ಕುಂಬಳೆ ಗ್ರಾಮ ಪಂಚಾಯತ್ ಆಡಳಿತ ಪಕ್ಷದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮೇ 26 ರಂದು ಮತಕ್ಕೆ

ಕುಂಬಳೆ ಭ್ರಷ್ಟಾಚಾರ ಹಗರಣದ ಆರೋಪವನ್ನು ಎದುರಿಸುತ್ತಿರುವ ಕುಂಬಳೆ ಗ್ರಾಮ ಪಂಚಾಯತ್ ನ ಮುಸ್ಲಿಂ ಲೀಗ್ ಆಡಳಿತ ಸಮಿತಿಯನ್ನು ಪ್ರಶ್ನಿಸಿ ವಿರೋಧ ಪಕ್ಷ ಬಿಜೆಪಿ ನೀಡಿದ ಅವಿಶ್ವಾಸ ಗೊತ್ತುವಳಿ ಮೇ 26 ರಂದು ನಿರ್ಧಾರವಾಗಲಿದೆ.ಚುನಾವಣಾಧಿಕಾರಿಯಾದ ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಜೋನ್ ಎ ಡಿಕ್ರೂಸ್ ರವರಿಗೆ ಬಿಜೆಪಿ ಇತ್ತೀಚಿಗೆ ಅವಿಶ್ವಾಸ ಗೊತ್ತುವಳಿಯ ನೋಟೀಸು ನೀಡಿತ್ತು.ಕುಂಬಳೆ ಪಂಚಾಯತ್ ನಲ್ಲಿ ಕಳೆದ ನಾಲ್ಕು ವರೆ ವರ್ಷಗಳಿಂದ ನಡೆದ ಭ್ರಷ್ಟಾಚಾರದ ತನಿಖೆ ಯಾಗಬೇಕು .ಸರಕಾರಿ ಆಡಳಿತ ಯಂತ್ರ ದುರುಪಯೋಗ ,ಸರಕಾರಿ ಸೊತ್ತು ಕಬಳಿಸಿದವರಿಗೆ ಕಾನೂನಾತ್ಮಕ…

Read More

ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ ಹಾಗೂ ನೂತನ ವಿವೇಕ ಕೊಠಡಿಯ ಉದ್ಘಾಟನೆ:

ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ ಹಾಗೂ ನೂತನ ವಿವೇಕ ಕೊಠಡಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, 2022-23ನೇ ಸಾಲಿನ ವಿವೇಕ ಯೋಜನೆಯ ಕೊಠಡಿಗಳು ಇದಾಗಿದೆ. ಈ ಕಾಲೇಜಿನ ವಿಜ್ಞಾನ ಪ್ರಯೋಗ ಶಾಲೆಯ ಉನ್ನತೀಕರಣಕ್ಕೆ ಬೇಡಿಕೆಯಿದ್ದು, ಎಂ.ಆರ್.ಪಿ.ಎಲ್, ಎಂ.ಸಿ.ಎಫ್ ನಂತಹ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಸಿಎಸ್ಆರ್ ಅನುದಾನದ ಮೂಲಕ ಬೇಡಿಕೆಯನ್ನು ಪೂರ್ಣ ಗೊಳಿಸಲು ಪ್ರಯತ್ನಿಸಲಾಗುವುದು. ಇದೇ ವೇಳೆ…

Read More

ಅರಂತೋಡು ಘನ ತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು – ₹5 ಲಕ್ಷ ಅನುದಾನ ಮಂಜೂರು

ಮಂಗಳೂರು : ಆಕಸ್ಮಿಕ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಸುಳ್ಯದ ಅರಂತೋಡು ಘನ ತ್ಯಾಜ್ಯ ನಿರ್ವಹಣಾ ಘಟಕದ ಮರುಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಅನುದಾನದಿಂದ ₹5 ಲಕ್ಷ ಹಣವನ್ನು ಮಂಜೂರು ಮಾಡಿದ್ದಾರೆ.ಈ ಕುರಿತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿದ ಶಾಸಕರು, ಈ ಘಟಕದ ಪುನರ್ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಶ್ರೀ ಬೃಜೇಶ್…

Read More

ಭಾರೀ ಮಳೆಯಿಂದಾಗಿ ವರ್ಕಾಡಿಯ ವಿವಿದೆಡೆ ವ್ಯಾಪಕ ನಾಶನಷ್ಟ:ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಿವಿದೆಡೆ ಬೇಟಿ :

ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ವಿಧಾನಸಭಾ ಕ್ಷೇತ್ರದ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ವರ್ಕಾಡಿ ಬೊಡೋಡಿ, ಮತ್ತು ಪೊಯ್ಯತ್ ಬಯಲು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಕೃಷಿ ಮತ್ತು ಆಸ್ತಿಪಾಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ. ಅಲ್ಲದೆ, ತಿಮ್ಮಂಗನೂರು ಅಣೆ-ನಡಿಬಯಲು ರಸ್ತೆಯಲ್ಲಿ ಭೂಕುಸಿತದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್., ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ವೋರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ್ ಪೊಯ್ಯ, ಹಿರಿಯ ಮುಖಂಡ ಧೂಮಪ್ಪ ಶೆಟ್ಟಿ, ಹಾಗೂ…

Read More

ಅನಾಹುತಕ್ಕೆ ಆಹ್ವಾನಿಸುತ್ತಿರುವ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುವ ಫೂಟ್ ಪಾತ್

ಮಂಗಳೂರು : ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುವ ಫೂಟ್ ಪಾತ್ ರಸ್ತೆಯು ಜರಿದು ಗುಂಡಿಯಾಗಿದ್ದು ಪಾದಚಾರಿಗಳ ಅನಾಹುತಕ್ಕೆ ಆಸ್ಪದವನ್ನು ನೀಡುವಂತಿದೆ. ದಿನವೂ ಕಿಕ್ಕಿರಿದು ನೆರೆದು ಸಂಚರಿಸುವ ರಸ್ತೆಯು ಮಳೆಯಿಂದ ಹಾನಿಯಾಗಿದೆ. ಮಾತ್ರವಲ್ಲದೆ ಈ ಮೊದಲೇ ಅಲ್ಲಿ ಇದ್ದ ಡ್ರೈನೇಜ್ ಗುಂಡಿಯು ಬಾಯಿ ತೆರೆದಿದ್ದು ಅಪಾಯವನ್ನು ಹೆಚ್ಚಿಸುತ್ತಿದೆ . ಸ್ಥಳೀಯರು ಹೇಳುವಂತೆ ಈ ಗುಂಡಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಿದ್ದ ಘಟನೆ ಕೆಲವೇ ದಿನಗಳ ಹಿಂದೆ ನಡೆದಿದೆ. ಅಪಾಯ ಕಣ್ಣೆದುರಿಗೇ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮವನ್ನು…

Read More

ವರ್ಕಾಡಿ ಕಜೆ ಪ್ರದೇಶದಲ್ಲಿ ಭೀಕರ ಭೂಕುಸಿತ .ಅಪಾಯದ ಅಂಚಿನಲ್ಲಿ ಸ್ಥಳೀಯರು

ಮಂಜೇಶ್ವರ: ಮಂಜೇಶ್ವರದ ವರ್ಕಾಡಿ ಕಜೆ ಪ್ರದೇಶದಲ್ಲಿ ಭೂಮಿ ಕುಸಿದು ಅಪಾಯದ ಸ್ಥಿತಿ ಉಂಟಾಗಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಭೂಕುಸಿತದ ಪರಿಣಾಮವಾಗಿ ಸುಮಾರು 10 ಮೀಟರ್ ಆಳದ ಎರಡು ದೊಡ್ಡ ಗುಂಡಿಗಳು ಸೃಷ್ಟಿಯಾಗಿದೆ. ಈ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಭೂಮಿ ಕುಸಿದಿದ್ದು, ಆ ಭಾಗದ ನೆಲ ಬಿರುಕು ಬಿಟ್ಟಿದೆ. ಈ ಕಾರಣದಿಂದಾಗಿ ಸ್ಥಳೀಯ ನಿವಾಸಿಗಳಾದ ಅವ್ವಮ್ಮ, ಅಸಿಯಮ್ಮ, ಅಹ್ಮದ್ ಕುಞಿ ಮೊಂಟಾದವರನ್ನು ಸ್ಥಳೀಯರ ಸಹಾಯದಿಂದ ಮೊದಲೇ…

Read More

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷಚೇತನರ ಸಮಸ್ಯೆ ಪರಿಹಾರಕ್ಕೆ ಶಾಸಕ ಮಂಜುನಾಥ ಭಂಡಾರಿ ಒತ್ತಾಯ!

ಕುಂದಾಪುರ: ಕುಂದಾಪುರ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ವಿಶೇಷಚೇತನರ ಪ್ರಮಾಣಪತ್ರ ಮಾಡಿಸಲು ಕುಂದಾಪುರ ಮತ್ತು ಬೈಂದೂರಿನ ಬೇರೆ ಬೇರೆ ಕಡೆಗಳಿಂದ ಬಂದಿದ್ದ ವಿಶೇಷಚೇತನರು ಪ್ರಮುಖ ಶಸ್ತ್ರಚಿಕಿತ್ಸಕ ವೈದ್ಯರು ಲಭ್ಯವಾಗದ ಕಾರಣ ಪ್ರಮಾಣಪತ್ರ ಸಿಗದೆ ನಿರಾಶರಾಗಿ ವಾಪಸ್ ಆದ ಘಟನೆ ಇತ್ತೀಚಿಗೆ ನಡೆದಿದ್ದು ಕೂಡಲೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ವೈದ್ಯರನ್ನು ನೇಮಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪತ್ರಮುಖೇನ ಒತ್ತಾಯಿಸಿದ್ದಾರೆ….

Read More

ಪೊಲೀಸರ ಮಿಂಚಿನ ಕಾರ್ಯಕ್ಕೆ ತಗಲು ಹಾಕಿಕೊಂಡ ಮಾಸ್ಟರ್ ಮೈಂಡ್ ರೋಹನ್ ಸಾಲ್ಡಾನ ಬಂಧನ

ಮಂಗಳೂರು: ಸಾಲ ಕೊಡುವ ಆಮಿಷವೊಡ್ಡಿ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳಿಂದ 200 ಕೋಟಿಗೂ ಅಧಿಕ ಹಣವನ್ನು ವಂಚಿಸಿದ ಆರೋಪಿ ರೋಹನ್ ಸಲ್ಡಾನಾ (45) ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ತನ್ನ ಐಷಾರಾಮಿ ಬಂಗಲೆಯಲ್ಲಿ ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಂಗಲೆಯಲ್ಲಿ ಗುಪ್ತ ಕೊಠಡಿ (ಹೈಡ್ ಔಟ್ ರೂಮ್) ಇರುವುದು ಕೂಡ ಪತ್ತೆಯಾಗಿದೆ. ರೋಹನ್ ಸಲ್ಡಾನಾ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು, ಭೂ ವ್ಯವಹಾರ ಮತ್ತು ಉದ್ಯಮದಲ್ಲಿ…

Read More

ಕೇರಳ ಸ್ಥಳೀಯಾಡಳಿತ ಚುನಾವಣಾ ಸನ್ನಿಹಿತ : ಎಡರಂಗ ಸರಕಾರಕ್ಕೆ ಸವಾಲುಗಳ ಸರಮಾಲೆ

ತಿರುವನಂತಪುರಂ : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ತ್ರಿಸ್ತರ ಪಂಚಾಯತ್ ನ ಸ್ಥಳೀಯಾಡಳಿತ ಚುನಾವಣೆಗಳು ಬಹುತೇಕ ಸೆಪ್ಟೆಂಬರ್ ಒಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಇದಕ್ಕೆ ಬೇಕಾಗಿ ಚುನಾವಣಾ ಆಯೋಗವು ವಾರ್ಡ್ ವಿಭಜನೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ಮಗ್ನವಾಗಿದೆ. 2026 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿರುವ ಎಡರಂಗ ಸರಕಾರಕ್ಕೆ ಸ್ಥಳೀಯಾಡಳಿತ ಚುನಾವಣೆಯ ಸಮಯ ಸನ್ನಿಹಿತವಾಗುವ ಸಮಯದಲ್ಲೇ ಒಂದೊಂದೇ ಸವಾಲುಗಳು ಎದುರಾಗುತ್ತಿದೆ. ಇದು ಆಡಳಿತ ಪಕ್ಷದ…

Read More

ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವ್ಯಾಪಕ , ರಾಜಕೀಯ ನಾಯಕರು ಶಾಮೀಲಾಗಿರುವ ಸಾಧ್ಯತೆ .ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ ಶಾಸಕ ವೈ ಭರತ್ ಶೆಟ್ಟಿ :

ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಸಾಕಷ್ಟು ವಿದ್ಯಾ ಕೇಂದ್ರಗಳಿವೆ.ಆದರೆ ಈ ಭಾಗದಲ್ಲಿನ ಡ್ರಗ್ಸ್ ಹಾವಳಿಗೆ ಅನೇಕ ಯುವಕರು ಬಲಿಯಾಗುತ್ತಿದ್ದಾರೆ ಇದನ್ನು ಸರಕಾರ ತಡೆಯುವಲ್ಲಿ ವಿಫಲವಾಗಿದೆ. ಈ ಭಾಗಗಳಿಗೆ ತೆಲಂಗಾಣ,ಮಹಾರಾಷ್ಟ್ರ,ಕೇರಳ ಭಾಗದಿಂದ ಡ್ರಗ್ಸ್ ಪೂರೈಕೆಯಾಗುತ್ತಿದೆ.ಕರ್ನಾಟಕ ಸರಕಾರದಿಂದ ಡ್ರಗ್ಸ್ ಜಾಲವನ್ನು ಸರಿಯಾಗಿ ಬೇಧಿಸುವ ಪ್ರಯತ್ನಗಳು ನಡೆಯುತ್ತಿಲ್ಲ ಜೊತೆಗೆ ರಾಜಕೀಯ ನಾಯಕರು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳು ಆತಂಕಕಾರಿ ವಿಷವಾಗಿದೆ ಎಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಉತ್ತರ ವಲಯದ ಶಾಸಕರಾದ ವೈ ಭರತ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು . ಸುದ್ದಿಗೋಷ್ಠಿಯಲ್ಲಿ…

Read More
error: Content is protected !!