ನು ಚಿತ್ರಮಂದಿರದ ಒಳಗೆ ಕೊಂಡೊಯ್ಯುವುದಕ್ಕೆ ಯಾವುದೇ ಅಡ್ಡಿ ಇರಬಾರದು. ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಪರವಾನಗಿ ಮಾನದಂಡಗಳನ್ನು ಉಲ್ಲಂಘಿಸಬಾರದು. ಈ ವಿಚಾರಗಳಲ್ಲಿ ಮಹಾನಗರ ಪಾಲಿಕೆಯ ಕಡೆಯಿಂದ ಯಾವುದೇ ರಾಜಿ ಇರುವುದಿಲ್ಲ. ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲು…

Read More

ಇ.ಡಿ ವಿರುದ್ಧ ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್ ತೀವ್ರ ವಾಗ್ದಾಳಿ

ಇ.ಡಿ ವಿರುದ್ಧ ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ಇ.ಡಿ ಮಾಡುತ್ತಿರುವ ವಿಚಾರಗಳನ್ನು ರಾಜಕೀಯವಾಗಿಯೇ ಎದುರಿಸಲಾಗುವುದು ಎಂದು ಅವರು ಹೇಳಿದರು. ಕರುವನ್ನೂರು ಬ್ಯಾಂಕ್‌ನಲ್ಲಿ ಕೆಲವರು ತಪ್ಪುಗಳನ್ನು ಮಾಡಿದಾಗ ಬಲವಾದ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇ.ಡಿ ಅಲ್ಲಿಗೆ ತೆರಳಿ ಇಡೀ ಒಂದು ಪಕ್ಷವನ್ನೇ ಆರೋಪಿ ಮಾಡಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದರು. ಇತ್ತಿತ್ತಾನಂ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಈ ಕುರಿತು ಪ್ರತಿಕ್ರಿಯಿಸಿದರು. ಕರುವನ್ನೂರು ಬ್ಯಾಂಕ್‌ನಲ್ಲಿ ಕೆಲವರು ತಪ್ಪುಗಳನ್ನು ಮಾಡಿದಾಗ ಬಲವಾದ…

Read More

ಕುದ್ರೋಳಿಯಲ್ಲಿ ಗಣೇಶ ಚತುರ್ಥಿ ಸಂಭ್ರಮ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.14ರಂದು ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 8ಕ್ಕೆ ಗುರು ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಸ್ವಸ್ತಿ ಪುಣ್ಯವಾಚನ, 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ಮಹಾಗಣಪತಿ ದೇವರಿಗೆ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹಾಗೂ 1008 ತೆಂಗಿನಕಾಯಿಯ ಪಲ್ಲಪೂಜೆ, ಅನಂತರ ಭಕ್ತರಿಗೆ ತೆನೆ ವಿತರಿಸಲಾಗುವುದು. ರಾತ್ರಿ 8 ಗಂಟೆಗೆ ಮಹಾಗಣಪತಿಗೆ ರಂಗಪೂಜೆ ಜರುಗಲಿದೆ. ಬೆಳಗ್ಗೆ 10.30ಕ್ಕೆ ನವರಾತ್ರಿ ಉತ್ಸವಕ್ಕೆ ಶಾರದಾ ಮಾತೆಯ ಮೂರ್ತಿ ರಚನೆಗೆ…

Read More

ನೆಲ್ಯಾಡಿಯಲ್ಲಿ ಯು-ಟರ್ನ್‌ಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ನೆಲ್ಯಾಡಿ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಹಾಗೂ ಬೆಥನಿ ವಿದ್ಯಾಸಂಸ್ಥೆ ನಡುವೆ ಯು-ಟರ್ನ್ ಕಲ್ಪಿಸುವಂತೆ ಆಗ್ರಹಿಸಿ ಸೆ.9ರಂದು ಬೆಳಗ್ಗೆಯಿಂದ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ನೆಲ್ಯಾಡಿ ವ್ಯಾಪ್ತಿಯ 51ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿದ್ದು ಹೆದ್ದಾರಿ ಇಲಾಖೆ ಅಧಿಕಾರಿಗಳು ಬರುವ ತನಕ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ನೆಲ್ಯಾಡಿ ಸಂತಜಾರ್ಜ್ ಹಾಗೂ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯು-ಟರ್ನ್ ಕಲ್ಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ…

Read More

ಕುಂಜತ್ತಬೈಲ್‌ನಲ್ಲಿ ಮನೆಗೆ ಜೆಸಿಬಿಯಿಂದ ಹಾನಿ: ಲ್ಯಾಂಡ್ ಮಾಫಿಯಾ ವಿರುದ್ಧ ಆರೋಪ

ಮಂಗಳೂರು: ನಗರದ ಅಭಿವೃದ್ಧಿಯ ವೇಗ ಹೆಚ್ಚುತ್ತಿರುವ ಬೆನ್ನಲ್ಲೇ ಭೂಮಿಯ ಬೆಲೆ ಏರಿಕೆಯನ್ನು ಬಳಸಿಕೊಂಡು ಬಡವರ ಜಾಗಗಳನ್ನು ಕಬಳಿಸಲು ಭೂ ಮಾಫಿಯಾ ಸಕ್ರಿಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತಬೈಲ್‌ನಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಿ.ಜೆ. ಜೋಯ್ ಅವರ ಮನೆಗೆ ಜೆಸಿಬಿಯಿಂದ ಹಾನಿ ಮಾಡಿರುವ ಘಟನೆ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೋ ಆರೋಪಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೇರಳದವರಾದ ಸಿ.ಜೆ. ಜೋಯ್ ಕಳೆದ ಸುಮಾರು…

Read More
error: Content is protected !!