33.5ಕಿಲೋ ಗಾಂಜಾ ಸಹಿತ ಸೋಂಕಾಲ್ ನಿವಾಸಿಯ ಬಂಧನ

ಕುಂಬಳೆ: ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಯೆನ್ನಲಾದ ಉಪ್ಪಳ ಸಮೀಪದ ಸೋಂಕಾಲ್ ನಿವಾಸಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೋಲೀಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ್ಪಳ ಸೋಂಕಾಲಿನ ಎ.ಅಶೋಕ(45) ಎಂಬಾತನನ್ನು ಬಂಧಿಸಿ, ಈತ ಮಲಗುವ ಮಂಚದಡಿಯಲ್ಲಿ ದಾಸ್ತಾನಿರಿಸಿದ್ದ 33.5ಕಿಲೋ ಗಾಂಜ ನಶಪಡಿಸಲಾಗಿದೆ.ಕಾಸರಗೋಡು ಜಿಲ್ಲೆಯ ಗಾಂಜಾ ವಿತರಣಾ ಜಾಲದ ಪ್ರಮುಖ ಕೊಂಡಿಗಳಲ್ಲಿ ಈತನೂ ಒಬ್ಬನೆಂದು ಪೋಲೀಸರು ತಿಳಿಸಿದ್ದಾರೆ. ಮಂಜೇಶ್ವರ ಎಸ್.ಐ.ಕೆ.ಆರ್.ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

Read More

ಬ್ಲಾಕ್ ಸ್ಟಾಲೋನ್ಸ್ ಆರ್ಟ್ಸ್ ಆಂಡ್ ಸ್ಟೋರ್ಟ್ಸ್ ಕ್ಲಬ್ ತಲೇಕಲ ಇದರ 10ನೇ ವಾರ್ಷಿಕೋತ್ಸವ, ಆರೋಗ್ಯ ತಪಾಸಣೆ ಹಾಗೂ ಉಚಿತ ವೈದ್ಯಕೀಯ ಶಿಬಿರ

ಬ್ಲಾಕ್ ಸ್ಟಾಲೋನ್ಸ್ ಆರ್ಟ್ಸ್ ಆಂಡ್ ಸ್ಟೋರ್ಟ್ಸ್ ಕ್ಲಬ್ ತಲೇಕಲ ಇದರ 10ನೇ ವಾರ್ಷಿಕೋತ್ಸವದ ಪ್ರಯುಕ್ತನಾಯರ್‌ ಮೂಲೆ ಫ್ಯಾಮಿಲಿ ಅಸೋಸಿಯೇಷನ್ ಕುಟುಂಬ ವೈದ್ಯರಿಂದ ಮೀಯಪದವು ಶಾಲಾವಠಾರದಲ್ಲಿ ಆರೋಗ್ಯ ತಪಾಸಣೆ ಹಾಗೂ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಶಿಬಿರದಲ್ಲಿ ನೂರಾರು ಮಂದಿ ಫಲಾನುಭವಿಗಳು ಪಾಲ್ಗೊಂಡರು. ಶಿಬಿರವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್ ಉದ್ಘಾಟಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ನಿವೃತ ಜಿಲ್ಲಾ ನ್ಯಾಯಾಧೀಶಹಾಜಿ ಮೂಸ ಕುಂಞ ನಾಯರ್ ಮೂಲೆ, ಡಾಕ್ಟರ್ ಉಮರ್…

Read More

ಡಾ| ಬಿ.ಆರ್ ಕಲಾ ಸಂಘ ಅಂಬೇಡ್ಕರ್ ನಗರ ಕುಬಣೂರು ಇದರ ವತಿಯಿಂದ ಸತತ 19ನೇ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕೋಪಕರಣದ ವಿತರಣಾ ಕಾರ್ಯಕ್ರಮ

ಡಾ, ಬಿ.ಆರ್ ಕಲಾ ಸಂಘ ,ಅಂಬೇಡ್ಕರ್ ನಗರ ಕುಬಣೂರು ಇದರ ವತಿಯಿಂದ ಸತತ 19ನೇ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕೋಪಕರಣದ ವಿತರಣಾ ಕಾರ್ಯಕ್ರಮ ಕಲಾ ಸಂಘದಲ್ಲಿ ಜರಗಿತು. ಯುವ ಕವಿ ಹಾಗೂ ಅಧ್ಯಾಪಕರಾದ ಶ್ರೀ ಹರೀಶ್ ಸುಲಾಯಿ ಒಡ್ಡoಬೆಟ್ಟು,ಅಧ್ಯಾಪಕರಾದ ಶ್ರೀ ಅಶೋಕ್ ಮಾಸ್ಟರ್ ಕೊಡ್ಲಮೊಗರು,ಅಧ್ಯಾಪಕಿ ಸುಹಾಸಿನಿ ಟೀಚರ್,ಅಧ್ಯಾಪಕಿ ನಿವೇದಿತಾ ಟೀಚರ್, ಕಲಾ ಸಂಘದ ಅಧ್ಯಕ್ಷ ಶಿವಪ್ರಸಾದ್,ಮಹಿಳಾಸಂಘದ ಅಧ್ಯಕ್ಷೆ ಸಾವಿತ್ರಿ,ರೈಲ್ವೆ ಉದ್ಯೋಗಿ ಸದಾನಂದ ಕುಬಣೂರು ಶುಭಾಶಂಸನೆಗೈದರು. ವಿಶ್ವನಾಥ್ ಮಾಸ್ತರ್ ಸ್ವಾಗತಿಸಿ,ಮೋಹಿನಿ ಟೀಚರ್ ವಂದಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿಯಿಂದ…

Read More

ಅಬ್ದುಲ್ ರಹೀಮ್ ಕೊಲೆ ಪ್ರಕರಣ ಮೂವರು ಆರೋಪಿಗಳು ಪೋಲೀಸರ ಬಲೆಗೆ

ಮಂಜೇಶ್ವರ: ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹ್ಮಾನ್ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಮತ್ತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ತೆಂಕಬೆಳ್ಳುರು ಗ್ರಾಮದ ಸುಮಿತ್ ಆಚಾರ್ಯ (27), ಹಾಗೂ ಬಡಗಬೆಳ್ಳೂರು ಗ್ರಾಮದ ರವಿರಾಜ್ (23)ನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು,ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಮಳೆಹಾನಿ ಪ್ರದೇಶದಲ್ಲಿ DYFI ಯೂತ್ ಬ್ರಿಗೇಡ್ ನಿಂದ ರಕ್ಷಣಾ ಕಾರ್ಯ

ತೀವ್ರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡ ಜೋಡುಕಲ್ಲು,ಕನ್ನಟ್ಟಿಪಾರೆ, ಉಪ್ಪಳ ,ಪೆರಿಂಗಡಿ ಮತ್ತು ಶುಭಾಷ್ ನಗರ ಇತ್ಯಾದಿ ಪ್ರದೇಶಗಳಲ್ಲಿ CPIM ಮಂಜೇಶ್ವರ ಏರಿಯಾ ಸೆಕ್ರೆಟರಿ ವಿ ವಿ ರಮೇಶ್ ಹಾಗೂ DYFI ಜಿಲ್ಲಾ ಜೊತೆ ಕಾರ್ಯದರ್ಶಿ ಸಾಧಿಕ್ ಚೆರುಗೋಳಿ ಇವರ ನೇತೃತ್ವದಲ್ಲಿ DYFI ಯೂತ್ ಬ್ರಿಗೇಡ್ ನಿಂದ ರಕ್ಷಣಾಕಾರ್ಯ ನಡೆಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಪ್ರಯತ್ನ ಪಟ್ಟರು.ಈ ಸಂಧರ್ಭದಲ್ಲಿ DYFI ಯೂತ್ ಬ್ರಿಗೇಡ್ ಸದಸ್ಯರು ಹಾಜರಿದ್ದರು

Read More

ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರು ಪರಸ್ಪರ ಡಿಕ್ಕಿ ಮಹಿಳೆಯೊಬ್ಬರ ದಾರುಣ ಸಾವು

ಮಂಜೇಶ್ವರ : ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ವರ್ಕಾಡಿ ಸಮೀಪದ ಕೋಳ್ಯೂರು ಪದವು ನಿವಾಸಿ ನವ್ಯ (28) ಸಾವನ್ನಪ್ಪಿದ ದುರ್ದೈವಿ. ಇವರ ಪತಿ ಪದ್ಮನಾಭ(36) ಹಾಗೂ ಮಗು ಗಾಯನ್ ಎಂಬಿವರು ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೃತ ನವ್ಯಾ ಅವರು ತಲಪ್ಪಾಡಿಯ ಗೇರೇಜ್ ಮಾಲಕ ಶಿವರಾಮ ಆಚಾರ್ಯ ರ ಪುತ್ರಿಯಾಗಿದ್ದು, ಔಷಧಿಗೆಂದು ಕಾರಿನಲ್ಲಿ ತೆರಳುತ್ತಿದ್ದರು. ಉಪ್ಪಳ ಭಾಗದಿಂದ ಮಂಗಳೂರು ಕಡೆ…

Read More

ಮಂಜೇಶ್ವರದಲ್ಲಿ ಸುರಿದ ಧಾರಾಕಾರ ಮಳೆ ಮನೆ, ಮಸೀದಿ ,ದೇವಸ್ಥಾನ, ವ್ಯಾಪಾರ ಸಂಸ್ಥೆ ಜಲಾವೃತ

ಮಂಜೇಶ್ವರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ, ಮಸೀದಿ ,ದೇವಸ್ಥಾನ ,ವ್ಯಾಪಾರ ಸಂಸ್ಥೆ ಜಲಾವೃತಗೊಂಡಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆನೀರಿನಿಂದಾಗಿ ಮಂಜೇಶ್ವರ ತಾಲೂಕಿನ ಪ್ರದೇಶವಾದ ಕನಿಲ, ಪೊಸೋಟು , ಹೊಸಂಗಡಿ , ಬಂಗ್ರಮಂಜೇಶ್ವರ್ ,ಕಾಡಿಯಾರ್ ಸಂಪೂರ್ಣ ಜಲಾವೃತವಾಗಿದೆ. ಹಾಗು ಅಂಗಡಿ , ಕ್ಲಬ್ ದೇವಾಲಯಗಳಿಗೂ ನೀರು ನುಗ್ಗಿದ್ದು ಹಲವು ನಾಶ ನಷ್ಟ ಸಂಭವಿಸಿದೆ. ಕೆಲವೊಂದು ಕಡೆಗಳಲ್ಲಿ ಅಪಾಯವನ್ನುಟುಮಾಡಿದೆ . ಕಾಡಿಯಾರ್ ನಲ್ಲಿ ಮೀನಿನ ಬಲೆ ದೋಣಿ , ದೋಣಿಯ ಇಂಜಿನ್ , ಮನೆಗಳಿಗೆ ಹನಿಯಾಗಿ ಬಹಳಷ್ಟು ನಾಶ ನಷ್ಟ ಸಂಭವಿಸಿದೆ. ಪಂಚಾಯತ್…

Read More

ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸು ಡಿಕ್ಕಿ : ಗಾಯಗೊಂಡ ಮೂವರ ಪೈಕಿ ಒಬ್ಬನ ಸ್ಥಿತಿ ಗಂಭೀರ…!

ಮಂಜೇಶ್ವರ: ರೈಲು ನಿಲ್ದಾಣದಿಂದ ಬರುತ್ತಿದ್ದ ಕಾರಿಗೆ ಕಾಸರಗೋಡು ಭಾಗದಿಂದ ತಲಪಾಡಿಗೆ ತೆರಳುತಿದ್ದ ಖಾಸಗಿ ಬಸ್‌ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಪೊಸೋಟಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವರ್ಕಾಡಿ ಮಜೀರ್ ಪಳ್ಳ ನಿವಾಸಿಗಳಾದವ ಪ್ರೀತಮ್ (20), ಪ್ರಜ್ವಲ್ (21), ಕೆಲ್ವಿನ್ (20) ಎಂಬಿ ಗಾಯಗಳಾಗಿದ್ದು, ಈ ಪೈಕಿ ಕೆಲ್ವಿನ್ ಸ್ಥಿತಿ ಗಂಭಿರವಾಗಿದೆ. ಸ್ಥಳೀಯರು ಕೂಡಲೇ ಗಾಯಳುಗಳನ್ನು…

Read More

ಎಡೆಬಿಡದೆ ಸುರಿಯುತ್ತಿರುವ ಮಳೆ : ಹೊಸಂಗಡಿ ಪೇಟೆ ವ್ಯಾಪಾರಿಗಳು ಸಂಕಷ್ಟದಲ್ಲಿ

ಧಾರಾಕಾರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಸಂಗಡಿ ಪೇಟೆಯ ವ್ಯಾಪಾರ ಮಳಿಗೆಗಳು,ಅಂಗಡಿಗಳು,ಹೋಟೆಲುಗಳು ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲಿಕ್ಕಿದ್ದು ಅಪಾರ ನಾಶ ನಷ್ಟ ಉಂಟಾಗಿದೆ.ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ ಪಂಚಾಯತ್ ಅಧಿಕಾರಿಗಳು ಹೊಣೆಯೆಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರತಿವರ್ಷವೂ ಇಂತಹ ಕೃತಕ ನೆರೆ ಬರುವುದು ಹೊಸಂಗಡಿಯಲ್ಲಿ ಸಹಜವಾಗಿದೆ.ಸೂಕ್ತ ಕ್ರಮವನ್ನು ಕೈಗೊಳ್ಳಬೇಕು,ವ್ಯಾಪಾರಿಗಳಿಗೆ ನಷ್ಟ ಪರಿಹಾರವನ್ನು ನೀಡಬೇಕು ,ಇಲ್ಲದೆ ಇದ್ದಲ್ಲಿ ಹೋರಾಟವನ್ನು ನಡೆಸುವುದಾಗಿ ಮಂಜೇಶ್ವರ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿಯ…

Read More

ದೇರಳಕಟ್ಟೆ : ಮನೆ ಮೇಲೆ ಬಿದ್ದ ತಡೆಗೋಡೆ – ಬಾಲಕಿ ಮೃತ್ಯು

ದೇರಳಕಟ್ಟೆ, ಮೇ. 30 (namma media24x7): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ತಡೆಗೋಡೆ ಕುಸಿದುಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ಕಾನಕರೆ ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ನೌಶಾದ್ ರ ಪುತ್ರಿ ಫಾತಿಮ ನಈಮ (10) ಎಂದು ಗುರುತಿಸಲಾಗಿದೆ. ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದಿದ್ದು, ಮನೆಯ ಕೊಠಡಿ ಯ ಕಿಟಕಿ ಮಗುವಿನ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. ಘಟನೆ ನಡೆದ ಕೂಡಲೇ ಮಗುವನ್ನು…

Read More
error: Content is protected !!