ಕುಂಬಳೆಯಲ್ಲಿ ಟ್ರಾಫಿಕ್ ನಿರ್ಧಾರ ಜಾರಿಗೆ ವಿಳಂಬ: ವ್ಯಾಪಾರಿಗಳಿಂದ ಪ್ರತಿಭಟನೆ ಎಚ್ಚರಿಕೆ
ಕುಂಬಳೆ, ಮೇ 7: ಕುಂಬಳೆ ಪಟ್ಟಣದಲ್ಲಿ ಜಾರಿಗೆ ತರಲಾಗಿದ್ದ ಟ್ರಾಫಿಕ್ ವ್ಯವಸ್ಥೆಯ ನಿರ್ಧಾರ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಹಿಂದಿನ ಪಂಚಾಯತ್ ಆಡಳಿತ ಸಮಿತಿ 2025ರ ಅಕ್ಟೋಬರ್ 23ರಂದು ಕೈಗೊಂಡ ನಿರ್ಧಾರದಂತೆ, ಪೇರಾಲ್ ಕಣ್ಣೂರು, ಸೀತಾಂಗೋಳಿ, ಪೆರ್ಲ, ಸುಳ್ಯ, ಬದಿಯಡ್ಕ ಮತ್ತು ಮುಳ್ಳೇರಿಯಾ ಭಾಗಗಳಿಗೆ ತೆರಳುವ ಬಸ್‌ಗಳು ಪ್ರಯಾಣಿಕರ ಅನುಕೂಲಕ್ಕಾಗಿ ಹಳೆಯ ಬಸ್ ನಿಲ್ದಾಣದಲ್ಲಿ ಐದು ನಿಮಿಷ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಳಿಸುವ ವ್ಯವಸ್ಥೆ ಜಾರಿಗೊಳಿಸಲು ಸೂಚಿಸಲಾಗಿತ್ತು. ಆದರೆ ಇದುವರೆಗೆ ಈ ನಿರ್ಧಾರ ಜಾರಿಯಾಗದ…
