ಜಲಜೀವನ್ ಮಿಷನ್ ಕಾಮಗಾರಿ ಅವ್ಯವಸ್ಥೆ: ಕೃಷಿಕರ ತೋಟಕ್ಕೆ ನುಗ್ಗಿದ ಮಳೆನೀರು
ಉಡುಪಿ: ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ರಾಪುರದ ಕಪ್ಪೆ ಹೊಂಡ ಪ್ರದೇಶದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಯ ಅವ್ಯವಸ್ಥೆಯಿಂದ ಸ್ಥಳೀಯ ಕೃಷಿಕರೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಕಾಮಗಾರಿ ವೇಳೆ ರಸ್ತೆ ಬದಿಯ ಚರಂಡಿಯನ್ನು ಮುಚ್ಚಿರುವ ಪರಿಣಾಮ ಮೊದಲ ಮಳೆಯಲ್ಲೇ ನೀರು ಕೃಷಿ ಭೂಮಿಗೆ ನುಗ್ಗಿ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕೃಷಿಕ ಮಾಧವ ಭಂಡಾರಿ ಅವರ ತೋಟಕ್ಕೆ ಮಳೆನೀರು ಹರಿದು ಬಂದು ಭೂಮಿ ಜಲಾವೃತಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ರಸ್ತೆ…
