ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಗುಡ್ಡ ಕುಸಿದು ಮನೆಗೆ ಹಾನಿ. ಮನೆಯವರು ಪ್ರಾಣಾಪಾಯದಿಂದ ಪಾರು
ಕಾಸರಗೋಡು : ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಜನರು ಅಕ್ಷರಶಹ ತತ್ತರಿಸಿ ಹೋಗಿದ್ದಾರೆ . ಗಡಿನಾಡು ಕಾಸರಗೋಡಿನಲ್ಲಿ ನಡೆದ ಘಟನೆ ನಿದ್ರೆಯಲ್ಲಿದ್ದವರಿಗೆ ಒಂದು ಕ್ಷಣ ಯವಲೋಕದ ದರ್ಶನವನ್ನೇ ಮಾಡಿಸಿದೆ .ಹಂಚು ಹಾಕಿದ ಮನೆಯ ಮೇಲೆಯೇ ಗುಡ್ಡ ಕುಸಿದು ಮನೆ ಭಾಗಶಃ ಹಾನಿಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಚಂದ್ರಗಿರಿಯ ನಡಕ್ಕಾಲ್ ಎಂಬಲ್ಲಿ ನಡೆದಿದೆ . ಚಂದ್ರಗಿರಿ ನಡಕ್ಕಾಲ್ ಗ್ರಾಮದಲ್ಲಿ ವಾಸಿಸುವ ಮಿತೇಶ್ ಎಂಬವರ ಮನೆಗೆ ಸಮೀಪದ ಗುಡ್ಡ ನಿನ್ನೆ ರಾತ್ರಿ ಸುರಿದ ಭೀಕರ ಮಳೆಗೆ ಕುಸಿದಿದೆ…