ಕುಂಬಳೆ, ಮೇ 7: ಅಮಾನತುಲ್ ಇಸ್ಲಾಂ ಮದ್ರಸ ವತಿಯಿಂದ ವಾರ್ಷಿಕೋತ್ಸವ, ಧಾರ್ಮಿಕ ಜ್ಞಾನ ಸಮ್ಮೇಳನ ಹಾಗೂ ಇಸ್ಲಾಮಿಕ್ ಕಥಾಪ್ರಸಂಗ ಕಾರ್ಯಕ್ರಮವು ಮೇ 9ರಿಂದ 13ರವರೆಗೆ ಬದರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 9ರಂದು ಸಂಜೆ 7 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಉದ್ಘಾಟಿಸಲಿದ್ದು, ಡಾ. ಫಾರೂಖ್ ನಯೀಮಿ ಹಿಜ್ರ ಎಕ್ಸ್ಪೆಡಿಷನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮೇ 10 ಮತ್ತು 11ರಂದು ಖ್ಯಾತ ಕಥಾಪ್ರಸಂಗಕಾರ ಸುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಹಾಗೂ ತಂಡದಿಂದ ಇಸ್ಲಾಮಿಕ್ ಕಥಾಪ್ರಸಂಗ ನಡೆಯಲಿದೆ.
ಮೇ 12ರಂದು ನೌಷಾದ್ ಬಾಖವಿ ಚಿರಯಂಕೀಳ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮೇ 13ರಂದು ಸಂಜೆ 4 ಗಂಟೆಗೆ ಪ್ರವಾಸಿ ಮೀಟ್ ಮತ್ತು ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮವನ್ನು ಎ.ಕೆ.ಎಂ. ಅಶ್ರಫ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಆಳ್ವ, ಬ್ಲಾಕ್ ಪಂಚಾಯತ್ ಸದಸ್ಯ ಬಶೀರ್ ಕೊಟ್ಟುಡಲ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಶ್ರೀನಿವಾಸನ್ ಮಾಸ್ಟರ್ ಶುಭಾಶಯ ಭಾಷಣ ಮಾಡಲಿದ್ದಾರೆ.
ಅದೇ ದಿನ ರಾತ್ರಿ 8 ಗಂಟೆಗೆ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಪ್ರಾರ್ಥನಾ ಸಭೆ ನಡೆಯಲಿದ್ದು, ಸಲಾಂ ಫೈಝಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಶಿದ್ ಹಿಮಮಿ ಸಖಾಫಿ ನೇತೃತ್ವ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಒಡುವಾರ್, ಸ್ವಾಗತ ಸಮಿತಿ ಅಧ್ಯಕ್ಷ ರಫೀಕ್ ರೋಲೆಕ್ಸ್, ಸಂಚಾಲಕ ಹಾರಿಸ್ ಸಿ.ಎಚ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.