ಮಂಜೇಶ್ವರ ತೂಮಿನಾಡಿನಿಂದ ಎಸ್‌ಐಆರ್ ಪರಿಷ್ಕರಣೆಗೆ ಅಧಿಕೃತ ಚಾಲನೆ
ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡಿನಿಂದ ಎಸ್‌ಐಆರ್ ಪರಿಷ್ಕರಣೆಗೆ ಅಧಿಕೃತ ಚಾಲನೆ ದೊರಕಿತು. ಸ್ಥಳೀಯ ಹಿರಿಯ ಪತ್ರಕರ್ತ ಅಬ್ದುಲ್ ರಹ್ಮಾನ್ ರವರಿಗೆ ಬೂತ್ ಲೆವಲ್ ಅಧಿಕಾರಿ ಹರಿಣಾಕ್ಷಿ ಫಾರಂ ಹಸ್ತಾಂತರಿಸುವ ಮೂಲಕ ಈ ಪ್ರಕ್ರಿಯೆಗೆ ಕೇರಳದ ತುದಿಯಿಂದ ಆರಂಭವಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತದಾರರ ಪಟ್ಟಿಯ ನಿಖರತೆ ಮತ್ತು ನವೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಪ್ರತಿ ಅರ್ಹ ನಾಗರಿಕರೂ ತಮ್ಮ ಹೆಸರು, ವಿಳಾಸ ಮತ್ತು ಇತರೆ ವಿವರಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಮನವಿ ಮಾಡಿದರು. ಎಸ್‌ಐಆರ್…